
NICL Assistant Recruitment 2026 : ನ್ಯಾಷನಲ್ ಇನ್ಶೂರೆನ್ಸ್ ಕಂಪನಿ ಲಿಮಿಟೆಡ್ ಇದರಲ್ಲಿ ಅಗತ್ಯವಿರುವ ಅಸಿಸ್ಟಂಟ್ಸ್ ಹುದ್ದೆಗಳ ಭರ್ತಿಗೆ ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಹುದ್ದೆಗಳ ಭರ್ತಿಗೆ ಸಂಬಂಧಿಸಿದಂತೆ ಹುದ್ದೆಗಳ ಸಂಖ್ಯೆ, ಕರ್ತವ್ಯ ಸ್ಥಳ, ಶೈಕ್ಷಣಿಕ ಅರ್ಹತೆ, ಆಯ್ಕೆ ವಿಧಾನ ಹಾಗೂ ಇತರೆ ಮಾಹಿತಿಯನ್ನು ಈ ಕೆಳಗಡೆ ವಿವರವಾಗಿ ನೀಡಲಾಗಿದೆ ಪೂರ್ತಿ ಓದಿ.
NICL Assistant Recruitment 2026 : Details of Vacancies
ಹುದ್ದೆ :
ಅಸಿಸ್ಟಂಟ್ಸ್
ಕರ್ತವ್ಯ ಸ್ಥಳ :
ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳು ಭಾರತದೆಲ್ಲೆಡೆ ಕರ್ತವ್ಯ ನಿರ್ವಹಿಸಬೇಕು.
ಖಾಲಿಯಿರುವ ಹುದ್ದೆಗಳ ಸಂಖ್ಯೆ :
ಒಟ್ಟು 500 ಹುದ್ದೆಗಳ ಭರ್ತಿಗೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಕರ್ನಾಟಕದಲ್ಲಿ 30 ಹುದ್ದೆಗಳು ಖಾಲಿ ಇದೆ.
ನಿಗದಿಪಡಿಸಿರುವ ಶೈಕ್ಷಣಿಕ ಅರ್ಹತೆ :
ಮಾನ್ಯತೆ ಪಡೆದ ವಿದ್ಯಾಸಂಸ್ಥೆಯಿಂದ ಯಾವುದೇ ಪದವಿ ವಿದ್ಯಾರ್ಹತೆ ಹೊಂದಿರಬೇಕು.
ಉದ್ಯೋಗ ಮಾಹಿತಿ : ಗ್ರಾಮ ಪಂಚಾಯಿತಿಯಲ್ಲಿ ಗ್ರಂಥಾಲಯ ಮೇಲ್ವಿಚಾರಕರು ಹುದ್ದೆಗಳ ನೇಮಕಾತಿ 2026
ವಯೋಮಿತಿ :
ದಿನಾಂಕ 01/07/2026ಕ್ಕೆ ಅಭ್ಯರ್ಥಿಗಳು ಈ ಕೆಳಗಿನಂತೆ ವಯೋಮಿತಿ ಹೊಂದಿರಬೇಕು.
• ಕನಿಷ್ಠ 21 ವರ್ಷ
• ಗರಿಷ್ಠ 30 ವರ್ಷ
ವಯೋಮಿತಿ ಸಡಿಲಿಕೆ :
• ಒಬಿಸಿ (ಎನ್.ಸಿ.ಎಲ್) ಅಭ್ಯರ್ಥಿಗಳಿಗೆ – 03 ವರ್ಷ
• ಎಸ್ಸಿ, ಎಸ್ಟಿ ಅಭ್ಯರ್ಥಿಗಳಿಗೆ – 05 ವರ್ಷ
• ಪಿಡಬ್ಲ್ಯೂಬಿಡಿ (ಜನರಲ್/ ಇಡಬ್ಲ್ಯೂಎಸ್) ಅಭ್ಯರ್ಥಿಗಳಿಗೆ – 10 ವರ್ಷ
• ಪಿಡಬ್ಲ್ಯೂಬಿಡಿ (ಒಬಿಸಿ) ಅಭ್ಯರ್ಥಿಗಳಿಗೆ – 13 ವರ್ಷ
• ಪಿಡಬ್ಲ್ಯೂಬಿಡಿ (ಎಸ್ಸಿ/ಎಸ್ಟಿ) ಅಭ್ಯರ್ಥಿಗಳಿಗೆ – 15 ವರ್ಷ
ವೇತನ :
ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ ರೂ. 36,290 ರಿಂದ ರೂ. 1,00,865 ಶ್ರೇಣಿಯಲ್ಲಿ ವೇತನ ನೀಡಲಾಗುತ್ತದೆ.
ಆಯ್ಕೆ ವಿಧಾನ :
• ಪ್ರಿಲಿಮಿನರಿ ಪರೀಕ್ಷೆ (ಆನ್‌ಲೈನ್)
• ಮುಖ್ಯ ಪರೀಕ್ಷೆ (ಆನ್‌ಲೈನ್)
• ಪ್ರಾದೇಶಿಕ ಭಾಷಾ ಪರೀಕ್ಷೆ
• ದಾಖಲೆಗಳ ಪರಿಶೀಲನೆ
ಪ್ರಿಲಿಮಿನರಿ ಪರೀಕ್ಷಾ ಮಾದರಿ –
| Name of Test | No. of Questions | Maximum Marks | Duration |
| English Language | 30 | 30 | 20 Minutes |
| Reasoning Ability | 35 | 35 | 20 Minutes |
| Quantitative Aptitude | 35 | 35 | 20 Minutes |
| Total | 100 | 100 | 60 Minutes |
ಪ್ರಿಲಿಮಿನರಿ ಪರೀಕ್ಷಾ ಕೇಂದ್ರಗಳು – ಬೆಳಗಾವಿ, ಬೆಂಗಳೂರು, ಹುಬ್ಬಳ್ಳಿ/ಧಾರವಾಡ, ಕಲಬುರಗಿ, ಮಂಗಳೂರು, ಮೈಸೂರು, ಶಿವಮೊಗ್ಗ, ಉಡುಪಿ
ಮುಖ್ಯ ಪರೀಕ್ಷಾ ಮಾದರಿ –
| Name of Test | No. of Questions | Maximum Marks | Duration |
| Test of Reasoning | 40 | 40 | 30 Minutes |
| Test of English Language | 40 | 40 | 30 Minutes |
| Test of Numarical Ability | 40 | 40 | 30 Minutes |
| Test of General Awareness | 40 | 40 | 15 Minutes |
| Test of Computer Knowledge | 40 | 40 | 15 Minutes |
| Total | 200 | 200 | 120 Minutes |
ಮುಖ್ಯ ಪರೀಕ್ಷಾ ಕೇಂದ್ರಗಳು – ಬೆಂಗಳೂರು, ಹುಬ್ಬಳ್ಳಿ/ಧಾರವಾಡ
ಉದ್ಯೋಗ ಮಾಹಿತಿ : ಕರ್ನಾಟಕ ಲೋಕಾಯುಕ್ತ ಸಂಸ್ಥೆಯಲ್ಲಿ ನೇಮಕಾತಿ 2026
ಅರ್ಜಿ ಸಲ್ಲಿಕೆಯ ವಿಧಾನ :
ಅಭ್ಯರ್ಥಿಯು ಈ ಹುದ್ದೆಗೆ ಆನ್‌ಲೈನ್ ಮೂಲಕ ಅರ್ಜಿಗಳನ್ನು ಸಲ್ಲಿಸಬೇಕು.
ಹಂತ 1 : ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸುವ ಮೊದಲು ಇಲಾಖೆ ಹೊರಡಿಸಿರುವ ಅಧಿಸೂಚನೆಯನ್ನು ಗಮನವಿಟ್ಟು ಓದಿ ಅರ್ಜಿ ಸಲ್ಲಿಸಲು ಅಗತ್ಯವಿರುವ ದಾಖಲೆಗಳನ್ನು ಸಿದ್ಧಪಡಿಸಿಕೊಂಡು ನಂತರ ಅರ್ಜಿಯನ್ನು ಸಲ್ಲಿಸಬೇಕು.
ಹಂತ 2 : ಇಲಾಖೆಯ ವೆಬ್‌ಸೈಟ್ ಗೆ ಭೇಟಿ ನೀಡಿ ಅಥವಾ ಈ ಕೆಳಗಡೆ ನೀಡಲಾದ ಅಪ್ಲೈ ಆನ್‌ಲೈನ್ ಲಿಂಕ್ ಮೇಲೆ ಕ್ಲಿಕ್ ಮಾಡಿ ಅಪ್ಲಿಕೇಷನ್ ತೆರೆದುಕೊಳ್ಳಿ.
ಹಂತ 3 : ಅಪ್ಲಿಕೇಷನ್ ನಲ್ಲಿ ತಿಳಿಸಿರುವಂತಹ ಎಲ್ಲಾ ಮಾಹಿತಿಯನ್ನು (ಉದಾಹರಣೆಗೆ ಅಭ್ಯರ್ಥಿಯ ಹೆಸರು, ವಿಳಾಸ, ವಿದ್ಯಾರ್ಹತೆ, ಮೊಬೈಲ್ ಸಂಖ್ಯೆ ಇತ್ಯಾದಿ) ಭರ್ತಿ ಮಾಡಿ, ಮುಂದಿನ ಹಂತಕ್ಕೆ ತೆರಳುವ ಮುನ್ನ ಪುನಃ ಒಮ್ಮೆ ಪರಿಶೀಲಿಸಿ.
ಹಂತ 4 : ಅಪ್ಲಿಕೇಷನ್ ನಲ್ಲಿ ಯಾವುದೇ ಪ್ರಮಾಣ ಪತ್ರ/ ದಾಖಲೆಗಳನ್ನು ಅಪ್ಲೋಡ್ ಮಾಡಲು ಸೂಚಿಸಿದ್ದರೆ, ಅವುಗಳನ್ನು ಸ್ಕ್ಯಾನ್ ಮಾಡಿ ಅಪ್ಲೋಡ್ ಮಾಡಿ (ಅಗತ್ಯವಿದ್ದರೆ ಮಾತ್ರ).
ಹಂತ 5 : ಕೊನೆಯದಾಗಿ, ಅಭ್ಯರ್ಥಿಗೆ ಅರ್ಜಿ ಶುಲ್ಕ ಪಾವತಿಸಲು ಸೂಚಿಸಿದ್ದರೆ, ಶುಲ್ಕ ಪಾವತಿಸಿ ಅರ್ಜಿ ಸಲ್ಲಿಕೆ ಪೂರ್ಣಗೊಳಿಸಿ.
ನಿಗದಿತ ಅರ್ಜಿ ಶುಲ್ಕದ ವಿವರ :
• ಎಸ್ಸಿ, ಎಸ್ಟಿ, ಪಿಡಬ್ಲ್ಯೂಬಿಡಿ, ಮಾಜಿ ಸೈನಿಕ – ಅರ್ಜಿ ಶುಲ್ಕ ಇರುವುದಿಲ್ಲ
• ಉಳಿದ ಅಭ್ಯರ್ಥಿಗಳಿಗೆ – ರೂ. 850
ಶುಲ್ಕ ಪಾವತಿಸುವ ವಿಧಾನ :
ನಿಗದಿಪಡಿಸಿದ ಶುಲ್ಕವನ್ನು ಆನ್‌ಲೈನ್‌ನಲ್ಲಿ ಡೆಬಿಟ್ ಕಾರ್ಡ್, ಕ್ರೆಡಿಟ್ ಕಾರ್ಡ್, ನೆಟ್ ಬ್ಯಾಂಕಿಂಗ್ ಮೂಲಕ ಪಾವತಿಸಬಹುದು.
ಅರ್ಜಿಯನ್ನು ಸಲ್ಲಿಸಲು ನಿಗದಿಪಡಿಸಿರುವ ದಿನಾಂಕದ ವಿವರ :
• ಅರ್ಜಿ ಸಲ್ಲಿಕೆಗೆ ಪ್ರಾರಂಭದ ದಿನಾಂಕ : ಜುಲೈ 18, 2026
• ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ : ಆಗಸ್ಟ್ 07, 2026
• ಆನ್‌ಲೈನ್ ಪರೀಕ್ಷೆ – Phase l ದಿನಾಂಕ : ಆಗಸ್ಟ್ 27, 2026
• ಆನ್‌ಲೈನ್ ಪರೀಕ್ಷೆ – Phase ll ದಿನಾಂಕ : ಅಕ್ಟೋಬರ್ 30, 2026
National Insurance Company Limited Recruitment 2026 : Important Links
| NOTIFICATION | CLICK HERE |
| APPLY ONLINE | CLICK HERE |
| Telegram Join Link | Click Here |
| WhatsApp Group Link | Click Here |
ಕೊನೆಯ ಪದಗಳು : ನಾವು ನೀಡಿದ ಉದ್ಯೋಗ ಮಾಹಿತಿಯನ್ನು ನೀವು ಇಷ್ಟಪಡುತ್ತೀರಿ ಎಂದು ಭಾವಿಸುತ್ತೇವೆ. ಈ ಉದ್ಯೋಗ ಮಾಹಿತಿ ನಿಮಗೆ ಇಷ್ಟವಾಗಿದ್ದರೆ ನಿಮ್ಮ ಸ್ನೇಹಿತರಿಗೆ ಶೇರ್ ಮಾಡಲು ಮರೆಯದಿರಿ.