Post Office Recruitment 2023 : ಭಾರತೀಯ ಅಂಚೆ ಇಲಾಖೆಯಿಂದ ಕ್ರೀಡಾ ಕೋಟಾದಡಿ ಖಾಲಿಯಿರುವ ಹುದ್ದೆಗಳ ಭರ್ತಿಗೆ ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಹುದ್ದೆಗಳ ಭರ್ತಿಗೆ ಸಂಬಂಧಿಸಿದಂತೆ ಹುದ್ದೆಗಳ ಸಂಖ್ಯೆ, ಕರ್ತವ್ಯ ಸ್ಥಳ, ವಯೋಮಾನ, ವೇತನ, ಅರ್ಜಿ ಸಲ್ಲಿಕೆ ವಿಧಾನ ಹಾಗೂ ಇತರೆ ಮಾಹಿತಿಯನ್ನು ಈ ಕೆಳಗಡೆ ವಿವರವಾಗಿ ನೀಡಲಾಗಿದೆ ಪೂರ್ತಿ ಓದಿ.
Post Office Recruitment 2023 : Details of Vacancies
ಹುದ್ದೆ : ಪೋಸ್ಟಲ್ ಅಸಿಸ್ಟೆಂಟ್, ಸಾರ್ಟಿಂಗ್ ಅಸಿಸ್ಟೆಂಟ್, ಪೋಸ್ಟಮ್ಯಾನ್, ಮೇಲ್ ಗಾರ್ಡ್, ಮಲ್ಟಿ ಟಾಸ್ಕಿಂಗ್ ಸ್ಟಾಫ್
ಕರ್ತವ್ಯ ಸ್ಥಳ : ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳು ಭಾರತದೆಲ್ಲೆಡೆ ಕರ್ತವ್ಯ ನಿರ್ವಹಿಸಬೇಕು.
ಖಾಲಿಯಿರುವ ಹುದ್ದೆಗಳ ಸಂಖ್ಯೆ : ಭಾರತೀಯ ಅಂಚೆ ಇಲಾಖೆಯಿಂದ ಒಟ್ಟು 1899 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ. ಅದರಲ್ಲಿ ಕರ್ನಾಟಕ ಅಂಚೆಯಲ್ಲಿ 94 ಹುದ್ದೆಗಳು ಖಾಲಿ ಇದೆ.
ಹುದ್ದೆ | ಹುದ್ದೆಗಳ ಸಂಖ್ಯೆ | ವೇತನ |
ಪೋಸ್ಟಲ್ ಅಸಿಸ್ಟೆಂಟ್ | 598 | 25,500-81,100 |
ಸಾರ್ಟಿಂಗ್ ಅಸಿಸ್ಟೆಂಟ್ | 143 | 25,500-81,100 |
ಪೋಸ್ಟಮ್ಯಾನ್ | 585 | 21,700-69,100 |
ಮೇಲ್ ಗಾರ್ಡ್ | 3 | 21,700-69,100 |
ಮಲ್ಟಿ ಟಾಸ್ಕಿಂಗ್ ಸ್ಟಾಫ್ | 570 | 18,000-56,900 |
ಶೈಕ್ಷಣಿಕ ಅರ್ಹತೆ :
• ಪೋಸ್ಟಲ್ ಅಸಿಸ್ಟೆಂಟ್, ಸಾರ್ಟಿಂಗ್ ಅಸಿಸ್ಟೆಂಟ್ – ಪದವಿ ಶೈಕ್ಷಣಿಕ ಅರ್ಹತೆ ಜೊತೆಗೆ ಕಂಪ್ಯೂಟರ್ನಲ್ಲಿ ಕೆಲಸದ ಜ್ಞಾನ ಹೊಂದಿರಬೇಕು.
• ಪೋಸ್ಟಮ್ಯಾನ್, ಮೇಲ್ ಗಾರ್ಡ್ – 12ನೇ ತರಗತಿ ಜೊತೆಗೆ ಕಂಪ್ಯೂಟರ್ನಲ್ಲಿ ಕೆಲಸದ ಜ್ಞಾನ ಹೊಂದಿರಬೇಕು ಹಾಗೂ ವಾಹನ ಚಾಲನಾ ಪರವಾನಿಗೆ ಹೊಂದಿರಬೇಕು.
• ಮಲ್ಟಿ ಟಾಸ್ಕಿಂಗ್ ಸ್ಟಾಫ್ – 10ನೇ ತರಗತಿ ಶೈಕ್ಷಣಿಕ ಅರ್ಹತೆ ಹೊಂದಿರಬೇಕು.
ಉದ್ಯೋಗ ಮಾಹಿತಿ : ಕೆಎಂಎಫ್ ಜಿಲ್ಲಾ ಹಾಲು ಉತ್ಪಾದಕರ ಒಕ್ಕೂಟದಲ್ಲಿ ನೇಮಕಾತಿ
ವಯೋಮಾನ : ದಿನಾಂಕ 09/12/2023ಕ್ಕೆ
ಹುದ್ದೆ | ವಯೋಮಾನ |
ಪೋಸ್ಟಲ್ ಅಸಿಸ್ಟೆಂಟ್ | 18-27 ವರ್ಷ |
ಸಾರ್ಟಿಂಗ್ ಅಸಿಸ್ಟೆಂಟ್ | 18-27 ವರ್ಷ |
ಪೋಸ್ಟಮ್ಯಾನ್ | 18-27 ವರ್ಷ |
ಮೇಲ್ ಗಾರ್ಡ್ | 18-27 ವರ್ಷ |
ಮಲ್ಟಿ ಟಾಸ್ಕಿಂಗ್ ಸ್ಟಾಫ್ | 18-25 ವರ್ಷ |
ವಯೋಮಿತಿ ಸಡಿಲಿಕೆ :
ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಅಭ್ಯರ್ಥಿಗಳಿಗೆ – 05 ವರ್ಷ
ಆಯ್ಕೆ ವಿಧಾನ : ಹುದ್ದೆಗೆ ನಿಗದಿಪಡಿಸಿದ ಶೈಕ್ಷಣಿಕ ಅರ್ಹತೆ, ಕ್ರೀಡಾ ಅರ್ಹತೆಯ ಆಧಾರದ ಮೇಲೆ ಮೆರಿಟ್ ಲಿಸ್ಟ್ ಸಿದ್ದಪಡಿಸಿ ಹುದ್ದೆಗೆ ನೇಮಕ ಮಾಡಲಾಗುವುದು.
ಅರ್ಜಿ ಸಲ್ಲಿಕೆಯ ವಿಧಾನ : ಅಭ್ಯರ್ಥಿಯು ಈ ಹುದ್ದೆಗೆ ಆನ್ಲೈನ್ ಮೂಲಕ ಅರ್ಜಿಗಳನ್ನು ಸಲ್ಲಿಸಬೇಕು.
ಹಂತ 1 : ಆನ್ಲೈನ್ ಮೂಲಕ ಅರ್ಜಿ ಸಲ್ಲಿಸುವ ಮೊದಲು ಇಲಾಖೆ ಹೊರಡಿಸಿರುವ ಅಧಿಸೂಚನೆಯನ್ನು ಗಮನವಿಟ್ಟು ಓದಿ ಅರ್ಜಿ ಸಲ್ಲಿಸಲು ಅಗತ್ಯವಿರುವ ದಾಖಲೆಗಳನ್ನು ಸಿದ್ಧಪಡಿಸಿಕೊಂಡು ನಂತರ ಅರ್ಜಿಯನ್ನು ಸಲ್ಲಿಸಬೇಕು.
ಹಂತ 2 : ಇಲಾಖೆಯ ವೆಬ್ಸೈಟ್ ಗೆ ಭೇಟಿ ನೀಡಿ ಅಥವಾ ಈ ಕೆಳಗಡೆ ನೀಡಲಾದ ಅಪ್ಲೈ ಆನ್ಲೈನ್ ಲಿಂಕ್ ಮೇಲೆ ಕ್ಲಿಕ್ ಮಾಡಿ ಅಪ್ಲಿಕೇಷನ್ ತೆರೆದುಕೊಳ್ಳಿ.
ಹಂತ 3 : ಅಪ್ಲಿಕೇಷನ್ ನಲ್ಲಿ ತಿಳಿಸಿರುವಂತಹ ಎಲ್ಲಾ ಮಾಹಿತಿಯನ್ನು (ಉದಾಹರಣೆಗೆ ಅಭ್ಯರ್ಥಿಯ ಹೆಸರು, ವಿಳಾಸ, ವಿದ್ಯಾರ್ಹತೆ, ಮೊಬೈಲ್ ಸಂಖ್ಯೆ ಇತ್ಯಾದಿ) ಭರ್ತಿ ಮಾಡಿ, ಮುಂದಿನ ಹಂತಕ್ಕೆ ತೆರಳುವ ಮುನ್ನ ಪುನಃ ಒಮ್ಮೆ ಪರಿಶೀಲಿಸಿ.
ಹಂತ 4 : ಅಪ್ಲಿಕೇಷನ್ ನಲ್ಲಿ ಯಾವುದೇ ಪ್ರಮಾಣ ಪತ್ರ/ ದಾಖಲೆಗಳನ್ನು ಅಪ್ಲೋಡ್ ಮಾಡಲು ಸೂಚಿಸಿದ್ದರೆ, ಅವುಗಳನ್ನು ಸ್ಕ್ಯಾನ್ ಮಾಡಿ ಅಪ್ಲೋಡ್ ಮಾಡಿ (ಅಗತ್ಯವಿದ್ದರೆ ಮಾತ್ರ).
ಹಂತ 5 : ಕೊನೆಯದಾಗಿ, ಅಭ್ಯರ್ಥಿಗೆ ಅರ್ಜಿ ಶುಲ್ಕ ಪಾವತಿಸಲು ಸೂಚಿಸಿದ್ದರೆ, ಶುಲ್ಕ ಪಾವತಿಸಿ ಅರ್ಜಿ ಸಲ್ಲಿಕೆ ಪೂರ್ಣಗೊಳಿಸಿ.
ನಿಗದಿತ ಅರ್ಜಿ ಶುಲ್ಕದ ವಿವರ :
• ಪ.ಜಾತಿ, ಪ.ಪಂ., ಪಿಡಬ್ಲ್ಯೂಡಿ, ಮಹಿಳಾ ಅಭ್ಯರ್ಥಿಗಳಿಗೆ ಶುಲ್ಕ ವಿನಾಯಿತಿ ನೀಡಲಾಗಿದೆ.
• ಉಳಿದ ಅಭ್ಯರ್ಥಿಗಳು ರೂ. 100
ಶುಲ್ಕ ಪಾವತಿಸುವ ವಿಧಾನ : ಅಭ್ಯರ್ಥಿಗಳು ಆನ್ಲೈನ್ನಲ್ಲಿ ಡೆಬಿಟ್ ಕಾರ್ಡ್, ಕ್ರೆಡಿಟ್ ಕಾರ್ಡ್, ನೆಟ್ ಬ್ಯಾಂಕಿಂಗ್ ಮೂಲಕ ಶುಲ್ಕ ಪಾವತಿಸಬಹುದು.
ಅರ್ಜಿಯನ್ನು ಸಲ್ಲಿಸಲು ನಿಗದಿಪಡಿಸಿದ ದಿನಾಂಕದ ವಿವರ :
ಅರ್ಜಿ ಸಲ್ಲಿಸಲು ಪ್ರಾರಂಭದ ದಿನಾಂಕ : ನವೆಂಬರ್ 10, 2023
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : ಡಿಸೆಂಬರ್ 09, 2023
ಶುಲ್ಕ ಪಾವತಿಸಲು ಕೊನೆಯ ದಿನಾಂಕ : ಡಿಸೆಂಬರ್ 09, 2023
India Post Recruitment 2023 : Important Links
NOTIFICATION | CLICK HERE |
APPLY ONLINE | CLICK HERE |
Telegram Join Link | Click Here |
WhatsApp Channel Link | Click Here |
ಕೊನೆಯ ಪದಗಳು : ನಾವು ನೀಡಿದ ಉದ್ಯೋಗ ಮಾಹಿತಿಯನ್ನು ನೀವು ಇಷ್ಟಪಡುತ್ತೀರಿ ಎಂದು ಭಾವಿಸುತ್ತೇವೆ. ಈ ಉದ್ಯೋಗ ಮಾಹಿತಿ ನಿಮಗೆ ಇಷ್ಟವಾಗಿದ್ದರೆ ನಿಮ್ಮ ಸ್ನೇಹಿತರಿಗೆ ಶೇರ್ ಮಾಡಲು ಮರೆಯದಿರಿ.