
IBPS RRB Recruitment 2026 : ಬ್ಯಾಂಕಿಂಗ್ ಸಿಬ್ಬಂದಿ ಆಯ್ಕೆ ಸಂಸ್ಥೆಯಿಂದ ಕರ್ನಾಟಕ ಗ್ರಾಮೀಣ ಬ್ಯಾಂಕ್ ಸೇರಿದಂತೆ ವಿವಿಧ ಗ್ರಾಮೀಣ ಬ್ಯಾಂಕುಗಳಲ್ಲಿ ಅಗತ್ಯವಿರುವ ಆಫೀಸ್ ಅಸಿಸ್ಟಂಟ್ ಹಾಗೂ ಆಫೀಸರ್ ಹುದ್ದೆಗಳ ಭರ್ತಿಗೆ ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಹುದ್ದೆಗಳ ಭರ್ತಿಗೆ ಸಂಬಂಧಿಸಿದಂತೆ ಕರ್ತವ್ಯ ಸ್ಥಳ, ಶೈಕ್ಷಣಿಕ ಅರ್ಹತೆ, ಅರ್ಜಿ ಸಲ್ಲಿಕೆ ದಿನಾಂಕ ಹಾಗೂ ಇತರೆ ಮಾಹಿತಿಯನ್ನು ಈ ಕೆಳಗಡೆ ವಿವರವಾಗಿ ನೀಡಲಾಗಿದೆ ಪೂರ್ತಿ ಓದಿ.
IBPS RRB Recruitment 2026 : Details of Vacancies
ಹುದ್ದೆ :
ಆಫೀಸ್ ಅಸಿಸ್ಟಂಟ್ (ಮಲ್ಟಿಪರ್ಪಸ್), ಆಫೀಸರ್ ಸ್ಕೇಲ್-1 (ಅಸಿಸ್ಟೆಂಟ್ ಮ್ಯಾನೇಜರ್), ಆಫೀಸರ್ ಸ್ಕೇಲ್-2 (ಮ್ಯಾನೇಜರ್), ಆಫೀಸರ್ ಸ್ಕೇಲ್-3 (ಸೀನಿಯರ್ ಮ್ಯಾನೇಜರ್)
ಕರ್ತವ್ಯ ಸ್ಥಳ :
ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳು ಭಾರತದೆಲ್ಲೆಡೆ ಗ್ರಾಮೀಣ ಬ್ಯಾಂಕುಗಳಲ್ಲಿ ಕೆಲಸ ನಿರ್ವಹಿಸಬೇಕು.
ಖಾಲಿಯಿರುವ ಹುದ್ದೆಗಳ ಸಂಖ್ಯೆ :
ಒಟ್ಟು 13706 ಹುದ್ದೆಗಳ ಭರ್ತಿಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ.
ಶೈಕ್ಷಣಿಕ ಅರ್ಹತೆ :
ಆಫೀಸ್ ಅಸಿಸ್ಟಂಟ್ (ಮಲ್ಟಿಪರ್ಪಸ್) –
ಮಾನ್ಯತೆ ಪಡೆದ ವಿದ್ಯಾಸಂಸ್ಥೆಯಿಂದ ಯಾವುದೇ ಪದವಿ ಶೈಕ್ಷಣಿಕ ಅರ್ಹತೆ ಹೊಂದಿರಬೇಕು.
ಆಫೀಸರ್ ಸ್ಕೇಲ್ 1 (ಅಸಿಸ್ಟೆಂಟ್ ಮ್ಯಾನೇಜರ್) –
ಮಾನ್ಯತೆ ಪಡೆದ ವಿದ್ಯಾಸಂಸ್ಥೆಯಿಂದ ಯಾವುದೇ ಪದವಿ ಶೈಕ್ಷಣಿಕ ಅರ್ಹತೆ ಹೊಂದಿರಬೇಕು.
ಆಫೀಸರ್ ಸ್ಕೇಲ್ 2 ಜನರಲ್ ಬ್ಯಾಂಕಿಂಗ್ ಆಫೀಸರ್ (ಮ್ಯಾನೇಜರ್) –
ಮಾನ್ಯತೆ ಪಡೆದ ವಿದ್ಯಾಸಂಸ್ಥೆಯಿಂದ ಯಾವುದೇ ಪದವಿಯಲ್ಲಿ ಅಥವಾ ತತ್ಸಮಾನ ಶೈಕ್ಷಣಿಕ ಅರ್ಹತೆಯಲ್ಲಿ ಕನಿಷ್ಠ ಸರಾಸರಿ ಶೇಕಡಾ 50% ಅಂಕಗಳೊಂದಿಗೆ ಉತ್ತೀರ್ಣರಾಗಿರಬೇಕು. ಬ್ಯಾಂಕ್ ಅಥವಾ ಹಣಕಾಸು ಸಂಸ್ಥೆಯಲ್ಲಿ 2 ವರ್ಷ ಆಫೀಸರ್ ಆಗಿ ಅನುಭವ ಹೊಂದಿರಬೇಕು.
ಆಫೀಸರ್ ಸ್ಕೇಲ್ 2 ಸ್ಪೆಷಲಿಸ್ಟ್ ಆಫೀಸರ್ಸ್ (ಮ್ಯಾನೇಜರ್)
- ಐಟಿ ಆಫೀಸರ್ – ಇಲೆಕ್ಟ್ರಾನಿಕ್ಸ್/ ಕಮ್ಯುನಿಕೇಷನ್/ ಕಂಪ್ಯೂಟರ್ ಸೈನ್ಸ್/ ಐಟಿ ವಿಷಯದಲ್ಲಿ ಕನಿಷ್ಠ ಸರಾಸರಿ ಶೇಕಡಾ 50% ಅಂಕಗಳೊಂದಿಗೆ ಪದವಿ ಪಡೆದಿರಬೇಕು. 1 ವರ್ಷದ ಅನುಭವ ಹೊಂದಿರಬೇಕು.
- ಚಾರ್ಟರ್ಡ್ ಅಕೌಂಟೆಂಟ್ – ಸಿಎ ಅರ್ಹತೆ ಹೊಂದಿರಬೇಕು. ಸಿಎ ಆಗಿ 1 ವರ್ಷದ ಅನುಭವ ಹೊಂದಿರಬೇಕು.
- ಕಾನೂನು ಆಫೀಸರ್ – ಮಾನ್ಯತೆ ಪಡೆದ ವಿದ್ಯಾಸಂಸ್ಥೆಯಿಂದ ಕನಿಷ್ಠ ಸರಾಸರಿ ಶೇಕಡಾ 50% ಅಂಕಗಳೊಂದಿಗೆ ಕಾನೂನು ಪದವಿ ಹೊಂದಿರಬೇಕು. 2 ವರ್ಷ ಅನುಭವ ಹೊಂದಿರಬೇಕು.
- ಟ್ರೆಜರಿ ಆಫೀಸರ್ – ಸಿಎ ಅಥವಾ ಎಂಬಿಎ ಫೈನಾನ್ಸ್ ಅರ್ಹತೆ ಹೊಂದಿರಬೇಕು. 1 ವರ್ಷದ ಅನುಭವ ಹೊಂದಿರಬೇಕು.
- ಮಾರ್ಕೆಟಿಂಗ್ ಆಫೀಸರ್ – ಎಂಬಿಎ ಮಾರ್ಕೆಟಿಂಗ್ ಅರ್ಹತೆ ಹೊಂದಿರಬೇಕು. 1 ವರ್ಷದ ಅನುಭವ ಹೊಂದಿರಬೇಕು.
- ಅಗ್ರಿಕಲ್ಚರ್ ಆಫೀಸರ್ – ಮಾನ್ಯತೆ ಪಡೆದ ವಿದ್ಯಾಸಂಸ್ಥೆಯಿಂದ ಕನಿಷ್ಠ ಸರಾಸರಿ ಶೇಕಡಾ 50% ಅಂಕಗಳೊಂದಿಗೆ ಅಗ್ರಿಕಲ್ಚರ್/ ಹೊರ್ಟಿಕಲ್ಚರ್/ ಡೈರಿ/ ಅನಿಮಲ್ ಹಸ್ಬಂಡರಿ/ ಫಾರೆಸ್ಟ್ರಿ/ ವೆಟರ್ನರಿ ಸೈನ್ಸ್/ ಅಗ್ರಿಕಲ್ಚರಲ್ ಇಂಜಿನಿಯರಿಂಗ್ ವಿಷಯದಲ್ಲಿ ಪದವಿ ಅರ್ಹತೆ ಹೊಂದಿರಬೇಕು. 2 ವರ್ಷಗಳ ಅನುಭವ ಹೊಂದಿರಬೇಕು.
ಆಫೀಸರ್ ಸ್ಕೇಲ್ 3 (ಸೀನಿಯರ್ ಮ್ಯಾನೇಜರ್) –
ಮಾನ್ಯತೆ ಪಡೆದ ವಿದ್ಯಾಸಂಸ್ಥೆಯಿಂದ ಯಾವುದೇ ಪದವಿಯಲ್ಲಿ ಅಥವಾ ತತ್ಸಮಾನ ಶೈಕ್ಷಣಿಕ ಅರ್ಹತೆಯಲ್ಲಿ ಕನಿಷ್ಠ ಸರಾಸರಿ ಶೇಕಡಾ 50% ಅಂಕಗಳೊಂದಿಗೆ ಉತ್ತೀರ್ಣರಾಗಿರಬೇಕು. ಕನಿಷ್ಠ 5 ವರ್ಷಗಳ ಅನುಭವ ಹೊಂದಿರಬೇಕು.
ಉದ್ಯೋಗ ಮಾಹಿತಿ : ಕರ್ನಾಟಕ ರಾಜ್ಯ ಲೆಕ್ಕಪರಿಶೋಧನೆ ಮತ್ತು ಲೆಕ್ಕಪತ್ರ ಇಲಾಖೆ ನೇಮಕಾತಿ 2026
ವಯೋಮಾನ (ದಿನಾಂಕ 01/09/2026ಕ್ಕೆ) :
| ಹುದ್ದೆ | ವಯೋಮಾನ |
| ಆಫೀಸ್ ಅಸಿಸ್ಟಂಟ್ (ಮಲ್ಟಿಪರ್ಪಸ್) | ಕನಿಷ್ಠ 18 ವರ್ಷ ಗರಿಷ್ಠ 28 ವರ್ಷ |
| ಆಫೀಸರ್ ಸ್ಕೇಲ್-1 (ಅಸಿಸ್ಟೆಂಟ್ ಮ್ಯಾನೇಜರ್) | ಕನಿಷ್ಠ 18 ವರ್ಷ ಗರಿಷ್ಠ 30 ವರ್ಷ |
| ಆಫೀಸರ್ ಸ್ಕೇಲ್-2 (ಮ್ಯಾನೇಜರ್) | ಕನಿಷ್ಠ 21 ವರ್ಷ ಗರಿಷ್ಠ 32 ವರ್ಷ |
| ಆಫೀಸರ್ ಸ್ಕೇಲ್-3 (ಸೀನಿಯರ್ ಮ್ಯಾನೇಜರ್) | ಕನಿಷ್ಠ 21 ವರ್ಷ ಗರಿಷ್ಠ 40 ವರ್ಷ |
ವಯೋಮಿತಿ ಸಡಿಲಿಕೆ :
- ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಅಭ್ಯರ್ಥಿಗಳಿಗೆ – 5 ವರ್ಷ
- ಒಬಿಸಿ ಅಭ್ಯರ್ಥಿಗಳಿಗೆ – 3 ವರ್ಷ
- ಪಿಡಬ್ಲ್ಯೂಡಿ ಅಭ್ಯರ್ಥಿಗಳಿಗೆ – 10 ವರ್ಷ
ಆಯ್ಕೆ ವಿಧಾನ :
- ಪ್ರಿಲಿಮಿನರಿ ಪರೀಕ್ಷೆ
- ಮುಖ್ಯ ಪರೀಕ್ಷೆ
- ಸಿಂಗಲ್ ಲೆವೆಲ್ ಎಕ್ಸಾಂಮಿನೇಷನ್
- ಸಂದರ್ಶನ
ಉದ್ಯೋಗ ಮಾಹಿತಿ : ಕರ್ನಾಟಕ ಅಂಚೆ ಇಲಾಖೆ ನೇಮಕಾತಿ 2026
ಅರ್ಜಿ ಸಲ್ಲಿಕೆಯ ವಿಧಾನ :
ಅಭ್ಯರ್ಥಿಯು ಈ ಹುದ್ದೆಗೆ ಆನ್‌ಲೈನ್ ಮೂಲಕ ಅರ್ಜಿಗಳನ್ನು ಸಲ್ಲಿಸಬೇಕು.
ಹಂತ 1 : ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸುವ ಮೊದಲು ಇಲಾಖೆ ಹೊರಡಿಸಿರುವ ಅಧಿಸೂಚನೆಯನ್ನು ಗಮನವಿಟ್ಟು ಓದಿ ಅರ್ಜಿ ಸಲ್ಲಿಸಲು ಅಗತ್ಯವಿರುವ ದಾಖಲೆಗಳನ್ನು ಸಿದ್ಧಪಡಿಸಿಕೊಂಡು ನಂತರ ಅರ್ಜಿಯನ್ನು ಸಲ್ಲಿಸಬೇಕು.
ಹಂತ 2 : ಇಲಾಖೆಯ ವೆಬ್‌ಸೈಟ್ ಗೆ ಭೇಟಿ ನೀಡಿ ಅಥವಾ ಈ ಕೆಳಗಡೆ ನೀಡಲಾದ ಅಪ್ಲೈ ಆನ್‌ಲೈನ್ ಲಿಂಕ್ ಮೇಲೆ ಕ್ಲಿಕ್ ಮಾಡಿ ಅಪ್ಲಿಕೇಷನ್ ತೆರೆದುಕೊಳ್ಳಿ.
ಹಂತ 3 : ಅಪ್ಲಿಕೇಷನ್ ನಲ್ಲಿ ತಿಳಿಸಿರುವಂತಹ ಎಲ್ಲಾ ಮಾಹಿತಿಯನ್ನು (ಉದಾಹರಣೆಗೆ ಅಭ್ಯರ್ಥಿಯ ಹೆಸರು, ವಿಳಾಸ, ವಿದ್ಯಾರ್ಹತೆ, ಮೊಬೈಲ್ ಸಂಖ್ಯೆ ಇತ್ಯಾದಿ) ಭರ್ತಿ ಮಾಡಿ, ಮುಂದಿನ ಹಂತಕ್ಕೆ ತೆರಳುವ ಮುನ್ನ ಪುನಃ ಒಮ್ಮೆ ಪರಿಶೀಲಿಸಿ.
ಹಂತ 4 : ಅಪ್ಲಿಕೇಷನ್ ನಲ್ಲಿ ಯಾವುದೇ ಪ್ರಮಾಣ ಪತ್ರ/ ದಾಖಲೆಗಳನ್ನು ಅಪ್ಲೋಡ್ ಮಾಡಲು ಸೂಚಿಸಿದ್ದರೆ, ಅವುಗಳನ್ನು ಸ್ಕ್ಯಾನ್ ಮಾಡಿ ಅಪ್ಲೋಡ್ ಮಾಡಿ (ಅಗತ್ಯವಿದ್ದರೆ ಮಾತ್ರ).
ಹಂತ 5 : ಕೊನೆಯದಾಗಿ, ಅಭ್ಯರ್ಥಿಗೆ ಅರ್ಜಿ ಶುಲ್ಕ ಪಾವತಿಸಲು ಸೂಚಿಸಿದ್ದರೆ, ಶುಲ್ಕ ಪಾವತಿಸಿ ಅರ್ಜಿ ಸಲ್ಲಿಕೆ ಪೂರ್ಣಗೊಳಿಸಿ.
ಅರ್ಜಿ ಶುಲ್ಕ :
ಆಫೀಸರ್ (ಸ್ಕೇಲ್ 1, 2, 3) –
- ಪ.ಜಾತಿ/ ಪ.ಪಂ./ ಪಿಡಬ್ಲ್ಯೂಬಿಡಿ ಅಭ್ಯರ್ಥಿಗಳು – ರೂ. 175
- ಉಳಿದ ಅಭ್ಯರ್ಥಿಗಳು – ರೂ. 850
ಆಫೀಸ್ ಅಸಿಸ್ಟೆಂಟ್ (ಮಲ್ಟಿಪರ್ಪಸ್) –
- ಪ.ಜಾತಿ/ ಪ.ಪಂ./ ಪಿಡಬ್ಲ್ಯೂಡಿ/ಮಾಜಿ ಸೈನಿಕ ಅಭ್ಯರ್ಥಿಗಳು – ರೂ. 175
- ಉಳಿದ ಅಭ್ಯರ್ಥಿಗಳು – ರೂ. 850
ಶುಲ್ಕ ಪಾವತಿಸುವ ವಿಧಾನ :
ನಿಗದಿಪಡಿಸಿದ ಶುಲ್ಕವನ್ನು ಆನ್‌ಲೈನ್‌ನಲ್ಲಿ ಡೆಬಿಟ್ ಕಾರ್ಡ್, ಕ್ರೆಡಿಟ್ ಕಾರ್ಡ್, ನೆಟ್ ಬ್ಯಾಂಕಿಂಗ್ ಮೂಲಕ ಪಾವತಿಸಬಹುದು
ಅರ್ಜಿಯನ್ನು ಸಲ್ಲಿಸಲು ನಿಗದಿಪಡಿಸಿದ ದಿನಾಂಕದ ವಿವರ :
- ಅರ್ಜಿ ಸಲ್ಲಿಸಲು ಪ್ರಾರಂಭದ ದಿನಾಂಕ : ಸೆಪ್ಟೆಂಬರ್ 01, 2026
- ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : ಸೆಪ್ಟೆಂಬರ್ 21, 2026
- ಶುಲ್ಕ ಪಾವತಿಸಲು ಕೊನೆಯ ದಿನಾಂಕ : ಸೆಪ್ಟೆಂಬರ್ 21, 2026
- ಪ್ರಿಲಿಮಿನರಿ ಪರೀಕ್ಷೆ ದಿನಾಂಕ : ನವೆಂಬರ್/ ಡಿಸೆಂಬರ್, 2026
- ಮುಖ್ಯ/ ಸಿಂಗಲ್ ಪರೀಕ್ಷೆ ದಿನಾಂಕ : ಡಿಸೆಂಬರ್, 2026/ ಫೆಬ್ರುವರಿ, 2027
IBPS Regional Rural Bank Recruitment 2026 : Important Links
| NOTIFICATION | CLICK HERE |
| APPLY ONLINE | CLICK HERE |
| Telegram Join Link | Click Here |
| WhatsApp Group Link | Click Here |
ಕೊನೆಯ ಪದಗಳು : ನಾವು ನೀಡಿದ ಉದ್ಯೋಗ ಮಾಹಿತಿಯನ್ನು ನೀವು ಇಷ್ಟಪಡುತ್ತೀರಿ ಎಂದು ಭಾವಿಸುತ್ತೇವೆ. ಈ ಉದ್ಯೋಗ ಮಾಹಿತಿ ನಿಮಗೆ ಇಷ್ಟವಾಗಿದ್ದರೆ ನಿಮ್ಮ ಸ್ನೇಹಿತರಿಗೆ ಶೇರ್ ಮಾಡಲು ಮರೆಯದಿರಿ.