ಕಲಬುರಗಿ-ಬೀದರ ಹಾಗೂ ಯಾದಗಿರಿ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ನೇಮಕಾತಿ 2026 – KMF GUMUL Recruitment 2026

KMF GUMUL Recruitment 2026

KMF GUMUL Recruitment 2026 : ಕಲಬುರಗಿ-ಬೀದರ ಹಾಗೂ ಯಾದಗಿರಿ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ನಿಯಮಿತ, ಕಲಬುರಗಿ ಇದರಲ್ಲಿ ಖಾಲಿ ಇರುವ ಸಹಾಯಕ ವ್ಯವಸ್ಥಾಪಕರು, ಲೆಕ್ಕಾಧಿಕಾರಿ, ತಾಂತ್ರಿಕ ಅಧಿಕಾರಿ, ಹಿರಿಯ ಕೆಮಿಸ್ಟ್, ಡೈರಿ ಸೂಪರ್ವೈಸರ್ ದರ್ಜೆ-2, ವಿಸ್ತರಣಾಧಿಕಾರಿ ದರ್ಜೆ-3, ಆಡಳಿತ ಸಹಾಯಕ ದರ್ಜೆ-3, ಲೆಕ್ಕ ಸಹಾಯಕ ದರ್ಜೆ-3, ಮಾರುಕಟ್ಟೆ ಸಹಾಯಕ ದರ್ಜೆ-3, ಕಿರಿಯ ತಾಂತ್ರಿಕರು ಹುದ್ದೆಗಳ ಭರ್ತಿಗೆ ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಹುದ್ದೆಗಳ ಭರ್ತಿಗೆ ಸಂಬಂಧಿಸಿದಂತೆ ಕರ್ತವ್ಯ ಸ್ಥಳ, ಶೈಕ್ಷಣಿಕ ಅರ್ಹತೆ, ವಯೋಮಾನ, ಅರ್ಜಿ ಸಲ್ಲಿಕೆ ವಿಧಾನ ಹಾಗೂ ಇತರೆ ಮಾಹಿತಿಯನ್ನು ಈ ಕೆಳಗಡೆ ವಿವರವಾಗಿ ನೀಡಲಾಗಿದೆ ಪೂರ್ತಿ ಓದಿ.

KMF GUMUL Recruitment 2026 : Details of Vacancies

ಹುದ್ದೆ :

ಸಹಾಯಕ ವ್ಯವಸ್ಥಾಪಕರು (ಪ.ವೈ), ಲೆಕ್ಕಾಧಿಕಾರಿ, ತಾಂತ್ರಿಕ ಅಧಿಕಾರಿ (ಡಿ.ಟಿ), ಹಿರಿಯ ಕೆಮಿಸ್ಟ್, ಡೈರಿ ಸೂಪರ್ವೈಸರ್ ದರ್ಜೆ-2, ವಿಸ್ತರಣಾಧಿಕಾರಿ ದರ್ಜೆ-3, ಆಡಳಿತ ಸಹಾಯಕ ದರ್ಜೆ-3, ಲೆಕ್ಕ ಸಹಾಯಕ ದರ್ಜೆ-3, ಮಾರುಕಟ್ಟೆ ಸಹಾಯಕ ದರ್ಜೆ-3, ಕಿರಿಯ ತಾಂತ್ರಿಕರು (ಫಿಟ್ಟರ್, ಇಲೆಕ್ಟ್ರಿಕಲ್, ಬಾಯ್ಲರ್).
ಬ್ಯಾಕಲಾಗ್ ಹುದ್ದೆಗಳು – ಸಹಾಯಕ ವ್ಯವಸ್ಥಾಪಕರು (ಪ.ವೈ), ಖರೀದಿ/ ಉಗ್ರಾಣ ಅಧಿಕಾರಿ, ಹಿರಿಯ ಕೆಮಿಸ್ಟ್, ಕಿರಿಯ ತಾಂತ್ರಿಕರು.

ಕರ್ತವ್ಯ ಸ್ಥಳ :

ಹುದ್ದೆಗಳಿಗೆ ಆಯ್ಕೆಯಾಗುವ ಅರ್ಹ ಅಭ್ಯರ್ಥಿಗಳು ಕಲಬುರಗಿ, ಬೀದರ ಹಾಗೂ ಯಾದಗಿರಿ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟದಲ್ಲಿ ಕೆಲಸ ನಿರ್ವಹಿಸಬೇಕು.

ಖಾಲಿಯಿರುವ ಹುದ್ದೆಗಳ ಸಂಖ್ಯೆ :

ಒಟ್ಟು 55 ಹುದ್ದೆಗಳ ಭರ್ತಿಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ.

ಹುದ್ದೆಹುದ್ದೆಗಳ ಸಂಖ್ಯೆ
ಸಹಾಯಕ ವ್ಯವಸ್ಥಾಪಕರು (ಪ.ವೈ)2
ಲೆಕ್ಕಾಧಿಕಾರಿ1
ತಾಂತ್ರಿಕ ಅಧಿಕಾರಿ (ಡಿ.ಟಿ)1
ಹಿರಿಯ ಕೆಮಿಸ್ಟ್1
ಡೈರಿ ಸೂಪರ್ವೈಸರ್ ದರ್ಜೆ-25
ವಿಸ್ತರಣಾಧಿಕಾರಿ ದರ್ಜೆ-313
ಆಡಳಿತ ಸಹಾಯಕ ದರ್ಜೆ-36
ಲೆಕ್ಕ ಸಹಾಯಕ ದರ್ಜೆ-38
ಮಾರುಕಟ್ಟೆ ಸಹಾಯಕ ದರ್ಜೆ-310
ಕಿರಿಯ ತಾಂತ್ರಿಕರು3

ಬ್ಯಾಕಲಾಗ್ ಹುದ್ದೆ

ಹುದ್ದೆಹುದ್ದೆಗಳ ಸಂಖ್ಯೆ
ಸಹಾಯಕ ವ್ಯವಸ್ಥಾಪಕರು (ಪ.ವೈ)2
ಖರೀದಿ/ಉಗ್ರಾಣ ಅಧಿಕಾರಿ 1
ಹಿರಿಯ ಕೆಮಿಸ್ಟ್ 1
ಕಿರಿಯ ತಾಂತ್ರಿಕರು1

ನಿಗದಿಪಡಿಸಿರುವ ಶೈಕ್ಷಣಿಕ ಅರ್ಹತೆ :

ಸಹಾಯಕ ವ್ಯವಸ್ಥಾಪಕರು (ಪ.ವೈ) –

ಬಿ.ವಿ.ಎಸ್‌.ಸಿ. ಪದವಿ ಪಡೆದಿರಬೇಕು. ಕಂಪ್ಯೂಟರ್ ಆಫೀಸ್ ಪ್ಯಾಕೇಜ್ ನಲ್ಲಿ ನಿರ್ವಹಣಾ ಜ್ಞಾನ ಹೊಂದಿರಬೇಕು.

ಲೆಕ್ಕಾಧಿಕಾರಿ –

ಎಂ.ಕಾಂ ಸ್ನಾತಕೋತ್ತರ ಪದವಿಯಲ್ಲಿ ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾಗಿರಬೇಕು ಮತ್ತು ಭಾರತ ಸರ್ಕಾರದಿಂದ ಮಾನ್ಯತೆ ಪಡೆದ ಸಂಸ್ಥೆಯಿಂದ ಸಿಎ / ಐ.ಸಿ.ಡಬ್ಲ್ಯೂ.ಎ.ಐ ವಿದ್ಯಾರ್ಹತೆ ಜೊತೆಗೆ ಕಂಪ್ಯೂಟರ್ ನಿರ್ವಹಣೆ ಜ್ಞಾನ ಹೊಂದಿರಬೇಕು.

ತಾಂತ್ರಿಕ ಅಧಿಕಾರಿ (ಡಿಟಿ) –

ಬಿ.ಟೆಕ್ (ಡಿ.ಟಿ)/ ಬಿ.ಎಸ್.ಸಿ (ಡಿ.ಟಿ) ಪದವಿ ವಿದ್ಯಾರ್ಹತೆ ಹೊಂದಿರಬೇಕು. ಕಂಪ್ಯೂಟರ್ ಆಫೀಸ್ ಪ್ಯಾಕೇಜ್ ನಲ್ಲಿ ನಿರ್ವಹಣಾ ಜ್ಞಾನ ಹೊಂದಿರಬೇಕು.

ಹಿರಿಯ ಕೆಮಿಸ್ಟ್ –

ಪ್ರಥಮ ದರ್ಜೆಯಲ್ಲಿ ಬಿ.ಎಸ್.ಸಿ (ಕೆಮಿಸ್ಟ್ರಿ/ ಮೆಕ್ರೋಬಯಾಲಜಿ) ಪದವಿ ಹೊಂದಿರಬೇಕು. ಕಂಪ್ಯೂಟರ್ ನಿರ್ವಹಣಾ/ ಆಫೀಸ್ ಪ್ಯಾಕೇಜ್ ನಲ್ಲಿ ಜ್ಞಾನ ಹೊಂದಿರಬೇಕು.

ಡೈರಿ ಸೂಪರ್ವೈಸರ್ ದರ್ಜೆ-2 (ಮೆಕ್ಯಾನಿಕಲ್) –

ಡಿಪ್ಲೊಮಾ (ಮೆಕ್ಯಾನಿಕಲ್) ತಾಂತ್ರಿಕ ವಿದ್ಯಾರ್ಹತೆ ಹೊಂದಿರಬೇಕು.

ಡೈರಿ ಸೂಪರ್ವೈಸರ್ ದರ್ಜೆ-2 (ಇಲೆಕ್ಟ್ರಿಕಲ್) –

ಡಿಪ್ಲೊಮಾ (ಇಲೆಕ್ಟ್ರಿಕಲ್) ತಾಂತ್ರಿಕ ವಿದ್ಯಾರ್ಹತೆ ಹೊಂದಿರಬೇಕು.

ಉದ್ಯೋಗ ಮಾಹಿತಿ : ಗ್ರಾಮ ಪಂಚಾಯಿತಿಯಲ್ಲಿ ನೇಮಕಾತಿ 2026

ಡೈರಿ ಸೂಪರ್ವೈಸರ್ ದರ್ಜೆ-2 (ರೆಫ್ರಿಜರೇಷನ್ & ಏರ್ ಕಂಡೀಷನ್) –

ಡಿಪ್ಲೊಮಾ (ರೆಫ್ರಿಜರೇಷನ್ & ಏರ್ ಕಂಡೀಷನ್) ತಾಂತ್ರಿಕ ವಿದ್ಯಾರ್ಹತೆ ಹೊಂದಿರಬೇಕು.

ಡೈರಿ ಸೂಪರ್ವೈಸರ್ ದರ್ಜೆ-2 (ಸಿವಿಲ್) –

ಡಿಪ್ಲೊಮಾ (ಸಿವಿಲ್) ತಾಂತ್ರಿಕ ವಿದ್ಯಾರ್ಹತೆ ಹೊಂದಿರಬೇಕು.

ವಿಸ್ತರಣಾಧಿಕಾರಿ ದರ್ಜೆ 3 –

ಯಾವುದೇ ಪದವಿಯಲ್ಲಿ ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾಗಿರಬೇಕು. ಕಂಪ್ಯೂಟರ್ ಆಫೀಸ್ ಪ್ಯಾಕೇಜ್ ನಲ್ಲಿ ನಿರ್ವಹಣಾ ಜ್ಞಾನ ಹೊಂದಿರಬೇಕು.

ಆಡಳಿತ ಸಹಾಯಕ ದರ್ಜೆ-3 –

ಯಾವುದೇ ಪದವಿಯಲ್ಲಿ ದ್ವಿತೀಯ ದರ್ಜೆಯಲ್ಲಿ ಉತ್ತೀರ್ಣರಾಗಿರಬೇಕು. ಕಂಪ್ಯೂಟರ್ ಆಫೀಸ್ ಪ್ಯಾಕೇಜ್ ನಲ್ಲಿ ನಿರ್ವಹಣಾ ಜ್ಞಾನ ಹೊಂದಿರಬೇಕು.

ಲೆಕ್ಕ ಸಹಾಯಕ ದರ್ಜೆ-3 –

ಬಿ.ಕಾಂ ಪದವಿಯಲ್ಲಿ ದ್ವಿತೀಯ ದರ್ಜೆಯಲ್ಲಿ ಉತ್ತೀರ್ಣರಾಗಿರಬೇಕು. ಕಂಪ್ಯೂಟರ್ ಆಫೀಸ್ & ಟ್ಯಾಲಿ ಪ್ಯಾಕೇಜ್ ನಿರ್ವಹಣೆಯಲ್ಲಿ ತರಬೇತಿ ಹೊಂದಿರಬೇಕು.

ಮಾರುಕಟ್ಟೆ ಸಹಾಯಕರು ದರ್ಜೆ-3 –

ಮಾರುಕಟ್ಟೆ ವಿಷಯದಲ್ಲಿ ಬಿ.ಬಿ.ಎಂ/ ಬಿ.ಬಿ.ಎ ಪದವಿಯಲ್ಲಿ ದ್ವಿತೀಯ ದರ್ಜೆಯಲ್ಲಿ ಉತ್ತೀರ್ಣರಾಗಿರಬೇಕು. ಕಂಪ್ಯೂಟರ್ ಆಫೀಸ್ ಪ್ಯಾಕೇಜ್ ನಲ್ಲಿ ನಿರ್ವಹಣಾ ಜ್ಞಾನ ಹೊಂದಿರಬೇಕು.

ಕಿರಿಯ ತಾಂತ್ರಿಕರು (ಫಿಟ್ಟರ್) –

ಕನಿಷ್ಠ ಎಸ್.ಎಸ್.ಎಲ್.ಸಿ ವಿದ್ಯಾರ್ಹತೆಯೊಂದಿಗೆ ಕೈಗಾರಿಕಾ ತರಬೇತಿ ಸಂಸ್ಥೆಯಿಂದ ಫಿಟ್ಟರ್ ವಿಷಯದಲ್ಲಿ ಐಟಿಐ ಕೋರ್ಸ್ ಉತ್ತೀರ್ಣರಾಗಿ ಅಪ್ರೆಂಟಿಸ್ ಸರ್ಟಿಫಿಕೇಟ್ ಹೊಂದಿರಬೇಕು.

ಕಿರಿಯ ತಾಂತ್ರಿಕರು (ಇಲೆಕ್ಟ್ರಿಕಲ್) –

ಕನಿಷ್ಠ ಎಸ್.ಎಸ್.ಎಲ್.ಸಿ ವಿದ್ಯಾರ್ಹತೆಯೊಂದಿಗೆ ಕೈಗಾರಿಕಾ ತರಬೇತಿ ಸಂಸ್ಥೆಯಿಂದ ಇಲೆಕ್ಟ್ರಿಕಲ್ ವಿಷಯದಲ್ಲಿ ಐಟಿಐ ಕೋರ್ಸ್ ಉತ್ತೀರ್ಣರಾಗಿ ಅಪ್ರೆಂಟಿಸ್ ಸರ್ಟಿಫಿಕೇಟ್ ಹೊಂದಿರಬೇಕು.

ಕಿರಿಯ ತಾಂತ್ರಿಕರು (ಬಾಯ್ಲರ್) –

ಕನಿಷ್ಠ ಎಸ್.ಎಸ್.ಎಲ್.ಸಿ ವಿದ್ಯಾರ್ಹತೆಯೊಂದಿಗೆ ತಾಂತ್ರಿಕ ವಿದ್ಯಾಸಂಸ್ಥೆ/ ನಿರ್ದೇಶಕರು ಬಾಯ್ಲರ್ & ಕಾರ್ಖಾನೆ ರವರಿಂದ ಬಾಯ್ಲರ್ ಅಟೆಂಡೆಂಟ್ ದರ್ಜೆ-2 ಪ್ರಮಾಣ ಪತ್ರ ಪಡೆದಿರಬೇಕು.

ಖರೀದಿ/ ಉಗ್ರಾಣ ಅಧಿಕಾರಿ –

ಪ್ರಥಮ ದರ್ಜೆಯಲ್ಲಿ ಬಿ.ಕಾಂ/ ಬಿಬಿಎ ಪದವಿಯೊಂದಿಗೆ ಒಂದು ವರ್ಷದ ಪಿ.ಜಿ.ಡಿ.ಎಂ.ಎಂ ಅಥವಾ ಎಂ.ಬಿ.ಎ (ಮಟಿರಿಯಲ್ ಮ್ಯಾನೇಜ್ಮೆಂಟ್) ಅರ್ಹತೆ ಹೊಂದಿರಬೇಕು.

ಉದ್ಯೋಗ ಮಾಹಿತಿ : ಬಿಎಸ್ಎನ್ಎಲ್ ಜ್ಯೂನಿಯರ್ ಟೆಲಿಕಾಂ ಆಫೀಸರ್ ಹುದ್ದೆಗಳ ನೇಮಕಾತಿ 2026

ವಯೋಮಾನ :

ಅರ್ಜಿ ಸಲ್ಲಿಸಲು ನಿಗದಿಪಡಿಸಿದ ಕೊನೆಯ ದಿನಾಂಕಕ್ಕೆ ಅಭ್ಯರ್ಥಿಗಳಿಗೆ ಕನಿಷ್ಠ 18 ವರ್ಷ ವಯೋಮಾನ ನಿಗದಿಪಡಿಸಲಾಗಿದೆ.
• ಎಸ್ಸಿ, ಎಸ್ಟಿ, ಪ್ರವರ್ಗ 1 ಅಭ್ಯರ್ಥಿಗಳಿಗೆ – ಗರಿಷ್ಠ 45 ವರ್ಷ
• ಪ್ರವರ್ಗ 2ಎ, 2ಬಿ, 3ಎ, 3ಬಿ ಅಭ್ಯರ್ಥಿಗಳಿಗೆ – ಗರಿಷ್ಠ 43 ವರ್ಷ
• ಸಾಮಾನ್ಯ ಅಭ್ಯರ್ಥಿಗಳಿಗೆ – ಗರಿಷ್ಠ 40 ವರ್ಷ

ವೇತನ :

ಹುದ್ದೆವೇತನ
ಸಹಾಯಕ ವ್ಯವಸ್ಥಾಪಕರು (ಪ.ವೈ)ರೂ. 83,700 – ರೂ. 1,55,200
ಲೆಕ್ಕಾಧಿಕಾರಿರೂ. 69,250 – ರೂ. 1,34,200
ತಾಂತ್ರಿಕ ಅಧಿಕಾರಿ (ಡಿ.ಟಿ)ರೂ. 69,250 – ರೂ. 1,34,200
ಹಿರಿಯ ಕೆಮಿಸ್ಟ್ರೂ. 65,950 – ರೂ. 1,24,900
ಡೈರಿ ಸೂಪರ್ವೈಸರ್ ದರ್ಜೆ-2ರೂ. 54,175 – ರೂ. 99,400
ವಿಸ್ತರಣಾಧಿಕಾರಿ ದರ್ಜೆ-3ರೂ. 54,175 – ರೂ. 99,400
ಆಡಳಿತ ಸಹಾಯಕ ದರ್ಜೆ-3ರೂ. 34,100 – ರೂ. 67,600
ಲೆಕ್ಕ ಸಹಾಯಕ ದರ್ಜೆ-3ರೂ. 34,100 – ರೂ. 67,600
ಮಾರುಕಟ್ಟೆ ಸಹಾಯಕ ದರ್ಜೆ-3ರೂ. 34,100 – ರೂ. 67,600
ಕಿರಿಯ ತಾಂತ್ರಿಕರುರೂ. 34,100 – ರೂ. 67,600
ಖರೀದಿ/ ಉಗ್ರಾಣ ಅಧಿಕಾರಿ (ಬ್ಯಾಕಲಾಗ್)ರೂ. 69,250 – ರೂ. 1,34,200

ಆಯ್ಕೆ ವಿಧಾನ :

ಅಭ್ಯರ್ಥಿಗಳು ಲಿಖಿತ ಪರೀಕ್ಷೆಯಲ್ಲಿ ಗಳಿಸಿದ ಅಂಕಗಳ ಮೆರಿಟ್ ಆಧಾರದ ಮೇಲೆ 1:5ರ ಅನುಪಾತದಲ್ಲಿ ಸಂದರ್ಶನಕ್ಕೆ ಕರೆಯಲಾಗುವುದು. ಮೌಖಿಕ ಸಂದರ್ಶನಕ್ಕೆ ಗರಿಷ್ಠ 15 ಅಂಕಗಳನ್ನು ನಿಗದಿಪಡಿಸಲಾಗಿದೆ.

ಅರ್ಜಿ ಸಲ್ಲಿಕೆಯ ವಿಧಾನ :

ಅಭ್ಯರ್ಥಿಯು ಈ ಹುದ್ದೆಗೆ ಆನ್‌ಲೈನ್‌ ಮೂಲಕ ಅರ್ಜಿಗಳನ್ನು ಸಲ್ಲಿಸಬೇಕು.
ಹಂತ 1 : ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸುವ ಮೊದಲು ಇಲಾಖೆ ಹೊರಡಿಸಿರುವ ಅಧಿಸೂಚನೆಯನ್ನು ಗಮನವಿಟ್ಟು ಓದಿ ಅರ್ಜಿ ಸಲ್ಲಿಸಲು ಅಗತ್ಯವಿರುವ ದಾಖಲೆಗಳನ್ನು ಸಿದ್ಧಪಡಿಸಿಕೊಂಡು ನಂತರ ಅರ್ಜಿಯನ್ನು ಸಲ್ಲಿಸಬೇಕು.
ಹಂತ 2 : ಇಲಾಖೆಯ ವೆಬ್‌ಸೈಟ್ ಗೆ ಭೇಟಿ ನೀಡಿ ಅಥವಾ ಈ ಕೆಳಗಡೆ ನೀಡಲಾದ ಅಪ್ಲೈ ಆನ್‌ಲೈನ್‌ ಲಿಂಕ್ ಮೇಲೆ ಕ್ಲಿಕ್ ಮಾಡಿ ಅಪ್ಲಿಕೇಷನ್ ತೆರೆದುಕೊಳ್ಳಿ.
ಹಂತ 3 : ಅಪ್ಲಿಕೇಷನ್ ನಲ್ಲಿ ತಿಳಿಸಿರುವಂತಹ ಎಲ್ಲಾ ಮಾಹಿತಿಯನ್ನು (ಉದಾಹರಣೆಗೆ ಅಭ್ಯರ್ಥಿಯ ಹೆಸರು, ವಿಳಾಸ, ವಿದ್ಯಾರ್ಹತೆ, ಮೊಬೈಲ್ ಸಂಖ್ಯೆ ಇತ್ಯಾದಿ) ಭರ್ತಿ ಮಾಡಿ, ಮುಂದಿನ ಹಂತಕ್ಕೆ ತೆರಳುವ ಮುನ್ನ ಪುನಃ ಒಮ್ಮೆ ಪರಿಶೀಲಿಸಿ.
ಹಂತ 4 : ಅಪ್ಲಿಕೇಷನ್ ನಲ್ಲಿ ಯಾವುದೇ ಪ್ರಮಾಣ ಪತ್ರ/ ದಾಖಲೆಗಳನ್ನು ಅಪ್ಲೋಡ್ ಮಾಡಲು ಸೂಚಿಸಿದ್ದರೆ, ಅವುಗಳನ್ನು ಸ್ಕ್ಯಾನ್ ಮಾಡಿ ಅಪ್ಲೋಡ್ ಮಾಡಿ (ಅಗತ್ಯವಿದ್ದರೆ ಮಾತ್ರ).
ಹಂತ 5 : ಕೊನೆಯದಾಗಿ, ಅಭ್ಯರ್ಥಿಗೆ ಅರ್ಜಿ ಶುಲ್ಕ ಪಾವತಿಸಲು ಸೂಚಿಸಿದ್ದರೆ, ಶುಲ್ಕ ಪಾವತಿಸಿ ಅರ್ಜಿ ಸಲ್ಲಿಕೆ ಪೂರ್ಣಗೊಳಿಸಿ.

ನಿಗದಿತ ಅರ್ಜಿ ಶುಲ್ಕದ ವಿವರ :

• ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಪ್ರವರ್ಗ-1, ವಿಕಲಚೇತನ ಅಭ್ಯರ್ಥಿಗಳು – ರೂ. 500
• ಸಾಮಾನ್ಯ, ಇತರೆ ವರ್ಗದ ಅಭ್ಯರ್ಥಿಗಳು – ರೂ. 1000

ಶುಲ್ಕ ಪಾವತಿಸುವ ವಿಧಾನ :

ಅರ್ಜಿ ಶುಲ್ಕವನ್ನು ಡೆಬಿಟ್ ಕಾರ್ಡ್, ಕ್ರೆಡಿಟ್ ಕಾರ್ಡ್, ಆನ್‌ಲೈನ್‌ ಮೂಲಕ ಶುಲ್ಕ ಪಾವತಿಸಬಹುದು.

ಅರ್ಜಿಯನ್ನು ಸಲ್ಲಿಸಲು ನಿಗದಿಪಡಿಸಿರುವ ದಿನಾಂಕದ ವಿವರ :

• ಅರ್ಜಿ ಸಲ್ಲಿಕೆಗೆ ಪ್ರಾರಂಭದ ದಿನಾಂಕ : ಮೇ 29, 2026
• ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ : ಜೂನ್ 27, 2026
• ಶುಲ್ಕ ಪಾವತಿಸಲು ಕೊನೆಯ ದಿನಾಂಕ : ಜೂನ್ 27, 2026

KMF Gulbarga Recruitment 2026 : Important Links

NOTIFICATIONCLICK HERE
APPLY ONLINE CLICK HERE
Telegram Join Link Click Here
WhatsApp Group Link Click Here

ಕೊನೆಯ ಪದಗಳು : ನಾವು ನೀಡಿದ ಉದ್ಯೋಗ ಮಾಹಿತಿಯನ್ನು ನೀವು ಇಷ್ಟಪಡುತ್ತೀರಿ ಎಂದು ಭಾವಿಸುತ್ತೇವೆ. ಈ ಉದ್ಯೋಗ ಮಾಹಿತಿ ನಿಮಗೆ ಇಷ್ಟವಾಗಿದ್ದರೆ ನಿಮ್ಮ ಸ್ನೇಹಿತರಿಗೆ ಶೇರ್ ಮಾಡಲು ಮರೆಯದಿರಿ.

WhatsApp
Telegram
Facebook

Leave a Comment