KPSC Group-B Recruitment 2022 – Apply Online for 72 Sericulture Extension Officer Posts

KPSC Group-B Recruitment 2022 : ಕರ್ನಾಟಕ ಲೋಕಸೇವಾ ಆಯೋಗದಿಂದ ರೇಷ್ಮೆ ಇಲಾಖೆಯಲ್ಲಿನ ರೇಷ್ಮೆ ವಿಸ್ತರಣಾಧಿಕಾರಿ ಹುದ್ದೆಗಳ ಭರ್ತಿಗೆ ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಹುದ್ದೆಗಳ ಭರ್ತಿಗೆ ಸಂಬಂಧಿಸಿದಂತೆ ಹುದ್ದೆಗಳ ಸಂಖ್ಯೆ, ಕರ್ತವ್ಯ ಸ್ಥಳ, ಶೈಕ್ಷಣಿಕ ಅರ್ಹತೆ, ವೇತನ, ಅರ್ಜಿ ಶುಲ್ಕ ಹಾಗೂ ಇತರೆ ಮಾಹಿತಿಯನ್ನು ಈ ಕೆಳಗಡೆ ವಿವರವಾಗಿ ನೀಡಲಾಗಿದೆ ಪೂರ್ತಿ ಓದಿ.

KPSC Group-B Recruitment 2022 : Details of Vacancies

ಹುದ್ದೆ : ರೇಷ್ಮೆ ವಿಸ್ತರಣಾಧಿಕಾರಿ (ಗ್ರೂಪ್-ಬಿ)

ಕರ್ತವ್ಯ ಸ್ಥಳ : ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳು ಕರ್ನಾಟಕದಲ್ಲಿ ಕೆಲಸ ನಿರ್ವಹಿಸಬೇಕು.

ಖಾಲಿಯಿರುವ ಹುದ್ದೆಗಳ ಸಂಖ್ಯೆ : ಒಟ್ಟು 72 ಹುದ್ದೆಗಳ ಭರ್ತಿಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ.

ಶೈಕ್ಷಣಿಕ ಅರ್ಹತೆ : ಅಭ್ಯರ್ಥಿಗಳು ಕೃಷಿ ಅಥವಾ ತೋಟಗಾರಿಕೆ ಅಥವಾ ರೇಷ್ಮೆ ಕೃಷಿಯಲ್ಲಿ ಪದವಿ ಅಥವಾ ರೇಷ್ಮೆ ಕೃಷಿಯಲ್ಲಿ ಸ್ನಾತಕೋತ್ತರ ಪದವಿ ವಿದ್ಯಾರ್ಹತೆ ಹೊಂದಿರಬೇಕು. (Must be holder of 1) A Master’s Degree in Sericulture. OR 2) A degree in Sericulture. OR 3) A degree of Science with Post-graduate Diploma in Sericulture. OR 4) A degree in science with Botany or Zoology or sericulture as one of the major subject. OR 5) A degree in Agriculture or Horticulture)

ವೇತನ : ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ ರೂ. 40,900 ರಿಂದ ರೂ. 78,200 ಶ್ರೇಣಿಯಲ್ಲಿ ವೇತನ ನೀಡಲಾಗುತ್ತದೆ.

ವಯೋಮಾನ : ಅರ್ಜಿ ಸಲ್ಲಿಸಲು ನಿಗದಿಪಡಿಸಿದ ಕೊನೆಯ ದಿನಾಂಕಕ್ಕೆ ಅಭ್ಯರ್ಥಿಗಳು ಕನಿಷ್ಠ 18 ವರ್ಷ ಪೂರೈಸಿರಬೇಕು ಹಾಗೂ ಗರಿಷ್ಠ 35 ವರ್ಷ ಮೀರಿರಬಾರದು.
ಎಸ್ಸಿ, ಎಸ್ಟಿ, ಪ್ರವರ್ಗ 1 ಅಭ್ಯರ್ಥಿಗಳಿಗೆ ಗರಿಷ್ಠ 40 ವರ್ಷ
ಪ್ರವರ್ಗ 2ಎ, 2ಬಿ, 3ಎ, 3ಬಿ ಅಭ್ಯರ್ಥಿಗಳಿಗೆ ಗರಿಷ್ಠ 38 ವರ್ಷ

ಆಯ್ಕೆ ವಿಧಾನ : ಅಭ್ಯರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಗಳಿಸಿದ ಅಂಕಗಳ ಶೇಕಡಾವಾರು ಪ್ರಮಾಣದ ಆಧಾರದ ಮೇಲೆ ಹಾಗೂ ಚಾಲ್ತಿಯಲ್ಲಿರುವ ಮೀಸಲಾತಿ ನಿಯಮಗಳನ್ವಯ ಆಯ್ಕೆ ಮಾಡಲಾಗುವುದು.

ಉದ್ಯೋಗ ಮಾಹಿತಿ : ಕರ್ನಾಟಕ ಲೋಕಸೇವಾ ಆಯೋಗದ ಗ್ರೂಪ್-ಸಿ ಹುದ್ದೆಗಳ ನೇಮಕಾತಿ 2022

ರೇಷ್ಮೆ ಇಲಾಖೆಯಲ್ಲಿ ಅಗತ್ಯವಿರುವ ಹುದ್ದೆಗೆ ಅರ್ಜಿ ಸಲ್ಲಿಕೆಯ ವಿಧಾನ :
• ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಯಸುವ ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು ಆನ್‌ಲೈನ್‌ ಮೂಲಕವೇ ಅರ್ಜಿಯನ್ನು ಸಲ್ಲಿಸಬೇಕು.
• ಅಭ್ಯರ್ಥಿಗಳು ಕರ್ನಾಟಕ ಲೋಕಸೇವಾ ಆಯೋಗದ ಅಧಿಕೃತ ವೆಬ್‌ಸೈಟ್ ವಿಳಾಸಕ್ಕೆ ಭೇಟಿ ನೀಡಿ, ಆನ್‌ಲೈನ್‌ ಅರ್ಜಿಯಲ್ಲಿ ಹುದ್ದೆಗೆ ಅಗತ್ಯವಿರುವ ಎಲ್ಲಾ ಮಾಹಿತಿಯನ್ನು ಭರ್ತಿ ಮಾಡಿ ( ಉದಾಹರಣೆಗೆ : ಅಭ್ಯರ್ಥಿಯ ಹೆಸರು, ವಿದ್ಯಾರ್ಹತೆ, ಇಮೇಲ್ ವಿಳಾಸ ಇತ್ಯಾದಿ) ನಂತರ ನಿಗದಿತ ಅರ್ಜಿ ಶುಲ್ಕ ಪಾವತಿಸಿ ಅರ್ಜಿಯನ್ನು ಸಲ್ಲಿಸಬೇಕು

ನಿಗದಿತ ಅರ್ಜಿ ಶುಲ್ಕದ ವಿವರ :
ಸಾಮಾನ್ಯ ಅರ್ಹತೆ ಅಭ್ಯರ್ಥಿಗಳು – ರೂ. 600
2ಎ, 2ಬಿ, 3ಎ, 3ಬಿ ಅಭ್ಯರ್ಥಿಗಳು – ರೂ. 300
ಮಾಜಿ ಸೈನಿಕ ಅಭ್ಯರ್ಥಿಗಳು – ರೂ. 50
ಎಸ್ಸಿ, ಎಸ್ಟಿ, ಪ್ರ 1, ಅಂಗವಿಕಲ ಅಭ್ಯರ್ಥಿಗಳಿಗೆ ಶುಲ್ಕ ಇರುವುದಿಲ್ಲ.

ಶುಲ್ಕ ಪಾವತಿಸುವ ವಿಧಾನ : ಅಭ್ಯರ್ಥಿಗಳು ಆನ್‌ಲೈನ್‌ನಲ್ಲಿ ಡೆಬಿಟ್ ಕಾರ್ಡ್, ಕ್ರೆಡಿಟ್ ಕಾರ್ಡ್, ನೆಟ್ ಬ್ಯಾಂಕಿಂಗ್ ಮೂಲಕ ಶುಲ್ಕ ಪಾವತಿಸಬಹುದು.

ಅರ್ಜಿಯನ್ನು ಸಲ್ಲಿಸಲು ನಿಗದಿಪಡಿಸಿದ ದಿನಾಂಕದ ವಿವರ :
ಅರ್ಜಿ ಸಲ್ಲಿಸಲು ಪ್ರಾರಂಭದ ದಿನಾಂಕ : ಆಗಸ್ಟ್ 10, 2022
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : ಸೆಪ್ಟೆಂಬರ್ 08, 2022
ಶುಲ್ಕ ಪಾವತಿಸಲು ಕೊನೆಯ ದಿನಾಂಕ : ಸೆಪ್ಟೆಂಬರ್ 09, 2022

KPSC Group-B Recruitment 2022 : Important Links

NotificationClick Here
Apply Online Click Here

ಕೊನೆಯ ಪದಗಳು : ನಾವು ನೀಡಿದ ಉದ್ಯೋಗ ಮಾಹಿತಿಯನ್ನು ನೀವು ಇಷ್ಟಪಡುತ್ತೀರಿ ಎಂದು ಭಾವಿಸುತ್ತೇವೆ. ಈ ಉದ್ಯೋಗ ಮಾಹಿತಿ ನಿಮಗೆ ಇಷ್ಟವಾಗಿದ್ದರೆ ನಿಮ್ಮ ಸ್ನೇಹಿತರಿಗೆ ಶೇರ್ ಮಾಡಲು ಮರೆಯದಿರಿ.

Leave a Reply

Your email address will not be published.