Vikas Bank Ballari Recruitment 2024 : ವಿಕಾಸ ಸೌಹಾರ್ದ ಕೋ-ಆಪರೇಟಿವ್ ಬ್ಯಾಂಕ್ ಲಿ., ಹೊಸಪೇಟೆ ಇಲ್ಲಿ ಖಾಲಿಯಿರುವ ವಿವಿಧ ಹುದ್ದೆಗಳ ಭರ್ತಿಗೆ ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಹುದ್ದೆಗಳ ಭರ್ತಿಗೆ ಸಂಬಂಧಿಸಿದಂತೆ ಕರ್ತವ್ಯ ಸ್ಥಳ, ಶೈಕ್ಷಣಿಕ ಅರ್ಹತೆ, ಅರ್ಜಿ ಸಲ್ಲಿಕೆ ದಿನಾಂಕ ಹಾಗೂ ಇತರೆ ಮಾಹಿತಿಯನ್ನು ಈ ಕೆಳಗಡೆ ವಿವರವಾಗಿ ನೀಡಲಾಗಿದೆ ಪೂರ್ತಿ ಓದಿ.
Vikas Bank Ballari Recruitment 2024 : Details of Vacancies
ಹುದ್ದೆ : ವಿಭಾಗೀಯ ವ್ಯವಸ್ಥಾಪಕರು, ಲೆಕ್ಕ ಪರಿಶೋಧನಾಕಾರರು (CA), ಶಾಖಾ ವ್ಯವಸ್ಥಾಪಕರು, ಹಿರಿಯ ವಸೂಲಾತಿ ಅಧಿಕಾರಿ, ಪರಿಶೀಲನೆ ಮತ್ತು ಪರಿವೀಕ್ಷಣ ಅಧಿಕಾರಿ, ಹಿರಿಯ ಲೆಕ್ಕ ಪರಿಶೋಧಕರು, ಹೂಡಿಕೆ ಅಧಿಕಾರಿ, ಕಾನೂನು ಅಧಿಕಾರಿ, ತಂತ್ರಜ್ಞಾನ ಅಧಿಕಾರಿ, ಕೇಂದ್ರಿಯ ವೀಕ್ಷಣಾಧಿಕಾರಿ, ಪ್ರೊಬೇಷನರಿ ಆಫೀಸರ್
ಕರ್ತವ್ಯ ಸ್ಥಳ : ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳು ಹೊಸಪೇಟೆ, ಬಳ್ಳಾರಿಯಲ್ಲಿ ಕೆಲಸ ನಿರ್ವಹಿಸಬೇಕು.
ಖಾಲಿಯಿರುವ ಹುದ್ದೆಗಳ ಸಂಖ್ಯೆ : ಒಟ್ಟು 47 ಹುದ್ದೆಗಳ ಭರ್ತಿಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ.
ಹುದ್ದೆ | ಹುದ್ದೆಗಳ ಸಂಖ್ಯೆ |
ವಿಭಾಗೀಯ ವ್ಯವಸ್ಥಾಪಕರು | 1 |
ಲೆಕ್ಕ ಪರಿಶೋಧನಾಕಾರರು (CA) | 2 |
ಶಾಖಾ ವ್ಯವಸ್ಥಾಪಕರು | 5 |
ಹಿರಿಯ ವಸೂಲಾತಿ ಅಧಿಕಾರಿ | 1 |
ಪರಿಶೀಲನೆ ಮತ್ತು ಪರಿವೀಕ್ಷಣ ಅಧಿಕಾರಿ | 1 |
ಹಿರಿಯ ಲೆಕ್ಕ ಪರಿಶೋಧಕರು | 1 |
ಹೂಡಿಕೆ ಅಧಿಕಾರಿ | 1 |
ಕಾನೂನು ಅಧಿಕಾರಿ | 1 |
ತಂತ್ರಜ್ಞಾನ ಅಧಿಕಾರಿ | 2 |
ಕೇಂದ್ರಿಯ ವೀಕ್ಷಣಾಧಿಕಾರಿ | 2 |
ಪ್ರೊಬೇಷನರಿ ಆಫೀಸರ್ | 30 |
ಶೈಕ್ಷಣಿಕ ಅರ್ಹತೆ :
ವಿಭಾಗೀಯ ವ್ಯವಸ್ಥಾಪಕರು – ಯಾವುದೇ ಸ್ನಾತಕೋತ್ತರ ಪದವಿ (ಬ್ಯಾಂಕಿಂಗ್, ಅಕೌಂಟೆನ್ಸಿ, ಮ್ಯಾನೇಜ್ಮೆಂಟ್, ಅಡ್ಮಿನಿಸ್ಟ್ರೇಷನ್).
ಲೆಕ್ಕ ಪರಿಶೋಧನಾಕಾರರು (CA) – ಚಾರ್ಟರ್ಡ್ ಅಕೌಂಟೆಂಟ್.
ಶಾಖಾ ವ್ಯವಸ್ಥಾಪಕರು – ಯಾವುದೇ ಸ್ನಾತಕೋತ್ತರ ಪದವಿ ಜೊತೆಗೆ ಟೆಕ್ನಾಲಜಿ, ಸಾಪ್ಟ್ ಸ್ಕಿಲ್ ಜ್ಞಾನ (ಫೈನಾನ್ಸ್ ಮತ್ತು ಬ್ಯಾಂಕಿಂಗ್).
ಹಿರಿಯ ವಸೂಲಾತಿ ಅಧಿಕಾರಿ – ಯಾವುದೇ ಪದವಿ.
ಪರಿಶೀಲನೆ ಮತ್ತು ಪರಿವೀಕ್ಷಣ ಅಧಿಕಾರಿ – ಯಾವುದೇ ಪದವಿ.
ಹಿರಿಯ ಲೆಕ್ಕ ಪರಿಶೋಧಕರು – ಕಾಮರ್ಸ್/ ಅಕೌಂಟಿಂಗ್ ಪದವಿ.
ಹೂಡಿಕೆ ಅಧಿಕಾರಿ – ವಾಣಿಜ್ಯ ಪದವಿ ಅಥವಾ ತತ್ಸಮಾನ.
ಕಾನೂನು ಅಧಿಕಾರಿ – ಕಾನೂನು ಪದವಿ.
ತಂತ್ರಜ್ಞಾನ ಅಧಿಕಾರಿ – ಪದವಿ (ಟೆಕ್ನಾಲಜಿ, ಕಂಪ್ಯೂಟರ್ ಸೈನ್ಸ್, ನೆಟ್ವರ್ಕಿಂಗ್, ಹಾರ್ಡವೇರ್, ಸಾಫ್ಟವೇರ್).
ಕೇಂದ್ರಿಯ ವೀಕ್ಷಣಾಧಿಕಾರಿ – ಯಾವುದೇ ಪದವಿ.
ಪ್ರೊಬೇಷನರಿ ಆಫೀಸರ್ – ಯಾವುದೇ ಪದವಿ (ಕಾಮರ್ಸ್, ಬ್ಯಾಂಕಿಂಗ್).
ಉದ್ಯೋಗ ಮಾಹಿತಿ : ಬಿಬಿಎಂಪಿ ಬೃಹತ್ ನೇಮಕಾತಿ 2024
ವಯೋಮಾನ : ದಿನಾಂಕ 01/01/2024ಕ್ಕೆ
ಹುದ್ದೆ | ವಯೋಮಾನ |
ವಿಭಾಗೀಯ ವ್ಯವಸ್ಥಾಪಕರು | ಗರಿಷ್ಠ 45 ವರ್ಷ |
ಲೆಕ್ಕ ಪರಿಶೋಧನಾಕಾರರು (CA) | ಗರಿಷ್ಠ 30 ವರ್ಷ |
ಶಾಖಾ ವ್ಯವಸ್ಥಾಪಕರು | ಗರಿಷ್ಠ 35 ವರ್ಷ |
ಹಿರಿಯ ವಸೂಲಾತಿ ಅಧಿಕಾರಿ | ಗರಿಷ್ಠ 35 ವರ್ಷ |
ಪರಿಶೀಲನೆ ಮತ್ತು ಪರಿವೀಕ್ಷಣ ಅಧಿಕಾರಿ | ಗರಿಷ್ಠ 35 ವರ್ಷ |
ಹಿರಿಯ ಲೆಕ್ಕ ಪರಿಶೋಧಕರು | ಗರಿಷ್ಠ 35 ವರ್ಷ |
ಹೂಡಿಕೆ ಅಧಿಕಾರಿ | ಗರಿಷ್ಠ 35 ವರ್ಷ |
ಕಾನೂನು ಅಧಿಕಾರಿ | ಗರಿಷ್ಠ 35 ವರ್ಷ |
ತಂತ್ರಜ್ಞಾನ ಅಧಿಕಾರಿ | ಗರಿಷ್ಠ 35 ವರ್ಷ |
ಕೇಂದ್ರಿಯ ವೀಕ್ಷಣಾಧಿಕಾರಿ | ಗರಿಷ್ಠ 35 ವರ್ಷ |
ಪ್ರೊಬೇಷನರಿ ಆಫೀಸರ್ | ಗರಿಷ್ಠ 30 ವರ್ಷ |
ಅನುಭವ : ಅಭ್ಯರ್ಥಿಗಳು ಆಯಾ ಹುದ್ದೆಗಳಿಗೆ ಸಂಬಂಧಿಸಿದ ಕ್ಷೇತ್ರದಲ್ಲಿ ನಿಗದಿತ ಅನುಭವ ಹೊಂದಿರಬೇಕು.
ಆಯ್ಕೆ ವಿಧಾನ : ಲಿಖಿತ ಪರೀಕ್ಷೆ ನಡೆಸಿ ಅಭ್ಯರ್ಥಿಗಳನ್ನು ಹುದ್ದೆಗಳಿಗೆ ಆಯ್ಕೆ ಮಾಡಲಾಗುವುದು.
ಅರ್ಜಿ ಸಲ್ಲಿಕೆಯ ವಿಧಾನ : ಅಭ್ಯರ್ಥಿಯು ಈ ಹುದ್ದೆಗೆ ಆನ್‌ಲೈನ್ (ಗೂಗಲ್ ಫಾರ್ಮ್) ಮೂಲಕ ಅರ್ಜಿಗಳನ್ನು ಸಲ್ಲಿಸಬೇಕು.
ಹಂತ 1 : ಆನ್‌ಲೈನ್ (ಗೂಗಲ್ ಫಾರ್ಮ್) ಮೂಲಕ ಅರ್ಜಿ ಸಲ್ಲಿಸುವ ಮೊದಲು ಬ್ಯಾಂಕ್ ಹೊರಡಿಸಿರುವ ಅಧಿಸೂಚನೆಯನ್ನು ಗಮನವಿಟ್ಟು ಓದಿ ಅರ್ಜಿ ಸಲ್ಲಿಸಲು ಅಗತ್ಯವಿರುವ ದಾಖಲೆಗಳನ್ನು ಸಿದ್ಧಪಡಿಸಿಕೊಂಡು ನಂತರ ಅರ್ಜಿಯನ್ನು ಸಲ್ಲಿಸಬೇಕು.
ಹಂತ 2 : ಬ್ಯಾಂಕಿನ ವೆಬ್‌ಸೈಟ್ ಗೆ ಭೇಟಿ ನೀಡಿ ಅಥವಾ ಈ ಕೆಳಗಡೆ ನೀಡಲಾದ ಅಪ್ಲೈ ಆನ್‌ಲೈನ್ ಲಿಂಕ್ ಮೇಲೆ ಕ್ಲಿಕ್ ಮಾಡಿ ಅಪ್ಲಿಕೇಷನ್ ತೆರೆದುಕೊಳ್ಳಿ.
ಹಂತ 3 : ಅಪ್ಲಿಕೇಷನ್ ನಲ್ಲಿ ತಿಳಿಸಿರುವಂತಹ ಎಲ್ಲಾ ಮಾಹಿತಿಯನ್ನು (ಉದಾಹರಣೆಗೆ ಅಭ್ಯರ್ಥಿಯ ಹೆಸರು, ವಿಳಾಸ, ವಿದ್ಯಾರ್ಹತೆ, ಮೊಬೈಲ್ ಸಂಖ್ಯೆ ಇತ್ಯಾದಿ) ಭರ್ತಿ ಮಾಡಿ, ಮುಂದಿನ ಹಂತಕ್ಕೆ ತೆರಳುವ ಮುನ್ನ ಪುನಃ ಒಮ್ಮೆ ಪರಿಶೀಲಿಸಿ.
ಹಂತ 4 : ಅಪ್ಲಿಕೇಷನ್ ನಲ್ಲಿ ಯಾವುದೇ ಪ್ರಮಾಣ ಪತ್ರ/ ದಾಖಲೆಗಳನ್ನು ಅಪ್ಲೋಡ್ ಮಾಡಲು ಸೂಚಿಸಿದ್ದರೆ, ಅವುಗಳನ್ನು ಸ್ಕ್ಯಾನ್ ಮಾಡಿ ಅಪ್ಲೋಡ್ ಮಾಡಿ (ಅಗತ್ಯವಿದ್ದರೆ ಮಾತ್ರ).
ಹಂತ 5 : ಕೊನೆಯದಾಗಿ, ಅಭ್ಯರ್ಥಿಗೆ ಅರ್ಜಿ ಶುಲ್ಕ ಪಾವತಿಸಲು ಸೂಚಿಸಿದ್ದರೆ, ಶುಲ್ಕ ಪಾವತಿಸಿ ಅರ್ಜಿ ಸಲ್ಲಿಕೆ ಪೂರ್ಣಗೊಳಿಸಿ.
ಅರ್ಜಿ ಶುಲ್ಕ :
• ವಿಭಾಗೀಯ ವ್ಯವಸ್ಥಾಪಕರು, ಲೆಕ್ಕ ಪರಿಶೋಧನಾಕಾರರು – ಅರ್ಜಿ ಶುಲ್ಕ ಇರುವುದಿಲ್ಲ.
• ಉಳಿದ ಹುದ್ದೆಗಳಿಗೆ – ರೂ. 500
ಅರ್ಜಿಯನ್ನು ಸಲ್ಲಿಸಲು ನಿಗದಿಪಡಿಸಿದ ದಿನಾಂಕದ ವಿವರ :
ಅರ್ಜಿ ಸಲ್ಲಿಸಲು ಪ್ರಾರಂಭದ ದಿನಾಂಕ : ಏಪ್ರಿಲ್ 03, 2024
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : ಏಪ್ರಿಲ್ 19, 2024
Vikas Souharda Cooperative Bank Recruitment 2024 : Important Links
ಪ್ರಕಟಣೆ | Click Here |
NOTIFICATION | CLICK HERE |
APPLY ONLINE | CLICK HERE |
Telegram Join Link | Click Here |
WhatsApp Group Link | Click Here |
ಕೊನೆಯ ಪದಗಳು : ನಾವು ನೀಡಿದ ಉದ್ಯೋಗ ಮಾಹಿತಿಯನ್ನು ನೀವು ಇಷ್ಟಪಡುತ್ತೀರಿ ಎಂದು ಭಾವಿಸುತ್ತೇವೆ. ಈ ಉದ್ಯೋಗ ಮಾಹಿತಿ ನಿಮಗೆ ಇಷ್ಟವಾಗಿದ್ದರೆ ನಿಮ್ಮ ಸ್ನೇಹಿತರಿಗೆ ಶೇರ್ ಮಾಡಲು ಮರೆಯದಿರಿ.