ಕರ್ನಾಟಕ ಶಾಲಾ ಶಿಕ್ಷಣ ಇಲಾಖೆಯಿಂದ 15000 ಶಾಲಾ ಶಿಕ್ಷಕರ ಹುದ್ದೆಗಳ ನೇಮಕಾತಿ 2026 – Karnataka Teacher Recruitment 2026

Karnataka Teacher Recruitment 2026

Karnataka Teacher Recruitment 2026 : ಕರ್ನಾಟಕ ಶಾಲಾ ಶಿಕ್ಷಣ ಇಲಾಖೆಯಿಂದ 15000 ಶಾಲಾ ಶಿಕ್ಷಕರ ಹುದ್ದೆಗಳ ಭರ್ತಿಗೆ ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಹುದ್ದೆಗಳ ಭರ್ತಿಗೆ ಸಂಬಂಧಿಸಿದಂತೆ ಹುದ್ದೆಗಳ ಸಂಖ್ಯೆ, ಕರ್ತವ್ಯ ಸ್ಥಳ, ಶೈಕ್ಷಣಿಕ ಅರ್ಹತೆ, ವೇತನ, ಅರ್ಜಿ ಶುಲ್ಕ ಹಾಗೂ ಇತರೆ ಮಾಹಿತಿಯನ್ನು ಈ ಕೆಳಗಡೆ ವಿವರವಾಗಿ ನೀಡಲಾಗಿದೆ ಪೂರ್ತಿ ಓದಿ.

Karnataka Teacher Recruitment 2026 : Details of Vacancies

ಹುದ್ದೆ :

ಪ್ರಾಥಮಿಕ ಶಾಲಾ ಶಿಕ್ಷಕರು (1 ರಿಂದ 5ನೇ ತರಗತಿ), ಪದವೀಧರ ಪ್ರಾಥಮಿಕ ಶಿಕ್ಷಕರು (6 ರಿಂದ 8ನೇ ತರಗತಿ), ಪ್ರೌಢಶಾಲಾ ಸಹ ಶಿಕ್ಷಕರು, ದೈಹಿಕ ಶಿಕ್ಷಣ ಶಿಕ್ಷಕರು, ಗಣಕಯಂತ್ರ ವಿಜ್ಞಾನ ಶಿಕ್ಷಕರು.

ಕರ್ತವ್ಯ ಸ್ಥಳ :

ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳು ಕರ್ನಾಟಕದಲ್ಲಿ ಕರ್ತವ್ಯ ನಿರ್ವಹಿಸಬೇಕು.

ಖಾಲಿಯಿರುವ ಹುದ್ದೆಗಳ ಸಂಖ್ಯೆ :

ಒಟ್ಟು 15000 ಹುದ್ದೆಗಳ ಭರ್ತಿಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ.

ಶೈಕ್ಷಣಿಕ ಅರ್ಹತೆ :

ಪ್ರಾಥಮಿಕ ಶಾಲಾ ಶಿಕ್ಷಕರು

ಪಿಯುಸಿಯಲ್ಲಿ ಕನಿಷ್ಠ ಶೇ. 50 ಅಂಕಗಳು ಮತ್ತು ಎಲಿಮೆಂಟರಿ ಶಿಕ್ಷಣದಲ್ಲಿ ಎರಡು ವರ್ಷದ ಡಿಪ್ಲೊಮಾ ಅಥವಾ ಪಿಯುಸಿಯಲ್ಲಿ ಕನಿಷ್ಠ ಶೇ. 50 ಅಂಕಗಳು ಮತ್ತು ಎಲಿಮೆಂಟರಿ ಶಿಕ್ಷಣದಲ್ಲಿ ನಾಲ್ಕು ವರ್ಷಗಳ ಪದವಿ ಅಥವಾ ಪಿಯುಸಿಯಲ್ಲಿ ಕನಿಷ್ಠ ಶೇ. 50 ಅಂಕಗಳು ಮತ್ತು ಎರಡು ವರ್ಷಗಳ ಶಿಕ್ಷಣ ಡಿಪ್ಲೋಮಾ (ವಿಶೇಷ ಶಿಕ್ಷಣ) ಮತ್ತು ಕರ್ನಾಟಕ ಸರ್ಕಾರ ಅಥವಾ ಭಾರತ ಸರ್ಕಾರ ನಡೆಸುವ ಶಿಕ್ಷಕರ ಅರ್ಹತಾ ಪರೀಕ್ಷೆ (ಟಿ.ಇ.ಟಿ) ಯಲ್ಲಿ ಉತ್ತೀರ್ಣರಾಗಿರತಕ್ಕದ್ದು. ಮತ್ತು ರಾಷ್ಟ್ರೀಯ ಶಿಕ್ಷಕರ ಶಿಕ್ಷಣ ಪರಿಷತ್ ನಿಯಮಿರಿಸಬಹುದಾದ ಇನ್ಯಾವುದೇ ಉನ್ನತ ಅಥವಾ ಹೆಚ್ಚುವರಿ ಅರ್ಹತೆಗಳು.

ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರು –

ಪದವಿಯಲ್ಲಿ ಕನಿಷ್ಠ ಸರಾಸರಿ ಶೇಕಡ ಐವತ್ತು ಅಂಕಗಳು ಮತ್ತು ಎಲಿಮೆಂಟರಿ ಶಿಕ್ಷಣದಲ್ಲಿ ಎರಡು ವರ್ಷಗಳ ಡಿಪ್ಲೋಮಾ. ಅಥವಾ ಪದವಿಯಲ್ಲಿ ಕನಿಷ್ಠ ಸರಾಸರಿ ಶೇಕಡ ಐವತ್ತು ಅಂಕಗಳು ಮತ್ತು ಬ್ಯಾಚುಲರ್ ಆಫ್ ಎಜುಕೇಷನ್ ಪದವಿ ಅಥವಾ ವಿಶೇಷ ಶಿಕ್ಷಣದಲ್ಲಿ ಪದವಿ. ಅಥವಾ ಪಿಯುಸಿಯಲ್ಲಿ ಕನಿಷ್ಠ ಶೇಕಡ ಐವತ್ತು ಅಂಕಗಳು ಮತ್ತು ಎಲಿಮೆಂಟರಿ ಶಿಕ್ಷಣದಲ್ಲಿ ನಾಲ್ಕು ವರ್ಷಗಳ ಪದವಿ ಅಥವಾ ಶಿಕ್ಷಕರ ಶಿಕ್ಷಣದಲ್ಲಿ ನಾಲ್ಕು ವರ್ಷಗಳ ಪದವಿ. (ಪರಿಶಿಷ್ಟ ಜಾತಿ/ ಪರಿಶಿಷ್ಟ ವರ್ಗ/ ಇತರೆ ಹಿಂದುಳಿದ ವರ್ಗಗಳ ಪ್ರವರ್ಗ-1ಕ್ಕೆ ಸೇರಿದ ಅಭ್ಯರ್ಥಿಯಾಗಿದ್ದಲ್ಲಿ ಅಥವಾ ಅಂಗವೈಕಲ್ಯವುಳ್ಳ ಅಭ್ಯರ್ಥಿಯಾಗಿದ್ದಲ್ಲಿ ಪದವಿ ಅಥವಾ ಪಿಯುಸಿಯಲ್ಲಿ ಕನಿಷ್ಠ ಶೇಕಡ ನಲವತ್ತೈದು ಅಂಕಗಳನ್ನು ಪಡೆದಿರತಕ್ಕದ್ದು) ಮತ್ತು ಕರ್ನಾಟಕ ಸರ್ಕಾರ ಅಥವಾ ಭಾರತ ಸರ್ಕಾರ ನಡೆಸುವ ಶಿಕ್ಷಕರ ಅರ್ಹತಾ ಪರೀಕ್ಷೆ (ಟಿ.ಇ.ಟಿ) ಯಲ್ಲಿ ಉತ್ತೀರ್ಣರಾಗಿರತಕ್ಕದ್ದು.

ಪ್ರೌಢಶಾಲಾ ಸಹ ಶಿಕ್ಷಕರು –

ಪದವಿಯಲ್ಲಿ ಕನಿಷ್ಠ ಸರಾಸರಿ ಶೇಕಡ ಐವತ್ತು ಅಂಕಗಳು ಮತ್ತು ಬ್ಯಾಚುಲರ್ ಆಫ್ ಎಜುಕೇಷನ್ ಪದವಿಯನ್ನು ಹೊಂದಿರತಕ್ಕದ್ದು.

ಗಣಕ ವಿಜ್ಞಾನ ಶಿಕ್ಷಕರು –

ಬ್ಯಾಚುಲರ್ ಆಫ್ ಸೈನ್ಸ್ (ಕಂಪ್ಯೂಟರ್ ಸೈನ್ಸ್) ಅಥವಾ ಬ್ಯಾಚುಲರ್ ಆಫ್ ಕಂಪ್ಯೂಟರ್ ಅಪ್ಲಿಕೇಷನ್ ಅಥವಾ ಬ್ಯಾಚುಲರ್ ಆಫ್ ಇಂಜಿನಿಯರಿಂಗ್ (ಕಂಪ್ಯೂಟರ್ ಸೈನ್ಸ್)/ (ಇನ್ಪಾರ್ಮೆಷನ್ ಸೈನ್ಸ್)/ (ಎಲೆಕ್ಟ್ರಾನಿಕ್ಸ್ ಅಂಡ್ ಕಮ್ಯೂನಿಕೇಷನ್) ಅಥವಾ ಬ್ಯಾಚುಲರ್ ಆಫ್ ಟೆಕ್ನಾಲಜಿ (ಕಂಪ್ಯೂಟರ್ ಸೈನ್ಸ್)/ (ಇನ್ಪಾರ್ಮೆಷನ್ ಸೈನ್ಸ್)/ (ಎಲೆಕ್ಟ್ರಾನಿಕ್ಸ್ ಅಂಡ್ ಕಮ್ಯೂನಿಕೇಷನ್) ಮತ್ತು ಶಾಲಾ ಶಿಕ್ಷಣ ಇಲಾಖೆಯ ಗಣಕ ವಿಜ್ಞಾನ ಶಿಕ್ಷಕರಾಗಿ ನೇಮಕಾತಿ ಹೊಂದಿದ್ದಲ್ಲಿ ರಾಷ್ಟ್ರೀಯ ಶಿಕ್ಷಕರ ಶಿಕ್ಷಣ ಪರಿಷತ್ (ಎನ್.ಸಿ.ಟಿ.ಇ.) ನಿಂದ ಮಾನ್ಯತೆ ಪಡೆದ ಸಂಸ್ಥೆಯಿಂದ ನೇಮಕಾತಿಗೊಂಡ 5 ವರ್ಷಗಳ ಒಳಗಾಗಿ ಶಿಕ್ಷಣದಲ್ಲಿ ಪದವಿ (ಬಿ.ಎಡ್.) ಅರ್ಹತೆಯನ್ನು ಗಳಿಸಿಕೊಳ್ಳತಕ್ಕದ್ದು. 5 ವರ್ಷಗಳ ಒಳಗಾಗಿ ಶಿಕ್ಷಕರ ಅರ್ಹತಾ ಪರೀಕ್ಷೆಯನ್ನು ಪೂರ್ಣಗೊಳಿಸತಕ್ಕದ್ದು.

ದೈಹಿಕ ಶಿಕ್ಷಣ ಶಿಕ್ಷಕರು –

ಹಿರಿಯ ಮಾಧ್ಯಮಿಕ (12ನೇ ತರಗತಿ ಅಥವಾ ತತ್ಸಮಾನ) ತರಗತಿಯಲ್ಲಿ ಕನಿಷ್ಠ ಶೇ. 50 ಅಂಕಗಳು ಅಥವಾ ಹಿರಿಯ ಮಾಧ್ಯಮಿಕ ತರಗತಿಯಲ್ಲಿ ಉತ್ತೀರ್ಣಗೊಂಡಿದ್ದಲ್ಲಿ ಶಾಲೆ/ ಕಾಲೇಜು/ ಜಿಲ್ಲಾ ಹಂತದ ಕ್ರೀಡೆಗಳು/ ಆಟಗಳಲ್ಲಿ ಭಾಗವಹಿಸಿರತಕ್ಕದ್ದು. ಮತ್ತು ರಾಷ್ಟ್ರೀಯ ಶಿಕ್ಷಕರ ಶಿಕ್ಷಣ ಪರಿಷತ್ ನಿಂದ ಮಾನ್ಯತೆ ಪಡೆದ ಸಂಸ್ಥೆಯಿಂದ ಒಂದು ವರ್ಷಕ್ಕಿಂತ ಕಡಿಮೆ ಇಲ್ಲದ ದೈಹಿಕ ಶಿಕ್ಷಣ ಸರ್ಟೀಪಿಕೇಟ್/ ಡಿಪ್ಲೊಮಾ ವಿದ್ಯಾರ್ಹತೆಯನ್ನು ಹೊಂದಿರತಕ್ಕದ್ದು.

ಉದ್ಯೋಗ ಮಾಹಿತಿ : ಕರ್ನಾಟಕ ಉಚ್ಚ ನ್ಯಾಯಾಲಯದಲ್ಲಿ ದ್ವಿತೀಯ ದರ್ಜೆ ಸಹಾಯಕರು ಹುದ್ದೆಗಳ ನೇಮಕಾತಿ 2026

ವಯೋಮಾನ :

ಅರ್ಜಿ ಸಲ್ಲಿಸಲು ನಿಗದಿಪಡಿಸಿದ ಕೊನೆಯ ದಿನಾಂಕಕ್ಕೆ ಅಭ್ಯರ್ಥಿಗಳು ಈ ಕೆಳಗಿನಂತೆ ವಯೋಮಿತಿ ಹೊಂದಿರಬೇಕು.
• ಕನಿಷ್ಠ 21 ವರ್ಷ
• ಸಾಮಾನ್ಯ ಅರ್ಹತೆ ಅಭ್ಯರ್ಥಿಗಳಿಗೆ – ಗರಿಷ್ಠ 40 ವರ್ಷ
• ಪ್ರವರ್ಗ 2ಎ, 2ಬಿ, 3ಎ, 3ಬಿ ಅಭ್ಯರ್ಥಿಗಳಿಗೆ – ಗರಿಷ್ಠ 43 ವರ್ಷ
• ಎಸ್ಸಿ, ಎಸ್ಟಿ, ಪ್ರವರ್ಗ 1, ವಿಶೇಷಚೇತನ ಅಭ್ಯರ್ಥಿಗಳಿಗೆ – ಗರಿಷ್ಠ 45 ವರ್ಷ

ವೇತನ :

ಹುದ್ದೆವೇತನ
ಪ್ರಾಥಮಿಕ ಶಾಲಾ ಶಿಕ್ಷಕರು (1 ರಿಂದ 5ನೇ ತರಗತಿ)ರೂ. 41,300 – ರೂ. 81,800
ಪದವೀಧರ ಪ್ರಾಥಮಿಕ ಶಿಕ್ಷಕರು (6 ರಿಂದ 8ನೇ ತರಗತಿ)ರೂ. 44,425 – ರೂ. 83,700
ಪ್ರೌಢಶಾಲಾ ಸಹ ಶಿಕ್ಷಕರುರೂ. 54,175 – ರೂ. 99,400
ದೈಹಿಕ ಶಿಕ್ಷಣ ಶಿಕ್ಷಕರುರೂ. 41,300 – ರೂ. 81,800
ಗಣಕಯಂತ್ರ ವಿಜ್ಞಾನ ಶಿಕ್ಷಕರುರೂ. 44,425 – ರೂ. 83,700

ಆಯ್ಕೆ ವಿಧಾನ :

  • ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿನ ಪ್ರಾಥಮಿಕ ಶಾಲಾ ಶಿಕ್ಷಕರು ಹುದ್ದೆಗೆ ನಿಗದಿಪಡಿಸಿದ ಸ್ಪರ್ಧಾತ್ಮಕ ಪರೀಕ್ಷೆ, ಶಿಕ್ಷಕರ ಅರ್ಹತಾ ಪರೀಕ್ಷೆ, ಪಿಯುಸಿ/ ತತ್ಸಮಾನ ಪರೀಕ್ಷೆಯಲ್ಲಿ ಪಡೆದ ಅಂಕಗಳು/ ನಾಲ್ಕು ವರ್ಷಗಳ B.El.Ed., B.A.Ed., B.Sc.Ed., ಅಥವಾ ತತ್ಸಮಾನ ಶಿಕ್ಷಕರ ಶಿಕ್ಷಣ ಪದವಿಯಲ್ಲಿ ಪಡೆದ ಅಂಕಗಳು ಮತ್ತು ಶಿಕ್ಷಕರ ಶಿಕ್ಷಣ ಕೋರ್ಸನಲ್ಲಿ ಪಡೆದ ಅಂಕಗಳನ್ನು ಆಧರಿಸಿದ ಅನುಪಾತದ ನಿಗದಿತ ಮಾದರಿಯ ವೇಯಿಟೇಜ್ (Weightage) ಅನುಸರಿಸಿ (Derived Percentage) ಲೆಕ್ಕಹಾಕಿದ ಶೇಕಡಾವಾರು ಆಧಾರದ ಮೇಲೆ ಆಯ್ಕೆಗೆ ಮೆರಿಟ್ ಪಟ್ಟಿಯನ್ನು ಸಿದ್ದಪಡಿಸಲಾಗುವುದು.
  • ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿನ ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರು ಮತ್ತು ಗಣಕ ವಿಜ್ಞಾನ ಶಿಕ್ಷಕರು, ಸರ್ಕಾರಿ ಪ್ರೌಢಶಾಲೆಗಳಲ್ಲಿನ ಸಹ ಶಿಕ್ಷಕರ ಹುದ್ದೆಗೆ ಆಯಾ ವಿಷಯವಾರು ಮತ್ತು ಮಾಧ್ಯಮವಾರು ಹಾಗೂ ವರ್ಗವಾರು ಹುದ್ದೆಗಳಿಗೆ ನಿಗದಿಪಡಿಸಿದ ಸ್ಪರ್ಧಾತ್ಮಕ ಪರೀಕ್ಷೆ, ಪದವಿಯಲ್ಲಿ ಪಡೆದ ಅಂಕಗಳು, ಶಿಕ್ಷಕರ ಶಿಕ್ಷಣ ಕೋರ್ಸನಲ್ಲಿ (B.Ed) ಪಡೆದ ಅಂಕಗಳನ್ನು ಅನುಪಾತದ ನಿಗದಿತ ಮಾದರಿಯ ವೇಯಿಟೇಜ್ (Weightage) ಅನುಸರಿಸಿ (Derived Percentage) ಲೆಕ್ಕಹಾಕಿದ ಶೇಕಡಾವಾರು ಆಧಾರದ ಮೇಲೆ ಆಯ್ಕೆಗೆ ಮೆರಿಟ್ ಪಟ್ಟಿಯನ್ನು ಸಿದ್ದಪಡಿಸಲಾಗುವುದು.

ಉದ್ಯೋಗ ಮಾಹಿತಿ : ಕೆಇಎಯಿಂದ ನರ್ಸಿಂಗ್ ಮತ್ತು ಫಾರ್ಮಸಿ ಆಫೀಸರ್ ಹುದ್ದೆಗಳ ನೇಮಕಾತಿ 2026

ಅರ್ಜಿ ಸಲ್ಲಿಕೆಯ ವಿಧಾನ :

ಅಭ್ಯರ್ಥಿಯು ಈ ಹುದ್ದೆಗೆ ಆನ್‌ಲೈನ್‌ ಮೂಲಕ ಅರ್ಜಿಗಳನ್ನು ಸಲ್ಲಿಸಬೇಕು.
ಹಂತ 1 : ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸುವ ಮೊದಲು ಇಲಾಖೆ ಹೊರಡಿಸಿರುವ ಅಧಿಸೂಚನೆಯನ್ನು ಗಮನವಿಟ್ಟು ಓದಿ ಅರ್ಜಿ ಸಲ್ಲಿಸಲು ಅಗತ್ಯವಿರುವ ದಾಖಲೆಗಳನ್ನು ಸಿದ್ಧಪಡಿಸಿಕೊಂಡು ನಂತರ ಅರ್ಜಿಯನ್ನು ಸಲ್ಲಿಸಬೇಕು.
ಹಂತ 2 : ಇಲಾಖೆಯ ವೆಬ್‌ಸೈಟ್ ಗೆ ಭೇಟಿ ನೀಡಿ ಅಥವಾ ಈ ಕೆಳಗಡೆ ನೀಡಲಾದ ಅಪ್ಲೈ ಆನ್‌ಲೈನ್‌ ಲಿಂಕ್ ಮೇಲೆ ಕ್ಲಿಕ್ ಮಾಡಿ ಅಪ್ಲಿಕೇಷನ್ ತೆರೆದುಕೊಳ್ಳಿ.
ಹಂತ 3 : ಅಪ್ಲಿಕೇಷನ್ ನಲ್ಲಿ ತಿಳಿಸಿರುವಂತಹ ಎಲ್ಲಾ ಮಾಹಿತಿಯನ್ನು (ಉದಾಹರಣೆಗೆ ಅಭ್ಯರ್ಥಿಯ ಹೆಸರು, ವಿಳಾಸ, ವಿದ್ಯಾರ್ಹತೆ, ಮೊಬೈಲ್ ಸಂಖ್ಯೆ ಇತ್ಯಾದಿ) ಭರ್ತಿ ಮಾಡಿ, ಮುಂದಿನ ಹಂತಕ್ಕೆ ತೆರಳುವ ಮುನ್ನ ಪುನಃ ಒಮ್ಮೆ ಪರಿಶೀಲಿಸಿ.
ಹಂತ 4 : ಅಪ್ಲಿಕೇಷನ್ ನಲ್ಲಿ ಯಾವುದೇ ಪ್ರಮಾಣ ಪತ್ರ/ ದಾಖಲೆಗಳನ್ನು ಅಪ್ಲೋಡ್ ಮಾಡಲು ಸೂಚಿಸಿದ್ದರೆ, ಅವುಗಳನ್ನು ಸ್ಕ್ಯಾನ್ ಮಾಡಿ ಅಪ್ಲೋಡ್ ಮಾಡಿ (ಅಗತ್ಯವಿದ್ದರೆ ಮಾತ್ರ).
ಹಂತ 5 : ಕೊನೆಯದಾಗಿ, ಅಭ್ಯರ್ಥಿಗೆ ಅರ್ಜಿ ಶುಲ್ಕ ಪಾವತಿಸಲು ಸೂಚಿಸಿದ್ದರೆ, ಶುಲ್ಕ ಪಾವತಿಸಿ ಅರ್ಜಿ ಸಲ್ಲಿಕೆ ಪೂರ್ಣಗೊಳಿಸಿ.

ನಿಗದಿತ ಅರ್ಜಿ ಶುಲ್ಕದ ವಿವರ :

ಸಾಮಾನ್ಯ ಅರ್ಹತೆ, ಪ್ರವರ್ಗ 2ಎ, 2ಬಿ, 3ಎ, 3ಬಿ ಅಭ್ಯರ್ಥಿಗಳು

• ಒಂದು ವೃಂದದ ಒಂದು ಹುದ್ದೆಗೆ ಅರ್ಜಿ ಸಲ್ಲಿಸಿದ್ದಲ್ಲಿ – ರೂ. 750/-
• ಒಂದೇ ವೃಂದದ ಎರಡು ಹುದ್ದೆಗೆ ಅರ್ಜಿ ಸಲ್ಲಿಸಿದ್ದಲ್ಲಿ – ರೂ. 1125/-
(ಎರಡಕ್ಕಿಂತ ಹೆಚ್ಚಿನ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಯಸಿದಲ್ಲಿ, ಪ್ರತಿ ಹೆಚ್ಚುವರಿ ಹುದ್ದೆಗೆ ಹೆಚ್ಚುವರಿಯಾಗಿ ರೂ. 375/- ಗಳನ್ನು ಪಾವತಿಸಬೇಕು)

ಪ.ಜಾತಿ, ಪ. ವರ್ಗ, ಪ್ರವರ್ಗ1, ಮಾಜಿ ಸೈನಿಕ, ಅಂಗವೈಕಲ್ಯತೆಯನ್ನುಳ್ಳ ಅಭ್ಯರ್ಥಿಗಳು, ತೃತೀಯ ಲಿಂಗದ ಅಭ್ಯರ್ಥಿಗಳು

• ಒಂದು ವೃಂದದ ಒಂದು ಹುದ್ದೆಗೆ ಅರ್ಜಿ ಸಲ್ಲಿಸಿದ್ದಲ್ಲಿ – ರೂ. 500/-
• ಒಂದೇ ವೃಂದದ ಎರಡು ಹುದ್ದೆಗೆ ಅರ್ಜಿ ಸಲ್ಲಿಸಿದ್ದಲ್ಲಿ – ರೂ. 750/-
(ಎರಡಕ್ಕಿಂತ ಹೆಚ್ಚಿನ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಯಸಿದಲ್ಲಿ, ಪ್ರತಿ ಹೆಚ್ಚುವರಿ ಹುದ್ದೆಗೆ ಹೆಚ್ಚುವರಿಯಾಗಿ ರೂ. 250/- ಗಳನ್ನು ಪಾವತಿಸಬೇಕು)

ಶುಲ್ಕ ಪಾವತಿಸುವ ವಿಧಾನ :

ಅಭ್ಯರ್ಥಿಗಳು ಆನ್‌ಲೈನ್‌ನಲ್ಲಿ ಡೆಬಿಟ್ ಕಾರ್ಡ್, ಕ್ರೆಡಿಟ್ ಕಾರ್ಡ್, ನೆಟ್ ಬ್ಯಾಂಕಿಂಗ್ ಮೂಲಕ ಶುಲ್ಕ ಪಾವತಿಸಬಹುದು ಅಥವಾ ಆನ್‌ಲೈನ್‌ ಬ್ಯಾಂಕ್ ಚಲನ್ (ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಯಾವುದೇ ಶಾಖೆಯಲ್ಲಿ) ಮೂಲಕ ಶುಲ್ಕ ಪಾವತಿಸಬಹುದು.

ಅರ್ಜಿಯನ್ನು ಸಲ್ಲಿಸಲು ನಿಗದಿಪಡಿಸಿದ ದಿನಾಂಕದ ವಿವರ :

• ಅರ್ಜಿ ಸಲ್ಲಿಸಲು ಪ್ರಾರಂಭದ ದಿನಾಂಕ : ಆಗಸ್ಟ್ 18, 2026
• ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : ಸೆಪ್ಟೆಂಬರ್ 07, 2026
• ಪಾವತಿಸಿರುವ ಶುಲ್ಕವನ್ನು ಖಚಿತಪಡಿಸಿಕೊಳ್ಳುವ ಕೊನೆಯ ದಿನಾಂಕ : ಸೆಪ್ಟೆಂಬರ್ 10, 2026

Teacher Recruitment in Karnataka 2026 : Important Links

DISTRICT WISE NOTIFICATIONCLICK HERE
APPLY ONLINE CLICK HERE
Telegram Join Link Click Here
WhatsApp Group Link Click Here

ಕೊನೆಯ ಪದಗಳು : ನಾವು ನೀಡಿದ ಉದ್ಯೋಗ ಮಾಹಿತಿಯನ್ನು ನೀವು ಇಷ್ಟಪಡುತ್ತೀರಿ ಎಂದು ಭಾವಿಸುತ್ತೇವೆ. ಈ ಉದ್ಯೋಗ ಮಾಹಿತಿ ನಿಮಗೆ ಇಷ್ಟವಾಗಿದ್ದರೆ ನಿಮ್ಮ ಸ್ನೇಹಿತರಿಗೆ ಶೇರ್ ಮಾಡಲು ಮರೆಯದಿರಿ.

WhatsApp
Telegram
Facebook

Leave a Comment