
KMF SHIMUL Recruitment 2026 : ಶಿವಮೊಗ್ಗ, ದಾವಣಗೆರೆ ಮತ್ತು ಚಿತ್ರದುರ್ಗ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ನಿಯಮಿತ, ಶಿವಮೊಗ್ಗ ಇದರಲ್ಲಿ ಖಾಲಿ ಇರುವ ವಿವಿಧ ವೃಂದಗಳಲ್ಲಿನ ಹುದ್ದೆಗಳ ಭರ್ತಿಗೆ ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಹುದ್ದೆಗಳ ಭರ್ತಿಗೆ ಸಂಬಂಧಿಸಿದಂತೆ ಕರ್ತವ್ಯ ಸ್ಥಳ, ಶೈಕ್ಷಣಿಕ ಅರ್ಹತೆ, ವಯೋಮಾನ, ಅರ್ಜಿ ಸಲ್ಲಿಕೆ ವಿಧಾನ ಹಾಗೂ ಇತರೆ ಮಾಹಿತಿಯನ್ನು ಈ ಕೆಳಗಡೆ ವಿವರವಾಗಿ ನೀಡಲಾಗಿದೆ ಪೂರ್ತಿ ಓದಿ. ಅರ್ಜಿ ಸಲ್ಲಿಸಲು ದಿನಾಂಕ 14/06/2026 ರಿಂದ 14/07/2026 ರವರೆಗೆ ಮತ್ತೊಮ್ಮೆ ಕಾಲಾವಕಾಶ.
KMF SHIMUL Recruitment 2026 : Details of Vacancies
ಹುದ್ದೆ :
ಸಹಾಯಕ ವ್ಯವಸ್ಥಾಪಕರು (ಎಹೆಚ್/ಎಐ), ಸಹಾಯಕ ವ್ಯವಸ್ಥಾಪಕರು (ಆಡಳಿತ), ಸಹಾಯಕ ವ್ಯವಸ್ಥಾಪಕರು (ಎಫ್ ಅಂಡ್ ಎಫ್), ಎಂಐಎಸ್/ ಸಿಸ್ಟಂ ಆಫೀಸರ್, ಮಾರುಕಟ್ಟೆ ಅಧಿಕಾರಿ, ತಾಂತ್ರಿಕ ಅಧಿಕಾರಿ (ಅಭಿಯಂತರ) – ಮೆಕಾನಿಕಲ್, ತಾಂತ್ರಿಕ ಅಧಿಕಾರಿ (ಅಭಿಯಂತರ) – ಎಲೆಕ್ಟ್ರಿಕಲ್ & ಎಲೆಕ್ಟ್ರಾನಿಕ್ಸ್, ತಾಂತ್ರಿಕ ಅಧಿಕಾರಿ (ಗುಣನಿಯಂತ್ರಣ) – ಕೆಮಿಸ್ಟ್ರಿ, ತಾಂತ್ರಿಕ ಅಧಿಕಾರಿ (ಗುಣನಿಯಂತ್ರಣ) – ಮೈಕ್ರೊಬಯಾಲಜಿ, ತಾಂತ್ರಿಕ ಅಧಿಕಾರಿ (ಡಿಟಿ), ಕೆಮಿಸ್ಟ್ ದರ್ಜೆ-1 (ಕೆಮಿಸ್ಟ್ರಿ), ಕೆಮಿಸ್ಟ್ ದರ್ಜೆ-1 (ಮೈಕ್ರೊಬಯಾಲಜಿ), ವಿಸ್ತರಣಾಧಿಕಾರಿ ದರ್ಜೆ-3, ಆಡಳಿತ ಸಹಾಯಕ ದರ್ಜೆ-2, ಲೆಕ್ಕ ಸಹಾಯಕ ದರ್ಜೆ-2, ಮಾರುಕಟ್ಟೆ ಸಹಾಯಕ ದರ್ಜೆ-2, ಕೆಮಿಸ್ಟ್ ದರ್ಜೆ-2 (ಕೆಮಿಸ್ಟ್ರಿ), ಕೆಮಿಸ್ಟ್ ದರ್ಜೆ-2 (ಮೈಕ್ರೊಬಯಾಲಜಿ), ಕಿರಿಯ ಸಿಸ್ಟಂ ಆಪರೇಟರ್, ಶೀಘ್ರಲಿಪಿಗಾರರು ದರ್ಜೆ-2, ಕಿರಿಯ ತಾಂತ್ರಿಕರು–ಎಲೆಕ್ಟ್ರಿಕಲ್, ಕಿರಿಯ ತಾಂತ್ರಿಕರು–ರೆಫ್ರಿಜರೇಷನ್, ಕಿರಿಯ ತಾಂತ್ರಿಕರು–ಬಾಯ್ಲರ್ ಅಟೆಂಡೆಂಟ್, ಕಿರಿಯ ತಾಂತ್ರಿಕರು–ಫಿಟ್ಟರ್, ಕಿರಿಯ ತಾಂತ್ರಿಕರು–ವೆಲ್ಡರ್.
ಕರ್ತವ್ಯ ಸ್ಥಳ :
ಹುದ್ದೆಗಳಿಗೆ ಆಯ್ಕೆಯಾಗುವ ಅರ್ಹ ಅಭ್ಯರ್ಥಿಗಳು ಶಿವಮೊಗ್ಗ, ದಾವಣಗೆರೆ ಮತ್ತು ಚಿತ್ರದುರ್ಗ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟದಲ್ಲಿ ಕೆಲಸ ನಿರ್ವಹಿಸಬೇಕು.
ಖಾಲಿಯಿರುವ ಹುದ್ದೆಗಳ ಸಂಖ್ಯೆ :
ಒಟ್ಟು 194 ಹುದ್ದೆಗಳ ಭರ್ತಿಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ.
| ಹುದ್ದೆ | ಹುದ್ದೆಗಳ ಸಂಖ್ಯೆ |
| ಸಹಾಯಕ ವ್ಯವಸ್ಥಾಪಕರು (ಎಹೆಚ್/ಎಐ) | 17 |
| ಸಹಾಯಕ ವ್ಯವಸ್ಥಾಪಕರು (ಆಡಳಿತ) | 1 |
| ಸಹಾಯಕ ವ್ಯವಸ್ಥಾಪಕರು (ಎಫ್ ಅಂಡ್ ಎಫ್) | 3 |
| ಎಂಐಎಸ್/ ಸಿಸ್ಟಂ ಆಫೀಸರ್ | 1 |
| ಮಾರುಕಟ್ಟೆ ಅಧಿಕಾರಿ | 2 |
| ತಾಂತ್ರಿಕ ಅಧಿಕಾರಿ (ಅಭಿಯಂತರ) | 2 |
| ತಾಂತ್ರಿಕ ಅಧಿಕಾರಿ (ಗುಣನಿಯಂತ್ರಣ) | 2 |
| ತಾಂತ್ರಿಕ ಅಧಿಕಾರಿ (ಡಿಟಿ) | 14 |
| ಕೆಮಿಸ್ಟ್ ದರ್ಜೆ-1 | 4 |
| ವಿಸ್ತರಣಾಧಿಕಾರಿ ದರ್ಜೆ-3 | 17 |
| ಆಡಳಿತ ಸಹಾಯಕ ದರ್ಜೆ-2 | 17 |
| ಲೆಕ್ಕ ಸಹಾಯಕ ದರ್ಜೆ-2 | 12 |
| ಮಾರುಕಟ್ಟೆ ಸಹಾಯಕ ದರ್ಜೆ-2 | 10 |
| ಕೆಮಿಸ್ಟ್ ದರ್ಜೆ-2 | 28 |
| ಕಿರಿಯ ಸಿಸ್ಟಂ ಆಪರೇಟರ್ | 13 |
| ಶೀಘ್ರಲಿಪಿಗಾರರು ದರ್ಜೆ-2 | 1 |
| ಕಿರಿಯ ತಾಂತ್ರಿಕರು | 50 |
ನಿಗದಿಪಡಿಸಿರುವ ಶೈಕ್ಷಣಿಕ ಅರ್ಹತೆ :
ಸಹಾಯಕ ವ್ಯವಸ್ಥಾಪಕರು (ಎಹೆಚ್/ಎಐ) –
ಪಶುವೈದ್ಯಕೀಯ ವಿಜ್ಞಾನ ಮತ್ತು ಪಶುಸಂಗೋಪನೆ ವಿಷಯದಲ್ಲಿ (ಬಿ.ವಿ.ಎಸ್ಸಿ ಅಂಡ್ ಎಹೆಚ್) ಪದವಿಯನ್ನು ಹೊಂದಿರಬೇಕು.
ಸಹಾಯಕ ವ್ಯವಸ್ಥಾಪಕರು (ಆಡಳಿತ) –
ಮಾನವ ಸಂಪನ್ಮೂಲ ವಿಷಯದಲ್ಲಿ 02 ವರ್ಷಗಳ ಪೂರ್ಣಾವಧಿ ಎಂಬಿಎ ಜೊತೆಗೆ ಪ್ರತಿಷ್ಟಿತ ಸಂಸ್ಥೆಗಳಲ್ಲಿ ಆಡಳಿತ ನಿರ್ವಹಣೆಯಲ್ಲಿ 03 ವರ್ಷಗಳ ಸೇವಾನುಭವ ಹಾಗೂ ಕಂಪ್ಯೂಟರ್ ನಿರ್ವಹಣೆ ಜ್ಞಾನ ಹೊಂದಿರಬೇಕು.
ಸಹಾಯಕ ವ್ಯವಸ್ಥಾಪಕರು (ಎಫ್ ಅಂಡ್ ಎಫ್) –
ಕೃಷಿ ವಿಜ್ಞಾನ ವಿಷಯದಲ್ಲಿ ಬಿ.ಎಸ್ಸಿ (ಕೃಷಿ) ಪದವಿ ಹೊಂದಿರಬೇಕು.
ಎಂಐಎಸ್/ ಸಿಸ್ಟಂ ಆಫೀಸರ್ –
ಬಿಇ ಕಂಪ್ಯೂಟರ್ ಸೈನ್ಸ್/ ಇನ್ ಫಾರ್ಮೇಷನ್ ಇಂಜಿನಿಯರಿಂಗ್ ಪದವಿಯನ್ನು ಹೊಂದಿರಬೇಕು.
ಮಾರುಕಟ್ಟೆ ಅಧಿಕಾರಿ –
ಬಿ.ಕಾಂ/ ಬಿ.ಎಸ್ಸಿ/ ಬಿ.ಬಿ.ಎಂ ಪದವಿ ಜೊತೆಗೆ ಮಾರುಕಟ್ಟೆಯಲ್ಲಿ 3 ವರ್ಷಗಳ ಅನುಭವ ಹೊಂದಿರಬೇಕು.
ತಾಂತ್ರಿಕ ಅಧಿಕಾರಿ (ಅಭಿಯಂತರ) ಮೆಕಾನಿಕಲ್ –
ಬಿಇ (ಮೆಕಾನಿಕಲ್) ಪದವಿ ಹೊಂದಿರಬೇಕು.
ತಾಂತ್ರಿಕ ಅಧಿಕಾರಿ (ಅಭಿಯಂತರ) ಎಲೆಕ್ಟ್ರಿಕಲ್ & ಇಲೆಕ್ಟ್ರಾನಿಕ್ಸ್ –
ಬಿಇ (ಎಲೆಕ್ಟ್ರಿಕಲ್ & ಇಲೆಕ್ಟ್ರಾನಿಕ್ಸ್) ಪದವಿ ಹೊಂದಿರಬೇಕು.
ತಾಂತ್ರಿಕ ಅಧಿಕಾರಿ (ಗುಣನಿಯಂತ್ರಣ) ಕೆಮಿಸ್ಟ್ರಿ –
ಎಂ.ಎಸ್ಸಿ (ಕೆಮಿಸ್ಟ್ರಿ) ಸ್ನಾತಕೋತ್ತರ ಪದವಿ ಜೊತೆಗೆ ಕಂಪ್ಯೂಟರ್ ನಿರ್ವಹಣೆ ಜ್ಞಾನ ಹೊಂದಿರಬೇಕು.
ತಾಂತ್ರಿಕ ಅಧಿಕಾರಿ (ಗುಣನಿಯಂತ್ರಣ) ಮೈಕ್ರೊಬಯಾಲಜಿ –
ಎಂ.ಎಸ್ಸಿ (ಮೈಕ್ರೊಬಯಾಲಜಿ) ಸ್ನಾತಕೋತ್ತರ ಪದವಿ ಜೊತೆಗೆ ಕಂಪ್ಯೂಟರ್ ನಿರ್ವಹಣೆ ಜ್ಞಾನ ಹೊಂದಿರಬೇಕು.
ತಾಂತ್ರಿಕ ಅಧಿಕಾರಿ (ಡಿಟಿ) –
ಬಿ.ಟೆಕ್ (ಡೈರಿ ಟೆಕ್ನಾಲಜಿ) ಪದವಿಯೊಂದಿಗೆ ಕಂಪ್ಯೂಟರ್ ಜ್ಞಾನ ಹೊಂದಿರಬೇಕು.
ಕೆಮಿಸ್ಟ್ ದರ್ಜೆ 1, 2 (ಕೆಮಿಸ್ಟ್ರಿ) –
ಬಿ.ಎಸ್ಸಿ ಪದವಿಯಲ್ಲಿ ಕೆಮಿಸ್ಟ್ರಿ ವಿಷಯವನ್ನು ವ್ಯಾಸಂಗ ಮಾಡಿರಬೇಕು.
ಕೆಮಿಸ್ಟ್ ದರ್ಜೆ 1, 2 (ಮೈಕ್ರೊಬಯಾಲಜಿ) –
ಬಿ.ಎಸ್ಸಿ ಪದವಿಯಲ್ಲಿ ಮೈಕ್ರೊಬಯಾಲಜಿ ವಿಷಯವನ್ನು ವ್ಯಾಸಂಗ ಮಾಡಿರಬೇಕು.
ವಿಸ್ತರಣಾಧಿಕಾರಿ ದರ್ಜೆ 3 –
ಯಾವುದೇ ಪದವಿಯೊಂದಿಗೆ ಕಂಪ್ಯೂಟರ್ ನಿರ್ವಹಣೆ ಜ್ಞಾನ ಹೊಂದಿರಬೇಕು.
ಆಡಳಿತ ಸಹಾಯಕ ದರ್ಜೆ 2 –
ಯಾವುದೇ ಪದವಿಯೊಂದಿಗೆ ಕಂಪ್ಯೂಟರ್ ನಿರ್ವಹಣೆ ಜ್ಞಾನ ಹೊಂದಿರಬೇಕು.
ಲೆಕ್ಕ ಸಹಾಯಕ ದರ್ಜೆ 2 –
ಬಿ.ಕಾಂ. ಪದವಿಯೊಂದಿಗೆ ಟ್ಯಾಲಿ ಸರ್ಟಿಫಿಕೇಟ್ ಅಥವಾ ಕಂಪ್ಯೂಟರ್ ನಿರ್ವಹಣೆ ಜ್ಞಾನ ಹೊಂದಿರಬೇಕು.
ಮಾರುಕಟ್ಟೆ ಸಹಾಯಕ ದರ್ಜೆ 2 –
ಬಿಬಿಎಂ / ಬಿ.ಎಸ್ಸಿ/ ಬಿ.ಕಾಂ ಪದವಿಯೊಂದಿಗೆ ಕಂಪ್ಯೂಟರ್ ನಿರ್ವಹಣೆ ಜ್ಞಾನ ಹೊಂದಿರಬೇಕು.
ಕಿರಿಯ ಸಿಸ್ಟಂ ಆಪರೇಟರ್ –
ಯಾವುದೇ ಪದವಿಯೊಂದಿಗೆ ಕನಿಷ್ಠ 1 ವರ್ಷದ ಡಿಪ್ಲೋಮಾ ಇನ್ ಕಂಪ್ಯೂಟರ್ ಅಪ್ಲಿಕೇಷನ್ ಕೋರ್ಸ್ ಹಾಗೂ 3 ವರ್ಷಗಳ ಅನುಭವ ಹೊಂದಿರಬೇಕು.
ಶೀಘ್ರಲಿಪಿಗಾರರು ದರ್ಜೆ 2 –
ಯಾವುದೇ ಪದವಿಯೊಂದಿಗೆ ಸೀನಿಯರ್ ಇಂಗ್ಲೀಷ್ ಮತ್ತು ಕನ್ನಡ ಶಾರ್ಟ್ ಹ್ಯಾಂಡ್ ನೊಂದಿಗೆ ಕಂಪ್ಯೂಟರ್ ಆಫೀಸ್ ಪ್ಯಾಕೇಜ್ ನಿರ್ವಹಣೆ ಜ್ಞಾನ ಹೊಂದಿರಬೇಕು.
ಕಿರಿಯ ತಾಂತ್ರಿಕರು (ಎಲೆಕ್ಟ್ರಿಕಲ್, ರೆಫ್ರಿಜರೇಷನ್, ಫಿಟ್ಟರ್, ವೆಲ್ಡರ್) –
ಎಸ್.ಎಸ್.ಎಲ್.ಸಿ ಯೊಂದಿಗೆ ಡೈರೆಕ್ಟೋರೇಟ್ ಜನರಲ್ ಆಫ್ ಎಂಪ್ಲಾಯ್ಮೆಂಟ್ ಅಂಡ್ ಟ್ರೈನಿಂಗ್ ಇವರಿಂದ ಆಯಾ ಟ್ರೇಡ್ ನಲ್ಲಿ ತೇರ್ಗಡೆ ಹೊಂದಿ ಕಡ್ಡಾಯವಾಗಿ ನ್ಯಾಷನಲ್ ಟ್ರೇಡ್ ಸರ್ಟಿಫಿಕೇಟ್ ಅಥವಾ ಎನ್.ಸಿ.ವಿ.ಟಿ ಸರ್ಟಿಫಿಕೇಟ್ ಹೊಂದಿರತಕ್ಕದ್ದು.
ಕಿರಿಯ ತಾಂತ್ರಿಕರು (ಬಾಯ್ಲರ್ ಅಟೆಂಡೆಂಟ್) –
ಎಸ್.ಎಸ್.ಎಲ್.ಸಿ ಯೊಂದಿಗೆ ಬಾಯ್ಲರ್ ಅಟೆಂಡೆಂಟ್ ದರ್ಜೆ 2 ರ ಪ್ರಮಾಣ ಪತ್ರ ಪಡೆದಿರಬೇಕು.
ಉದ್ಯೋಗ ಮಾಹಿತಿ : ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯಲ್ಲಿ ಸಿವಿಲ್ ಪೊಲೀಸ್ ಕಾನ್ಸ್‌ಟೇಬಲ್ ಹುದ್ದೆಗಳ ನೇಮಕಾತಿ 2026
ವಯೋಮಾನ :
- ಅರ್ಜಿ ಸಲ್ಲಿಸಲು ನಿಗದಿಪಡಿಸಿರುವ ಕೊನೆಯ ದಿನಾಂಕಕ್ಕೆ ಕನಿಷ್ಠ 18 ವರ್ಷ ಪೂರೈಸಿರಬೇಕು.
- ಎಸ್ಸಿ, ಎಸ್ಟಿ, ಪ್ರವರ್ಗ 1 ಅಭ್ಯರ್ಥಿಗಳಿಗೆ – ಗರಿಷ್ಠ 45 ವರ್ಷ
- ಪ್ರವರ್ಗ 2ಎ, 2ಬಿ, 3ಎ, 3ಬಿ ಅಭ್ಯರ್ಥಿಗಳಿಗೆ – ಗರಿಷ್ಠ 43 ವರ್ಷ
- ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ – ಗರಿಷ್ಠ 40 ವರ್ಷ
ಆಯ್ಕೆ ವಿಧಾನ :
ಅಭ್ಯರ್ಥಿಗಳು ಲಿಖಿತ ಪರೀಕ್ಷೆಯಲ್ಲಿ ಗಳಿಸಿದ ಅಂಕಗಳ ಮೆರಿಟ್ ಆಧಾರದ ಮೇಲೆ ಅಭ್ಯರ್ಥಿಗಳನ್ನು 1:5ರ ಅನುಪಾತದಲ್ಲಿ ಮೌಖಿಕ ಸಂದರ್ಶನಕ್ಕೆ ಕರೆಯಲಾಗುವುದು. ಮೌಖಿಕ ಸಂದರ್ಶನಕ್ಕೆ ಗರಿಷ್ಠ 15 ಅಂಕಗಳನ್ನು ನಿಗದಿಪಡಿಸಲಾಗಿದೆ. ಅಭ್ಯರ್ಥಿಯು ಲಿಖಿತ ಪರೀಕ್ಷೆಯಲ್ಲಿ ಗಳಿಸಿದ ಅಂಕಗಳನ್ನು ಶೇ. 85ಕ್ಕೆ ಇಳಿಸಿ ಹಾಗೆ ಪ್ರಾಪ್ತವಾಗುವ ಅಂಕಗಳಿಗೆ ಮೌಖಿಕ ಸಂದರ್ಶನದಲ್ಲಿ ಗಳಿಸುವ ಅಂಕಗಳನ್ನು ಒಟ್ಟುಗೂಡಿಸಿ ಅಂತಿಮ ಮೆರಿಟ್ ಪಟ್ಟಿಯನ್ನು ತಯಾರಿಸಿ ಮೆರಿಟ್ ಹಾಗೂ ಮೀಸಲಾತಿ ಆಧಾರದಲ್ಲಿ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುವುದು.
ವೇತನ :
| ಹುದ್ದೆ | ವೇತನ |
| ಸಹಾಯಕ ವ್ಯವಸ್ಥಾಪಕರು (ಎಹೆಚ್/ಎಐ) | ರೂ. 83,700 – ರೂ. 1,55,200 |
| ಸಹಾಯಕ ವ್ಯವಸ್ಥಾಪಕರು (ಆಡಳಿತ) | ರೂ. 83,700 – ರೂ. 1,55,200 |
| ಸಹಾಯಕ ವ್ಯವಸ್ಥಾಪಕರು (ಎಫ್ ಅಂಡ್ ಎಫ್) | ರೂ. 83,700 – ರೂ. 1,55,200 |
| ಎಂಐಎಸ್/ ಸಿಸ್ಟಂ ಆಫೀಸರ್ | ರೂ. 69,250 – ರೂ. 1,34,200 |
| ಮಾರುಕಟ್ಟೆ ಅಧಿಕಾರಿ | ರೂ. 69,250 – ರೂ. 1,34,200 |
| ತಾಂತ್ರಿಕ ಅಧಿಕಾರಿ (ಅಭಿಯಂತರ) | ರೂ. 69,250 – ರೂ. 1,34,200 |
| ತಾಂತ್ರಿಕ ಅಧಿಕಾರಿ (ಗುಣನಿಯಂತ್ರಣ) | ರೂ. 69,250 – ರೂ. 1,34,200 |
| ತಾಂತ್ರಿಕ ಅಧಿಕಾರಿ (ಡಿಟಿ) | ರೂ. 69,250 – ರೂ. 1,34,200 |
| ಕೆಮಿಸ್ಟ್ ದರ್ಜೆ-1 | ರೂ. 54,175 – ರೂ. 99,400 |
| ವಿಸ್ತರಣಾಧಿಕಾರಿ ದರ್ಜೆ-3 | ರೂ. 54,175 – ರೂ. 99,400 |
| ಆಡಳಿತ ಸಹಾಯಕ ದರ್ಜೆ-2 | ರೂ. 44,425 – ರೂ. 83,700 |
| ಲೆಕ್ಕ ಸಹಾಯಕ ದರ್ಜೆ-2 | ರೂ. 44,425 – ರೂ. 83,700 |
| ಮಾರುಕಟ್ಟೆ ಸಹಾಯಕ ದರ್ಜೆ-2 | ರೂ. 44,425 – ರೂ. 83,700 |
| ಕೆಮಿಸ್ಟ್ ದರ್ಜೆ-2 | ರೂ. 44,425 – ರೂ. 83,700 |
| ಕಿರಿಯ ಸಿಸ್ಟಂ ಆಪರೇಟರ್ | ರೂ. 44,425 – ರೂ. 83,700 |
| ಶೀಘ್ರಲಿಪಿಗಾರರು ದರ್ಜೆ-2 | ರೂ. 44,425 – ರೂ. 83,700 |
| ಕಿರಿಯ ತಾಂತ್ರಿಕರು | ರೂ. 34,100 – ರೂ. 67,600 |
ಅರ್ಜಿ ಸಲ್ಲಿಕೆಯ ವಿಧಾನ :
ಅಭ್ಯರ್ಥಿಯು ಈ ಹುದ್ದೆಗೆ ಆನ್‌ಲೈನ್ ಮೂಲಕ ಅರ್ಜಿಗಳನ್ನು ಸಲ್ಲಿಸಬೇಕು.
ಹಂತ 1 : ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸುವ ಮೊದಲು ಇಲಾಖೆ ಹೊರಡಿಸಿರುವ ಅಧಿಸೂಚನೆಯನ್ನು ಗಮನವಿಟ್ಟು ಓದಿ ಅರ್ಜಿ ಸಲ್ಲಿಸಲು ಅಗತ್ಯವಿರುವ ದಾಖಲೆಗಳನ್ನು ಸಿದ್ಧಪಡಿಸಿಕೊಂಡು ನಂತರ ಅರ್ಜಿಯನ್ನು ಸಲ್ಲಿಸಬೇಕು.
ಹಂತ 2 : ಇಲಾಖೆಯ ವೆಬ್‌ಸೈಟ್ ಗೆ ಭೇಟಿ ನೀಡಿ ಅಥವಾ ಈ ಕೆಳಗಡೆ ನೀಡಲಾದ ಅಪ್ಲೈ ಆನ್‌ಲೈನ್ ಲಿಂಕ್ ಮೇಲೆ ಕ್ಲಿಕ್ ಮಾಡಿ ಅಪ್ಲಿಕೇಷನ್ ತೆರೆದುಕೊಳ್ಳಿ.
ಹಂತ 3 : ಅಪ್ಲಿಕೇಷನ್ ನಲ್ಲಿ ತಿಳಿಸಿರುವಂತಹ ಎಲ್ಲಾ ಮಾಹಿತಿಯನ್ನು (ಉದಾಹರಣೆಗೆ ಅಭ್ಯರ್ಥಿಯ ಹೆಸರು, ವಿಳಾಸ, ವಿದ್ಯಾರ್ಹತೆ, ಮೊಬೈಲ್ ಸಂಖ್ಯೆ ಇತ್ಯಾದಿ) ಭರ್ತಿ ಮಾಡಿ, ಮುಂದಿನ ಹಂತಕ್ಕೆ ತೆರಳುವ ಮುನ್ನ ಪುನಃ ಒಮ್ಮೆ ಪರಿಶೀಲಿಸಿ.
ಹಂತ 4 : ಅಪ್ಲಿಕೇಷನ್ ನಲ್ಲಿ ಯಾವುದೇ ಪ್ರಮಾಣ ಪತ್ರ/ ದಾಖಲೆಗಳನ್ನು ಅಪ್ಲೋಡ್ ಮಾಡಲು ಸೂಚಿಸಿದ್ದರೆ, ಅವುಗಳನ್ನು ಸ್ಕ್ಯಾನ್ ಮಾಡಿ ಅಪ್ಲೋಡ್ ಮಾಡಿ (ಅಗತ್ಯವಿದ್ದರೆ ಮಾತ್ರ).
ಹಂತ 5 : ಕೊನೆಯದಾಗಿ, ಅಭ್ಯರ್ಥಿಗೆ ಅರ್ಜಿ ಶುಲ್ಕ ಪಾವತಿಸಲು ಸೂಚಿಸಿದ್ದರೆ, ಶುಲ್ಕ ಪಾವತಿಸಿ ಅರ್ಜಿ ಸಲ್ಲಿಕೆ ಪೂರ್ಣಗೊಳಿಸಿ.
ನಿಗದಿತ ಅರ್ಜಿ ಶುಲ್ಕದ ವಿವರ :
• ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಪ್ರವರ್ಗ-1 ಹಾಗೂ ಅಂಗವಿಕಲ ಅಭ್ಯರ್ಥಿಗಳು – ರೂ. 500
• ಇತರೆ ವರ್ಗದ ಅಭ್ಯರ್ಥಿಗಳು – ರೂ. 1000
ಶುಲ್ಕ ಪಾವತಿಸುವ ವಿಧಾನ :
ಅಭ್ಯರ್ಥಿಗಳು ಅರ್ಜಿ ಶುಲ್ಕವನ್ನು ಡೆಬಿಟ್ ಕಾರ್ಡ್/ ಕ್ರೆಡಿಟ್ ಕಾರ್ಡ್/ ಆನ್‌ಲೈನ್ ಮೂಲಕ ನಿಗದಿತ ಶುಲ್ಕ ಹಾಗೂ ಅನ್ವಯಿಸುವ ಬ್ಯಾಂಕ್ ಶುಲ್ಕ ಪಾವತಿಸಬೇಕು.
ಅರ್ಜಿಯನ್ನು ಸಲ್ಲಿಸಲು ನಿಗದಿಪಡಿಸಿರುವ ದಿನಾಂಕದ ವಿವರ :
• ಅರ್ಜಿ ಸಲ್ಲಿಕೆಗೆ ಪ್ರಾರಂಭದ ದಿನಾಂಕ : ನವೆಂಬರ್ 14, 2025 ಫೆಬ್ರುವರಿ 06, 2026 ಜೂನ್ 14, 2026
• ಅರ್ಜಿ ಸಲ್ಲಿಸಲು ಹಾಗೂ ಶುಲ್ಕ ಪಾವತಿಸಲು ಕೊನೆಯ ದಿನಾಂಕ : ಡಿಸೆಂಬರ್ 14, 2025 ಫೆಬ್ರುವರಿ 21, 2026 ಜುಲೈ 14, 2026
KMF Shivamogga Recruitment 2026 : Important Links
| REVISED NOTIFICATION | CLICK HERE |
| APPLY ONLINE | CLICK HERE |
| Telegram Join Link | Click Here |
| WhatsApp Group Link | Click Here |
ಇತರೆ ಮಾಹಿತಿ : ಈಗಾಗಲೇ ದಿನಾಂಕ : 14/11/2025 ಮತ್ತು 05/02/2026ರ ಪ್ರಕಟಣೆಗಳಡಿಯಲ್ಲಿ ಪಾವತಿಸಿರುವ ಎಲ್ಲಾ ಅಭ್ಯರ್ಥಿಗಳ ಅರ್ಜಿ ಶುಲ್ಕವನ್ನು (ಬ್ಯಾಂಕ್ ಶುಲ್ಕ ಹೊರತುಪಡಿಸಿ) ಪಾವತಿಸಲು ಬಳಸಿದ ಬ್ಯಾಂಕ್ ಖಾತೆಗಳಿಗೆ ಹಿಂದಿರುಗಿಸಲಾಗುವುದು ಎಂದು ಪರಿಷ್ಕೃತ ನೇಮಕಾತಿ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಕೊನೆಯ ಪದಗಳು : ನಾವು ನೀಡಿದ ಉದ್ಯೋಗ ಮಾಹಿತಿಯನ್ನು ನೀವು ಇಷ್ಟಪಡುತ್ತೀರಿ ಎಂದು ಭಾವಿಸುತ್ತೇವೆ. ಈ ಉದ್ಯೋಗ ಮಾಹಿತಿ ನಿಮಗೆ ಇಷ್ಟವಾಗಿದ್ದರೆ ನಿಮ್ಮ ಸ್ನೇಹಿತರಿಗೆ ಶೇರ್ ಮಾಡಲು ಮರೆಯದಿರಿ.