Karnataka State Horticulture Department (KSHD) Recruitment 2023 – ಕರ್ನಾಟಕ ರಾಜ್ಯ ತೋಟಗಾರಿಕೆ ಇಲಾಖೆ ನೇಮಕಾತಿ

Karnataka State Horticulture Department (KSHD) Recruitment 2023 : ಕರ್ನಾಟಕ ರಾಜ್ಯ ತೋಟಗಾರಿಕೆ ಇಲಾಖೆಯಲ್ಲಿ ಖಾಲಿಯಿರುವ ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ಹೊಸದಾಗಿ ಅಧಿಸೂಚನೆ ಪ್ರಕಟವಾಗಿದೆ. ಹುದ್ದೆಗಳ ಭರ್ತಿಗೆ ಸಂಬಂಧಿಸಿದಂತೆ ಹುದ್ದೆಗಳ ಸಂಖ್ಯೆ, ಶೈಕ್ಷಣಿಕ ಅರ್ಹತೆ, ವೇತನ ಹಾಗೂ ಇತರೆ ಮಾಹಿತಿಯನ್ನು ಈ ಕೆಳಗಡೆ ವಿವರವಾಗಿ ನೀಡಲಾಗಿದೆ ಪೂರ್ತಿ ಓದಿ.

Karnataka State Horticulture Department (KSHD) Recruitment 2023 : Details of Vacancies

ಹುದ್ದೆಗಳ ವಿವರ :
• ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು : 256 ಹುದ್ದೆ
ವೇತನ : ರೂ. 52,650 – ರೂ. 97,100
ತೋಟಗಾರಿಕೆ ವಿಷಯದಲ್ಲಿ ಬಿ.ಎಸ್‌ಸಿ ಪದವಿ ಜೊತೆಗೆ ತೋಟಗಾರಿಕೆ ವಿಷಯದಲ್ಲಿ ಸ್ನಾತಕೋತ್ತರ ಪದವಿಯನ್ನು ಹೊಂದಿರಬೇಕು.

• ಸಹಾಯಕ ತೋಟಗಾರಿಕೆ ನಿರ್ದೇಶಕರು : 475 ಹುದ್ದೆ
ವೇತನ : ರೂ. 43,100 – ರೂ. 83,900
ತೋಟಗಾರಿಕೆ ವಿಷಯದಲ್ಲಿ ಬಿ.ಎಸ್‌ಸಿ ಪದವಿ ಹಾಗೂ ಸ್ನಾತಕೋತ್ತರ ಪದವಿಯನ್ನು ಹೊಂದಿರಬೇಕು.

• ಸಹಾಯಕ ತೋಟಗಾರಿಕೆ ಅಧಿಕಾರಿ : 1136 ಹುದ್ದೆ
ವೇತನ : ರೂ. 40,900 – ರೂ. 78,200
ಮಾನ್ಯತೆ ಪಡೆದ ವಿದ್ಯಾಸಂಸ್ಥೆಯಿಂದ ತೋಟಗಾರಿಕೆ ವಿಷಯದಲ್ಲಿ ಬಿ.ಎಸ್ಸಿ ಪದವಿ ಅರ್ಹತೆ ಹೊಂದಿರಬೇಕು.

• ತೋಟಗಾರಿಕೆ ಸಹಾಯಕ : 926 ಹುದ್ದೆ
ವೇತನ :
ರೂ. 23,500 – ರೂ. 47,650
ತೋಟಗಾರಿಕೆ ವಿಷಯದಲ್ಲಿ ಬಿಎಸ್ಸಿ ಪದವಿ ಹೊಂದಿರಬೇಕು.

• ಪ್ರಥಮ ದರ್ಜೆ ಸಹಾಯಕರು : 311 ಹುದ್ದೆ
ವೇತನ : ರೂ. 27,650 – ರೂ. 52,650
ಮಾನ್ಯತೆ ಪಡೆದ ವಿದ್ಯಾಸಂಸ್ಥೆಯಿಂದ ಯಾವುದೇ ಪದವಿ ಶೈಕ್ಷಣಿಕ ಅರ್ಹತೆ ಹೊಂದಿರಬೇಕು.

• ಶೀಘ್ರಲಿಪಿಗಾರರು : 11 ಹುದ್ದೆ
ವೇತನ : ರೂ. 27,650 – ರೂ. 52,650
ಪಿ.ಯು.ಸಿ.ಯಲ್ಲಿ ಉತ್ತೀರ್ಣರಾಗಿರುವುದರ ಜೊತೆಗೆ ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ (ಕೆ.ಎಸ್.ಇ.ಇ.ಬಿ )ಯಿಂದ ನಡೆಸಲಾಗುವ ಕನ್ನಡ ಹಿರಿಯ ಬೆರಳಚ್ಚು ಮತ್ತು ಹಿರಿಯ ಶೀಘ್ರಲಿಪಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿತಕ್ಕದ್ದು ಅಥವಾ ಕರ್ನಾಟಕ ತಾಂತ್ರಿಕ ಶಿಕ್ಷಣ ಮಂಡಳಿಯಿಂದ ನೀಡಲಾದ ಕನ್ನಡ ಶೀಘ್ರಲಿಪಿಯಲ್ಲಿ ಐಚ್ಛಿಕದೊಂದಿಗೆ ಸೆಕ್ರೆಟೇರಿಯಲ್ ಪ್ರಾಕ್ಟಿಸ್ ಡಿಪ್ಲೋಮಾವನ್ನು ಪಡೆದಿರತಕ್ಕದ್ದು.

ಉದ್ಯೋಗ ಮಾಹಿತಿ : ಮೈಸೂರು ಜಿಲ್ಲಾ ನ್ಯಾಯಾಲಯದಲ್ಲಿ ನೇರ ನೇಮಕಾತಿ 2023

• ದ್ವಿತೀಯ ದರ್ಜೆ ಸಹಾಯಕರು : 271 ಹುದ್ದೆ
ವೇತನ : ರೂ. 21,400 – ರೂ. 42,000
ದ್ವಿತೀಯ ಪಿಯುಸಿ ಶೈಕ್ಷಣಿಕ ಅರ್ಹತೆ ಹೊಂದಿರಬೇಕು.

• ದತ್ತಾಂಶ ನಮೂದಕ ಸಹಾಯಕರು : 58 ಹುದ್ದೆ
ವೇತನ : ರೂ. 21,400 – ರೂ. 42,000
ಪಿ.ಯು.ಸಿ.ಯಲ್ಲಿ ಉತ್ತೀರ್ಣರಾಗಿರುವುದರ ಜೊತೆಗೆ ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ (ಕೆ.ಎಸ್.ಇ.ಇ.ಬಿ )ಯಿಂದ ನಡೆಸಲಾಗುವ ಕನ್ನಡ ಹಿರಿಯ ಬೆರಳಚ್ಚು ಪರೀಕ್ಷೆಯಲ್ಲಿ ಉತ್ತೀರ್ಣರಾಗಿತಕ್ಕದ್ದು ಅಥವಾ ಕರ್ನಾಟಕ ತಾಂತ್ರಿಕ ಶಿಕ್ಷಣ ಮಂಡಳಿಯಿಂದ ನೀಡಲಾದ ಕಮರ್ಷಿಯಲ್ ಪ್ಯಾಕ್ಟಿಸ್ ಮತ್ತು ಕನ್ನಡ ಹಿರಿಯ ಬೆರಳಚ್ಚು ನಲ್ಲಿ ಡಿಪ್ಲೋಮಾವನ್ನು ಪಡೆದಿರತಕ್ಕದ್ದು.

• ವಾಹನ ಚಾಲಕರು : 87 ಹುದ್ದೆ
ವೇತನ : ರೂ. 21,400 – ರೂ. 42,000
ಹತ್ತನೇ ತರಗತಿ ಉತ್ತೀರ್ಣರಾಗಿರಬೇಕು ಮತ್ತು ಲಘು ವಾಹನ ಡ್ರೈವಿಂಗ್ ಲೈಸೆನ್ಸ್ ಹೊಂದಿರಬೇಕು.

• ಲ್ಯಾಬ್ ಅಸಿಸ್ಟೆಂಟ್ : 13 ಹುದ್ದೆ
ವೇತನ : ರೂ. 18,600 – ರೂ. 32,600
ಲ್ಯಾಬ್ ನಿರ್ವಹಣೆಯಲ್ಲಿ ಡಿಪ್ಲೊಮಾ ಜೊತೆಗೆ ಪಿಯುಸಿ (ವಿಜ್ಞಾನ) ಉತ್ತೀರ್ಣರಾಗಿರಬೇಕು ಮತ್ತು ಯಾವುದೇ NABL ಮಾನ್ಯತೆ ಪಡೆದ ಪ್ರಯೋಗಾಲಯದಲ್ಲಿ ಮೂರು ವರ್ಷಗಳ ಅನುಭವ ಹೊಂದಿರಬೇಕು.

• ಜೇನು ಕೃಷಿ ಸಹಾಯಕರು : 20 ಹುದ್ದೆ
ವೇತನ : ರೂ. 18,600 – ರೂ. 32,600
ಎಸ್.ಎಸ್.ಎಲ್.ಸಿಯಲ್ಲಿ ತೇರ್ಗಡೆ ಹೊಂದಿರತಕ್ಕದ್ದು ಮತ್ತು ಭಾಗಮಂಡಲ ಜೇನು ಸಾಕಣೆ ತರಬೇತಿ ಕೇಂದ್ರ ಕೊಡಗು ಜಿಲ್ಲೆಯಲ್ಲಿ ಕನಿಷ್ಠ ಮೂರು ತಿಂಗಳ ತರಬೇತಿ ಪಡೆದಿರುವ ಪ್ರಮಾಣ ಪತ್ರ ಹೊಂದಿರಬೇಕು. ಅಥವಾ ಕರ್ನಾಟಕದಲ್ಲಿ ಮಾನ್ಯತೆ ಪಡೆದ ವಿಶ್ವವಿದ್ಯಾನಿಲಯ ಅಥವಾ ತೋಟಗಾರಿಕೆ ಇಲಾಖೆಯು ನಡೆಸುವ ಜೇನುಸಾಕಣೆ ವಿಷಯದಲ್ಲಿ ನಡೆಸುವ ಕನಿಷ್ಠ ಮೂರು ತಿಂಗಳ ತರಬೇತಿ ಪ್ರಮಾಣ ಪತ್ರ ಹೊಂದಿರಬೇಕು.

• ಜವಾನ : 98 ಹುದ್ದೆ
ವೇತನ : ರೂ. 17,000 – ರೂ. 28,950
ಎಸ್.ಎಸ್.ಎಲ್.ಸಿ/ 10ನೇ ತರಗತಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು.

• ತೋಟಗಾರ : 1774 ಹುದ್ದೆ
ವೇತನ : ರೂ. 17,000 – ರೂ. 28,950
ಎಸ್‌.ಎಸ್‌.ಎಲ್‌.ಸಿ ಉತ್ತೀರ್ಣರಾಗಿರತಕ್ಕದ್ದು ಮತ್ತು ಕರ್ನಾಟಕ ತೋಟಗಾರಿಕೆ ಇಲಾಖೆಯಿಂದ 10 ತಿಂಗಳ ತೋಟಗಾರಿಕೆ ತರಬೇತಿಯನ್ನು ಪಡೆದಿರುವ ಪ್ರಮಾಣ ಪತ್ರ ಹೊಂದಿರತಕ್ಕದ್ದು. ಅಥವಾ ಎಸ್‌.ಎಸ್‌.ಎಲ್‌.ಸಿ ಮತ್ತು ಭಾರತದಲ್ಲಿ ಕಾನೂನಿನಿಂದ ಸ್ಥಾಪಿಸಲ್ಪಟ್ಟ ಮತ್ತು ಭಾರತೀಯ ಕೃಷಿ ಸಂಶೋಧನಾ ಮಂಡಳಿಯಿಂದ (ICAR) ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಡಿಪ್ಲೊಮಾ (ತೋಟಗಾರಿಕೆ) ಹೊಂದಿರತಕ್ಕದ್ದು.

• ಕಾವಲುಗಾರ : 29 ಹುದ್ದೆ
ವೇತನ : ರೂ. 17,000 – ರೂ. 28,950
ಎಸ್.ಎಸ್.ಎಲ್.ಸಿ/ 10ನೇ ತರಗತಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು.

ಉದ್ಯೋಗ ಮಾಹಿತಿ : ಸ್ಟಾಫ್ ಸೆಲೆಕ್ಷನ್ ಕಮಿಷನ್ ನೇಮಕಾತಿ 2023

ಕರ್ತವ್ಯ ಸ್ಥಳ : ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳು ಕರ್ನಾಟಕದಲ್ಲಿ ಕರ್ತವ್ಯ ನಿರ್ವಹಿಸಬೇಕು.

ಖಾಲಿಯಿರುವ ಹುದ್ದೆಗಳ ಸಂಖ್ಯೆ : ಒಟ್ಟು 4700ಕ್ಕೂ ಅಧಿಕ ಹುದ್ದೆಗಳ ನೇಮಕಾತಿಗಾಗಿ ಸಂಬಂಧಿಸಿದ ಅಧಿಸೂಚನೆ ಪ್ರಕಟವಾಗಿದೆ.

ಆಯ್ಕೆ ವಿಧಾನ : ಹುದ್ದೆಗಳನ್ನು ನೇರ ನೇಮಕಾತಿ ಹಾಗೂ ಸ್ಪರ್ಧಾತ್ಮಕ ಪರೀಕ್ಷೆ ಹಾಗೂ ಮುಂಬಡ್ತಿಯ ಮೂಲಕ ಭರ್ತಿ ಮಾಡಲಾಗುವುದು.

ಇತರೆ ಮಾಹಿತಿ :
ಅಧಿಸೂಚನೆ ಪ್ರಕಟವಾದ ದಿನಾಂಕ : ಮೇ 16, 2023
ಶೀಘ್ರದಲ್ಲೇ ಅರ್ಜಿ ಸಲ್ಲಿಕೆ ಆರಂಭ ಆಗಲಿದೆ

Karnataka State Horticulture Department (KSHD) Recruitment 2023 : Important Links

NOTIFICATIONCLICK HERE
Telegram Join Link Click Here

ಕೊನೆಯ ಪದಗಳು : ನಾವು ನೀಡಿದ ಉದ್ಯೋಗ ಮಾಹಿತಿಯನ್ನು ನೀವು ಇಷ್ಟಪಡುತ್ತೀರಿ ಎಂದು ಭಾವಿಸುತ್ತೇವೆ. ಈ ಉದ್ಯೋಗ ಮಾಹಿತಿ ನಿಮಗೆ ಇಷ್ಟವಾಗಿದ್ದರೆ ನಿಮ್ಮ ಸ್ನೇಹಿತರಿಗೆ ಶೇರ್ ಮಾಡಲು ಮರೆಯದಿರಿ.

Leave a Comment