Karnataka CHO Recruitment 2022 – Apply Online for 680 Posts

Karnataka CHO Recruitment 2022 : ರಾಷ್ಟ್ರೀಯ ಆರೋಗ್ಯ ಅಭಿಯಾನದಡಿಯಲ್ಲಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಂಘದಲ್ಲಿ ಖಾಲಿಯಿರುವ ಸಮುದಾಯ ಆರೋಗ್ಯ ಅಧಿಕಾರಿಗಳು ಹುದ್ದೆಯ ಭರ್ತಿಗೆ ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಹುದ್ದೆಗಳ ಭರ್ತಿಗೆ ಸಂಬಂಧಿಸಿದಂತೆ ಹುದ್ದೆಗಳ ಸಂಖ್ಯೆ, ಕರ್ತವ್ಯ ಸ್ಥಳ, ಶೈಕ್ಷಣಿಕ ಅರ್ಹತೆ, ವಯೋಮಾನ, ವೇತನ ಹಾಗೂ ಇತರೆ ಮಾಹಿತಿಯನ್ನು ಈ ಕೆಳಗಡೆ ವಿವರವಾಗಿ ನೀಡಲಾಗಿದೆ ಪೂರ್ತಿ ಓದಿ.

Karnataka CHO Recruitment 2022 : Details of Vacancies

ಹುದ್ದೆ : ಸಮುದಾಯ ಆರೋಗ್ಯ ಅಧಿಕಾರಿಗಳು (ಸಿ.ಹೆಚ್.ಓ)

ಕರ್ತವ್ಯ ಸ್ಥಳ : ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳು ಬೀದರ್, ಬಳ್ಳಾರಿ, ಕಲಬುರ್ಗಿ, ಚಾಮರಾಜನಗರ, ಚಿಕ್ಕಮಗಳೂರು, ವಿಜಯಪುರ, ಬಾಗಲಕೋಟೆ, ಕೊಪ್ಪಳ, ಉತ್ತರ ಕನ್ನಡ, ಚಿತ್ರದುರ್ಗ, ಹಾವೇರಿ, ಕೋಲಾರ, ಬೆಳಗಾವಿ, ತುಮಕೂರು, ಮೈಸೂರು, ಗದಗ, ಮಂಡ್ಯ, ಉಡುಪಿ, ಚಿಕ್ಕಬಳ್ಳಾಪುರ, ಕೊಡಗು, ದಾವಣಗೆರೆ, ಶಿವಮೊಗ್ಗ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ ಹಾಗೂ ಧಾರವಾಡ ಜಿಲ್ಲೆಗಳಲ್ಲಿ ಕರ್ತವ್ಯ ನಿರ್ವಹಿಸಬೇಕು.

ಖಾಲಿಯಿರುವ ಹುದ್ದೆಗಳ ಸಂಖ್ಯೆ : ಒಟ್ಟು 680 ಹುದ್ದೆಗಳ ಭರ್ತಿಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ.

ಶೈಕ್ಷಣಿಕ ಅರ್ಹತೆ : ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಬಿಎಸ್ಸಿ ನರ್ಸಿಂಗ್/ಪೋಸ್ಟ್ ಬಿಎಸ್ಸಿ ನರ್ಸಿಂಗ್ ಜೊತೆಗೆ ರಾಜ್ಯ ನರ್ಸಿಂಗ್ ಕೌನ್ಸಿಲ್ ಕೆ.ಎನ್.ಸಿ/ ಐ.ಎನ್.ಸಿ ನಿಂದ ನೊಂದಣಿ ಹೊಂದಿರಬೇಕು. ಕನ್ನಡ ಮತ್ತು ಇಂಗ್ಲಿಷ್ ಭಾಷೆಯಲ್ಲಿ ಪ್ರಾವೀಣ್ಯತೆ ಹೊಂದಿರಬೇಕು.

ವೇತನ : ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ ರೂ. 22,000 ರಿಂದ ರೂ. 24,200 ವೇತನ ನೀಡಲಾಗುವುದು. ಜೊತೆಗೆ ಹೆಚ್ಚುವರಿಯಾಗಿ ಕಾರ್ಯಕ್ಷಮತೆ ಆಧಾರಿತ ಪ್ರೋತ್ಸಾಹ ಧನ ರೂ. 8,000 ವರೆಗೆ ನೀಡಲಾಗುವುದು.

ವಯೋಮಾನ : ಅಧಿಸೂಚನೆ ಹೊರಡಿಸಿರುವ ದಿನಾಂಕದ ಒಳಗಾಗಿ ಎಸ್ಸಿ, ಎಸ್ಟಿ, ಪ್ರವರ್ಗ 1 ಅಭ್ಯರ್ಥಿಗಳಿಗೆ ಗರಿಷ್ಠ 40 ವರ್ಷ, ಪ್ರವರ್ಗ 2ಎ, 2ಬಿ, 3ಎ, 3ಬಿ ಅಭ್ಯರ್ಥಿಗಳಿಗೆ ಗರಿಷ್ಠ 38 ವರ್ಷ, ಸಾಮಾನ್ಯ ಅಭ್ಯರ್ಥಿಗಳಿಗೆ ಗರಿಷ್ಠ 35 ವರ್ಷ ನಿಗದಿಪಡಿಸಲಾಗಿದೆ.

ಆಯ್ಕೆ ವಿಧಾನ : ಆನ್‌ಲೈನ್‌ ಪರೀಕ್ಷೆ ನಡೆಸಿ ಅಭ್ಯರ್ಥಿಗಳನ್ನು ಹುದ್ದೆಗಳಿಗೆ ಆಯ್ಕೆ ಮಾಡಲಾಗುವುದು.

ಉದ್ಯೋಗ ಮಾಹಿತಿ : ಜಿಲ್ಲಾ ನ್ಯಾಯಾಲಯದಲ್ಲಿ ನೇರ ನೇಮಕಾತಿ 2022

ಸಮುದಾಯ ಆರೋಗ್ಯ ಅಧಿಕಾರಿಗಳ ಹುದ್ದೆಗೆ ಅರ್ಜಿ ಸಲ್ಲಿಕೆಯ ವಿಧಾನ :
• ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಯಸುವ ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು ಆನ್‌ಲೈನ್‌ ಮೂಲಕವೇ ಅರ್ಜಿಯನ್ನು ಸಲ್ಲಿಸಬೇಕು.
• ಅಭ್ಯರ್ಥಿಗಳು ಇಲಾಖೆಯ ಅಧಿಕೃತ ವೆಬ್‌ಸೈಟ್ ವಿಳಾಸಕ್ಕೆ ಭೇಟಿ ನೀಡಿ, ಆನ್‌ಲೈನ್‌ ಅರ್ಜಿಯಲ್ಲಿ ಹುದ್ದೆಗೆ ಅಗತ್ಯವಿರುವ ಎಲ್ಲಾ ಮಾಹಿತಿಯನ್ನು ಭರ್ತಿ ಮಾಡಿ ( ಉದಾಹರಣೆಗೆ : ಅಭ್ಯರ್ಥಿಯ ಹೆಸರು, ವಿದ್ಯಾರ್ಹತೆ, ಇಮೇಲ್ ವಿಳಾಸ ಇತ್ಯಾದಿ) ನಂತರ ನಿಗದಿತ ಅರ್ಜಿ ಶುಲ್ಕ ಪಾವತಿಸಿ ಅರ್ಜಿಯನ್ನು ಸಲ್ಲಿಸಬೇಕು

ನಿಗದಿತ ಅರ್ಜಿ ಶುಲ್ಕದ ವಿವರ :
• ಎಸ್ಸಿ, ಎಸ್ಟಿ, ಮಾಜಿ ಸೈನಿಕ ಅಭ್ಯರ್ಥಿಗಳು ರೂ. 300
• ಉಳಿದ ಅಭ್ಯರ್ಥಿಗಳು ರೂ. 600

ಶುಲ್ಕ ಪಾವತಿಸುವ ವಿಧಾನ : ಅಭ್ಯರ್ಥಿಗಳು ಆನ್‌ಲೈನ್‌ನಲ್ಲಿ ಡೆಬಿಟ್ ಕಾರ್ಡ್, ಕ್ರೆಡಿಟ್ ಕಾರ್ಡ್, ನೆಟ್ ಬ್ಯಾಂಕಿಂಗ್ ಮೂಲಕ ಶುಲ್ಕ ಪಾವತಿಸಬಹುದು.

ಇತರೆ ಮಾಹಿತಿ : ಅಭ್ಯರ್ಥಿಗಳು ಕರ್ನಾಟಕದಲ್ಲಿ ಕನಿಷ್ಠ 10 ವರ್ಷ ವಾಸವಿರಬೇಕು ಹಾಗೂ ಕನ್ನಡವನ್ನು ಒಂದು ಭಾಷೆಯಾಗಿ ಎಸ್.ಎಸ್.ಎಲ್.ಸಿ/ 10ನೇ ತರಗತಿಯಲ್ಲಿ ಅಭ್ಯಾಸಿಸಿರಬೇಕು.

ಅರ್ಜಿಯನ್ನು ಸಲ್ಲಿಸಲು ನಿಗದಿಪಡಿಸಿದ ದಿನಾಂಕದ ವಿವರ :
ಅರ್ಜಿ ಸಲ್ಲಿಸಲು ಪ್ರಾರಂಭದ ದಿನಾಂಕ : ಜನವರಿ 06, 2022
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : ಜನವರಿ 23, 2022 ಜನವರಿ 30, 2022
ಲಿಖಿತ ಪರೀಕ್ಷೆ ಹಾಗೂ ಫಲಿತಾಂಶ ಪ್ರಕಟ ದಿನಾಂಕ : ಜನವರಿ 29, 2022 ಫೆಬ್ರವರಿ 04, 2022
ಮೂಲ ದಾಖಲೆಗಳ ಪರಿಶೀಲನೆ ದಿನಾಂಕ : ಫೆಬ್ರವರಿ 01, 2022 ಫೆಬ್ರವರಿ 07 ರಿಂದ 09 ರವರೆಗೆ

Karnataka CHO Recruitment 2022 : Important Links

ಅಧಿಸೂಚನೆ : Click Here
ಅರ್ಜಿ ಸಲ್ಲಿಸಿ : Click Here

ಜಿಲ್ಲಾವಾರು ಖಾಲಿಯಿರುವ ಹುದ್ದೆಗಳ ವಿವರ :

Karnataka CHO Recruitment 2022 – Apply Online for 680 Posts

ಕೊನೆಯ ಪದಗಳು : ನಾವು ನೀಡಿದ ಉದ್ಯೋಗ ಮಾಹಿತಿಯನ್ನು ನೀವು ಇಷ್ಟಪಡುತ್ತೀರಿ ಎಂದು ಭಾವಿಸುತ್ತೇವೆ. ಈ ಉದ್ಯೋಗ ಮಾಹಿತಿ ನಿಮಗೆ ಇಷ್ಟವಾಗಿದ್ದರೆ ನಿಮ್ಮ ಸ್ನೇಹಿತರಿಗೆ ಶೇರ್ ಮಾಡಲು ಮರೆಯದಿರಿ.

Leave a Comment