Karnataka Animal Husbandry And Fisheries Department Recruitment 2022

Karnataka Animal Husbandry And Fisheries Department Recruitment 2022 : ಪಶುಸಂಗೋಪನೆ ಮತ್ತು ಮೀನುಗಾರಿಕೆ ಇಲಾಖೆಯಲ್ಲಿ ಖಾಲಿಯಿರುವ ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ಹೊಸದಾಗಿ ಅಧಿಸೂಚನೆ ಪ್ರಕಟವಾಗಿದೆ. ಹುದ್ದೆಗಳ ಭರ್ತಿಗೆ ಸಂಬಂಧಿಸಿದಂತೆ ಹುದ್ದೆಗಳ ಸಂಖ್ಯೆ, ಶೈಕ್ಷಣಿಕ ಅರ್ಹತೆ, ವೇತನ ಹಾಗೂ ಇತರೆ ಮಾಹಿತಿಯನ್ನು ಈ ಕೆಳಗಡೆ ವಿವರವಾಗಿ ನೀಡಲಾಗಿದೆ ಪೂರ್ತಿ ಓದಿ.

Karnataka Animal Husbandry And Fisheries Department Recruitment 2022 : Details of Vacancies

ಹುದ್ದೆಗಳ ವಿವರ :
ಮೀನುಗಾರಿಕೆ ಸಹಾಯಕ ನಿರ್ದೇಶಕರು : 188 ಹುದ್ದೆ
ವೇತನ : ರೂ. 40,900 – ರೂ. 78,200
ಮೀನುಗಾರಿಕೆ ವಿಜ್ಞಾನದಲ್ಲಿ ಪದವಿ ಶೈಕ್ಷಣಿಕ ಅರ್ಹತೆ ಹೊಂದಿರಬೇಕು.

ಪ್ರಥಮ ದರ್ಜೆ ಸಹಾಯಕರು : 95 ಹುದ್ದೆ
ವೇತನ : ರೂ. 27,650 – ರೂ. 52,650
ಮಾನ್ಯತೆ ಪಡೆದ ವಿದ್ಯಾಸಂಸ್ಥೆಯಿಂದ ಪದವಿ ಶೈಕ್ಷಣಿಕ ಅರ್ಹತೆ ಹೊಂದಿರಬೇಕು.

ಶೀಘ್ರಲಿಪಿಗಾರರು : 11 ಹುದ್ದೆ
ವೇತನ : ರೂ. 27,650 – ರೂ. 52,650
ಹಿರಿಯ ಹಾಗೂ ಕಿರಿಯ ದರ್ಜೆ ಬೆರಳಚ್ಚು ಪರೀಕ್ಷೆ ಉತ್ತೀರ್ಣರಾಗಿರಬೇಕು.

ಉದ್ಯೋಗ ಮಾಹಿತಿ : ಶಿವಮೊಗ್ಗ ಜಿಲ್ಲಾ ನ್ಯಾಯಾಲಯದಲ್ಲಿ ನೇರ ನೇಮಕಾತಿ 2022

ದ್ವಿತೀಯ ದರ್ಜೆ ಸಹಾಯಕರು : 93 ಹುದ್ದೆ
ವೇತನ : ರೂ. 21,400 – ರೂ. 42,000
ದ್ವಿತೀಯ ಪಿಯುಸಿ ಶೈಕ್ಷಣಿಕ ಅರ್ಹತೆ ಹೊಂದಿರಬೇಕು.

ಡೇಟಾ ಎಂಟ್ರಿ ಅಸಿಸ್ಟೆಂಟ್ : 48 ಹುದ್ದೆ
ವೇತನ : ರೂ. 21,400 – ರೂ. 42,000
ಕಿರಿಯ ದರ್ಜೆ ಬೆರಳಚ್ಚು ಪರೀಕ್ಷೆ ಉತ್ತೀರ್ಣರಾಗಿರಬೇಕು.

ಚಾಲಕರು : 41 ಹುದ್ದೆ
ವೇತನ : ರೂ. 21,400 – ರೂ. 42,000
ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು ಜೊತೆಗೆ ಲಘು ವಾಹನ ಚಾಲನಾ ಪರವಾನಗಿ ಹೊಂದಿರಬೇಕು.

ಮೀನುಗಾರಿಕೆ ಫೀಲ್ಡ್ ಮ್ಯಾನ್ : 475 ಹುದ್ದೆ
ವೇತನ : ರೂ. 18,600 – ರೂ. 32,600
ಎಸ್.ಎಸ್.ಎಲ್.ಸಿ ಶೈಕ್ಷಣಿಕ ಅರ್ಹತೆ ಹೊಂದಿರಬೇಕು.

ಕುಕ್ : 02 ಹುದ್ದೆ
ವೇತನ : ರೂ. 18,600 – ರೂ. 32,600
ಎಸ್.ಎಸ್.ಎಲ್.ಸಿ ಶೈಕ್ಷಣಿಕ ಅರ್ಹತೆ ಜೊತೆಗೆ ಮಾಂಸಾಹಾರಿ ಆಹಾರ ತಯಾರಿಕಾ ಜ್ಞಾನ ಹೊಂದಿರಬೇಕು.

ಸೇವಕ (ಪಿಯೋನ್) : 187 ಹುದ್ದೆ
ವೇತನ : ರೂ. 17,000 – ರೂ. 28,950
ಕರ್ನಾಟಕ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿಯು ನಡೆಸುವ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು.

ಕರ್ತವ್ಯ ಸ್ಥಳ : ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳು ಕರ್ನಾಟಕದಲ್ಲಿ ಕರ್ತವ್ಯ ನಿರ್ವಹಿಸಬೇಕು.

ಖಾಲಿಯಿರುವ ಹುದ್ದೆಗಳ ಸಂಖ್ಯೆ : ಒಟ್ಟು 1140ಕ್ಕೂ ಅಧಿಕ ಹುದ್ದೆಗಳ ನೇಮಕಾತಿಗಾಗಿ ಸಂಬಂಧಿಸಿದ ಮಾಹಿತಿ ಪ್ರಕಟವಾಗಿದೆ.

ಆಯ್ಕೆ ವಿಧಾನ : ಹುದ್ದೆಗಳನ್ನು ನೇರ ನೇಮಕಾತಿ, ಸ್ಪರ್ಧಾತ್ಮಕ ಪರೀಕ್ಷೆ ಹಾಗೂ ಮುಂಬಡ್ತಿಯ ಮೂಲಕ ಭರ್ತಿ ಮಾಡಲಾಗುವುದು.

ಇತರೆ ಮಾಹಿತಿ :
ಅಧಿಸೂಚನೆ ಪ್ರಕಟವಾದ ದಿನಾಂಕ : ಜನವರಿ 11, 2022
ಶೀಘ್ರದಲ್ಲೇ ಅರ್ಜಿ ಸಲ್ಲಿಕೆ ಆರಂಭ ಆಗಲಿದೆ

Karnataka Animal Husbandry And Fisheries Department Recruitment 2022 : Important Links

ಅಧಿಸೂಚನೆ – Notification

ಕೊನೆಯ ಪದಗಳು : ನಾವು ನೀಡಿದ ಉದ್ಯೋಗ ಮಾಹಿತಿಯನ್ನು ನೀವು ಇಷ್ಟಪಡುತ್ತೀರಿ ಎಂದು ಭಾವಿಸುತ್ತೇವೆ. ಈ ಉದ್ಯೋಗ ಮಾಹಿತಿ ನಿಮಗೆ ಇಷ್ಟವಾಗಿದ್ದರೆ ನಿಮ್ಮ ಸ್ನೇಹಿತರಿಗೆ ಶೇರ್ ಮಾಡಲು ಮರೆಯದಿರಿ.

Leave a Comment