ಭಾರತೀಯ ರೈಲ್ವೆಯಲ್ಲಿ ನೇಮಕಾತಿ 2026 – RRB Isolated Categories Recruitment 2026

RRB Isolated Categories Recruitment 2026

RRB Isolated Categories Recruitment 2026 : ಭಾರತೀಯ ರೈಲ್ವೆಯಲ್ಲಿ ಅಗತ್ಯವಿರುವ ಚೀಫ್ ಲಾ ಅಸಿಸ್ಟಂಟ್, ಪಬ್ಲಿಕ್ ಪ್ರಾಸಿಕ್ಯೂಟರ್, ಸೀನಿಯರ್ ಪಬ್ಲಿಸಿಟಿ ಇನ್ಸ್‌ಪೆಕ್ಟರ್, ಜೂನಿಯರ್ ಟ್ರಾನ್ಸ್ಲೇಟರ್/ ಹಿಂದಿ ಸೇರಿದಂತೆ ವಿವಿಧ ಹುದ್ದೆಗಳ ಭರ್ತಿಗೆ ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಯನ್ನು ಆಹ್ವಾನಿಸಲಾಗಿದೆ. ಹುದ್ದೆಗಳ ಭರ್ತಿಗೆ ಸಂಬಂಧಿಸಿದಂತೆ ಹುದ್ದೆಗಳ ಸಂಖ್ಯೆ, ಕರ್ತವ್ಯ ಸ್ಥಳ, ಶೈಕ್ಷಣಿಕ ಅರ್ಹತೆ, ವೇತನ, ಆಯ್ಕೆ ವಿಧಾನ ಹಾಗೂ ಇತರೆ ಮಾಹಿತಿಯನ್ನು ಈ ಕೆಳಗಡೆ ವಿವರವಾಗಿ ನೀಡಲಾಗಿದೆ ಪೂರ್ತಿ ಓದಿ.

RRB Isolated Categories Recruitment 2026 : Details of Vacancies

ಹುದ್ದೆ :

ಚೀಫ್ ಲಾ ಅಸಿಸ್ಟಂಟ್, ಪಬ್ಲಿಕ್ ಪ್ರಾಸಿಕ್ಯೂಟರ್, ಸೀನಿಯರ್ ಪಬ್ಲಿಸಿಟಿ ಇನ್ಸ್‌ಪೆಕ್ಟರ್, ಜೂನಿಯರ್ ಟ್ರಾನ್ಸ್ಲೇಟರ್/ ಹಿಂದಿ, ಸ್ಟಾಫ್ ಅಂಡ್ ವೆಲ್ಫೇರ್ ಇನ್ಸ್‌ಪೆಕ್ಟರ್, ಸೈಂಟಿಫಿಕ್ ಅಸಿಸ್ಟಂಟ್ (ಟ್ರೈನಿಂಗ್), ಲ್ಯಾಬ್ ಅಸಿಸ್ಟಂಟ್ ಗ್ರೇಡ್ 3 (ಕೆಮಿಸ್ಟ್ & ಮೆಟಲರ್ಜಿಕಲ್)

ಕರ್ತವ್ಯ ಸ್ಥಳ :

ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳು ಭಾರತದೆಲ್ಲೆಡೆ ಕರ್ತವ್ಯ ನಿರ್ವಹಿಸಬೇಕು.

ಖಾಲಿಯಿರುವ ಹುದ್ದೆಗಳ ಸಂಖ್ಯೆ :

ಒಟ್ಟು 191 ಹುದ್ದೆಗಳ ಭರ್ತಿಗೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಹುದ್ದೆಹುದ್ದೆಗಳ ಸಂಖ್ಯೆ
ಚೀಫ್ ಲಾ ಅಸಿಸ್ಟಂಟ್17
ಪಬ್ಲಿಕ್ ಪ್ರಾಸಿಕ್ಯೂಟರ್21
ಸೀನಿಯರ್ ಪಬ್ಲಿಸಿಟಿ ಇನ್ಸ್‌ಪೆಕ್ಟರ್8
ಜೂನಿಯರ್ ಟ್ರಾನ್ಸ್ಲೇಟರ್/ ಹಿಂದಿ79
ಸ್ಟಾಫ್ ಅಂಡ್ ವೆಲ್ಫೇರ್ ಇನ್ಸ್‌ಪೆಕ್ಟರ್27
ಸೈಂಟಿಫಿಕ್ ಅಸಿಸ್ಟಂಟ್ (ಟ್ರೈನಿಂಗ್)3
ಲ್ಯಾಬ್ ಅಸಿಸ್ಟಂಟ್ ಗ್ರೇಡ್ 3 (ಕೆಮಿಸ್ಟ್ & ಮೆಟಲರ್ಜಿಕಲ್)36

ನಿಗದಿಪಡಿಸಿರುವ ಶೈಕ್ಷಣಿಕ ಅರ್ಹತೆ :

  • ಚೀಫ್ ಲಾ ಅಸಿಸ್ಟಂಟ್ – ಕಾನೂನು ಪದವಿಯನ್ನು ಹೊಂದಿರಬೇಕು.
  • ಪಬ್ಲಿಕ್ ಪ್ರಾಸಿಕ್ಯೂಟರ್ – ಕಾನೂನು ವಿಷಯದಲ್ಲಿ ಪದವಿ ಪಡೆದಿರಬೇಕು.
  • ಸೀನಿಯರ್ ಪಬ್ಲಿಸಿಟಿ ಇನ್ಸ್‌ಪೆಕ್ಟರ್ – ಪದವಿ ಪಡೆದಿರಬೇಕು ಹಾಗೂ ಪಬ್ಲಿಕ್ ರಿಲೆಷನ್ಸ್/ ಜಾಹೀರಾತು / ಜರ್ನಲಿಸಂ / ಮಾಸ್ ಕಮ್ಯೂನಿಕೇಷನ್ ವಿಷಯಗಳಲ್ಲಿ ಡಿಪ್ಲೊಮಾ ಪಡೆದಿರಬೇಕು.
  • ಜೂನಿಯರ್ ಟ್ರಾನ್ಸ್ಲೇಟರ್/ ಹಿಂದಿ – ಸ್ನಾತಕೋತ್ತರ ಪದವಿ ಹೊಂದಿರಬೇಕು.
  • ಸ್ಟಾಫ್ ಅಂಡ್ ವೆಲ್ಫೇರ್ ಇನ್ಸ್‌ಪೆಕ್ಟರ್ – ಪದವಿ ಮತ್ತು ಡಿಪ್ಲೊಮಾ ಇನ್ ಲೇಬರ್/ ಸೋಷಿಯಲ್ ವೆಲ್ಫೇರ್ ಅಥವಾ ಡಿಪ್ಲೊಮಾ ಇನ್ ಲೇಬರ್ ಲಾ ಅಥವಾ ಎಲ್.ಎಲ್.ಬಿ ವಿತ್ ಪೇಪರ್ಸ್ ಇನ್ ಲೇಬರ್ ಲಾ ಅಥವಾ ಪಿಜಿ ಡಿಪ್ಲೊಮಾ ಇನ್ ಪರ್ಸೊನೆಲ್ ಮ್ಯಾನೇಜ್ಮೆಂಟ್ ಅಥವಾ ಎಂಬಿಎ ವಿತ್ ಪೇಪರ್ಸ್ ಇನ್ ಪರ್ಸೊನೆಲ್ ಮ್ಯಾನೇಜ್ಮೆಂಟ್ ಅಥವಾ ಎಂಬಿಎ/ಹೆಚ್.ಆರ್ ಅಥವಾ ಪಿಜಿ ಡಿಪ್ಲೊಮಾ ಇನ್ ಹ್ಯೂಮನ್ ರಿಸೋರ್ಸ್ ಮ್ಯಾನೇಜ್ಮೆಂಟ್.
  • ಸೈಂಟಿಫಿಕ್ ಅಸಿಸ್ಟಂಟ್ (ಟ್ರೈನಿಂಗ್) – ಮನೋವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿ ಪಡೆದಿರಬೇಕು.
  • ಲ್ಯಾಬ್ ಅಸಿಸ್ಟಂಟ್ ಗ್ರೇಡ್ 3 (ಕೆಮಿಸ್ಟ್ & ಮೆಟಲರ್ಜಿಕಲ್) – 12ನೇ ತರಗತಿ ಅಥವಾ ತತ್ಸಮಾನ ವಿದ್ಯಾರ್ಹತೆಯನ್ನು ವಿಜ್ಞಾನ ವಿಭಾಗದಲ್ಲಿ (ಭೌತಶಾಸ್ತ್ರ ಮತ್ತು ರಸಾಯನಶಾಸ್ತ್ರ) ವಿಷಯಗಳೊಂದಿಗೆ ಹೊಂದಿರಬೇಕು.

ಉದ್ಯೋಗ ಮಾಹಿತಿ : ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಲ್ಲಿ ಮಹಿಳಾ ಮೇಲ್ವಿಚಾರಕಿಯರು ಹುದ್ದೆಗಳ ನೇಮಕಾತಿ 2026

ವಯೋಮಾನ (ದಿನಾಂಕ 01/01/2027ಕ್ಕೆ) :

ಹುದ್ದೆವಯೋಮಾನ
ಚೀಫ್ ಲಾ ಅಸಿಸ್ಟಂಟ್ಕನಿಷ್ಠ 18 ವರ್ಷ – ಗರಿಷ್ಠ 40 ವರ್ಷ
ಪಬ್ಲಿಕ್ ಪ್ರಾಸಿಕ್ಯೂಟರ್ಕನಿಷ್ಠ 18 ವರ್ಷ – ಗರಿಷ್ಠ 32 ವರ್ಷ
ಸೀನಿಯರ್ ಪಬ್ಲಿಸಿಟಿ ಇನ್ಸ್‌ಪೆಕ್ಟರ್ಕನಿಷ್ಠ 18 ವರ್ಷ – ಗರಿಷ್ಠ 33 ವರ್ಷ
ಜೂನಿಯರ್ ಟ್ರಾನ್ಸ್ಲೇಟರ್/ ಹಿಂದಿಕನಿಷ್ಠ 18 ವರ್ಷ – ಗರಿಷ್ಠ 33 ವರ್ಷ
ಸ್ಟಾಫ್ ಅಂಡ್ ವೆಲ್ಫೇರ್ ಇನ್ಸ್‌ಪೆಕ್ಟರ್ಕನಿಷ್ಠ 18 ವರ್ಷ – ಗರಿಷ್ಠ 33 ವರ್ಷ
ಸೈಂಟಿಫಿಕ್ ಅಸಿಸ್ಟಂಟ್ (ಟ್ರೈನಿಂಗ್)ಕನಿಷ್ಠ 18 ವರ್ಷ – ಗರಿಷ್ಠ 35 ವರ್ಷ
ಲ್ಯಾಬ್ ಅಸಿಸ್ಟಂಟ್ ಗ್ರೇಡ್ 3 (ಕೆಮಿಸ್ಟ್ & ಮೆಟಲರ್ಜಿಕಲ್)ಕನಿಷ್ಠ 18 ವರ್ಷ – ಗರಿಷ್ಠ 30 ವರ್ಷ

ವಯೋಮಿತಿ ಸಡಿಲಿಕೆ :

  • ಎಸ್ಸಿ, ಎಸ್ಟಿ ಅಭ್ಯರ್ಥಿಗಳಿಗೆ – 05 ವರ್ಷ
  • ಒಬಿಸಿ (ಎನ್.ಸಿ.ಎಲ್) ಅಭ್ಯರ್ಥಿಗಳಿಗೆ – 03 ವರ್ಷ
  • ಪಿಡಬ್ಲ್ಯೂಬಿಡಿ (ಯುಆರ್ & ಇಡಬ್ಲ್ಯೂಎಸ್) ಅಭ್ಯರ್ಥಿಗಳಿಗೆ – 10 ವರ್ಷ
  • ಪಿಡಬ್ಲ್ಯೂಬಿಡಿ (ಒಬಿಸಿ-ಎನ್.ಸಿ.ಎಲ್) ಅಭ್ಯರ್ಥಿಗಳಿಗೆ – 13 ವರ್ಷ
  • ಪಿಡಬ್ಲ್ಯೂಬಿಡಿ (ಎಸ್ಸಿ/ಎಸ್ಟಿ) ಅಭ್ಯರ್ಥಿಗಳಿಗೆ – 15 ವರ್ಷ

ವೇತನ :

ಹುದ್ದೆವೇತನ
ಚೀಫ್ ಲಾ ಅಸಿಸ್ಟಂಟ್ರೂ. 44,900/-
ಪಬ್ಲಿಕ್ ಪ್ರಾಸಿಕ್ಯೂಟರ್ರೂ. 44,900/-
ಸೀನಿಯರ್ ಪಬ್ಲಿಸಿಟಿ ಇನ್ಸ್‌ಪೆಕ್ಟರ್ರೂ. 35,400/-
ಜೂನಿಯರ್ ಟ್ರಾನ್ಸ್ಲೇಟರ್/ ಹಿಂದಿರೂ. 35,400/-
ಸ್ಟಾಫ್ ಅಂಡ್ ವೆಲ್ಫೇರ್ ಇನ್ಸ್‌ಪೆಕ್ಟರ್ರೂ. 35,400/-
ಸೈಂಟಿಫಿಕ್ ಅಸಿಸ್ಟಂಟ್ (ಟ್ರೈನಿಂಗ್)ರೂ. 35,400/-
ಲ್ಯಾಬ್ ಅಸಿಸ್ಟಂಟ್ ಗ್ರೇಡ್ 3 (ಕೆಮಿಸ್ಟ್ & ಮೆಟಲರ್ಜಿಕಲ್)ರೂ. 19,900/-

ಆಯ್ಕೆ ವಿಧಾನ :

  • ಕಂಪ್ಯೂಟರ್ ಬೇಸ್ಡ್ ಟೆಸ್ಟ್ (ಸಿಬಿಟಿ)
  • ಟ್ರಾನ್ಸ್ಲೇಷನ್ ಟೆಸ್ಟ್ (ಅನ್ವಯಿಸಿದ್ದಲ್ಲಿ)
  • ದಾಖಲೆಗಳ ಪರಿಶೀಲನೆ
  • ವೈದ್ಯಕೀಯ ಪರೀಕ್ಷೆ

ಉದ್ಯೋಗ ಮಾಹಿತಿ : ಜಿಲ್ಲಾ ನ್ಯಾಯಾಲಯದಲ್ಲಿ ಪಿಯೋನ್ ಹುದ್ದೆಗಳ ನೇಮಕಾತಿ 2026

ಅರ್ಜಿ ಸಲ್ಲಿಕೆಯ ವಿಧಾನ :

ಅಭ್ಯರ್ಥಿಯು ಈ ಹುದ್ದೆಗೆ ಆನ್‌ಲೈನ್‌ ಮೂಲಕ ಅರ್ಜಿಗಳನ್ನು ಸಲ್ಲಿಸಬೇಕು.
ಹಂತ 1 : ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸುವ ಮೊದಲು ಇಲಾಖೆ ಹೊರಡಿಸಿರುವ ಅಧಿಸೂಚನೆಯನ್ನು ಗಮನವಿಟ್ಟು ಓದಿ ಅರ್ಜಿ ಸಲ್ಲಿಸಲು ಅಗತ್ಯವಿರುವ ದಾಖಲೆಗಳನ್ನು ಸಿದ್ಧಪಡಿಸಿಕೊಂಡು ನಂತರ ಅರ್ಜಿಯನ್ನು ಸಲ್ಲಿಸಬೇಕು.
ಹಂತ 2 : ಇಲಾಖೆಯ ವೆಬ್‌ಸೈಟ್ ಗೆ ಭೇಟಿ ನೀಡಿ ಅಥವಾ ಈ ಕೆಳಗಡೆ ನೀಡಲಾದ ಅಪ್ಲೈ ಆನ್‌ಲೈನ್‌ ಲಿಂಕ್ ಮೇಲೆ ಕ್ಲಿಕ್ ಮಾಡಿ ಅಪ್ಲಿಕೇಷನ್ ತೆರೆದುಕೊಳ್ಳಿ.
ಹಂತ 3 : ಅಪ್ಲಿಕೇಷನ್ ನಲ್ಲಿ ತಿಳಿಸಿರುವಂತಹ ಎಲ್ಲಾ ಮಾಹಿತಿಯನ್ನು (ಉದಾಹರಣೆಗೆ ಅಭ್ಯರ್ಥಿಯ ಹೆಸರು, ವಿಳಾಸ, ವಿದ್ಯಾರ್ಹತೆ, ಮೊಬೈಲ್ ಸಂಖ್ಯೆ ಇತ್ಯಾದಿ) ಭರ್ತಿ ಮಾಡಿ, ಮುಂದಿನ ಹಂತಕ್ಕೆ ತೆರಳುವ ಮುನ್ನ ಪುನಃ ಒಮ್ಮೆ ಪರಿಶೀಲಿಸಿ.
ಹಂತ 4 : ಅಪ್ಲಿಕೇಷನ್ ನಲ್ಲಿ ಯಾವುದೇ ಪ್ರಮಾಣ ಪತ್ರ/ ದಾಖಲೆಗಳನ್ನು ಅಪ್ಲೋಡ್ ಮಾಡಲು ಸೂಚಿಸಿದ್ದರೆ, ಅವುಗಳನ್ನು ಸ್ಕ್ಯಾನ್ ಮಾಡಿ ಅಪ್ಲೋಡ್ ಮಾಡಿ (ಅಗತ್ಯವಿದ್ದರೆ ಮಾತ್ರ).
ಹಂತ 5 : ಕೊನೆಯದಾಗಿ, ಅಭ್ಯರ್ಥಿಗೆ ಅರ್ಜಿ ಶುಲ್ಕ ಪಾವತಿಸಲು ಸೂಚಿಸಿದ್ದರೆ, ಶುಲ್ಕ ಪಾವತಿಸಿ ಅರ್ಜಿ ಸಲ್ಲಿಕೆ ಪೂರ್ಣಗೊಳಿಸಿ.

ನಿಗದಿತ ಅರ್ಜಿ ಶುಲ್ಕದ ವಿವರ :

  • ಎಸ್ಸಿ, ಎಸ್ಟಿ, ಮಾಜಿ ಸೈನಿಕ, ಪಿಡಬ್ಲ್ಯೂಬಿಡಿ, ಮಹಿಳಾ, ಟ್ರಾನ್ಸಜೆಂಡರ್, ಅಲ್ಪಸಂಖ್ಯಾತ, ಇಬಿಸಿ ಅಭ್ಯರ್ಥಿಗಳಿಗೆ – ರೂ. 250 (CBT ಪರೀಕ್ಷೆಗೆ ಹಾಜರಾದ ನಂತರ ಅನ್ವಯವಾಗುವ ಬ್ಯಾಂಕ್ ಶುಲ್ಕಗಳನ್ನು ಕಡಿತಗೊಳಿಸಿ ರೂ. 250 ಮರುಪಾವತಿಸಲಾಗುತ್ತದೆ)
  • ಉಳಿದ ಅಭ್ಯರ್ಥಿಗಳಿಗೆ – ರೂ. 500 (CBT ಪರೀಕ್ಷೆಗೆ ಹಾಜರಾದ ನಂತರ ಬ್ಯಾಂಕ್ ಶುಲ್ಕಗಳನ್ನು ಕಡಿತಗೊಳಿಸಿ ರೂ. 400 ಮರುಪಾವತಿಸಲಾಗುತ್ತದೆ)

ಶುಲ್ಕ ಪಾವತಿಸುವ ವಿಧಾನ :

ಅಭ್ಯರ್ಥಿಗಳು ಆನ್‌ಲೈನ್‌ನಲ್ಲಿ ಡೆಬಿಟ್ ಕಾರ್ಡ್, ಕ್ರೆಡಿಟ್ ಕಾರ್ಡ್, ನೆಟ್ ಬ್ಯಾಂಕಿಂಗ್, ಯುಪಿಐ ಮೂಲಕ ಶುಲ್ಕ ಪಾವತಿಸಬಹುದು.

ಅರ್ಜಿಯನ್ನು ಸಲ್ಲಿಸಲು ನಿಗದಿಪಡಿಸಿರುವ ದಿನಾಂಕದ ವಿವರ :

  • ಅರ್ಜಿ ಸಲ್ಲಿಕೆಗೆ ಪ್ರಾರಂಭದ ದಿನಾಂಕ : ನವೆಂಬರ್ 05, 2026
  • ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ : ಡಿಸೆಂಬರ್ 04, 2026
  • ಶುಲ್ಕ ಪಾವತಿಸಲು ಕೊನೆಯ ದಿನಾಂಕ : ಡಿಸೆಂಬರ್ 06, 2026

RRB Isolated Categories Recruitment 2026 : Important Links

NOTIFICATIONCLICK HERE
APPLY ONLINE CLICK HERE
Telegram Join Link Click Here
WhatsApp Group Link Click Here

ಕೊನೆಯ ಪದಗಳು : ನಾವು ನೀಡಿದ ಉದ್ಯೋಗ ಮಾಹಿತಿಯನ್ನು ನೀವು ಇಷ್ಟಪಡುತ್ತೀರಿ ಎಂದು ಭಾವಿಸುತ್ತೇವೆ. ಈ ಉದ್ಯೋಗ ಮಾಹಿತಿ ನಿಮಗೆ ಇಷ್ಟವಾಗಿದ್ದರೆ ನಿಮ್ಮ ಸ್ನೇಹಿತರಿಗೆ ಶೇರ್ ಮಾಡಲು ಮರೆಯದಿರಿ.

WhatsApp
Telegram
Facebook

Leave a Comment