ಬೆಳಗಾವಿ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ನೇಮಕಾತಿ 2023 – KMF Belagavi (BEMUL) Recruitment 2023 Apply Online at Bemul.in

KMF Belagavi (BEMUL) Recruitment 2023 : ಬೆಳಗಾವಿ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ನಿಯಮಿತ, ಬೆಳಗಾವಿ ಇದರಲ್ಲಿ ಖಾಲಿ ಇರುವ ವಿವಿಧ ವೃಂದಗಳಲ್ಲಿನ ಹುದ್ದೆಗಳ ಭರ್ತಿಗೆ ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಹುದ್ದೆಗಳ ಭರ್ತಿಗೆ ಸಂಬಂಧಿಸಿದಂತೆ ಕರ್ತವ್ಯ ಸ್ಥಳ, ಶೈಕ್ಷಣಿಕ ಅರ್ಹತೆ, ವಯೋಮಾನ, ಅರ್ಜಿ ಸಲ್ಲಿಕೆ ವಿಧಾನ ಹಾಗೂ ಇತರೆ ಮಾಹಿತಿಯನ್ನು ಈ ಕೆಳಗಡೆ ವಿವರವಾಗಿ ನೀಡಲಾಗಿದೆ ಪೂರ್ತಿ ಓದಿ.

KMF Belagavi (BEMUL) Recruitment 2023 : Details of Vacancies

ಹುದ್ದೆ : ಸಹಾಯಕ ವ್ಯವಸ್ಥಾಪಕರು (ಎ.ಹೆಚ್& ಎ.ಐ), ಸಹಾಯಕ ವ್ಯವಸ್ಥಾಪಕರು (ವಿತ್ತ), ತಾಂತ್ರಿಕ ಅಧಿಕಾರಿ (ಡಿಟಿ), ತಾಂತ್ರಿಕ ಅಧಿಕಾರಿ (ಪುಡ್ ಸೈನ್ಸ್ & ಟೆಕ್ನಾಲಜಿ), ತಾಂತ್ರಿಕ ಅಧಿಕಾರಿ (ಮೆಕ್ಯಾನಿಕಲ್), ತಾಂತ್ರಿಕ ಅಧಿಕಾರಿ (ಅಭಿಯಂತರ)(ಇಲೆಕ್ಟ್ರಿಕಲ್ & ಇಲೆಕ್ಟ್ರಾನಿಕ್ಸ್),  ತಾಂತ್ರಿಕ ಅಧಿಕಾರಿ (ಕ್ಯೂಸಿ/ಎಂ.ಬಿ), ವಿಸ್ತರಣಾಧಿಕಾರಿ ದರ್ಜೆ-3, ಆಡಳಿತ ಸಹಾಯಕ ದರ್ಜೆ-2, ಲೆಕ್ಕ ಸಹಾಯಕ ದರ್ಜೆ-2, ಮಾರುಕಟ್ಟೆ ಸಹಾಯಕ ದರ್ಜೆ-2, ಕೆಮಿಸ್ಟ್ ದರ್ಜೆ-2 (ಕೆಮಿಸ್ಟ್ರಿ), ಕೆಮಿಸ್ಟ್ ದರ್ಜೆ-2 (ಮೈಕ್ರೋಬಯಾಲಜಿ), ಕಿರಿಯ ಸಿಸ್ಟಮ್ ಆಪರೇಟರ್, ಕಿರಿಯ ತಾಂತ್ರಿಕ (ಮೆಕ್ಯಾನಿಕಲ್), ಕಿರಿಯ ತಾಂತ್ರಿಕ (ರೆಪ್ರಿಜರೇಷನ್ & ಏರ್ ಕಂಡೀಷನ್), ಕಿರಿಯ ತಾಂತ್ರಿಕ (ಇಲೆಕ್ಟ್ರಿಕಲ್), ಕಿರಿಯ ತಾಂತ್ರಿಕ (ಬಾಯ್ಲರ್)

ಕರ್ತವ್ಯ ಸ್ಥಳ : ಹುದ್ದೆಗಳಿಗೆ ಆಯ್ಕೆಯಾಗುವ ಅರ್ಹ ಅಭ್ಯರ್ಥಿಗಳು ಬೆಳಗಾವಿ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟದಲ್ಲಿ ಕೆಲಸ ನಿರ್ವಹಿಸಬೇಕು.

ಖಾಲಿಯಿರುವ ಹುದ್ದೆಗಳ ಸಂಖ್ಯೆ : ಒಟ್ಟು 46 ಹುದ್ದೆಗಳ ಭರ್ತಿಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ.

ಹುದ್ದೆಹುದ್ದೆಗಳ ಸಂಖ್ಯೆ ವೇತನ
ಸಹಾಯಕ ವ್ಯವಸ್ಥಾಪಕರು (ಎ.ಹೆಚ್& ಎ.ಐ)252650-97100
ಸಹಾಯಕ ವ್ಯವಸ್ಥಾಪಕರು (ವಿತ್ತ)152650-97100
ತಾಂತ್ರಿಕ ಅಧಿಕಾರಿ (ಡಿಟಿ)243100-83900
ತಾಂತ್ರಿಕ ಅಧಿಕಾರಿ (ಪುಡ್ ಸೈನ್ಸ್ & ಟೆಕ್ನಾಲಜಿ)143100-83900
ತಾಂತ್ರಿಕ ಅಧಿಕಾರಿ (ಮೆಕ್ಯಾನಿಕಲ್)243100-83900
ತಾಂತ್ರಿಕ ಅಧಿಕಾರಿ (ಅಭಿಯಂತರ)(ಇಲೆಕ್ಟ್ರಿಕಲ್ & ಇಲೆಕ್ಟ್ರಾನಿಕ್ಸ್)143100-83900
ತಾಂತ್ರಿಕ ಅಧಿಕಾರಿ (ಕ್ಯೂಸಿ/ಎಂ.ಬಿ)143100-83900
ವಿಸ್ತರಣಾಧಿಕಾರಿ ದರ್ಜೆ-31033450-62600
ಆಡಳಿತ ಸಹಾಯಕ ದರ್ಜೆ-2527650-52650
ಲೆಕ್ಕ ಸಹಾಯಕ ದರ್ಜೆ-2527650-52650
ಮಾರುಕಟ್ಟೆ ಸಹಾಯಕ ದರ್ಜೆ-2227650-52650
ಕೆಮಿಸ್ಟ್ ದರ್ಜೆ-2 (ಕೆಮಿಸ್ಟ್ರಿ)327650-52650
ಕೆಮಿಸ್ಟ್ ದರ್ಜೆ-2 (ಮೈಕ್ರೋಬಯಾಲಜಿ)127650-52650
ಕಿರಿಯ ಸಿಸ್ಟಮ್ ಆಪರೇಟರ್127650-52650
ಕಿರಿಯ ತಾಂತ್ರಿಕರು921400-42000

ನಿಗದಿಪಡಿಸಿರುವ ಶೈಕ್ಷಣಿಕ ಅರ್ಹತೆ :

ಸಹಾಯಕ ವ್ಯವಸ್ಥಾಪಕರು (ಎ.ಹೆಚ್& ಎ.ಐ) – ಬಿವಿಎಸ್‌ಸಿ ಮತ್ತು ಎ.ಹೆಚ್ ಪದವಿ ವಿದ್ಯಾರ್ಹತೆ ಹೊಂದಿರತಕ್ಕದ್ದು ಮತ್ತು ಕರ್ನಾಟಕ ಪಶುವೈದ್ಯಕೀಯ ಕೌನ್ಸಿಲ್‌ನಿಂದ ನೊಂದಣಿ ಪ್ರಮಾಣ ಪತ್ರ ಹೊಂದಿರತಕ್ಕದ್ದು.

ಸಹಾಯಕ ವ್ಯವಸ್ಥಾಪಕರು (ವಿತ್ತ) – ಬಿ.ಕಾಂ ಪದವಿ ಜೊತೆಗೆ ಎಂ.ಬಿ.ಎ(ಹಣಕಾಸು) ಅಥವಾ ಎಂ.ಕಾಂ ಸ್ನಾತಕೋತ್ತರ ಪದವಿ ವಿದ್ಯಾರ್ಹತೆ ಮತ್ತು ಕರ್ನಾಟಕ ಸಹಕಾರ ಹಾಲು ಮಹಾಮಂಡಳ ಅಥವಾ ರಾಜ್ಯದ ಯಾವುದೇ ಜಿಲ್ಲಾ ಸಹಕಾರ ಹಾಲು ಒಕ್ಕೂಟದ ವಿತ್ತ ವಿಭಾಗದಲ್ಲಿ ಕನಿಷ್ಠ 03 ವರ್ಷಗಳ ಸೇವಾನುಭವ ಹೊಂದಿರತಕ್ಕದ್ದು.

ತಾಂತ್ರಿಕ ಅಧಿಕಾರಿ (ಡಿಟಿ) – ಬಿ.ಟೆಕ್ (ಡಿ.ಟೆಕ್) ಪದವಿ ವಿದ್ಯಾರ್ಹತೆ ಹೊಂದಿರಬೇಕು.

ತಾಂತ್ರಿಕ ಅಧಿಕಾರಿ (ಪುಡ್ ಸೈನ್ಸ್ & ಟೆಕ್ನಾಲಜಿ) – ಬಿ.ಟೆಕ್ (ಪುಡ್ ಸೈನ್ಸ್ & ಟೆಕ್ನಾಲಜಿ) ಪದವಿ ವಿದ್ಯಾರ್ಹತೆ ಹೊಂದಿರಬೇಕು.

ತಾಂತ್ರಿಕ ಅಧಿಕಾರಿ (ಮೆಕ್ಯಾನಿಕಲ್) – ಬಿಇ/ ಬಿ.ಟೆಕ್ (ಮೆಕ್ಯಾನಿಕಲ್) ಪದವಿ ವಿದ್ಯಾರ್ಹತೆ ಹೊಂದಿರಬೇಕು.

ತಾಂತ್ರಿಕ ಅಧಿಕಾರಿ (ಅಭಿಯಂತರ) (ಇಲೆಕ್ಟ್ರಿಕಲ್ & ಇಲೆಕ್ಟ್ರಾನಿಕ್ಸ್) – ಬಿಇ/ ಬಿ.ಟೆಕ್ (ಇಲೆಕ್ಟ್ರಿಕಲ್ & ಇಲೆಕ್ಟ್ರಾನಿಕ್ಸ್) ಪದವಿ ವಿದ್ಯಾರ್ಹತೆ ಹೊಂದಿರಬೇಕು.

ತಾಂತ್ರಿಕ ಅಧಿಕಾರಿ (ಕ್ಯೂಸಿ/ಎಂ.ಬಿ) -ಎಂಎಸ್ಸಿ (ಮೈಕ್ರೋಬಯೋಲಜಿ/ಕೆಮಿಸ್ಟ್ರಿ/ಬಯೋಟೆಕ್ನಾಲಜಿ) ಸ್ನಾತಕೋತ್ತರ ಪದವಿ ವಿದ್ಯಾರ್ಹತೆಯನ್ನು ಹೊಂದಿರತಕ್ಕದ್ದು.

ವಿಸ್ತರಣಾಧಿಕಾರಿ ದರ್ಜೆ 3 – ಬಿಎ/ ಬಿ.ಎಸ್ಸಿ/ ಬಿ.ಕಾಂ/ ಬಿಬಿಎಂ/ ಬಿಬಿಎ ಪದವಿ ವಿದ್ಯಾರ್ಹತೆ ಹೊಂದಿರಬೇಕು.

ಆಡಳಿತ ಸಹಾಯಕ ದರ್ಜೆ-2 – ಯಾವುದೇ ಪದವಿ ಶೈಕ್ಷಣಿಕ ಅರ್ಹತೆ ಹೊಂದಿರಬೇಕು.

ಲೆಕ್ಕ ಸಹಾಯಕ ದರ್ಜೆ-2 – ಬಿ.ಕಾಂ ಪದವಿ ಶೈಕ್ಷಣಿಕ ಅರ್ಹತೆ ಹೊಂದಿರಬೇಕು.

ಮಾರುಕಟ್ಟೆ ಸಹಾಯಕರು ದರ್ಜೆ 2 – ಬಿ.ಬಿ.ಎಂ/ ಬಿ.ಬಿ.ಎ/ ಬಿ.ಕಾಂ ಪದವಿ ಶೈಕ್ಷಣಿಕ ಅರ್ಹತೆ ಹೊಂದಿರಬೇಕು.

ಕೆಮಿಸ್ಟ್ ದರ್ಜೆ-2 (ಕೆಮಿಸ್ಟ್ರಿ) – ಬಿ.ಎಸ್ಸಿ (ಕೆಮಿಸ್ಟ್ರಿ) ಪದವಿ ಶೈಕ್ಷಣಿಕ ಅರ್ಹತೆ ಹೊಂದಿರಬೇಕು.

ಕೆಮಿಸ್ಟ್ ದರ್ಜೆ-2 (ಮೈಕ್ರೋಬಯಾಲಜಿ) – ಬಿ.ಎಸ್ಸಿ (ಮೈಕ್ರೋಬಯಾಲಜಿ) ಪದವಿ ಶೈಕ್ಷಣಿಕ ಅರ್ಹತೆ ಹೊಂದಿರಬೇಕು.

ಕಿರಿಯ ಸಿಸ್ಟಂ ಆಫರೇಟರ್ – ಬಿಸಿಎ/ ಬಿ.ಎಸ್ಸಿ (ಕಂಪ್ಯೂಟರ್ ಸೈನ್ಸ್) ಪದವಿ ಪಡೆದಿರಬೇಕು

ಕಿರಿಯ ತಾಂತ್ರಿಕ (ಮೆಕ್ಯಾನಿಕಲ್) – ಅಭ್ಯರ್ಥಿಯು ಕನಿಷ್ಠ ಎಸ್.ಎಸ್.ಎಲ್.ಸಿ. ವಿದ್ಯಾರ್ಹತೆಯೊಂದಿಗೆ ಅಂಗೀಕೃತ ತಾಂತ್ರಿಕ ಪರೀಕ್ಷಾ ಮಂಡಳಿ/ ಜಿ.ಟಿ.ಟಿ.ಸಿ/ ಎನ್.ಟಿ.ಟಿ.ಎಫ್ ನಿಂದ ಮೆಕ್ಯಾನಿಕಲ್ ವಿಷಯದಲ್ಲಿ ಐ.ಟಿ.ಐ/ ಡಿಪ್ಲೋಮಾ ಶೈಕ್ಷಣಿಕ ಅರ್ಹತೆ ಹೊಂದಿರತಕ್ಕದ್ದು.

ಕಿರಿಯ ತಾಂತ್ರಿಕ (ರೆಪ್ರಿಜರೇಷನ್ & ಏರ್ ಕಂಡೀಷನ್) – ಅಭ್ಯರ್ಥಿಯು ಕನಿಷ್ಠ ಎಸ್.ಎಸ್.ಎಲ್.ಸಿ. ವಿದ್ಯಾರ್ಹತೆಯೊಂದಿಗೆ ಅಂಗೀಕೃತ ತಾಂತ್ರಿಕ ಪರೀಕ್ಷಾ ಮಂಡಳಿ/ ಜಿ.ಟಿ.ಟಿ.ಸಿ/ ಎನ್.ಟಿ.ಟಿ.ಎಫ್ ನಿಂದ ರೆಪ್ರಿಜರೇಷನ್ & ಏರ್ ಕಂಡೀಷನ್ ವಿಷಯದಲ್ಲಿ ಐ.ಟಿ.ಐ/ ಡಿಪ್ಲೋಮಾ ಶೈಕ್ಷಣಿಕ ಅರ್ಹತೆ ಹೊಂದಿರತಕ್ಕದ್ದು.

ಕಿರಿಯ ತಾಂತ್ರಿಕ (ಇಲೆಕ್ಟ್ರಿಕಲ್) – ಅಭ್ಯರ್ಥಿಯು ಕನಿಷ್ಠ ಎಸ್.ಎಸ್.ಎಲ್.ಸಿ. ವಿದ್ಯಾರ್ಹತೆಯೊಂದಿಗೆ ಅಂಗೀಕೃತ ತಾಂತ್ರಿಕ ಪರೀಕ್ಷಾ ಮಂಡಳಿ/ ಜಿ.ಟಿ.ಟಿ.ಸಿ/ ಎನ್.ಟಿ.ಟಿ.ಎಫ್ ನಿಂದ ಇಲೆಕ್ಟ್ರಿಕಲ್ ವಿಷಯದಲ್ಲಿ ಐ.ಟಿ.ಐ/ ಡಿಪ್ಲೋಮಾ ಶೈಕ್ಷಣಿಕ ಅರ್ಹತೆ ಹೊಂದಿರತಕ್ಕದ್ದು.

ಕಿರಿಯ ತಾಂತ್ರಿಕ (ಬಾಯ್ಲರ್) – ಅಭ್ಯರ್ಥಿಯು ಕನಿಷ್ಠ ಎಸ್.ಎಸ್.ಎಲ್.ಸಿ. ವಿದ್ಯಾರ್ಹತೆಯೊಂದಿಗೆ ಸರ್ಕಾರದ ಬಾಯ್ಲರ್ ಸಹಾಯಕ ಪರೀಕ್ಷಾ ಮಂಡಳಿಯಿಂದ ಬಾಯ್ಲರ್ ದರ್ಜೆ-2 ಪ್ರಮಾಣಪತ್ರ ಹೊಂದಿರತಕ್ಕದ್ದು.

ಉದ್ಯೋಗ ಮಾಹಿತಿ : ಎಸ್.ಡಿ.ಎ ಮತ್ತು ಎಫ್.ಡಿ.ಎ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ

ವಯೋಮಾನ : ಅಭ್ಯರ್ಥಿಗಳು ಕನಿಷ್ಠ 18 ವರ್ಷ ಪೂರೈಸಿರಬೇಕು.
• ಎಸ್ಸಿ, ಎಸ್ಟಿ, ಪ್ರವರ್ಗ 1 ಅಭ್ಯರ್ಥಿಗಳಿಗೆ – ಗರಿಷ್ಠ 40 ವರ್ಷ
• ಪ್ರವರ್ಗ 2ಎ, 2ಬಿ, 3ಎ, 3ಬಿ ಅಭ್ಯರ್ಥಿಗಳಿಗೆ – ಗರಿಷ್ಠ 38 ವರ್ಷ
• ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ – ಗರಿಷ್ಠ 35 ವರ್ಷ

ಆಯ್ಕೆ ವಿಧಾನ : ಅಭ್ಯರ್ಥಿಗಳು ಲಿಖಿತ ಪರೀಕ್ಷೆಯಲ್ಲಿ ಗಳಿಸಿದ ಅಂಕಗಳ ಆಧಾರದ ಮೇಲೆ 1:5ರ ಅನುಪಾತದಲ್ಲಿ ಮೌಖಿಕ ಸಂದರ್ಶನಕ್ಕೆ ಕರೆಯಲಾಗುವುದು. ಮೌಖಿಕ ಸಂದರ್ಶನಕ್ಕೆ ಗರಿಷ್ಠ 15 ಅಂಕಗಳನ್ನು ನಿಗದಿಪಡಿಸಲಾಗಿದೆ.

ಅರ್ಜಿ ಸಲ್ಲಿಕೆಯ ವಿಧಾನ : ಅಭ್ಯರ್ಥಿಯು ಈ ಹುದ್ದೆಗೆ ಆನ್‌ಲೈನ್‌ ಮೂಲಕ ಅರ್ಜಿಗಳನ್ನು ಸಲ್ಲಿಸಬೇಕು.
ಹಂತ 1 : ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸುವ ಮೊದಲು ಇಲಾಖೆ ಹೊರಡಿಸಿರುವ ಅಧಿಸೂಚನೆಯನ್ನು ಗಮನವಿಟ್ಟು ಓದಿ ಅರ್ಜಿ ಸಲ್ಲಿಸಲು ಅಗತ್ಯವಿರುವ ದಾಖಲೆಗಳನ್ನು ಸಿದ್ಧಪಡಿಸಿಕೊಂಡು ನಂತರ ಅರ್ಜಿಯನ್ನು ಸಲ್ಲಿಸಬೇಕು.
ಹಂತ 2 : ಇಲಾಖೆಯ ವೆಬ್‌ಸೈಟ್ ಗೆ ಭೇಟಿ ನೀಡಿ ಅಥವಾ ಈ ಕೆಳಗಡೆ ನೀಡಲಾದ ಅಪ್ಲೈ ಆನ್‌ಲೈನ್‌ ಲಿಂಕ್ ಮೇಲೆ ಕ್ಲಿಕ್ ಮಾಡಿ ಅಪ್ಲಿಕೇಷನ್ ತೆರೆದುಕೊಳ್ಳಿ.
ಹಂತ 3 : ಅಪ್ಲಿಕೇಷನ್ ನಲ್ಲಿ ತಿಳಿಸಿರುವಂತಹ ಎಲ್ಲಾ ಮಾಹಿತಿಯನ್ನು (ಉದಾಹರಣೆಗೆ ಅಭ್ಯರ್ಥಿಯ ಹೆಸರು, ವಿಳಾಸ, ವಿದ್ಯಾರ್ಹತೆ, ಮೊಬೈಲ್ ಸಂಖ್ಯೆ ಇತ್ಯಾದಿ) ಭರ್ತಿ ಮಾಡಿ, ಮುಂದಿನ ಹಂತಕ್ಕೆ ತೆರಳುವ ಮುನ್ನ ಪುನಃ ಒಮ್ಮೆ ಪರಿಶೀಲಿಸಿ.
ಹಂತ 4 : ಅಪ್ಲಿಕೇಷನ್ ನಲ್ಲಿ ಯಾವುದೇ ಪ್ರಮಾಣ ಪತ್ರ/ ದಾಖಲೆಗಳನ್ನು ಅಪ್ಲೋಡ್ ಮಾಡಲು ಸೂಚಿಸಿದ್ದರೆ, ಅವುಗಳನ್ನು ಸ್ಕ್ಯಾನ್ ಮಾಡಿ ಅಪ್ಲೋಡ್ ಮಾಡಿ (ಅಗತ್ಯವಿದ್ದರೆ ಮಾತ್ರ).
ಹಂತ 5 : ಕೊನೆಯದಾಗಿ, ಅಭ್ಯರ್ಥಿಗೆ ಅರ್ಜಿ ಶುಲ್ಕ ಪಾವತಿಸಲು ಸೂಚಿಸಿದ್ದರೆ, ಶುಲ್ಕ ಪಾವತಿಸಿ ಅರ್ಜಿ ಸಲ್ಲಿಕೆ ಪೂರ್ಣಗೊಳಿಸಿ.

ನಿಗದಿತ ಅರ್ಜಿ ಶುಲ್ಕದ ವಿವರ : ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಪ್ರವರ್ಗ-1ರ ಅಭ್ಯರ್ಥಿಗಳು ರೂ. 500, ಇತರೆ ವರ್ಗದ ಅಭ್ಯರ್ಥಿಗಳು ರೂ. 1000 ಅರ್ಜಿ ಶುಲ್ಕ ಪಾವತಿಸಬೇಕು.

ಶುಲ್ಕ ಪಾವತಿಸುವ ವಿಧಾನ : ಅರ್ಜಿ ಶುಲ್ಕವನ್ನು ಆನ್‌ಲೈನ್‌ನಲ್ಲಿ ಡೆಬಿಟ್ ಕಾರ್ಡ್, ಕ್ರೆಡಿಟ್ ಕಾರ್ಡ್, ನೆಟ್ ಬ್ಯಾಂಕಿಂಗ್ ಮೂಲಕ ಶುಲ್ಕ ಪಾವತಿಸಬಹುದು.

ಅರ್ಜಿಯನ್ನು ಸಲ್ಲಿಸಲು ನಿಗದಿಪಡಿಸಿರುವ ದಿನಾಂಕದ ವಿವರ :
ಅರ್ಜಿ ಸಲ್ಲಿಕೆಗೆ ಪ್ರಾರಂಭದ ದಿನಾಂಕ : ಆಗಸ್ಟ್ 28, 2023
ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ : ಸೆಪ್ಟೆಂಬರ್ 26, 2023

KMF Belagavi (BEMUL) Recruitment 2023 : Important Links

DETAILED NOTIFICATION CLICK HERE
SHORT NOTIFICATIONCLICK HERE
APPLY ONLINE CLICK HERE
Telegram Join Link Click Here
WhatsApp Channel Link Click Here

ಇತರೆ ಮಾಹಿತಿ : ಕಿರಿಯ ತಾಂತ್ರಿಕ ಮತ್ತು ಕಿರಿಯ ಸಿಸ್ಟಮ್ ಆಪರೇಟರ್ ಹುದ್ದೆಗಳನ್ನು ಹೊರತುಪಡಿಸಿ ಉಳಿದ ಎಲ್ಲಾ ಹುದ್ದೆಗಳ ನೇಮಕಾತಿಗೆ ಅಭ್ಯರ್ಥಿಗಳು ಕಂಪ್ಯೂಟರ್ ಆಪರೇಶನ್ಸ್ ಮತ್ತು ಅಪ್ಲಿಕೇಷನ್ಸ್‌ನಲ್ಲಿ ಜ್ಞಾನವನ್ನು (Basic of Computer and M.S Office knowledge) ಕಡ್ಡಾಯವಾಗಿ ಹೊಂದಿರತಕ್ಕದ್ದು. ಪರಂತು ಪದವಿಯಲ್ಲಿ ಕನಿಷ್ಠ ಒಂದು ಕೋರ್ಸ್ ಕಂಪ್ಯೂಟರ್ ವಿಷಯ ಅಧ್ಯಯನ ಮಾಡಿದಲ್ಲಿ ಕಂಪ್ಯೂಟರ್ ಸರ್ಟಿಫಿಕೇಟ್ ಸಲ್ಲಿಸಲು ವಿನಾಯಿತಿ ನೀಡಲಾಗುವುದು.

ಕೊನೆಯ ಪದಗಳು : ನಾವು ನೀಡಿದ ಉದ್ಯೋಗ ಮಾಹಿತಿಯನ್ನು ನೀವು ಇಷ್ಟಪಡುತ್ತೀರಿ ಎಂದು ಭಾವಿಸುತ್ತೇವೆ. ಈ ಉದ್ಯೋಗ ಮಾಹಿತಿ ನಿಮಗೆ ಇಷ್ಟವಾಗಿದ್ದರೆ ನಿಮ್ಮ ಸ್ನೇಹಿತರಿಗೆ ಶೇರ್ ಮಾಡಲು ಮರೆಯದಿರಿ.

Leave a Comment