ವಿಕಾಸ ಬ್ಯಾಂಕ್ ಬಳ್ಳಾರಿ ನೇಮಕಾತಿ 2024 – Vikas Bank Ballari Recruitment 2024

Vikas Bank Ballari Recruitment 2024 : ವಿಕಾಸ ಸೌಹಾರ್ದ ಕೋ-ಆಪರೇಟಿವ್ ಬ್ಯಾಂಕ್ ಲಿ., ಹೊಸಪೇಟೆ ಇಲ್ಲಿ ಖಾಲಿಯಿರುವ ವಿವಿಧ ಹುದ್ದೆಗಳ ಭರ್ತಿಗೆ ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಹುದ್ದೆಗಳ ಭರ್ತಿಗೆ ಸಂಬಂಧಿಸಿದಂತೆ ಕರ್ತವ್ಯ ಸ್ಥಳ, ಶೈಕ್ಷಣಿಕ ಅರ್ಹತೆ, ಅರ್ಜಿ ಸಲ್ಲಿಕೆ ದಿನಾಂಕ ಹಾಗೂ ಇತರೆ ಮಾಹಿತಿಯನ್ನು ಈ ಕೆಳಗಡೆ ವಿವರವಾಗಿ ನೀಡಲಾಗಿದೆ ಪೂರ್ತಿ ಓದಿ.

Vikas Bank Ballari Recruitment 2024 : Details of Vacancies

ಹುದ್ದೆ : ವಿಭಾಗೀಯ ವ್ಯವಸ್ಥಾಪಕರು, ಲೆಕ್ಕ ಪರಿಶೋಧನಾಕಾರರು (CA), ಶಾಖಾ ವ್ಯವಸ್ಥಾಪಕರು, ಹಿರಿಯ ವಸೂಲಾತಿ ಅಧಿಕಾರಿ, ಪರಿಶೀಲನೆ ಮತ್ತು ಪರಿವೀಕ್ಷಣ ಅಧಿಕಾರಿ, ಹಿರಿಯ ಲೆಕ್ಕ ಪರಿಶೋಧಕರು, ಹೂಡಿಕೆ ಅಧಿಕಾರಿ, ಕಾನೂನು ಅಧಿಕಾರಿ, ತಂತ್ರಜ್ಞಾನ ಅಧಿಕಾರಿ, ಕೇಂದ್ರಿಯ ವೀಕ್ಷಣಾಧಿಕಾರಿ, ಪ್ರೊಬೇಷನರಿ ಆಫೀಸರ್

ಕರ್ತವ್ಯ ಸ್ಥಳ : ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳು ಹೊಸಪೇಟೆ, ಬಳ್ಳಾರಿಯಲ್ಲಿ ಕೆಲಸ ನಿರ್ವಹಿಸಬೇಕು.

ಖಾಲಿಯಿರುವ ಹುದ್ದೆಗಳ ಸಂಖ್ಯೆ : ಒಟ್ಟು 47 ಹುದ್ದೆಗಳ ಭರ್ತಿಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ.

ಹುದ್ದೆಹುದ್ದೆಗಳ ಸಂಖ್ಯೆ
ವಿಭಾಗೀಯ ವ್ಯವಸ್ಥಾಪಕರು1
ಲೆಕ್ಕ ಪರಿಶೋಧನಾಕಾರರು (CA)2
ಶಾಖಾ ವ್ಯವಸ್ಥಾಪಕರು5
ಹಿರಿಯ ವಸೂಲಾತಿ ಅಧಿಕಾರಿ1
ಪರಿಶೀಲನೆ ಮತ್ತು ಪರಿವೀಕ್ಷಣ ಅಧಿಕಾರಿ1
ಹಿರಿಯ ಲೆಕ್ಕ ಪರಿಶೋಧಕರು1
ಹೂಡಿಕೆ ಅಧಿಕಾರಿ1
ಕಾನೂನು ಅಧಿಕಾರಿ1
ತಂತ್ರಜ್ಞಾನ ಅಧಿಕಾರಿ2
ಕೇಂದ್ರಿಯ ವೀಕ್ಷಣಾಧಿಕಾರಿ2
ಪ್ರೊಬೇಷನರಿ ಆಫೀಸರ್30

ಶೈಕ್ಷಣಿಕ ಅರ್ಹತೆ :
ವಿಭಾಗೀಯ ವ್ಯವಸ್ಥಾಪಕರು – ಯಾವುದೇ ಸ್ನಾತಕೋತ್ತರ ಪದವಿ (ಬ್ಯಾಂಕಿಂಗ್, ಅಕೌಂಟೆನ್ಸಿ, ಮ್ಯಾನೇಜ್ಮೆಂಟ್, ಅಡ್ಮಿನಿಸ್ಟ್ರೇಷನ್).

ಲೆಕ್ಕ ಪರಿಶೋಧನಾಕಾರರು (CA) – ಚಾರ್ಟರ್ಡ್ ಅಕೌಂಟೆಂಟ್.

ಶಾಖಾ ವ್ಯವಸ್ಥಾಪಕರು – ಯಾವುದೇ ಸ್ನಾತಕೋತ್ತರ ಪದವಿ ಜೊತೆಗೆ ಟೆಕ್ನಾಲಜಿ, ಸಾಪ್ಟ್ ಸ್ಕಿಲ್ ಜ್ಞಾನ (ಫೈನಾನ್ಸ್ ಮತ್ತು ಬ್ಯಾಂಕಿಂಗ್).

ಹಿರಿಯ ವಸೂಲಾತಿ ಅಧಿಕಾರಿ – ಯಾವುದೇ ಪದವಿ.

ಪರಿಶೀಲನೆ ಮತ್ತು ಪರಿವೀಕ್ಷಣ ಅಧಿಕಾರಿ – ಯಾವುದೇ ಪದವಿ.

ಹಿರಿಯ ಲೆಕ್ಕ ಪರಿಶೋಧಕರು – ಕಾಮರ್ಸ್/ ಅಕೌಂಟಿಂಗ್ ಪದವಿ.

ಹೂಡಿಕೆ ಅಧಿಕಾರಿ – ವಾಣಿಜ್ಯ ಪದವಿ ಅಥವಾ ತತ್ಸಮಾನ.

ಕಾನೂನು ಅಧಿಕಾರಿ – ಕಾನೂನು ಪದವಿ.

ತಂತ್ರಜ್ಞಾನ ಅಧಿಕಾರಿ – ಪದವಿ (ಟೆಕ್ನಾಲಜಿ, ಕಂಪ್ಯೂಟರ್ ಸೈನ್ಸ್, ನೆಟ್ವರ್ಕಿಂಗ್, ಹಾರ್ಡವೇರ್, ಸಾಫ್ಟವೇರ್).

ಕೇಂದ್ರಿಯ ವೀಕ್ಷಣಾಧಿಕಾರಿ – ಯಾವುದೇ ಪದವಿ.

ಪ್ರೊಬೇಷನರಿ ಆಫೀಸರ್ – ಯಾವುದೇ ಪದವಿ (ಕಾಮರ್ಸ್, ಬ್ಯಾಂಕಿಂಗ್).

ಉದ್ಯೋಗ ಮಾಹಿತಿ : ಬಿಬಿಎಂಪಿ ಬೃಹತ್ ನೇಮಕಾತಿ 2024

ವಯೋಮಾನ : ದಿನಾಂಕ 01/01/2024ಕ್ಕೆ

ಹುದ್ದೆವಯೋಮಾನ
ವಿಭಾಗೀಯ ವ್ಯವಸ್ಥಾಪಕರುಗರಿಷ್ಠ 45 ವರ್ಷ
ಲೆಕ್ಕ ಪರಿಶೋಧನಾಕಾರರು (CA)ಗರಿಷ್ಠ 30 ವರ್ಷ
ಶಾಖಾ ವ್ಯವಸ್ಥಾಪಕರುಗರಿಷ್ಠ 35 ವರ್ಷ
ಹಿರಿಯ ವಸೂಲಾತಿ ಅಧಿಕಾರಿಗರಿಷ್ಠ 35 ವರ್ಷ
ಪರಿಶೀಲನೆ ಮತ್ತು ಪರಿವೀಕ್ಷಣ ಅಧಿಕಾರಿಗರಿಷ್ಠ 35 ವರ್ಷ
ಹಿರಿಯ ಲೆಕ್ಕ ಪರಿಶೋಧಕರುಗರಿಷ್ಠ 35 ವರ್ಷ
ಹೂಡಿಕೆ ಅಧಿಕಾರಿಗರಿಷ್ಠ 35 ವರ್ಷ
ಕಾನೂನು ಅಧಿಕಾರಿಗರಿಷ್ಠ 35 ವರ್ಷ
ತಂತ್ರಜ್ಞಾನ ಅಧಿಕಾರಿಗರಿಷ್ಠ 35 ವರ್ಷ
ಕೇಂದ್ರಿಯ ವೀಕ್ಷಣಾಧಿಕಾರಿಗರಿಷ್ಠ 35 ವರ್ಷ
ಪ್ರೊಬೇಷನರಿ ಆಫೀಸರ್ಗರಿಷ್ಠ 30 ವರ್ಷ

ಅನುಭವ : ಅಭ್ಯರ್ಥಿಗಳು ಆಯಾ ಹುದ್ದೆಗಳಿಗೆ ಸಂಬಂಧಿಸಿದ ಕ್ಷೇತ್ರದಲ್ಲಿ ನಿಗದಿತ ಅನುಭವ ಹೊಂದಿರಬೇಕು.

ಆಯ್ಕೆ ವಿಧಾನ : ಲಿಖಿತ ಪರೀಕ್ಷೆ ನಡೆಸಿ ಅಭ್ಯರ್ಥಿಗಳನ್ನು ಹುದ್ದೆಗಳಿಗೆ ಆಯ್ಕೆ ಮಾಡಲಾಗುವುದು.

ಅರ್ಜಿ ಸಲ್ಲಿಕೆಯ ವಿಧಾನ : ಅಭ್ಯರ್ಥಿಯು ಈ ಹುದ್ದೆಗೆ ಆನ್‌ಲೈನ್‌ (ಗೂಗಲ್ ಫಾರ್ಮ್) ಮೂಲಕ ಅರ್ಜಿಗಳನ್ನು ಸಲ್ಲಿಸಬೇಕು.
ಹಂತ 1 : ಆನ್‌ಲೈನ್‌ (ಗೂಗಲ್ ಫಾರ್ಮ್) ಮೂಲಕ ಅರ್ಜಿ ಸಲ್ಲಿಸುವ ಮೊದಲು ಬ್ಯಾಂಕ್ ಹೊರಡಿಸಿರುವ ಅಧಿಸೂಚನೆಯನ್ನು ಗಮನವಿಟ್ಟು ಓದಿ ಅರ್ಜಿ ಸಲ್ಲಿಸಲು ಅಗತ್ಯವಿರುವ ದಾಖಲೆಗಳನ್ನು ಸಿದ್ಧಪಡಿಸಿಕೊಂಡು ನಂತರ ಅರ್ಜಿಯನ್ನು ಸಲ್ಲಿಸಬೇಕು.
ಹಂತ 2 : ಬ್ಯಾಂಕಿನ ವೆಬ್‌ಸೈಟ್ ಗೆ ಭೇಟಿ ನೀಡಿ ಅಥವಾ ಈ ಕೆಳಗಡೆ ನೀಡಲಾದ ಅಪ್ಲೈ ಆನ್‌ಲೈನ್‌ ಲಿಂಕ್ ಮೇಲೆ ಕ್ಲಿಕ್ ಮಾಡಿ ಅಪ್ಲಿಕೇಷನ್ ತೆರೆದುಕೊಳ್ಳಿ.
ಹಂತ 3 : ಅಪ್ಲಿಕೇಷನ್ ನಲ್ಲಿ ತಿಳಿಸಿರುವಂತಹ ಎಲ್ಲಾ ಮಾಹಿತಿಯನ್ನು (ಉದಾಹರಣೆಗೆ ಅಭ್ಯರ್ಥಿಯ ಹೆಸರು, ವಿಳಾಸ, ವಿದ್ಯಾರ್ಹತೆ, ಮೊಬೈಲ್ ಸಂಖ್ಯೆ ಇತ್ಯಾದಿ) ಭರ್ತಿ ಮಾಡಿ, ಮುಂದಿನ ಹಂತಕ್ಕೆ ತೆರಳುವ ಮುನ್ನ ಪುನಃ ಒಮ್ಮೆ ಪರಿಶೀಲಿಸಿ.
ಹಂತ 4 : ಅಪ್ಲಿಕೇಷನ್ ನಲ್ಲಿ ಯಾವುದೇ ಪ್ರಮಾಣ ಪತ್ರ/ ದಾಖಲೆಗಳನ್ನು ಅಪ್ಲೋಡ್ ಮಾಡಲು ಸೂಚಿಸಿದ್ದರೆ, ಅವುಗಳನ್ನು ಸ್ಕ್ಯಾನ್ ಮಾಡಿ ಅಪ್ಲೋಡ್ ಮಾಡಿ (ಅಗತ್ಯವಿದ್ದರೆ ಮಾತ್ರ).
ಹಂತ 5 : ಕೊನೆಯದಾಗಿ, ಅಭ್ಯರ್ಥಿಗೆ ಅರ್ಜಿ ಶುಲ್ಕ ಪಾವತಿಸಲು ಸೂಚಿಸಿದ್ದರೆ, ಶುಲ್ಕ ಪಾವತಿಸಿ ಅರ್ಜಿ ಸಲ್ಲಿಕೆ ಪೂರ್ಣಗೊಳಿಸಿ.

ಅರ್ಜಿ ಶುಲ್ಕ :
• ವಿಭಾಗೀಯ ವ್ಯವಸ್ಥಾಪಕರು, ಲೆಕ್ಕ ಪರಿಶೋಧನಾಕಾರರು – ಅರ್ಜಿ ಶುಲ್ಕ ಇರುವುದಿಲ್ಲ.
• ಉಳಿದ ಹುದ್ದೆಗಳಿಗೆ – ರೂ. 500

ಅರ್ಜಿಯನ್ನು ಸಲ್ಲಿಸಲು ನಿಗದಿಪಡಿಸಿದ ದಿನಾಂಕದ ವಿವರ :
ಅರ್ಜಿ ಸಲ್ಲಿಸಲು ಪ್ರಾರಂಭದ ದಿನಾಂಕ : ಏಪ್ರಿಲ್ 03, 2024
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : ಏಪ್ರಿಲ್ 19, 2024

Vikas Souharda Cooperative Bank Recruitment 2024 : Important Links

ಪ್ರಕಟಣೆ Click Here
NOTIFICATIONCLICK HERE
APPLY ONLINE CLICK HERE
Telegram Join Link Click Here
WhatsApp Group Link Click Here

ಕೊನೆಯ ಪದಗಳು : ನಾವು ನೀಡಿದ ಉದ್ಯೋಗ ಮಾಹಿತಿಯನ್ನು ನೀವು ಇಷ್ಟಪಡುತ್ತೀರಿ ಎಂದು ಭಾವಿಸುತ್ತೇವೆ. ಈ ಉದ್ಯೋಗ ಮಾಹಿತಿ ನಿಮಗೆ ಇಷ್ಟವಾಗಿದ್ದರೆ ನಿಮ್ಮ ಸ್ನೇಹಿತರಿಗೆ ಶೇರ್ ಮಾಡಲು ಮರೆಯದಿರಿ.

Leave a Comment