ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ನೇಮಕಾತಿ 2023 – WCD Yadgiri Recruitment 2023

WCD Yadgiri Recruitment 2023 : ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ಯಾದಗಿರಿ ಜಿಲ್ಲೆಯಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗೆ ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಕರೆಯಲಾಗಿದೆ. ಹುದ್ದೆಗಳ ಭರ್ತಿಗೆ ಸಂಬಂಧಿಸಿದಂತೆ ಹುದ್ದೆಗಳ ಸಂಖ್ಯೆ, ಶೈಕ್ಷಣಿಕ ಅರ್ಹತೆ, ವೇತನ, ಅರ್ಜಿ ಸಲ್ಲಿಕೆ ದಿನಾಂಕ ಹಾಗೂ ಇತರೆ ಮಾಹಿತಿಯನ್ನು ಈ ಕೆಳಗಡೆ ವಿವರವಾಗಿ ನೀಡಲಾಗಿದೆ ಪೂರ್ತಿ ಓದಿ.

WCD Yadgiri Recruitment 2023 : Details of Vacancies

ಹುದ್ದೆ : ಡಿಸ್ಟ್ರಿಕ್ಟ್ ಪ್ರಾಜೆಕ್ಟ್ ಅಸಿಸ್ಟೆಂಟ್, ಬ್ಲಾಕ್ ಕೋ-ಆರ್ಡಿನೇಟರ್

ಕರ್ತವ್ಯ ಸ್ಥಳ : ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳು ಯಾದಗಿರಿ ಜಿಲ್ಲೆಯಲ್ಲಿ ಕೆಲಸ ನಿರ್ವಹಿಸಬೇಕು.

ಖಾಲಿಯಿರುವ ಹುದ್ದೆಗಳ ಸಂಖ್ಯೆ : ಒಟ್ಟು 2 ಹುದ್ದೆಗಳ ಭರ್ತಿಗೆ ಅರ್ಜಿ ಕರೆಯಲಾಗಿದೆ.

ಹುದ್ದೆಹುದ್ದೆಗಳ ಸಂಖ್ಯೆ ವೇತನ
ಡಿಸ್ಟ್ರಿಕ್ಟ್ ಪ್ರಾಜೆಕ್ಟ್ ಅಸಿಸ್ಟೆಂಟ್118000
ಬ್ಲಾಕ್ ಕೋ-ಆರ್ಡಿನೇಟರ್120000

ಶೈಕ್ಷಣಿಕ ಅರ್ಹತೆ :
• ಡಿಸ್ಟ್ರಿಕ್ಟ್ ಪ್ರಾಜೆಕ್ಟ್ ಅಸಿಸ್ಟೆಂಟ್ – ಗ್ರಾಜುಯೆಟ್ ಡಿಗ್ರಿ/ ಪೊಸ್ಟ್ ಗ್ರಾಜುಯೆಟ್ ಡಿಪ್ಲೊಮಾ ಇನ್ ಮ್ಯಾನೇಜ್ಮೆಂಟ್/ ಸೋಷಿಯಲ್ ಸೈನ್ಸ್/ ನ್ಯೂಟ್ರಿಷನ್. ಜೊತೆಗೆ 2 ರಿಂದ 3 ವರ್ಷಗಳ ಕೆಲಸದ ಅನುಭವ ಹೊಂದಿರಬೇಕು.

• ಬ್ಲಾಕ್ ಕೋ-ಆರ್ಡಿನೇಟರ್ – ಪದವಿ ಜೊತೆಗೆ 2 ವರ್ಷಗಳ ಕೆಲಸದ ಅನುಭವ ಹೊಂದಿರಬೇಕು.

ಉದ್ಯೋಗ ಮಾಹಿತಿ : ಗ್ರಾಮ ಪಂಚಾಯಿತಿಗಳಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ

ವಯೋಮಾನ : ಅರ್ಜಿ ಸಲ್ಲಿಸಲು ನಿಗದಿಪಡಿಸಿದ ಕೊನೆಯ ದಿನಾಂಕಕ್ಕೆ ಅಭ್ಯರ್ಥಿಗಳಿಗೆ ಕನಿಷ್ಠ 21 ವರ್ಷ, ಗರಿಷ್ಠ 45 ವರ್ಷ ವಯೋಮಾನ ನಿಗದಿಪಡಿಸಲಾಗಿದೆ.

ಆಯ್ಕೆ ವಿಧಾನ : ಕಂಪ್ಯೂಟರ್ ಜ್ಞಾನದ ಬಗ್ಗೆ ಖಾತ್ರಿ ಪಡಿಸಿಕೊಂಡು ಕೌಶಲ್ಯ ಪರೀಕ್ಷೆ ನಡೆಸಿ ಸಂದರ್ಶನ ಮೂಲಕ ಆಯ್ಕೆ ಮಾಡಲಾಗುವುದು.

ಅರ್ಜಿ ಸಲ್ಲಿಕೆಯ ವಿಧಾನ : ಅಭ್ಯರ್ಥಿಯು ಈ ಹುದ್ದೆಗೆ ಆಫ್‌ಲೈನ್‌ ಮೂಲಕ ಅರ್ಜಿಗಳನ್ನು ಸಲ್ಲಿಸಬೇಕು.
ಹಂತ 1 : ಆಫ್‌ಲೈನ್‌ ಮೂಲಕ ಅರ್ಜಿ ಸಲ್ಲಿಸುವ ಮೊದಲು ಇಲಾಖೆ ಹೊರಡಿಸಿರುವ ಅಧಿಸೂಚನೆಯನ್ನು ಗಮನವಿಟ್ಟು ಓದಿ ಅರ್ಜಿ ಸಲ್ಲಿಸಲು ಅಗತ್ಯವಿರುವ ದಾಖಲೆಗಳನ್ನು ಸಿದ್ಧಪಡಿಸಿಕೊಂಡು ನಂತರ ಅರ್ಜಿಯನ್ನು ಸಲ್ಲಿಸಬೇಕು.
ಹಂತ 2 : ಇಲಾಖೆಯ ವೆಬ್‌ಸೈಟ್ ಗೆ ಭೇಟಿ ನೀಡಿ ಅಥವಾ ಈ ಕೆಳಗಡೆ ನೀಡಲಾದ ಅಪ್ಲಿಕೇಷನ್ ಫಾರ್ಮ್ ಲಿಂಕ್ ಮೇಲೆ ಕ್ಲಿಕ್ ಮಾಡಿ ಅಪ್ಲಿಕೇಷನ್ ಡೌನ್ಲೋಡ್ ಮಾಡಿಕೊಳ್ಳಿ.
ಹಂತ 3 : ಅಪ್ಲಿಕೇಷನ್ ನಲ್ಲಿ ತಿಳಿಸಿರುವಂತಹ ಎಲ್ಲಾ ಮಾಹಿತಿಯನ್ನು (ಉದಾಹರಣೆಗೆ ಅಭ್ಯರ್ಥಿಯ ಹೆಸರು, ವಿಳಾಸ, ವಿದ್ಯಾರ್ಹತೆ, ಮೊಬೈಲ್ ಸಂಖ್ಯೆ ಇತ್ಯಾದಿ) ಭರ್ತಿ ಮಾಡಿ, ಪುನಃ ಒಮ್ಮೆ ಪರಿಶೀಲಿಸಿ.
ಹಂತ 4 : ಕೊನೆಯದಾಗಿ, ಅಪ್ಲಿಕೇಷನ್ ನಲ್ಲಿ ಯಾವುದೇ ಪ್ರಮಾಣ ಪತ್ರ/ ದಾಖಲೆಗಳನ್ನು ಲಗತ್ತಿಸಲು ಸೂಚಿಸಿದ್ದರೆ, ಅವುಗಳನ್ನು ಲಗತ್ತಿಸಿ (ಅಗತ್ಯವಿದ್ದರೆ ಮಾತ್ರ) ಭರ್ತಿ ಮಾಡಿದ ಅರ್ಜಿಯನ್ನು ಈ ಕೆಳಗಡೆ ನೀಡಲಾದ ಕಚೇರಿಯ ವಿಳಾಸಕ್ಕೆ ಖುದ್ದಾಗಿ ಹಾಜರಾಗಿ ಅಥವಾ ನೊಂದಾಯಿತ ಅಂಚೆ ಮೂಲಕ ಸಲ್ಲಿಸಬೇಕು.

ಅರ್ಜಿ ಸಲ್ಲಿಸುವ ವಿಳಾಸ : ಉಪನಿರ್ದೇಶಕರ ಕಛೇರಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಯಾದಗಿರಿ, ಕೋಣೆ ಸಂಖ್ಯೆ : ಸಿ-17, ಒಂದನೇ ಮಹಡಿ, ಜಿಲ್ಲಾ ಆಡಳಿತ ಭವನ ಸಂಕೀರ್ಣ, ಚಿತ್ತಾಪೂರ ರಸ್ತೆ, ಯಾದಗಿರಿ – 585202

ಅರ್ಜಿ ಶುಲ್ಕ : ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಯಾವುದೇ ಅರ್ಜಿ ಶುಲ್ಕ ಇರುವುದಿಲ್ಲ.

ಅರ್ಜಿಯನ್ನು ಸಲ್ಲಿಸಲು ನಿಗದಿಪಡಿಸಿದ ದಿನಾಂಕದ ವಿವರ :
ಅರ್ಜಿ ಸಲ್ಲಿಸಲು ಪ್ರಾರಂಭದ ದಿನಾಂಕ : ಸೆಪ್ಟೆಂಬರ್ 20, 2023
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : ಅಕ್ಟೋಬರ್ 07, 2023

WCD Yadgiri Recruitment 2023 : Important Links

NOTIFICATION & APPLICATION FORMCLICK HERE
Telegram Join Link Click Here
WhatsApp Channel Link Click Here

ಸಲ್ಲಿಸಬೇಕಾದ ದಾಖಲೆಗಳು :
• ನಿಗದಿತ ನಮೂನೆಯಲ್ಲಿ ಅರ್ಜಿ
• ಎಸ್.ಎಸ್.ಎಲ್.ಸಿ ಅಂಕ ಪಟ್ಟಿ
• ಹುದ್ದೆಗೆ ನಿಗದಿಪಡಿಸಿದ ವಿದ್ಯಾರ್ಹತೆಯ ಅಂಕಪಟ್ಟಿಗಳು.
• ಅನುಭವ ಪ್ರಮಾಣ ಪತ್ರಗಳು.
• ಕಂಪ್ಯೂಟರ್ ತರಬೇತಿ ಪಡಿದಿರುವ ಬಗ್ಗೆ ಪ್ರಮಾಣ ಪತ್ರ.
• ತಹಸಿಲ್ದಾರರಿಂದ ಪಡೆದ ವಾಸಸ್ಥಳ ಪ್ರಮಾಣ ಪತ್ರ.

ಕೊನೆಯ ಪದಗಳು : ನಾವು ನೀಡಿದ ಉದ್ಯೋಗ ಮಾಹಿತಿಯನ್ನು ನೀವು ಇಷ್ಟಪಡುತ್ತೀರಿ ಎಂದು ಭಾವಿಸುತ್ತೇವೆ. ಈ ಉದ್ಯೋಗ ಮಾಹಿತಿ ನಿಮಗೆ ಇಷ್ಟವಾಗಿದ್ದರೆ ನಿಮ್ಮ ಸ್ನೇಹಿತರಿಗೆ ಶೇರ್ ಮಾಡಲು ಮರೆಯದಿರಿ.

Leave a Comment