
KMF GUMUL Recruitment 2026 : ಕಲಬುರಗಿ-ಬೀದರ ಹಾಗೂ ಯಾದಗಿರಿ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ನಿಯಮಿತ, ಕಲಬುರಗಿ ಇದರಲ್ಲಿ ಖಾಲಿ ಇರುವ ಸಹಾಯಕ ವ್ಯವಸ್ಥಾಪಕರು, ಲೆಕ್ಕಾಧಿಕಾರಿ, ತಾಂತ್ರಿಕ ಅಧಿಕಾರಿ, ಹಿರಿಯ ಕೆಮಿಸ್ಟ್, ಡೈರಿ ಸೂಪರ್ವೈಸರ್ ದರ್ಜೆ-2, ವಿಸ್ತರಣಾಧಿಕಾರಿ ದರ್ಜೆ-3, ಆಡಳಿತ ಸಹಾಯಕ ದರ್ಜೆ-3, ಲೆಕ್ಕ ಸಹಾಯಕ ದರ್ಜೆ-3, ಮಾರುಕಟ್ಟೆ ಸಹಾಯಕ ದರ್ಜೆ-3, ಕಿರಿಯ ತಾಂತ್ರಿಕರು ಹುದ್ದೆಗಳ ಭರ್ತಿಗೆ ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಹುದ್ದೆಗಳ ಭರ್ತಿಗೆ ಸಂಬಂಧಿಸಿದಂತೆ ಕರ್ತವ್ಯ ಸ್ಥಳ, ಶೈಕ್ಷಣಿಕ ಅರ್ಹತೆ, ವಯೋಮಾನ, ಅರ್ಜಿ ಸಲ್ಲಿಕೆ ವಿಧಾನ ಹಾಗೂ ಇತರೆ ಮಾಹಿತಿಯನ್ನು ಈ ಕೆಳಗಡೆ ವಿವರವಾಗಿ ನೀಡಲಾಗಿದೆ ಪೂರ್ತಿ ಓದಿ.
KMF GUMUL Recruitment 2026 : Details of Vacancies
ಹುದ್ದೆ :
ಸಹಾಯಕ ವ್ಯವಸ್ಥಾಪಕರು (ಪ.ವೈ), ಲೆಕ್ಕಾಧಿಕಾರಿ, ತಾಂತ್ರಿಕ ಅಧಿಕಾರಿ (ಡಿ.ಟಿ), ಹಿರಿಯ ಕೆಮಿಸ್ಟ್, ಡೈರಿ ಸೂಪರ್ವೈಸರ್ ದರ್ಜೆ-2, ವಿಸ್ತರಣಾಧಿಕಾರಿ ದರ್ಜೆ-3, ಆಡಳಿತ ಸಹಾಯಕ ದರ್ಜೆ-3, ಲೆಕ್ಕ ಸಹಾಯಕ ದರ್ಜೆ-3, ಮಾರುಕಟ್ಟೆ ಸಹಾಯಕ ದರ್ಜೆ-3, ಕಿರಿಯ ತಾಂತ್ರಿಕರು (ಫಿಟ್ಟರ್, ಇಲೆಕ್ಟ್ರಿಕಲ್, ಬಾಯ್ಲರ್).
ಬ್ಯಾಕಲಾಗ್ ಹುದ್ದೆಗಳು – ಸಹಾಯಕ ವ್ಯವಸ್ಥಾಪಕರು (ಪ.ವೈ), ಖರೀದಿ/ ಉಗ್ರಾಣ ಅಧಿಕಾರಿ, ಹಿರಿಯ ಕೆಮಿಸ್ಟ್, ಕಿರಿಯ ತಾಂತ್ರಿಕರು.
ಕರ್ತವ್ಯ ಸ್ಥಳ :
ಹುದ್ದೆಗಳಿಗೆ ಆಯ್ಕೆಯಾಗುವ ಅರ್ಹ ಅಭ್ಯರ್ಥಿಗಳು ಕಲಬುರಗಿ, ಬೀದರ ಹಾಗೂ ಯಾದಗಿರಿ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟದಲ್ಲಿ ಕೆಲಸ ನಿರ್ವಹಿಸಬೇಕು.
ಖಾಲಿಯಿರುವ ಹುದ್ದೆಗಳ ಸಂಖ್ಯೆ :
ಒಟ್ಟು 55 ಹುದ್ದೆಗಳ ಭರ್ತಿಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ.
| ಹುದ್ದೆ | ಹುದ್ದೆಗಳ ಸಂಖ್ಯೆ |
| ಸಹಾಯಕ ವ್ಯವಸ್ಥಾಪಕರು (ಪ.ವೈ) | 2 |
| ಲೆಕ್ಕಾಧಿಕಾರಿ | 1 |
| ತಾಂತ್ರಿಕ ಅಧಿಕಾರಿ (ಡಿ.ಟಿ) | 1 |
| ಹಿರಿಯ ಕೆಮಿಸ್ಟ್ | 1 |
| ಡೈರಿ ಸೂಪರ್ವೈಸರ್ ದರ್ಜೆ-2 | 5 |
| ವಿಸ್ತರಣಾಧಿಕಾರಿ ದರ್ಜೆ-3 | 13 |
| ಆಡಳಿತ ಸಹಾಯಕ ದರ್ಜೆ-3 | 6 |
| ಲೆಕ್ಕ ಸಹಾಯಕ ದರ್ಜೆ-3 | 8 |
| ಮಾರುಕಟ್ಟೆ ಸಹಾಯಕ ದರ್ಜೆ-3 | 10 |
| ಕಿರಿಯ ತಾಂತ್ರಿಕರು | 3 |
ಬ್ಯಾಕಲಾಗ್ ಹುದ್ದೆ
| ಹುದ್ದೆ | ಹುದ್ದೆಗಳ ಸಂಖ್ಯೆ |
| ಸಹಾಯಕ ವ್ಯವಸ್ಥಾಪಕರು (ಪ.ವೈ) | 2 |
| ಖರೀದಿ/ಉಗ್ರಾಣ ಅಧಿಕಾರಿ | 1 |
| ಹಿರಿಯ ಕೆಮಿಸ್ಟ್ | 1 |
| ಕಿರಿಯ ತಾಂತ್ರಿಕರು | 1 |
ನಿಗದಿಪಡಿಸಿರುವ ಶೈಕ್ಷಣಿಕ ಅರ್ಹತೆ :
ಸಹಾಯಕ ವ್ಯವಸ್ಥಾಪಕರು (ಪ.ವೈ) –
ಬಿ.ವಿ.ಎಸ್.ಸಿ. ಪದವಿ ಪಡೆದಿರಬೇಕು. ಕಂಪ್ಯೂಟರ್ ಆಫೀಸ್ ಪ್ಯಾಕೇಜ್ ನಲ್ಲಿ ನಿರ್ವಹಣಾ ಜ್ಞಾನ ಹೊಂದಿರಬೇಕು.
ಲೆಕ್ಕಾಧಿಕಾರಿ –
ಎಂ.ಕಾಂ ಸ್ನಾತಕೋತ್ತರ ಪದವಿಯಲ್ಲಿ ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾಗಿರಬೇಕು ಮತ್ತು ಭಾರತ ಸರ್ಕಾರದಿಂದ ಮಾನ್ಯತೆ ಪಡೆದ ಸಂಸ್ಥೆಯಿಂದ ಸಿಎ / ಐ.ಸಿ.ಡಬ್ಲ್ಯೂ.ಎ.ಐ ವಿದ್ಯಾರ್ಹತೆ ಜೊತೆಗೆ ಕಂಪ್ಯೂಟರ್ ನಿರ್ವಹಣೆ ಜ್ಞಾನ ಹೊಂದಿರಬೇಕು.
ತಾಂತ್ರಿಕ ಅಧಿಕಾರಿ (ಡಿಟಿ) –
ಬಿ.ಟೆಕ್ (ಡಿ.ಟಿ)/ ಬಿ.ಎಸ್.ಸಿ (ಡಿ.ಟಿ) ಪದವಿ ವಿದ್ಯಾರ್ಹತೆ ಹೊಂದಿರಬೇಕು. ಕಂಪ್ಯೂಟರ್ ಆಫೀಸ್ ಪ್ಯಾಕೇಜ್ ನಲ್ಲಿ ನಿರ್ವಹಣಾ ಜ್ಞಾನ ಹೊಂದಿರಬೇಕು.
ಹಿರಿಯ ಕೆಮಿಸ್ಟ್ –
ಪ್ರಥಮ ದರ್ಜೆಯಲ್ಲಿ ಬಿ.ಎಸ್.ಸಿ (ಕೆಮಿಸ್ಟ್ರಿ/ ಮೆಕ್ರೋಬಯಾಲಜಿ) ಪದವಿ ಹೊಂದಿರಬೇಕು. ಕಂಪ್ಯೂಟರ್ ನಿರ್ವಹಣಾ/ ಆಫೀಸ್ ಪ್ಯಾಕೇಜ್ ನಲ್ಲಿ ಜ್ಞಾನ ಹೊಂದಿರಬೇಕು.
ಡೈರಿ ಸೂಪರ್ವೈಸರ್ ದರ್ಜೆ-2 (ಮೆಕ್ಯಾನಿಕಲ್) –
ಡಿಪ್ಲೊಮಾ (ಮೆಕ್ಯಾನಿಕಲ್) ತಾಂತ್ರಿಕ ವಿದ್ಯಾರ್ಹತೆ ಹೊಂದಿರಬೇಕು.
ಡೈರಿ ಸೂಪರ್ವೈಸರ್ ದರ್ಜೆ-2 (ಇಲೆಕ್ಟ್ರಿಕಲ್) –
ಡಿಪ್ಲೊಮಾ (ಇಲೆಕ್ಟ್ರಿಕಲ್) ತಾಂತ್ರಿಕ ವಿದ್ಯಾರ್ಹತೆ ಹೊಂದಿರಬೇಕು.
ಉದ್ಯೋಗ ಮಾಹಿತಿ : ಗ್ರಾಮ ಪಂಚಾಯಿತಿಯಲ್ಲಿ ನೇಮಕಾತಿ 2026
ಡೈರಿ ಸೂಪರ್ವೈಸರ್ ದರ್ಜೆ-2 (ರೆಫ್ರಿಜರೇಷನ್ & ಏರ್ ಕಂಡೀಷನ್) –
ಡಿಪ್ಲೊಮಾ (ರೆಫ್ರಿಜರೇಷನ್ & ಏರ್ ಕಂಡೀಷನ್) ತಾಂತ್ರಿಕ ವಿದ್ಯಾರ್ಹತೆ ಹೊಂದಿರಬೇಕು.
ಡೈರಿ ಸೂಪರ್ವೈಸರ್ ದರ್ಜೆ-2 (ಸಿವಿಲ್) –
ಡಿಪ್ಲೊಮಾ (ಸಿವಿಲ್) ತಾಂತ್ರಿಕ ವಿದ್ಯಾರ್ಹತೆ ಹೊಂದಿರಬೇಕು.
ವಿಸ್ತರಣಾಧಿಕಾರಿ ದರ್ಜೆ 3 –
ಯಾವುದೇ ಪದವಿಯಲ್ಲಿ ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾಗಿರಬೇಕು. ಕಂಪ್ಯೂಟರ್ ಆಫೀಸ್ ಪ್ಯಾಕೇಜ್ ನಲ್ಲಿ ನಿರ್ವಹಣಾ ಜ್ಞಾನ ಹೊಂದಿರಬೇಕು.
ಆಡಳಿತ ಸಹಾಯಕ ದರ್ಜೆ-3 –
ಯಾವುದೇ ಪದವಿಯಲ್ಲಿ ದ್ವಿತೀಯ ದರ್ಜೆಯಲ್ಲಿ ಉತ್ತೀರ್ಣರಾಗಿರಬೇಕು. ಕಂಪ್ಯೂಟರ್ ಆಫೀಸ್ ಪ್ಯಾಕೇಜ್ ನಲ್ಲಿ ನಿರ್ವಹಣಾ ಜ್ಞಾನ ಹೊಂದಿರಬೇಕು.
ಲೆಕ್ಕ ಸಹಾಯಕ ದರ್ಜೆ-3 –
ಬಿ.ಕಾಂ ಪದವಿಯಲ್ಲಿ ದ್ವಿತೀಯ ದರ್ಜೆಯಲ್ಲಿ ಉತ್ತೀರ್ಣರಾಗಿರಬೇಕು. ಕಂಪ್ಯೂಟರ್ ಆಫೀಸ್ & ಟ್ಯಾಲಿ ಪ್ಯಾಕೇಜ್ ನಿರ್ವಹಣೆಯಲ್ಲಿ ತರಬೇತಿ ಹೊಂದಿರಬೇಕು.
ಮಾರುಕಟ್ಟೆ ಸಹಾಯಕರು ದರ್ಜೆ-3 –
ಮಾರುಕಟ್ಟೆ ವಿಷಯದಲ್ಲಿ ಬಿ.ಬಿ.ಎಂ/ ಬಿ.ಬಿ.ಎ ಪದವಿಯಲ್ಲಿ ದ್ವಿತೀಯ ದರ್ಜೆಯಲ್ಲಿ ಉತ್ತೀರ್ಣರಾಗಿರಬೇಕು. ಕಂಪ್ಯೂಟರ್ ಆಫೀಸ್ ಪ್ಯಾಕೇಜ್ ನಲ್ಲಿ ನಿರ್ವಹಣಾ ಜ್ಞಾನ ಹೊಂದಿರಬೇಕು.
ಕಿರಿಯ ತಾಂತ್ರಿಕರು (ಫಿಟ್ಟರ್) –
ಕನಿಷ್ಠ ಎಸ್.ಎಸ್.ಎಲ್.ಸಿ ವಿದ್ಯಾರ್ಹತೆಯೊಂದಿಗೆ ಕೈಗಾರಿಕಾ ತರಬೇತಿ ಸಂಸ್ಥೆಯಿಂದ ಫಿಟ್ಟರ್ ವಿಷಯದಲ್ಲಿ ಐಟಿಐ ಕೋರ್ಸ್ ಉತ್ತೀರ್ಣರಾಗಿ ಅಪ್ರೆಂಟಿಸ್ ಸರ್ಟಿಫಿಕೇಟ್ ಹೊಂದಿರಬೇಕು.
ಕಿರಿಯ ತಾಂತ್ರಿಕರು (ಇಲೆಕ್ಟ್ರಿಕಲ್) –
ಕನಿಷ್ಠ ಎಸ್.ಎಸ್.ಎಲ್.ಸಿ ವಿದ್ಯಾರ್ಹತೆಯೊಂದಿಗೆ ಕೈಗಾರಿಕಾ ತರಬೇತಿ ಸಂಸ್ಥೆಯಿಂದ ಇಲೆಕ್ಟ್ರಿಕಲ್ ವಿಷಯದಲ್ಲಿ ಐಟಿಐ ಕೋರ್ಸ್ ಉತ್ತೀರ್ಣರಾಗಿ ಅಪ್ರೆಂಟಿಸ್ ಸರ್ಟಿಫಿಕೇಟ್ ಹೊಂದಿರಬೇಕು.
ಕಿರಿಯ ತಾಂತ್ರಿಕರು (ಬಾಯ್ಲರ್) –
ಕನಿಷ್ಠ ಎಸ್.ಎಸ್.ಎಲ್.ಸಿ ವಿದ್ಯಾರ್ಹತೆಯೊಂದಿಗೆ ತಾಂತ್ರಿಕ ವಿದ್ಯಾಸಂಸ್ಥೆ/ ನಿರ್ದೇಶಕರು ಬಾಯ್ಲರ್ & ಕಾರ್ಖಾನೆ ರವರಿಂದ ಬಾಯ್ಲರ್ ಅಟೆಂಡೆಂಟ್ ದರ್ಜೆ-2 ಪ್ರಮಾಣ ಪತ್ರ ಪಡೆದಿರಬೇಕು.
ಖರೀದಿ/ ಉಗ್ರಾಣ ಅಧಿಕಾರಿ –
ಪ್ರಥಮ ದರ್ಜೆಯಲ್ಲಿ ಬಿ.ಕಾಂ/ ಬಿಬಿಎ ಪದವಿಯೊಂದಿಗೆ ಒಂದು ವರ್ಷದ ಪಿ.ಜಿ.ಡಿ.ಎಂ.ಎಂ ಅಥವಾ ಎಂ.ಬಿ.ಎ (ಮಟಿರಿಯಲ್ ಮ್ಯಾನೇಜ್ಮೆಂಟ್) ಅರ್ಹತೆ ಹೊಂದಿರಬೇಕು.
ಉದ್ಯೋಗ ಮಾಹಿತಿ : ಬಿಎಸ್ಎನ್ಎಲ್ ಜ್ಯೂನಿಯರ್ ಟೆಲಿಕಾಂ ಆಫೀಸರ್ ಹುದ್ದೆಗಳ ನೇಮಕಾತಿ 2026
ವಯೋಮಾನ :
ಅರ್ಜಿ ಸಲ್ಲಿಸಲು ನಿಗದಿಪಡಿಸಿದ ಕೊನೆಯ ದಿನಾಂಕಕ್ಕೆ ಅಭ್ಯರ್ಥಿಗಳಿಗೆ ಕನಿಷ್ಠ 18 ವರ್ಷ ವಯೋಮಾನ ನಿಗದಿಪಡಿಸಲಾಗಿದೆ.
• ಎಸ್ಸಿ, ಎಸ್ಟಿ, ಪ್ರವರ್ಗ 1 ಅಭ್ಯರ್ಥಿಗಳಿಗೆ – ಗರಿಷ್ಠ 45 ವರ್ಷ
• ಪ್ರವರ್ಗ 2ಎ, 2ಬಿ, 3ಎ, 3ಬಿ ಅಭ್ಯರ್ಥಿಗಳಿಗೆ – ಗರಿಷ್ಠ 43 ವರ್ಷ
• ಸಾಮಾನ್ಯ ಅಭ್ಯರ್ಥಿಗಳಿಗೆ – ಗರಿಷ್ಠ 40 ವರ್ಷ
ವೇತನ :
| ಹುದ್ದೆ | ವೇತನ |
| ಸಹಾಯಕ ವ್ಯವಸ್ಥಾಪಕರು (ಪ.ವೈ) | ರೂ. 83,700 – ರೂ. 1,55,200 |
| ಲೆಕ್ಕಾಧಿಕಾರಿ | ರೂ. 69,250 – ರೂ. 1,34,200 |
| ತಾಂತ್ರಿಕ ಅಧಿಕಾರಿ (ಡಿ.ಟಿ) | ರೂ. 69,250 – ರೂ. 1,34,200 |
| ಹಿರಿಯ ಕೆಮಿಸ್ಟ್ | ರೂ. 65,950 – ರೂ. 1,24,900 |
| ಡೈರಿ ಸೂಪರ್ವೈಸರ್ ದರ್ಜೆ-2 | ರೂ. 54,175 – ರೂ. 99,400 |
| ವಿಸ್ತರಣಾಧಿಕಾರಿ ದರ್ಜೆ-3 | ರೂ. 54,175 – ರೂ. 99,400 |
| ಆಡಳಿತ ಸಹಾಯಕ ದರ್ಜೆ-3 | ರೂ. 34,100 – ರೂ. 67,600 |
| ಲೆಕ್ಕ ಸಹಾಯಕ ದರ್ಜೆ-3 | ರೂ. 34,100 – ರೂ. 67,600 |
| ಮಾರುಕಟ್ಟೆ ಸಹಾಯಕ ದರ್ಜೆ-3 | ರೂ. 34,100 – ರೂ. 67,600 |
| ಕಿರಿಯ ತಾಂತ್ರಿಕರು | ರೂ. 34,100 – ರೂ. 67,600 |
| ಖರೀದಿ/ ಉಗ್ರಾಣ ಅಧಿಕಾರಿ (ಬ್ಯಾಕಲಾಗ್) | ರೂ. 69,250 – ರೂ. 1,34,200 |
ಆಯ್ಕೆ ವಿಧಾನ :
ಅಭ್ಯರ್ಥಿಗಳು ಲಿಖಿತ ಪರೀಕ್ಷೆಯಲ್ಲಿ ಗಳಿಸಿದ ಅಂಕಗಳ ಮೆರಿಟ್ ಆಧಾರದ ಮೇಲೆ 1:5ರ ಅನುಪಾತದಲ್ಲಿ ಸಂದರ್ಶನಕ್ಕೆ ಕರೆಯಲಾಗುವುದು. ಮೌಖಿಕ ಸಂದರ್ಶನಕ್ಕೆ ಗರಿಷ್ಠ 15 ಅಂಕಗಳನ್ನು ನಿಗದಿಪಡಿಸಲಾಗಿದೆ.
ಅರ್ಜಿ ಸಲ್ಲಿಕೆಯ ವಿಧಾನ :
ಅಭ್ಯರ್ಥಿಯು ಈ ಹುದ್ದೆಗೆ ಆನ್ಲೈನ್ ಮೂಲಕ ಅರ್ಜಿಗಳನ್ನು ಸಲ್ಲಿಸಬೇಕು.
ಹಂತ 1 : ಆನ್ಲೈನ್ ಮೂಲಕ ಅರ್ಜಿ ಸಲ್ಲಿಸುವ ಮೊದಲು ಇಲಾಖೆ ಹೊರಡಿಸಿರುವ ಅಧಿಸೂಚನೆಯನ್ನು ಗಮನವಿಟ್ಟು ಓದಿ ಅರ್ಜಿ ಸಲ್ಲಿಸಲು ಅಗತ್ಯವಿರುವ ದಾಖಲೆಗಳನ್ನು ಸಿದ್ಧಪಡಿಸಿಕೊಂಡು ನಂತರ ಅರ್ಜಿಯನ್ನು ಸಲ್ಲಿಸಬೇಕು.
ಹಂತ 2 : ಇಲಾಖೆಯ ವೆಬ್ಸೈಟ್ ಗೆ ಭೇಟಿ ನೀಡಿ ಅಥವಾ ಈ ಕೆಳಗಡೆ ನೀಡಲಾದ ಅಪ್ಲೈ ಆನ್ಲೈನ್ ಲಿಂಕ್ ಮೇಲೆ ಕ್ಲಿಕ್ ಮಾಡಿ ಅಪ್ಲಿಕೇಷನ್ ತೆರೆದುಕೊಳ್ಳಿ.
ಹಂತ 3 : ಅಪ್ಲಿಕೇಷನ್ ನಲ್ಲಿ ತಿಳಿಸಿರುವಂತಹ ಎಲ್ಲಾ ಮಾಹಿತಿಯನ್ನು (ಉದಾಹರಣೆಗೆ ಅಭ್ಯರ್ಥಿಯ ಹೆಸರು, ವಿಳಾಸ, ವಿದ್ಯಾರ್ಹತೆ, ಮೊಬೈಲ್ ಸಂಖ್ಯೆ ಇತ್ಯಾದಿ) ಭರ್ತಿ ಮಾಡಿ, ಮುಂದಿನ ಹಂತಕ್ಕೆ ತೆರಳುವ ಮುನ್ನ ಪುನಃ ಒಮ್ಮೆ ಪರಿಶೀಲಿಸಿ.
ಹಂತ 4 : ಅಪ್ಲಿಕೇಷನ್ ನಲ್ಲಿ ಯಾವುದೇ ಪ್ರಮಾಣ ಪತ್ರ/ ದಾಖಲೆಗಳನ್ನು ಅಪ್ಲೋಡ್ ಮಾಡಲು ಸೂಚಿಸಿದ್ದರೆ, ಅವುಗಳನ್ನು ಸ್ಕ್ಯಾನ್ ಮಾಡಿ ಅಪ್ಲೋಡ್ ಮಾಡಿ (ಅಗತ್ಯವಿದ್ದರೆ ಮಾತ್ರ).
ಹಂತ 5 : ಕೊನೆಯದಾಗಿ, ಅಭ್ಯರ್ಥಿಗೆ ಅರ್ಜಿ ಶುಲ್ಕ ಪಾವತಿಸಲು ಸೂಚಿಸಿದ್ದರೆ, ಶುಲ್ಕ ಪಾವತಿಸಿ ಅರ್ಜಿ ಸಲ್ಲಿಕೆ ಪೂರ್ಣಗೊಳಿಸಿ.
ನಿಗದಿತ ಅರ್ಜಿ ಶುಲ್ಕದ ವಿವರ :
• ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಪ್ರವರ್ಗ-1, ವಿಕಲಚೇತನ ಅಭ್ಯರ್ಥಿಗಳು – ರೂ. 500
• ಸಾಮಾನ್ಯ, ಇತರೆ ವರ್ಗದ ಅಭ್ಯರ್ಥಿಗಳು – ರೂ. 1000
ಶುಲ್ಕ ಪಾವತಿಸುವ ವಿಧಾನ :
ಅರ್ಜಿ ಶುಲ್ಕವನ್ನು ಡೆಬಿಟ್ ಕಾರ್ಡ್, ಕ್ರೆಡಿಟ್ ಕಾರ್ಡ್, ಆನ್ಲೈನ್ ಮೂಲಕ ಶುಲ್ಕ ಪಾವತಿಸಬಹುದು.
ಅರ್ಜಿಯನ್ನು ಸಲ್ಲಿಸಲು ನಿಗದಿಪಡಿಸಿರುವ ದಿನಾಂಕದ ವಿವರ :
• ಅರ್ಜಿ ಸಲ್ಲಿಕೆಗೆ ಪ್ರಾರಂಭದ ದಿನಾಂಕ : ಮೇ 29, 2026
• ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ : ಜೂನ್ 27, 2026
• ಶುಲ್ಕ ಪಾವತಿಸಲು ಕೊನೆಯ ದಿನಾಂಕ : ಜೂನ್ 27, 2026
KMF Gulbarga Recruitment 2026 : Important Links
| NOTIFICATION | CLICK HERE |
| APPLY ONLINE | CLICK HERE |
| Telegram Join Link | Click Here |
| WhatsApp Group Link | Click Here |
ಕೊನೆಯ ಪದಗಳು : ನಾವು ನೀಡಿದ ಉದ್ಯೋಗ ಮಾಹಿತಿಯನ್ನು ನೀವು ಇಷ್ಟಪಡುತ್ತೀರಿ ಎಂದು ಭಾವಿಸುತ್ತೇವೆ. ಈ ಉದ್ಯೋಗ ಮಾಹಿತಿ ನಿಮಗೆ ಇಷ್ಟವಾಗಿದ್ದರೆ ನಿಮ್ಮ ಸ್ನೇಹಿತರಿಗೆ ಶೇರ್ ಮಾಡಲು ಮರೆಯದಿರಿ.