Vijayanagara Zilla Panchayat Recruitment 2023 : ರಾಷ್ಟ್ರೀಯ ಆಯುಷ್ ಅಭಿಯಾನದಡಿ ಮೇಲ್ದರ್ಜೆಗೇರಿಸಲಾದ ಸರ್ಕಾರಿ ಆಯುರ್ವೇದ ಆಸ್ಪತ್ರೆ, ಹರಪನಹಳ್ಳಿ ಮತ್ತು ಹಡಗಲಿಗಳಲ್ಲಿ ಖಾಲಿ ಇರುವ ಹುದ್ದೆಗಳನ್ನು ಗುತ್ತಿಗೆ ಆಧಾರದ ಮೇಲೆ ನೇಮಕ ಮಾಡಿಕೊಳ್ಳಲು ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಹುದ್ದೆಗಳ ಭರ್ತಿಗೆ ಸಂಬಂಧಿಸಿದಂತೆ ಕರ್ತವ್ಯ ಸ್ಥಳ, ಶೈಕ್ಷಣಿಕ ಅರ್ಹತೆ, ಅರ್ಜಿ ಸಲ್ಲಿಕೆ ದಿನಾಂಕ ಹಾಗೂ ಇತರೆ ಮಾಹಿತಿಯನ್ನು ಈ ಕೆಳಗಡೆ ವಿವರವಾಗಿ ನೀಡಲಾಗಿದೆ ಪೂರ್ತಿ ಓದಿ.
Vijayanagara Zilla Panchayat Recruitment 2023 : Details of Vacancies
ಹುದ್ದೆ : ಆಯುಷ್ ತಜ್ಞ ವೈದ್ಯರು, ಆಯುಷ್ ಔಷಧಿ ವಿತರಕರು, ಮಲ್ಟಿ ಪರ್ಪಸ್ ವರ್ಕರ್, ಮಸಾಜಿಸ್ಟ್-1 (ಪುರುಷ), ಸ್ತ್ರೀರೋಗ ಅಟೆಂಡರ್, ಕ್ಷಾರಸೂತ್ರ ಅಟೆಂಡರ್, (ಸಿಹೆಚ್ಓ) ಕಮ್ಯೂನಿಟಿ ಹೆಲ್ತ್ ಆಫೀಸರ್
ಕರ್ತವ್ಯ ಸ್ಥಳ : ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳು ವಿಜಯನಗರ ಜಿಲ್ಲೆಯಲ್ಲಿ ಕೆಲಸ ನಿರ್ವಹಿಸಬೇಕು.
ಖಾಲಿಯಿರುವ ಹುದ್ದೆಗಳ ಸಂಖ್ಯೆ : ಅಗತ್ಯವಿರುವ 09 ಹುದ್ದೆಗಳ ಭರ್ತಿಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ.
ಹುದ್ದೆ | ಹುದ್ದೆಗಳ ಸಂಖ್ಯೆ | ವೇತನ |
ಆಯುಷ್ ತಜ್ಞ ವೈದ್ಯರು | 1 | 35,000 |
ಆಯುಷ್ ಔಷಧಿ ವಿತರಕರು | 1 | 15,821 |
ಮಲ್ಟಿ ಪರ್ಪಸ್ ವರ್ಕರ್ | 2 | 10,300 |
ಮಸಾಜಿಸ್ಟ್-1 (ಪುರುಷ) | 1 | 11,356 |
ಸ್ತ್ರೀರೋಗ ಅಟೆಂಡರ್ | 1 | 11,356 |
ಕ್ಷಾರಸೂತ್ರ ಅಟೆಂಡರ್ | 1 | 11,356 |
(ಸಿಹೆಚ್ಓ) ಕಮ್ಯೂನಿಟಿ ಹೆಲ್ತ್ ಆಫೀಸರ್ | 2 | 40,000 |
ಶೈಕ್ಷಣಿಕ ಅರ್ಹತೆ :
• ಆಯುಷ್ ತಜ್ಞ ವೈದ್ಯರು – ಬಿ.ಎ.ಎಂ.ಎಸ್ ಹಾಗೂ ಎಂ.ಎಸ್ (ಶಲ್ಯ ತಂತ್ರ), ಎಂ.ಡಿ (ಪಂಚಕರ್ಮ/ ಕಾಯ ಚಿಕಿತ್ಸಾ)
• ಆಯುಷ್ ಔಷಧಿ ವಿತರಕರು – ಎಸ್.ಎಸ್.ಎಲ್.ಸಿ ಮತ್ತು ಔಷಧಿ ವಿಜ್ಞಾನದಲ್ಲಿ ಡಿಪ್ಲೋಮ, ಕಂಪ್ಯೂಟರ್ ಜ್ಞಾನ ಕಡ್ಡಾಯ.
• ಮಲ್ಟಿ ಪರ್ಪಸ್ ವರ್ಕರ್ – ಕನಿಷ್ಠ ಎಸ್.ಎಸ್.ಎಲ್.ಸಿ ಮತ್ತು ಕಂಪ್ಯೂಟರ್ ಜ್ಞಾನ ಕಡ್ಡಾಯ.
• ಮಸಾಜಿಸ್ಟ್-1 (ಪುರುಷ) – ಕನಿಷ್ಠ 7ನೇ ತರಗತಿ ವಿದ್ಯಾರ್ಹತೆ ಹಾಗೂ ಸರ್ಕಾರದಿಂದ ಆಯೋಜಿಸಿದ ಮಸಾಜಿಸ್ಟ್ ತರಬೇತಿ ಪ್ರಮಾಣ ಪತ್ರ ಹೊಂದಿರತಕ್ಕದ್ದು. ಹಾಗೂ ಆಯುಷ್ ಆಸ್ಪತ್ರೆ/ ಚಿಕಿತ್ಸಾಲಯಗಳಲ್ಲಿ ಕರ್ತವ್ಯ ನಿರ್ವಹಿಸಿದ ಅನುಭವ ಹೊಂದಿರತಕ್ಕದ್ದು.
• ಸ್ತ್ರೀರೋಗ ಅಟೆಂಡರ್ – ಕನಿಷ್ಠ 10ನೇ ತರಗತಿ ವಿದ್ಯಾರ್ಹತೆ ಹಾಗೂ ಆಯುಷ್ ಆಸ್ಪತ್ರೆ/ ಚಿಕಿತ್ಸಾಲಯಗಳಲ್ಲಿ ಸ್ತ್ರೀರೋಗ ವಿಭಾಗದಲ್ಲಿ ಕರ್ತವ್ಯ ನಿರ್ವಹಿಸಿದ ಅನುಭವ ಹೊಂದಿರತಕ್ಕದ್ದು.
• ಕ್ಷಾರಸೂತ್ರ ಅಟೆಂಡರ್ – ಕನಿಷ್ಠ 10ನೇ ತರಗತಿ ವಿದ್ಯಾರ್ಹತೆ ಹಾಗೂ ಆಯುಷ್ ಆಸ್ಪತ್ರೆ/ ಚಿಕಿತ್ಸಾಲಯಗಳಲ್ಲಿ ಕ್ಷಾರಸೂತ್ರ ಕರ್ತವ್ಯ ನಿರ್ವಹಿಸಿದ ಅನುಭವ ಹೊಂದಿರತಕ್ಕದ್ದು.
• ಸಿಹೆಚ್ಓ (ಕಮ್ಯೂನಿಟಿ ಹೆಲ್ತ್ ಆಫೀಸರ್) – ಬಿ.ಎ.ಎಂ.ಎಸ್/ ಬಿ.ಯು.ಎಂ.ಎಸ್/ ಬಿ.ಹೆಚ್.ಎಂ.ಎಸ್, ಪದವಿ ಮುಗಿಸಿರಬೇಕು.
ಆಯ್ಕೆ ವಿಧಾನ : ಒಂದು ವರ್ಷದ ಅವಧಿಗೆ ಗುತ್ತಿಗೆ ಆಧಾರದ ಮೇಲೆ ತಾತ್ಕಾಲಿಕವಾಗಿ ಹುದ್ದೆಗಳಿಗೆ ನೇಮಕ ಮಾಡಲಾಗುವುದು.
ಉದ್ಯೋಗ ಮಾಹಿತಿ : ಜಿಲ್ಲಾ ನ್ಯಾಯಾಲಯದಲ್ಲಿ ನೇರ ನೇಮಕಾತಿ 2023
ಅರ್ಜಿ ಸಲ್ಲಿಕೆಯ ವಿಧಾನ : ಅಭ್ಯರ್ಥಿಯು ಆಫ್‌ಲೈನ್ ಮೂಲಕ ಅರ್ಜಿ ಸಲ್ಲಿಸುವ ಮೊದಲು ಇಲಾಖೆ ಹೊರಡಿಸಿರುವ ಪ್ರಕಟಣೆಯನ್ನು ಗಮನವಿಟ್ಟು ಓದಿ ಅರ್ಜಿ ಸಲ್ಲಿಸಲು ಅಗತ್ಯವಿರುವ ದಾಖಲೆಗಳನ್ನು ಸಿದ್ಧಪಡಿಸಿಕೊಂಡು ನಂತರ ಅರ್ಜಿಯನ್ನು ಸಲ್ಲಿಸಬೇಕು.
ಆಸಕ್ತ ಅರ್ಹ ಅಭ್ಯರ್ಥಿಗಳು ತಮ್ಮ ಸ್ವವಿವರಗಳೊಂದಿಗೆ ವಿದ್ಯಾರ್ಹತೆ, ಜಾತಿ ಪ್ರಮಾಣ ಪತ್ರ ಹಾಗೂ ಇತರೆ ಜೆರಾಕ್ಸ್ ದಾಖಲಾತಿಗಳೊಂದಿಗೆ ಅರ್ಜಿಯನ್ನು ಈ ಕೆಳಗಡೆ ನೀಡಲಾದ ಕಚೇರಿಯ ವಿಳಾಸಕ್ಕೆ ಸಲ್ಲಿಸಬೇಕು.
ಅರ್ಜಿ ಸಲ್ಲಿಸುವ ವಿಳಾಸ : ಜಿಲ್ಲಾ ಆಯುಷ್ ಕಛೇರಿ,
ರೂಮ್ ನಂಬರ್ 6, ಹಳೇ ಜಿಲ್ಲಾಧಿಕಾರಿಗಳ ಕಛೇರಿ, ಅಮರಾವತಿ ಪ್ರವಾಸಿ ಮಂದಿರ (ಐ.ಬಿ), ವಿಜಯನಗರ ಕಾಲೇಜು ರಸ್ತೆ, ವಿಜಯನಗರ.
ಅರ್ಜಿ ಶುಲ್ಕ : ಯಾವುದೇ ಅರ್ಜಿ ಶುಲ್ಕ ಇರುವುದಿಲ್ಲ
ಅರ್ಜಿಯನ್ನು ಸಲ್ಲಿಸಲು ನಿಗದಿಪಡಿಸಿದ ದಿನಾಂಕದ ವಿವರ :
ಅರ್ಜಿ ಸಲ್ಲಿಸಲು ಪ್ರಾರಂಭದ ದಿನಾಂಕ : ಫೆಬ್ರವರಿ 15, 2023
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : ಮಾರ್ಚ್ 01, 2023
Vijayanagara Zilla Panchayat Recruitment 2023 : Important Links
ಪ್ರಕಟಣೆ | CLICK HERE |
Telegram Join Link | Click Here |
ಕೊನೆಯ ಪದಗಳು : ನಾವು ನೀಡಿದ ಉದ್ಯೋಗ ಮಾಹಿತಿಯನ್ನು ನೀವು ಇಷ್ಟಪಡುತ್ತೀರಿ ಎಂದು ಭಾವಿಸುತ್ತೇವೆ. ಈ ಉದ್ಯೋಗ ಮಾಹಿತಿ ನಿಮಗೆ ಇಷ್ಟವಾಗಿದ್ದರೆ ನಿಮ್ಮ ಸ್ನೇಹಿತರಿಗೆ ಶೇರ್ ಮಾಡಲು ಮರೆಯದಿರಿ.