KMF Recruitment 2022 – Apply Online for 487 Assistant Director, Junior Technician, Assistant Posts

KMF Recruitment 2022 : ಕರ್ನಾಟಕ ಸಹಕಾರ ಹಾಲು ಉತ್ಪಾದಕರ ಮಹಾಮಂಡಳ ನಿಯಮಿತ ಬೆಂಗಳೂರು ಇದರಲ್ಲಿ ಖಾಲಿ ಇರುವ ವಿವಿಧ ವೃಂದಗಳಲ್ಲಿನ ಹುದ್ದೆಗಳ ಭರ್ತಿಗೆ ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಹುದ್ದೆಗಳ ಭರ್ತಿಗೆ ಸಂಬಂಧಿಸಿದಂತೆ ವೇತನ, ಶೈಕ್ಷಣಿಕ ಅರ್ಹತೆ, ವಯೋಮಾನ, ಅರ್ಜಿ ಸಲ್ಲಿಕೆ ವಿಧಾನ ಹಾಗೂ ಇತರೆ ಮಾಹಿತಿಯನ್ನು ಈ ಕೆಳಗಡೆ ವಿವರವಾಗಿ ನೀಡಲಾಗಿದೆ ಪೂರ್ತಿ ಓದಿ.

KMF Recruitment 2022 : Details of Vacancies

ಹುದ್ದೆ :

ಹಿರಿಯ ಉಪ ನಿರ್ದೇಶಕ (ವಿತ್ತ)ಅಧೀಕ್ಷಕ (ಕೋ-ಆರ್ಡಿನೇಟರ್ ಪ್ರೊಟೆಕ್ಷನ್)
ಹಿರಿಯ ಉಪ ನಿರ್ದೇಶಕ (ಮಾರುಕಟ್ಟೆ)ಹಿರಿಯ ಕೆಮಿಸ್ಟ್ (ಕೆಮಿಸ್ಟ್ರಿ)
ಹಿರಿಯ ಉಪ ನಿರ್ದೇಶಕ (ಪಶು ಆಹಾರ)ಹಿರಿಯ ಕೆಮಿಸ್ಟ್ (ಮೈಕ್ರೋ ಬಯಾಲಜಿ)
ಉಪ ನಿರ್ದೇಶಕ (ವಿತ್ತ)ಅಧೀಕ್ಷಕ (ತರಬೇತಿ)
ಉಪ ನಿರ್ದೇಶಕ (ಪಶು ವೈದ್ಯಕೀಯ)ಲೆಕ್ಕ ಸಹಾಯಕ ದರ್ಜೆ-1
ವೈದ್ಯಾಧಿಕಾರಿಡೇರಿ ಮೇಲ್ವಿಚಾರಕ ದರ್ಜೆ-2
ಬಯೋ ಸೆಕ್ಯೂರಿಟಿ ಆಫೀಸರ್ಆಡಳಿತ ಸಹಾಯಕ ದರ್ಜೆ-2
ಉಪ ನಿರ್ದೇಶಕ (ಮಾರುಕಟ್ಟೆ) ಲೆಕ್ಕ ಸಹಾಯಕ ದರ್ಜೆ-2
ಉಪ ನಿರ್ದೇಶಕ (ಡಿ.ಟಿ) (ಡೇರಿ ಕೆಮಿಸ್ಟ್ರಿ)ಮಾರುಕಟ್ಟೆ ಸಹಾಯಕ ದರ್ಜೆ-2
ಉಪ ನಿರ್ದೇಶಕ (ಡಿ.ಟಿ) (ಡೇರಿ ಮೈಕ್ರೋಬಯಾಲಜಿ)ಲ್ಯಾಬ್ ಸಹಾಯಕ ದರ್ಜೆ-2 (ಕೆಮಿಸ್ಟ್ರಿ)
ಉಪ ನಿರ್ದೇಶಕ (ಡಿ.ಟಿ) (ಡೇರಿ ಟೆಕ್ನಾಲಜಿ)ಲ್ಯಾಬ್ ಸಹಾಯಕ ದರ್ಜೆ-2 (ಮೈಕ್ರೋಬಯಾಲಜಿ)
ಉಪ ನಿರ್ದೇಶಕ (ಉತ್ಪಾದನೆ) (ಪುಡ್ ಸೈನ್ಸ್ & ಟೆಕ್ನಾಲಜಿ)ಹಿರಿಯ ತಾಂತ್ರಿಕ
ಸಹಾಯಕ ನಿರ್ದೇಶಕ (ಡೇರಿ ಟೆಕ್ನಾಲಜಿ)ಶೀಘ್ರಲಿಪಿಗಾರ ದರ್ಜೆ-2
ಸಹಾಯಕ ನಿರ್ದೇಶಕ (ಪುಡ್ ಟೆಕ್ನಾಲಜಿ/ ಪುಡ್ ಸೈನ್ಸ್ & ಟೆಕ್ನಾಲಜಿ)ಕಿರಿಯ ಸಿಸ್ಟಂ ಆಪರೇಟರ್
ಸಹಾಯಕ ನಿರ್ದೇಶಕ (ಅಭಿಯಂತರ) (ಇಲೆಕ್ಟ್ರಾನಿಕ್ಸ್ ಮತ್ತು ಕಮ್ಯೂನಿಕೇಷನ್)ಹಿರಿಯ ಕೋ-ಆರ್ಡಿನೇಟರ್ (ಪ್ರೊಟೆಕ್ಷನ್)
ಸಹಾಯಕ ನಿರ್ದೇಶಕ (ಅಭಿಯಂತರ)(ಇಲೆಕ್ಟ್ರಿಕಲ್)ಸ್ಟಾಪ್ ನರ್ಸ್
ಸಹಾಯಕ ನಿರ್ದೇಶಕ (ಅಭಿಯಂತರ)(ಕೆಮಿಕಲ್)ಕಿರಿಯ ತಾಂತ್ರಿಕ (ಮೆಕಾಟ್ರಾನಿಕ್ಸ್)
ಸಹಾಯಕ ನಿರ್ದೇಶಕ (ಕೃಷಿ)ಕಿರಿಯ ತಾಂತ್ರಿಕ (ರಿಫ್ರಿಜರೇಷನ್ & ಏರ್ ಕಂಡೀಷನ್)
ವಿಜಿಲೆನ್ಸ್ ಆಫೀಸರ್ಕಿರಿಯ ತಾಂತ್ರಿಕ (ಫಿಟ್ಟರ್)
ಸುರಕ್ಷತಾ ಅಧಿಕಾರಿಕಿರಿಯ ತಾಂತ್ರಿಕ (ಟರ್ನರ್)
ಸಹಾಯಕ ನಿರ್ದೇಶಕ (ಆರ್ಕಿಟೆಕ್ಚರ್/ ಸ್ಟ್ರಕ್ಚರ್)ಕಿರಿಯ ತಾಂತ್ರಿಕ (ವೆಲ್ಡರ್)
ಸಹಾಯಕ ನಿರ್ದೇಶಕ (ತರಬೇತಿ) (ಡೇರಿ ತಾಂತ್ರಿಕ)ಕಿರಿಯ ತಾಂತ್ರಿಕ (ಇಲೆಕ್ಟ್ರಿಕಲ್)
ಸಹಾಯಕ ನಿರ್ದೇಶಕ (ತರಬೇತಿ) (ಅಭಿಯಂತರ)ಕಿರಿಯ ತಾಂತ್ರಿಕ (ಇಲೆಕ್ಟ್ರಿಕಲ್ & ಇಲೆಕ್ಟ್ರಾನಿಕ್ಸ್)
ಸಹಾಯಕ ನಿರ್ದೇಶಕ (ತರಬೇತಿ) (ಕೃಷಿ)ಕಿರಿಯ ತಾಂತ್ರಿಕ (ಇನ್ಸ್ಟ್ರುಮೆಂಟೇಷನ್)
ಸಹಾಯಕ ನಿರ್ದೇಶಕ (ತರಬೇತಿ) (ಎಂ.ಎಸ್.ಡಬ್ಲ್ಯು)ಕಿರಿಯ ತಾಂತ್ರಿಕ (ಇಲೆಕ್ಟ್ರಾನಿಕ್ಸ್ ಮತ್ತು ಕಮ್ಯೂನಿಕೇಷನ್)
ಸಹಾಯಕ ನಿರ್ದೇಶಕ (ತರಬೇತಿ) (ಸಹಕಾರ)ಕಿರಿಯ ತಾಂತ್ರಿಕ (ಮೆಕ್ಯಾನಿಸ್ಟ್)
ಕಾರ್ಮಿಕ ಕಲ್ಯಾಣ/ಕಾನೂನು ಅಧಿಕಾರಿಕಿರಿಯ ತಾಂತ್ರಿಕ (ಬಾಯ್ಲರ್)
ಅಧೀಕ್ಷಕ (ಖರೀದಿ/ಉಗ್ರಾಣ)ಕೋ-ಆರ್ಡಿನೇಟರ್ (ಪ್ರೊಟೆಕ್ಷನ್)
ಅಧೀಕ್ಷಕ (ಆಡಳಿತ)ಸಹಾಯಕ
ಅಧೀಕ್ಷಕ (ಮಾರುಕಟ್ಟೆ)

ಕರ್ತವ್ಯ ಸ್ಥಳ : ಹುದ್ದೆಗಳಿಗೆ ಆಯ್ಕೆಯಾಗುವ ಅರ್ಹ ಅಭ್ಯರ್ಥಿಗಳು ಕರ್ನಾಟಕದಲ್ಲಿ ಕೆಲಸ ನಿರ್ವಹಿಸಬೇಕು.

ಖಾಲಿಯಿರುವ ಹುದ್ದೆಗಳ ಸಂಖ್ಯೆ : ವಿವಿಧ ವೃಂದಗಳಲ್ಲಿನ ಒಟ್ಟು 487 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ.

ಶೈಕ್ಷಣಿಕ ಅರ್ಹತೆ : ಕರ್ನಾಟಕ ಸಹಕಾರ ಹಾಲು ಉತ್ಪಾದಕರ ಮಹಾಮಂಡಳ ನಿಯಮಿತ ಬೆಂಗಳೂರು ಇದರ ಅಧಿಸೂಚನೆ ಪ್ರಕಾರ ಅಭ್ಯರ್ಥಿಗಳು ಹುದ್ದೆಗಳಿಗೆ ಅನುಗುಣವಾಗಿ ಎಸ್.ಎಸ್.ಎಲ್.ಸಿ, ಐಟಿಐ, ಡಿಪ್ಲೊಮಾ, ಪದವಿ, ಸ್ನಾತಕೋತ್ತರ ಪದವಿ, ಆಯಾ ವಿಷಯಗಳಲ್ಲಿ ಬಿ.ಇ/ ಬಿ.ಟೆಕ್ ಶೈಕ್ಷಣಿಕ ಅರ್ಹತೆ ಹೊಂದಿರಬೇಕು.

ವೇತನ : ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ ರೂ. 17,000 ರಿಂದ ರೂ. 99,600ವರೆಗೂ ವೇತನ ನೀಡಲಾಗುತ್ತದೆ.

ವಯೋಮಾನ : ಅರ್ಜಿ ಸಲ್ಲಿಸಲು ನಿಗದಿಪಡಿಸಿದ ಕೊನೆಯ ದಿನಾಂಕಕ್ಕೆ ಅಭ್ಯರ್ಥಿಗಳಿಗೆ ಕನಿಷ್ಠ 18 ವರ್ಷ ವಯೋಮಾನ ಪೂರೈಸಿರಬೇಕು. ಹಾಗೂ
• ಎಸ್ಸಿ, ಎಸ್ಟಿ, ಪ್ರವರ್ಗ 1 ಅಭ್ಯರ್ಥಿಗಳಿಗೆ ಗರಿಷ್ಠ 40 ವರ್ಷ
• ಪ್ರವರ್ಗ 2ಎ, 2ಬಿ, 3ಎ, 3ಬಿ ಅಭ್ಯರ್ಥಿಗಳಿಗೆ ಗರಿಷ್ಠ 38 ವರ್ಷ
• ಸಾಮಾನ್ಯ ಅಭ್ಯರ್ಥಿಗಳಿಗೆ ಗರಿಷ್ಠ 35 ವರ್ಷ

ಉದ್ಯೋಗ ಮಾಹಿತಿ : ಕರ್ನಾಟಕ ಅರಣ್ಯ ಇಲಾಖೆಯಲ್ಲಿ ಖಾಲಿಯಿರುವ RFO ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ

ಆಯ್ಕೆ ವಿಧಾನ : (ಕನಿಷ್ಠ ಪದವಿ ವಿದ್ಯಾರ್ಹತೆ ಹೊಂದಿರಬೇಕಾದ ಹುದ್ದೆಗಳಿಗೆ ಮತ್ತು ಪದವಿಗಿಂತ ಕಡಿಮೆ ವಿದ್ಯಾರ್ಹತೆ ಹೊಂದಿರಬೇಕಾದ ಹುದ್ದೆಗಳಿಗೆ ಪ್ರತ್ಯೇಕವಾಗಿ ಲಿಖಿತ ಪರೀಕ್ಷೆಯನ್ನು ಒಟ್ಟು 200 ಅಂಕಗಳಿಗೆ ಏರ್ಪಡಿಸಲಾಗುವುದು) ಅಭ್ಯರ್ಥಿಗಳು ಲಿಖಿತ ಪರೀಕ್ಷೆಯಲ್ಲಿ ಗಳಿಸಿದ ಅಂಕಗಳ ಆಧಾರದ ಮೇಲೆ 1:5ರ ಅನುಪಾತದಲ್ಲಿ ಮೌಖಿಕ ಸಂದರ್ಶನಕ್ಕೆ ಕರೆಯಲಾಗುವುದು. ಮೌಖಿಕ ಸಂದರ್ಶನಕ್ಕೆ ಗರಿಷ್ಠ 15 ಅಂಕಗಳನ್ನು ನಿಗದಿಪಡಿಸಲಾಗಿದೆ.

ಕರ್ನಾಟಕ ಸಹಕಾರ ಹಾಲು ಉತ್ಪಾದಕರ ಮಹಾಮಂಡಳ ನಿಯಮಿತದಲ್ಲಿ ಖಾಲಿಯಿರುವ ಹುದ್ದೆಗೆ ಅರ್ಜಿ ಸಲ್ಲಿಕೆಯ ವಿಧಾನ :
• ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಯಸುವ ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು ಆನ್‌ಲೈನ್‌ ಮೂಲಕವೇ ಅರ್ಜಿಯನ್ನು ಸಲ್ಲಿಸಬೇಕು.
• ಅಭ್ಯರ್ಥಿಗಳು ಮಹಾಮಂಡಳದ ಅಧಿಕೃತ ವೆಬ್‌ಸೈಟ್ ವಿಳಾಸಕ್ಕೆ ಭೇಟಿ ನೀಡಿ, ಆನ್‌ಲೈನ್‌ ಅರ್ಜಿಯಲ್ಲಿ ಹುದ್ದೆಗೆ ಅಗತ್ಯವಿರುವ ಎಲ್ಲಾ ಮಾಹಿತಿಯನ್ನು ಭರ್ತಿ ಮಾಡಿ ( ಉದಾಹರಣೆಗೆ : ಅಭ್ಯರ್ಥಿಯ ಹೆಸರು, ವಿದ್ಯಾರ್ಹತೆ, ಇಮೇಲ್ ವಿಳಾಸ, ದೂರವಾಣಿ ಸಂಖ್ಯೆ ಇತ್ಯಾದಿ) ನಂತರ ನಿಗದಿತ ಅರ್ಜಿ ಶುಲ್ಕ ಪಾವತಿಸಿ ಅರ್ಜಿಯನ್ನು ಸಲ್ಲಿಸಬೇಕು.

ನಿಗದಿತ ಅರ್ಜಿ ಶುಲ್ಕದ ವಿವರ : ಎಸ್ಸಿ, ಎಸ್ಟಿ, ಪ್ರವರ್ಗ 1 ಹಾಗೂ ಅಂಗವಿಕಲ ಅಭ್ಯರ್ಥಿಗಳು ರೂ. 500 ಹಾಗೂ ಇತರೆ ಅಭ್ಯರ್ಥಿಗಳು ರೂ. 1000 ಶುಲ್ಕ ಪಾವತಿಸಬೇಕು

ಶುಲ್ಕ ಪಾವತಿಸುವ ವಿಧಾನ : ಅರ್ಜಿ ಶುಲ್ಕವನ್ನು ಆನ್‌ಲೈನ್‌ನಲ್ಲಿ ಡೆಬಿಟ್ ಕಾರ್ಡ್, ಕ್ರೆಡಿಟ್ ಕಾರ್ಡ್, ನೆಟ್ ಬ್ಯಾಂಕಿಂಗ್ ಮೂಲಕ ಶುಲ್ಕ ಪಾವತಿಸಬಹುದು.

ಅರ್ಜಿಯನ್ನು ಸಲ್ಲಿಸಲು ನಿಗದಿಪಡಿಸಿರುವ ದಿನಾಂಕದ ವಿವರ :
ಅರ್ಜಿ ಸಲ್ಲಿಕೆಗೆ ಪ್ರಾರಂಭದ ದಿನಾಂಕ : ಅಕ್ಟೋಬರ್ 20, 2022
ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ : ನವೆಂಬರ್ 19, 2022

KMF Recruitment 2022 : Important Links

Notification Click Here
Apply Online Click Here

ಕೊನೆಯ ಪದಗಳು : ನಾವು ನೀಡಿದ ಉದ್ಯೋಗ ಮಾಹಿತಿಯನ್ನು ನೀವು ಇಷ್ಟಪಡುತ್ತೀರಿ ಎಂದು ಭಾವಿಸುತ್ತೇವೆ. ಈ ಉದ್ಯೋಗ ಮಾಹಿತಿ ನಿಮಗೆ ಇಷ್ಟವಾಗಿದ್ದರೆ ನಿಮ್ಮ ಸ್ನೇಹಿತರಿಗೆ ಶೇರ್ ಮಾಡಲು ಮರೆಯದಿರಿ.

Leave a Comment