ಮಂಗಳೂರು ಕಥೋಲಿಕ್ ಕೋ-ಆಪರೇಟಿವ್ ಬ್ಯಾಂಕ್ ನೇಮಕಾತಿ 2024 – Mangalore Catholic Cooperative Bank Recruitment 2024

Mangalore Catholic Cooperative Bank Recruitment 2024 : ಮಂಗಳೂರು ಕಥೋಲಿಕ್ ಕೋ-ಆಪರೇಟಿವ್ ಬ್ಯಾಂಕ್ ನಿ., ಮಂಗಳೂರು ಇಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ಭರ್ತಿಗೆ ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಹುದ್ದೆಗಳ ಭರ್ತಿಗೆ ಸಂಬಂಧಿಸಿದಂತೆ ಹುದ್ದೆಗಳ ಸಂಖ್ಯೆ, ಶೈಕ್ಷಣಿಕ ಅರ್ಹತೆ, ವಯೋಮಾನ, ವೇತನ, ಅರ್ಜಿ ಸಲ್ಲಿಕೆ ದಿನಾಂಕ ಹಾಗೂ ಇತರೆ ಮಾಹಿತಿಯನ್ನು ಈ ಕೆಳಗಡೆ ವಿವರವಾಗಿ ನೀಡಲಾಗಿದೆ ಪೂರ್ತಿ ಓದಿ.

Mangalore Catholic Cooperative Bank Recruitment 2024 : Details of Vacancies

ಹುದ್ದೆ : ಹಿರಿಯ ಪ್ರಬಂಧಕರು, ಶಾಖಾ ಪರಿವೀಕ್ಷಕರು, ವಸೂಲಾತಿ ಅಧಿಕಾರಿ, ಶಾಖಾ ವ್ಯವಸ್ಥಾಪಕರು, ಸುಪರ್‌ವೈಸ‌ರ್, ಮುಖ್ಯ ಅಕೌಂಟೆಂಟ್, ಅಕೌಂಟೆಂಟ್, ಡೇಟಾಬೇಸ್ ಅಡ್ಮಿನಿಸ್ಟ್ರೇಟ‌ರ್, ಕಿರಿಯ ಅಧಿಕಾರಿ, ಹಿರಿಯ ಸಹಾಯಕ, ಕಿರಿಯ ಸಹಾಯಕ, ಅಟೆಂಡರ್/ಡ್ರೈವರ್

ಕರ್ತವ್ಯ ಸ್ಥಳ : ಹುದ್ದೆಗಳಿಗೆ ಆಯ್ಕೆಯಾಗುವ ಅಭ್ಯರ್ಥಿಗಳು ಮಂಗಳೂರಿನಲ್ಲಿ ಕೆಲಸ ನಿರ್ವಹಿಸಬೇಕು.

ಖಾಲಿಯಿರುವ ಹುದ್ದೆಗಳ ಸಂಖ್ಯೆ : ಒಟ್ಟು 50 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ.

ಹುದ್ದೆ ಹುದ್ದೆಗಳ ಸಂಖ್ಯೆ ವೇತನ
ಹಿರಿಯ ಪ್ರಬಂಧಕರು230400-51300
ಶಾಖಾ ಪರಿವೀಕ್ಷಕರು130400-51300
ವಸೂಲಾತಿ ಅಧಿಕಾರಿ130400-51300
ಶಾಖಾ ವ್ಯವಸ್ಥಾಪಕರು228100-50100
ಸುಪರ್‌ವೈಸ‌ರ್128100-50100
ಮುಖ್ಯ ಅಕೌಂಟೆಂಟ್128100-50100
ಅಕೌಂಟೆಂಟ್526000-47700
ಡೇಟಾಬೇಸ್ ಅಡ್ಮಿನಿಸ್ಟ್ರೇಟ‌ರ್226000-47700
ಕಿರಿಯ ಅಧಿಕಾರಿ1024000-45300
ಹಿರಿಯ ಸಹಾಯಕ821600-40050
ಕಿರಿಯ ಸಹಾಯಕ1320000-36300
ಅಟೆಂಡರ್/ಡ್ರೈವರ್416000-29600

ಶೈಕ್ಷಣಿಕ ಅರ್ಹತೆ :
ಹಿರಿಯ ಪ್ರಬಂಧಕರು, ಶಾಖಾ ಪರಿವೀಕ್ಷಕರು, ವಸೂಲಾತಿ ಅಧಿಕಾರಿ, ಶಾಖಾ ವ್ಯವಸ್ಥಾಪಕರು, ಸುಪರ್‌ವೈಸ‌ರ್ – ಯಾವುದೇ ವಿಷಯದಲ್ಲಿ ಪದವಿ ಹಾಗೂ ಕಂಪ್ಯೂಟರ್ ಆಪರೇಷನ್ ಮತ್ತು ಅಪ್ಲಿಕೇಷನ್ ಜ್ಞಾನ ಹೊಂದಿರಬೇಕು.

ಮುಖ್ಯ ಅಕೌಂಟೆಂಟ್ – ವಾಣಿಜ್ಯ/ ಸಹಕಾರ/ ಮ್ಯಾನೇಜ್ಮೆಂಟ್ ವಿಷಯಗಳಲ್ಲಿ ಪದವಿ ಹಾಗೂ ಕಂಪ್ಯೂಟರ್ ಆಪರೇಷನ್ ಮತ್ತು ಅಪ್ಲಿಕೇಷನ್ ಜ್ಞಾನ ಹೊಂದಿರಬೇಕು.

ಅಕೌಂಟೆಂಟ್ – ವಾಣಿಜ್ಯ/ ಸಹಕಾರ/ ಮ್ಯಾನೇಜ್ಮೆಂಟ್ ವಿಷಯಗಳಲ್ಲಿ ಪದವಿ ಹಾಗೂ ಟ್ಯಾಲಿ ಕೋರ್ಸ ತೇರ್ಗಡೆಯಾದ ಪ್ರಮಾಣಪತ್ರ ಹಾಗೂ ಕಂಪ್ಯೂಟರ್ ಆಪರೇಷನ್ ಮತ್ತು ಅಪ್ಲಿಕೇಷನ್ ಜ್ಞಾನ ಹೊಂದಿರಬೇಕು.

ಡೇಟಾಬೇಸ್ ಅಡ್ಮಿನಿಸ್ಟ್ರೇಟ‌ರ್ – ಗಣಕ ವಿಜ್ಞಾನದಲ್ಲಿ ಬಿಇ ಪದವಿ ಅಥವಾ ಕಂಪ್ಯೂಟರ್ ಅಪ್ಲಿಕೇಷನಲ್ಲಿ ಸ್ನಾತಕೋತ್ತರ ಪದವಿ ಹೊಂದಿರಬೇಕು.

ಕಿರಿಯ ಅಧಿಕಾರಿ, ಹಿರಿಯ ಸಹಾಯಕ, ಕಿರಿಯ ಸಹಾಯಕ – ಯಾವುದೇ ಪದವಿ ಹಾಗೂ ಕಂಪ್ಯೂಟರಿನಲ್ಲಿ ಅಗತ್ಯ ಪರಿಣತಿ ಹೊಂದಿರಬೇಕು.

ಅಟೆಂಡರ್/ಡ್ರೈವರ್ – ಎಸ್.ಎಸ್.ಎಲ್.ಸಿ ತೇರ್ಗಡೆ ಹೊಂದಿರಬೇಕು. ಚಾಲನಾ ಪರವಾನಿಗೆ ಕಡ್ಡಾಯ.

ಉದ್ಯೋಗ ಮಾಹಿತಿ : ಕರ್ನಾಟಕ ಅಪೆಕ್ಸ್ ಕೋ-ಆಪರೇಟಿವ್ ಬ್ಯಾಂಕ್ ನೇಮಕಾತಿ 2024

ವಯೋಮಾನ : ಅರ್ಜಿ ಸಲ್ಲಿಸಲು ನಿಗದಿಪಡಿಸಿದ ಕೊನೆಯ ದಿನಾಂಕಕ್ಕೆ ಅಭ್ಯರ್ಥಿಗಳು ಕನಿಷ್ಠ 18 ವರ್ಷ ಪೂರೈಸಿರಬೇಕು.
• ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ – ಗರಿಷ್ಠ 35 ವರ್ಷ
• ಪ್ರವರ್ಗ 2ಎ, 2ಬಿ, 3ಎ, 3ಬಿ ಅಭ್ಯರ್ಥಿಗಳಿಗೆ – ಗರಿಷ್ಠ 38 ವರ್ಷ
• ಪ.ಜಾತಿ, ಪ.ಪಂ, ಪ್ರವರ್ಗ 1ರ ಅಭ್ಯರ್ಥಿಗಳಿಗೆ – ಗರಿಷ್ಠ 40 ವರ್ಷ

ಅನುಭವ : ಹಿರಿಯ ಪ್ರಬಂಧಕರು, ಶಾಖಾ ಪರಿವೀಕ್ಷಕರು, ವಸೂಲಾತಿ ಅಧಿಕಾರಿ, ಶಾಖಾ ವ್ಯವಸ್ಥಾಪಕರು, ಸುಪರ್‌ವೈಸ‌ರ್, ಮುಖ್ಯ ಅಕೌಂಟೆಂಟ್ ಹುದ್ದೆಗೆ ಕನಿಷ್ಠ ಸೇವಾ ಅನುಭವ ಹೊಂದಿರಬೇಕು.

ಆಯ್ಕೆ ವಿಧಾನ : ಅಟೆಂಡರ್/ಡ್ರೈವರ್ ಹುದ್ದೆ ಹೊರತುಪಡಿಸಿ ಉಳಿದ ಹುದ್ದೆಗಳಿಗೆ ಲಿಖಿತ ಪರೀಕ್ಷೆ ಹಾಗೂ ಸಂದರ್ಶನ ನಡೆಸಿ ಆಯ್ಕೆ ಮಾಡಲಾಗುವುದು. ಅಟೆಂಡರ್/ಡ್ರೈವರ್ ಹುದ್ದೆಗೆ ವಿದ್ಯಾರ್ಹತೆಯಲ್ಲಿ ಪಡೆದ ಅಂಕಗಳ ಆಧಾರದ ಮೇಲೆ ಸಂದರ್ಶನ ನಡೆಸಿ ಆಯ್ಕೆ ಮಾಡಲಾಗುವುದು.

ಉದ್ಯೋಗ ಮಾಹಿತಿ : ಭಾರತೀಯ ರೈಲ್ವೆಯಲ್ಲಿ ಟೆಕ್ನಿಷಿಯನ್ ಹುದ್ದೆಗಳ ಬೃಹತ್ ನೇಮಕಾತಿ 2024

ಅರ್ಜಿ ಸಲ್ಲಿಕೆಯ ವಿಧಾನ : ಅಭ್ಯರ್ಥಿಯು ಆಫ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬೇಕು.
ಹಂತ 1 : ಆಫ್‌ಲೈನ್‌ ಮೂಲಕ ಅರ್ಜಿ ಸಲ್ಲಿಸುವ ಮೊದಲು ಬ್ಯಾಂಕ್ ಹೊರಡಿಸಿರುವ ಅಧಿಸೂಚನೆಯನ್ನು ಗಮನವಿಟ್ಟು ಓದಿ ಅರ್ಜಿ ಸಲ್ಲಿಸಲು ಅಗತ್ಯವಿರುವ ದಾಖಲೆಗಳನ್ನು ಸಿದ್ಧಪಡಿಸಿಕೊಂಡು ನಂತರ ಅರ್ಜಿಯನ್ನು ಸಲ್ಲಿಸಬೇಕು.
ಹಂತ 2 : ಬ್ಯಾಂಕಿನ ವೆಬ್‌ಸೈಟ್ ಗೆ ಭೇಟಿ ನೀಡಿ ಅಥವಾ ಈ ಕೆಳಗಡೆ ನೀಡಲಾದ ಅಪ್ಲಿಕೇಷನ್ ಫಾರ್ಮ್ ಲಿಂಕ್ ಮೇಲೆ ಕ್ಲಿಕ್ ಮಾಡಿ ಅಪ್ಲಿಕೇಷನ್ ಡೌನ್ಲೋಡ್ ಮಾಡಿಕೊಳ್ಳಿ.
ಹಂತ 3 : ಅಪ್ಲಿಕೇಷನ್ ನಲ್ಲಿ ತಿಳಿಸಿರುವಂತಹ ಎಲ್ಲಾ ಮಾಹಿತಿಯನ್ನು (ಉದಾಹರಣೆಗೆ ಅಭ್ಯರ್ಥಿಯ ಹೆಸರು, ವಿಳಾಸ, ವಿದ್ಯಾರ್ಹತೆ, ಮೊಬೈಲ್ ಸಂಖ್ಯೆ ಇತ್ಯಾದಿ) ಭರ್ತಿ ಮಾಡಿ, ಪುನಃ ಒಮ್ಮೆ ಪರಿಶೀಲಿಸಿ.
ಹಂತ 4 : ಅಪ್ಲಿಕೇಷನ್ ನಲ್ಲಿ ಯಾವುದೇ ಪ್ರಮಾಣ ಪತ್ರ/ ದಾಖಲೆಗಳನ್ನು ಲಗತ್ತಿಸಲು ಸೂಚಿಸಿದ್ದರೆ, ಅವುಗಳನ್ನು ಲಗತ್ತಿಸಿ (ಅಗತ್ಯವಿದ್ದರೆ ಮಾತ್ರ).
ಹಂತ 5 : ಕೊನೆಯದಾಗಿ, ಅಭ್ಯರ್ಥಿಗಳು ಅರ್ಜಿ ಶುಲ್ಕದ ಡಿಡಿ ಪಡೆದು, ಭರ್ತಿ ಮಾಡಿದ ಅರ್ಜಿಯನ್ನು ಈ ಕೆಳಗಡೆ ನೀಡಲಾದ ಕಚೇರಿಯ ವಿಳಾಸಕ್ಕೆ ಅಂಚೆ ಮೂಲಕ ಅಥವಾ ಖುದ್ದಾಗಿ ಹಾಜರಾಗಿ ಸಲ್ಲಿಸಬೇಕು.

ಅರ್ಜಿ ಸಲ್ಲಿಸುವ ವಿಳಾಸ : ಮಹಾಪ್ರಬಂಧಕರು, ಮಂಗಳೂರು ಕಥೋಲಿಕ್ ಕೋಆಪರೇಟಿವ್ ಬ್ಯಾಂಕ್ ನಿ., ಆಡಳಿತ ಕಛೇರಿ, ಎರಡನೇ ಮಹಡಿ, ಹಂಪನಕಟ್ಟ, ಮಂಗಳೂರು – 575001

ನಿಗದಿತ ಅರ್ಜಿ ಶುಲ್ಕದ ವಿವರ :
• ಅಟೆಂಡರ್/ ಡ್ರೈವರ್ ಹುದ್ದೆಗೆ ಪ.ಜಾತಿ/ ಪ.ಪಂ./ ಪ್ರ1ರ ಅಭ್ಯರ್ಥಿಗಳು – ರೂ. 500
• ಉಳಿದ ಹುದ್ದೆಗಳಿಗೆ – ರೂ. 1000

ಶುಲ್ಕ ಪಾವತಿಸುವ ವಿಧಾನ : ಅರ್ಜಿ ಶುಲ್ಕವನ್ನು ಮಂಗಳೂರು ಕಥೋಲಿಕ್ ಕೋಆಪರೇಟಿವ್ ಬ್ಯಾಂಕ್ ನಿ., ಇವರ ಹೆಸರಿಗೆ ಡಿ.ಡಿ. ಮುಖಾಂತರ ಪಾವತಿಸತಕ್ಕದ್ದು.

ಅರ್ಜಿಯನ್ನು ಸಲ್ಲಿಸಲು ನಿಗದಿಪಡಿಸಿರುವ ದಿನಾಂಕದ ವಿವರ :
ಅರ್ಜಿ ಸಲ್ಲಿಸಲು ಪ್ರಾರಂಭದ ದಿನಾಂಕ : ಮಾರ್ಚ್ 12, 2024
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : ಮಾರ್ಚ್ 26, 2024

MCC Bank Recruitment 2024 : Important Links

NOTIFICATIONCLICK HERE
APPLICATION FORM CLICK HERE
Telegram Join Link Click Here
WhatsApp Group Link Click Here

ಕೊನೆಯ ಪದಗಳು : ನಾವು ನೀಡಿದ ಉದ್ಯೋಗ ಮಾಹಿತಿಯನ್ನು ನೀವು ಇಷ್ಟಪಡುತ್ತೀರಿ ಎಂದು ಭಾವಿಸುತ್ತೇವೆ. ಈ ಉದ್ಯೋಗ ಮಾಹಿತಿ ನಿಮಗೆ ಇಷ್ಟವಾಗಿದ್ದರೆ ನಿಮ್ಮ ಸ್ನೇಹಿತರಿಗೆ ಶೇರ್ ಮಾಡಲು ಮರೆಯದಿರಿ.

Leave a Comment