ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ನಿಯಮಿತ ನೇಮಕಾತಿ 2024 – KSSFCL Recruitment 2024

KSSFCL Recruitment 2024 : ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ನಿಯಮಿತ, ಬೆಂಗಳೂರು ಇದರಲ್ಲಿ ಖಾಲಿ ಇರುವ ವಿವಿಧ ವೃಂದಗಳಲ್ಲಿನ ಹುದ್ದೆಗಳ ಭರ್ತಿಗೆ ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಹುದ್ದೆಗಳ ಭರ್ತಿಗೆ ಸಂಬಂಧಿಸಿದಂತೆ ಕರ್ತವ್ಯ ಸ್ಥಳ, ಶೈಕ್ಷಣಿಕ ಅರ್ಹತೆ, ವೇತನ, ಅರ್ಜಿ ಸಲ್ಲಿಕೆ ದಿನಾಂಕ ಹಾಗೂ ಇತರೆ ಮಾಹಿತಿಯನ್ನು ಈ ಕೆಳಗಡೆ ವಿವರವಾಗಿ ನೀಡಲಾಗಿದೆ ಪೂರ್ತಿ ಓದಿ.

KSSFCL Recruitment 2024 : Details of Vacancies

ಹುದ್ದೆ : ಸನ್ನದು ಲೆಕ್ಕಪರಿಶೋಧಕರು, ಕಾನೂನು ಅಧಿಕಾರಿ, ಮಾನವ ಸಂಪನ್ಮೂಲ ಅಧಿಕಾರಿ, ತರಬೇತಿ ಅಧಿಕಾರಿ, ಸೌಹಾರ್ದ ಅಭಿವೃದ್ಧಿ ಅಧಿಕಾರಿ, ಸಹಾಯಕರು, ಟೈಪಿಸ್ಟ್ ಕಂ ಸ್ಟೆನೋ, ಕಿರಿಯ ಸಹಾಯಕರು, ಉಪ ಸಿಬ್ಬಂದಿ ಕಮ್ ವಾಹನ ಚಾಲಕ

ಕರ್ತವ್ಯ ಸ್ಥಳ : ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳು ಬೆಂಗಳೂರಿನಲ್ಲಿ ಕೆಲಸ ನಿರ್ವಹಿಸಬೇಕು

ಖಾಲಿಯಿರುವ ಹುದ್ದೆಗಳ ಸಂಖ್ಯೆ : ಒಟ್ಟು 39 ಹುದ್ದೆಗಳ ಭರ್ತಿಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ.

ಹುದ್ದೆಹುದ್ದೆಗಳ ಸಂಖ್ಯೆ
ಸನ್ನದು ಲೆಕ್ಕಪರಿಶೋಧಕರು1
ಕಾನೂನು ಅಧಿಕಾರಿ2
ಮಾನವ ಸಂಪನ್ಮೂಲ ಅಧಿಕಾರಿ1
ತರಬೇತಿ ಅಧಿಕಾರಿ1
ಸೌಹಾರ್ದ ಅಭಿವೃದ್ಧಿ ಅಧಿಕಾರಿ11
ಸಹಾಯಕರು8
ಟೈಪಿಸ್ಟ್ ಕಂ ಸ್ಟೆನೋ2
ಕಿರಿಯ ಸಹಾಯಕರು11
ಉಪ ಸಿಬ್ಬಂದಿ ಕಮ್ ವಾಹನ ಚಾಲಕ2

ಶೈಕ್ಷಣಿಕ ಅರ್ಹತೆ :
• ಸನ್ನದು ಲೆಕ್ಕಪರಿಶೋಧಕರು – ಸಿಎ/ಸಿಎಸ್/ಐಸಿಡಬ್ಲ್ಯುಎ.
• ಕಾನೂನು ಅಧಿಕಾರಿ – ಕಾನೂನು ಪದವಿ ಜೊತೆಗೆ ಕಂಪ್ಯೂಟರ್ ಪರಿಣಿತಿ ಕಡ್ಡಾಯ.
• ಮಾನವ ಸಂಪನ್ಮೂಲ ಅಧಿಕಾರಿ – ಎಂ.ಬಿ.ಎ, ಹೆಚ್.ಆರ್ ಪದವಿ ಜೊತೆಗೆ ಕಂಪ್ಯೂಟರ್ ಪರಿಣಿತಿ ಕಡ್ಡಾಯ.
• ತರಬೇತಿ ಅಧಿಕಾರಿ – ಎಂ.ಎ. ಕನ್ನಡ ಅಥವಾ ಎಂ.ಎಸ್.ಡಬ್ಲ್ಯೂ ಪದವಿ ಜೊತೆಗೆ ಕಂಪ್ಯೂಟರ್ ಪರಿಣಿತಿ ಕಡ್ಡಾಯ.
• ಸೌಹಾರ್ದ ಅಭಿವೃದ್ಧಿ ಅಧಿಕಾರಿ – ಯಾವುದೇ ವಿಷಯದಲ್ಲಿ ಪದವಿ ಜೊತೆಗೆ ಕಂಪ್ಯೂಟರ್ ಪರಿಣಿತಿ ಕಡ್ಡಾಯ.
• ಸಹಾಯಕರು – ಯಾವುದೇ ವಿಷಯದಲ್ಲಿ ಪದವಿ ಜೊತೆಗೆ ಕಂಪ್ಯೂಟರ್ ಪರಿಣಿತಿ ಕಡ್ಡಾಯ.
• ಟೈಪಿಸ್ಟ್ ಕಂ ಸ್ಟೆನೋ – ಯಾವುದೇ ವಿಷಯದಲ್ಲಿ ಪದವಿ ಜೊತೆಗೆ ಕಂಪ್ಯೂಟರ್ ಪರಿಣಿತಿ ಕಡ್ಡಾಯ. ಶೀಘ್ರಲಿಪಿಯನ್ನು ಕನ್ನಡ ಮತ್ತು ಇಂಗ್ಲೀಷ್ ಭಾಷೆಯಲ್ಲಿ ಪ್ರೌಢದರ್ಜೆಯಲ್ಲಿ ತೇರ್ಗಡೆಯಾಗಿರಬೇಕು. ಬೆರಳಚ್ಚಿನಲ್ಲಿ ಕನ್ನಡ ಹಾಗೂ ಇಂಗ್ಲೀಷ್ ಭಾಷೆಯಲ್ಲಿ ಪ್ರೌಢದರ್ಜೆಯಲ್ಲಿ ತೇರ್ಗಡೆಯಾಗಿರಬೇಕು.
• ಕಿರಿಯ ಸಹಾಯಕರು – ಪಿ.ಯು.ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು. ಕಂಪ್ಯೂಟರ್ ಪರಿಣಿತಿ ಕಡ್ಡಾಯ.
• ಉಪ ಸಿಬ್ಬಂದಿ ಕಮ್ ವಾಹನ ಚಾಲಕ – ಎಸ್.ಎಸ್.ಎಲ್.ಸಿ ಅಥವಾ ತತ್ಸಮಾನ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು. ಮೋಟಾರು ವಾಹನ ಚಾಲನಾ ಪರವಾನಿಗೆ ಪಡೆದು ಮೂರು ವರ್ಷಗಳಾಗಿರತಕ್ಕದ್ದು.

ಉದ್ಯೋಗ ಮಾಹಿತಿ : ಸ್ಟಾಫ್ ಸೆಲೆಕ್ಷನ್ ಕಮಿಷನ್ ಬೃಹತ್ ನೇಮಕಾತಿ 2024.

ವಯೋಮಾನ :

ಹುದ್ದೆವಯೋಮಾನ
ಸನ್ನದು ಲೆಕ್ಕಪರಿಶೋಧಕರುಗರಿಷ್ಠ 35 ವರ್ಷ
ಕಾನೂನು ಅಧಿಕಾರಿಗರಿಷ್ಠ 35 ವರ್ಷ
ಮಾನವ ಸಂಪನ್ಮೂಲ ಅಧಿಕಾರಿಗರಿಷ್ಠ 35 ವರ್ಷ
ತರಬೇತಿ ಅಧಿಕಾರಿಗರಿಷ್ಠ 35 ವರ್ಷ
ಸೌಹಾರ್ದ ಅಭಿವೃದ್ಧಿ ಅಧಿಕಾರಿಗರಿಷ್ಠ 30 ವರ್ಷ
ಸಹಾಯಕರುಗರಿಷ್ಠ 30 ವರ್ಷ
ಟೈಪಿಸ್ಟ್ ಕಂ ಸ್ಟೆನೋಗರಿಷ್ಠ 30 ವರ್ಷ
ಕಿರಿಯ ಸಹಾಯಕರುಗರಿಷ್ಠ 25 ವರ್ಷ
ಉಪ ಸಿಬ್ಬಂದಿ ಕಮ್ ವಾಹನ ಚಾಲಕಗರಿಷ್ಠ 25 ವರ್ಷ

ಆಯ್ಕೆ ವಿಧಾನ : ಎಲ್ಲಾ ಹುದ್ದೆಗಳಿಗೂ ಲಿಖಿತ ಪರೀಕ್ಷೆ ಹಾಗೂ ಸಂದರ್ಶನ ನಡೆಸಿ ಹುದ್ದೆಗಳಿಗೆ ಆಯ್ಕೆ ಮಾಡಲಾಗುತ್ತದೆ. ಬೆರಳಚ್ಚುಗಾರ/ಸ್ಟೇನೊಗ್ರಾಪರಗೆ ಬೆರಳಚ್ಚು ಪರೀಕ್ಷೆ ಮತ್ತು ಉಪಸಿಬ್ಬಂದಿ ಕಂ ವಾಹನ ಚಾಲಕ ಸಿಬ್ಬಂದಿಗಳಿಗೆ ವಾಹನ ಚಾಲನಾ ಪ್ರಾಯೋಗಿಕ ಪರೀಕ್ಷೆ ಇರುತ್ತದೆ.

ವೇತನ :

ಹುದ್ದೆಮೊದಲ ವರ್ಷ ಎರಡನೇ ವರ್ಷ
ಸನ್ನದು ಲೆಕ್ಕಪರಿಶೋಧಕರು60,00070,000
ಕಾನೂನು ಅಧಿಕಾರಿ35,00038,000
ಮಾನವ ಸಂಪನ್ಮೂಲ ಅಧಿಕಾರಿ35,00038,000
ತರಬೇತಿ ಅಧಿಕಾರಿ35,00038,000
ಸೌಹಾರ್ದ ಅಭಿವೃದ್ಧಿ ಅಧಿಕಾರಿ28,00030,000
ಸಹಾಯಕರು20,00022,000
ಟೈಪಿಸ್ಟ್ ಕಂ ಸ್ಟೆನೋ20,00022,000
ಕಿರಿಯ ಸಹಾಯಕರು13,00015,000
ಉಪ ಸಿಬ್ಬಂದಿ ಕಮ್ ವಾಹನ ಚಾಲಕ13,00015,000

ಅರ್ಜಿ ಸಲ್ಲಿಕೆಯ ವಿಧಾನ : ಅಭ್ಯರ್ಥಿಯು ಈ ಹುದ್ದೆಗೆ ಆಫ್‌ಲೈನ್‌ ಮೂಲಕ ಅರ್ಜಿಗಳನ್ನು ಸಲ್ಲಿಸಬೇಕು.
ಹಂತ 1 : ಆಫ್‌ಲೈನ್‌ ಮೂಲಕ ಅರ್ಜಿ ಸಲ್ಲಿಸುವ ಮೊದಲು ಇಲಾಖೆ ಹೊರಡಿಸಿರುವ ಅಧಿಸೂಚನೆಯನ್ನು ಗಮನವಿಟ್ಟು ಓದಿ ಅರ್ಜಿ ಸಲ್ಲಿಸಲು ಅಗತ್ಯವಿರುವ ದಾಖಲೆಗಳನ್ನು ಸಿದ್ಧಪಡಿಸಿಕೊಂಡು ನಂತರ ಅರ್ಜಿಯನ್ನು ಸಲ್ಲಿಸಬೇಕು.
ಹಂತ 2 : ಇಲಾಖೆಯ ವೆಬ್‌ಸೈಟ್ ಗೆ ಭೇಟಿ ನೀಡಿ ಅಥವಾ ಈ ಕೆಳಗಡೆ ನೀಡಲಾದ ಅಪ್ಲಿಕೇಷನ್ ಫಾರ್ಮ್ ಲಿಂಕ್ ಮೇಲೆ ಕ್ಲಿಕ್ ಮಾಡಿ ಅಪ್ಲಿಕೇಷನ್ ಡೌನ್ಲೋಡ್ ಮಾಡಿಕೊಳ್ಳಿ.
ಹಂತ 3 : ಅಪ್ಲಿಕೇಷನ್ ನಲ್ಲಿ ತಿಳಿಸಿರುವಂತಹ ಎಲ್ಲಾ ಮಾಹಿತಿಯನ್ನು (ಉದಾಹರಣೆಗೆ ಅಭ್ಯರ್ಥಿಯ ಹೆಸರು, ವಿಳಾಸ, ವಿದ್ಯಾರ್ಹತೆ, ಮೊಬೈಲ್ ಸಂಖ್ಯೆ ಇತ್ಯಾದಿ) ಭರ್ತಿ ಮಾಡಿ, ಪುನಃ ಒಮ್ಮೆ ಪರಿಶೀಲಿಸಿ.
ಹಂತ 4 : ಅಪ್ಲಿಕೇಷನ್ ನಲ್ಲಿ ಯಾವುದೇ ಪ್ರಮಾಣ ಪತ್ರ/ ದಾಖಲೆಗಳನ್ನು ಲಗತ್ತಿಸಲು ಸೂಚಿಸಿದ್ದರೆ, ಅವುಗಳನ್ನು ಲಗತ್ತಿಸಿ (ಅಗತ್ಯವಿದ್ದರೆ ಮಾತ್ರ).
ಹಂತ 5 : ಕೊನೆಯದಾಗಿ, ಅಭ್ಯರ್ಥಿಗೆ ಅರ್ಜಿ ಶುಲ್ಕ ಪಾವತಿಸಲು ಸೂಚಿಸಿದ್ದರೆ ಶುಲ್ಕ ಪಾವತಿಸಿ, ಭರ್ತಿ ಮಾಡಿದ ಅರ್ಜಿಯನ್ನು ಈ ಕೆಳಗಡೆ ನೀಡಲಾದ ಕಚೇರಿಯ ವಿಳಾಸಕ್ಕೆ ಕೋರಿಯರ್/ರಿಜಿಸ್ಟರ್ಡ್ ಪೋಸ್ಟ್/ ಖುದ್ದಾಗಿ ಹಾಜರಾಗಿ ಕಛೇರಿಗೆ ತಲುಪಿಸಬೇಕು.

ಅರ್ಜಿ ಸಲ್ಲಿಸುವ ವಿಳಾಸ : ಸೌಹಾರ್ದ ಸಹಕಾರಿ ಸೌದ, ನಂ. 68, ಒಂದನೇ ಮಹಡಿ, 18ನೇ ಅಡ್ಡರಸ್ತೆ, ಮಾರ್ಗೋಸ್ ರಸ್ತೆ, ಮಲ್ಲೇಶ್ವರಂ, ಬೆಂಗಳೂರು – 560055

ಅರ್ಜಿ ಶುಲ್ಕ : ಸನ್ನದು ಲೆಕ್ಕಪರಿಶೋಧಕರು, ಕಾನೂನು ಅಧಿಕಾರಿ, ಮಾನವ ಸಂಪನ್ಮೂಲ ಅಧಿಕಾರಿ, ತರಬೇತಿ ಅಧಿಕಾರಿ, ಸೌಹಾರ್ದ ಅಭಿವೃದ್ಧಿ ಅಧಿಕಾರಿ ಹುದ್ದೆಗೆ ರೂ. 500 ಹಾಗೂ ಸಹಾಯಕರು, ಟೈಪಿಸ್ಟ್ ಕಂ ಸ್ಟೆನೋ, ಕಿರಿಯ ಸಹಾಯಕರು, ಉಪ ಸಿಬ್ಬಂದಿ ಕಮ್ ವಾಹನ ಚಾಲಕ ಹುದ್ದೆಗೆ ರೂ. 300 ಪಾವತಿಸಬೇಕು.

ಅರ್ಜಿಯನ್ನು ಸಲ್ಲಿಸಲು ನಿಗದಿಪಡಿಸಿದ ದಿನಾಂಕದ ವಿವರ :
ಅರ್ಜಿ ಸಲ್ಲಿಸಲು ಪ್ರಾರಂಭದ ದಿನಾಂಕ : ಜೂನ್ 25, 2024
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : ಜುಲೈ 26, 2024

KSSFCL Recruitment 2024 : Important Links

NOTIFICATIONCLICK HERE
APPLICATION FORM CLICK HERE
Telegram Join Link Click Here
WhatsApp Group Link Click Here

ಕೊನೆಯ ಪದಗಳು : ನಾವು ನೀಡಿದ ಉದ್ಯೋಗ ಮಾಹಿತಿಯನ್ನು ನೀವು ಇಷ್ಟಪಡುತ್ತೀರಿ ಎಂದು ಭಾವಿಸುತ್ತೇವೆ. ಈ ಉದ್ಯೋಗ ಮಾಹಿತಿ ನಿಮಗೆ ಇಷ್ಟವಾಗಿದ್ದರೆ ನಿಮ್ಮ ಸ್ನೇಹಿತರಿಗೆ ಶೇರ್ ಮಾಡಲು ಮರೆಯದಿರಿ.

Leave a Comment