KKRTC Recruitment 2022 – Apply Online for 36 Assistant Traffic Inspector, Technical Assistant, Assistant Accountant Posts

KKRTC Recruitment 2022 : ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದಲ್ಲಿ ಖಾಲಿ ಇರುವ ದರ್ಜೆ-3 ಮೇಲ್ವಿಚಾರಕೇತರ ಹುದ್ದೆಗಳ ಭರ್ತಿಗೆ ಅರ್ಹ ಹಾಗೂ ಆಸಕ್ತ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಹುದ್ದೆಗಳ ಭರ್ತಿಗೆ ಸಂಬಂಧಿಸಿದಂತೆ ಹುದ್ದೆಗಳ ಸಂಖ್ಯೆ, ಕರ್ತವ್ಯ ಸ್ಥಳ, ವಯೋಮಾನ, ವೇತನ, ಅರ್ಜಿ ಸಲ್ಲಿಕೆ ವಿಧಾನ ಹಾಗೂ ಇತರೆ ಮಾಹಿತಿಯನ್ನು ಈ ಕೆಳಗಡೆ ವಿವರವಾಗಿ ನೀಡಲಾಗಿದೆ ಪೂರ್ತಿ ಓದಿ.

KKRTC Recruitment 2022 : Details of Vacancies

ಹುದ್ದೆ : ಕುಶಲಕರ್ಮಿ (ಆಟೋ ಮೆಕ್ಯಾನಿಕ್, ಆಟೋ ಬಾಡಿ ಬಿಲ್ಡರ್, ಆಟೋ ವೆಲ್ಡರ್, ಆಟೋ ಪೇಂಟರ್, ಆಟೋ ಎಲೆಕ್ಟ್ರಿಷಿಯನ್), ತಾಂತ್ರಿಕ ಸಹಾಯಕ, ಸಹಾಯಕ ಸಂಚಾರ ನಿರೀಕ್ಷಕ, ಕ.ರಾ.ಸಾ. ಪೇದೆ, ಸಹಾಯಕ ಲೆಕ್ಕಿಗ

ಕರ್ತವ್ಯ ಸ್ಥಳ : ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳು ಕರ್ನಾಟಕದಲ್ಲಿ ಕರ್ತವ್ಯ ನಿರ್ವಹಿಸಬೇಕು.

ಖಾಲಿಯಿರುವ ಹುದ್ದೆಗಳ ಸಂಖ್ಯೆ : ಒಟ್ಟು 36 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ.

ಹುದ್ದೆಹುದ್ದೆಗಳ ಸಂಖ್ಯೆ ವೇತನ
ಕುಶಲಕರ್ಮಿ1913970-20740
ತಾಂತ್ರಿಕ ಸಹಾಯಕ 311640-15700
ಸಹಾಯಕ ಸಂಚಾರ ನಿರೀಕ್ಷಕ 613970-20740
ಕ.ರಾ.ಸಾ. ಪೇದೆ 5+211640-15700
ಸಹಾಯಕ ಲೆಕ್ಕಿಗ 114970-26670

ಶೈಕ್ಷಣಿಕ ಅರ್ಹತೆ :

• ಕುಶಲಕರ್ಮಿ (ಆಟೋ ಮೆಕ್ಯಾನಿಕ್, ಆಟೋ ಬಾಡಿ ಬಿಲ್ಡರ್, ಆಟೋ ವೆಲ್ಡರ್, ಆಟೋ ಪೇಂಟರ್) – ಸರ್ಕಾರದಿಂದ ಮಾನ್ಯತೆ ಪಡೆದ ಸಂಸ್ಥೆಯಿಂದ ಮೆಕ್ಯಾನಿಕಲ್/ ಆಟೋಮೊಬೈಲ್/ ವೆಲ್ಡಿಂಗ್ ಮತ್ತು ಶೀಟ್ ಮೆಟಲ್ ಟೆಕ್ನಾಲಜಿಯಲ್ಲಿ 3 ವರ್ಷದ ಇಂಜಿನಿಯರಿಂಗ್ ಡಿಪ್ಲೋಮಾ ಪಡೆದಿರಬೇಕು. ಚಾಲ್ತಿಯಲ್ಲಿರುವ ಭಾರಿ ಪ್ರಯಾಣಿಕರ ವಾಹನ ಚಾಲನಾ ಪರವಾನಿಗೆ ಹೊಂದಿರಬೇಕು ಅಥವಾ ಪರೀಕ್ಷಾರ್ಥ ಅವಧಿ ಮುಗಿಯುವುದರೊಳಗೆ ಹೊಂದತಕ್ಕದ್ದು.
• ಕುಶಲಕರ್ಮಿ (ಆಟೋ ಎಲೆಕ್ಟ್ರಿಷಿಯನ್) – ಸರ್ಕಾರದಿಂದ ಮಾನ್ಯತೆ ಪಡೆದ ಸಂಸ್ಥೆಯಿಂದ ಎಲೆಕ್ಟ್ರಿಕಲ್/ ಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ಸ್/ ಮೆಕ್ಯಾಟ್ರಾನಿಕ್ಸ್ ಇಂಜಿನಿಯರಿಂಗ್/ ರೆಫ್ರಿಜರೇಷನ್ ಮತ್ತು ಏರ್ ಕಂಡೀಷನಿಂಗ್ ನಲ್ಲಿ 3 ವರ್ಷಗಳ ಇಂಜಿನಿಯರಿಂಗ್ ಡಿಪ್ಲೋಮಾ ಪಡೆದಿರಬೇಕು. ಚಾಲ್ತಿಯಲ್ಲಿರುವ ಭಾರಿ ವಾಹನ ಚಾಲನಾ ಪರವಾನಿಗೆ ಹೊಂದಿರಬೇಕು ಅಥವಾ ಪರೀಕ್ಷಾರ್ಥ ಅವಧಿ ಮುಗಿಯುವುದರೊಳಗೆ ಹೊಂದತಕ್ಕದ್ದು.
• ತಾಂತ್ರಿಕ ಸಹಾಯಕ – ಪ್ರೌಢ ಶಿಕ್ಷಣ ಮಂಡಳಿಯಿಂದ ಎಸ್.ಎಸ್.ಎಲ್.ಸಿ ಉತ್ತೀರ್ಣರಾದ ನಂತರ ತಾಂತ್ರಿಕ ಮಂಡಳಿ ಅಥವಾ ಸರ್ಕಾರದಿಂದ ಅಂಗೀಕೃತವಾದ ಸಂಸ್ಥೆಯಲ್ಲಿ ಐ.ಟಿ.ಸಿ/ ಐ.ಟಿ.ಐ/ ಎನ್.ಎ.ಸಿ.ಯಲ್ಲಿ ಮೆಕ್ಯಾನಿಕ್ (ಮೋಟಾರ್ ವೆಹಿಕಲ್) ಹಾಗೂ ಇನ್ನೀತರ ವೃತ್ತಿಗಳಲ್ಲಿ ಉತ್ತೀರ್ಣರಾಗಿರಬೇಕು. ಪರೀಕ್ಷಾರ್ಥ ಸೇವೆ ಪೂರ್ಣಗೊಳ್ಳುವುದರೊಳಗೆ ಲಘು ಮೋಟಾರು ವಾಹನ ಚಾಲನಾ ಪರವಾನಿಗೆಯನ್ನು ಹೊಂದತಕ್ಕದ್ದು.
• ಸಹಾಯಕ ಸಂಚಾರ ನಿರೀಕ್ಷಕ – ಪದವಿ ಪೂರ್ವ ಪರೀಕ್ಷೆಯಲ್ಲಿ ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾಗಿರಬೇಕು.
• ಕ.ರಾ.ಸಾ. ಪೇದೆ – ಪಿಯುಸಿ ಉತ್ತೀರ್ಣರಾಗಿರಬೇಕು ಅಥವಾ ಮಾಜಿ ಸೈನಿಕರಾಗಿದ್ದು, 2ನೇ ದರ್ಜೆ ಆರ್ಮಿ ಸರ್ಟಿಫಿಕೇಟ್ ಅಥವಾ ನೌಕಾದಳ/ ವಾಯುದಳದಲ್ಲಿ ತತ್ಸಮಾನ ದರ್ಜೆಯ ಸರ್ಟಿಫಿಕೇಟ್ ಹೊಂದಿರಬೇಕು.
• ಸಹಾಯಕ ಲೆಕ್ಕಿಗ – ಸರ್ಕಾರದಿಂದ ಮಾನ್ಯತೆ ಪಡೆದ ಸಂಸ್ಥೆಯಿಂದ ಮೂರು ವರ್ಷಗಳ ವಾಣಿಜ್ಯ ಪದವಿ ಹೊಂದಿರಬೇಕು. ಗಣಕಯಂತ್ರ ಜ್ಞಾನ ಹೊಂದಿರಬೇಕು.

ವಯೋಮಾನ : ಅರ್ಜಿ ಸಲ್ಲಿಸಲು ನಿಗದಿಪಡಿಸಿದ ಕೊನೆಯ ದಿನಾಂಕಕ್ಕೆ ಅಭ್ಯರ್ಥಿಗಳು ಕನಿಷ್ಠ 18 ವರ್ಷ ಪೂರೈಸಿರಬೇಕು ಹಾಗೂ ಗರಿಷ್ಠ 40 ವರ್ಷ ಮೀರಿರಬಾರದು.

ಉದ್ಯೋಗ ಮಾಹಿತಿ : ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ನೇಮಕಾತಿ 2022

ಆಯ್ಕೆ ವಿಧಾನ : ಅ) ಸಾಮಾನ್ಯ ಸಾಮರ್ಥ್ಯ ಪರೀಕ್ಷೆ (ಎಲ್ಲಾ ಅಭ್ಯರ್ಥಿಗಳಿಗೆ), ಬ) ಮೂಲ ದಾಖಲಾತಿ (ಸಹಾಯಕ ಲೆಕ್ಕಿಗ ಹುದ್ದೆಗೆ), ದೇಹದಾರ್ಢ್ಯತೆ ಪರಿಶೀಲನೆ ಮತ್ತು ದೈಹಿಕ ಸಾಮರ್ಥ್ಯ ಪರೀಕ್ಷೆಯಲ್ಲಿ (ಸಹಾಯಕ ಲೆಕ್ಕಿಗ ಹೊರತುಪಡಿಸಿ ಉಳಿದ ಹುದ್ದೆಗೆ) ಅರ್ಹಗೊಂಡ ಅಭ್ಯರ್ಥಿಗಳನ್ನು ಆಯಾ ಹುದ್ದೆಗೆ ನಿಗದಿಪಡಿಸಲಾದ ಶೈಕ್ಷಣಿಕ ವಿದ್ಯಾರ್ಹತೆಯಲ್ಲಿ ಪಡೆದ ಒಟ್ಟು ಅಂಕಗಳ ಶೇಕಡಾ 25 ರಷ್ಟು ಮತ್ತು ಸಾಮಾನ್ಯ ಸಾಮರ್ಥ್ಯ ಪರೀಕ್ಷೆಯಲ್ಲಿ ಪಡೆದ ಅಂಕಗಳ ಶೇಕಡಾ 75 ರಷ್ಟು ಅಂಕಗಳನ್ನು ಕ್ರೋಢೀಕರಿಸಿ ಮೆರಿಟ್ ಮತ್ತು ಮೀಸಲಾತಿ ಅನುಸಾರ ಆಯ್ಕೆ ಮಾಡಲಾಗುವುದು.

ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದಲ್ಲಿ ಖಾಲಿಯಿರುವ ಹುದ್ದೆಗೆ ಅರ್ಜಿ ಸಲ್ಲಿಕೆಯ ವಿಧಾನ :
• ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಯಸುವ ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು ಆನ್‌ಲೈನ್‌ ಮೂಲಕವೇ ಅರ್ಜಿಯನ್ನು ಸಲ್ಲಿಸಬೇಕು.
• ಅಭ್ಯರ್ಥಿಗಳು ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಅಧಿಕೃತ ವೆಬ್‌ಸೈಟ್ ವಿಳಾಸಕ್ಕೆ ಭೇಟಿ ನೀಡಿ, ಆನ್‌ಲೈನ್‌ ಅರ್ಜಿಯಲ್ಲಿ ಹುದ್ದೆಗೆ ಅಗತ್ಯವಿರುವ ಎಲ್ಲಾ ಮಾಹಿತಿಯನ್ನು ಭರ್ತಿ ಮಾಡಿ ( ಉದಾಹರಣೆಗೆ : ಅಭ್ಯರ್ಥಿಯ ಹೆಸರು, ವಿದ್ಯಾರ್ಹತೆ, ದೂರವಾಣಿ ಸಂಖ್ಯೆ, ಇಮೇಲ್ ವಿಳಾಸ ಇತ್ಯಾದಿ) ನಂತರ ನಿಗದಿತ ಅರ್ಜಿ ಶುಲ್ಕ ಪಾವತಿಸಿ ಅರ್ಜಿಯನ್ನು ಸಲ್ಲಿಸಬೇಕು

ನಿಗದಿತ ಅರ್ಜಿ ಶುಲ್ಕದ ವಿವರ : ಅಭ್ಯರ್ಥಿಗಳು ರೂ. 300 ಅರ್ಜಿ ಶುಲ್ಕ ಪಾವತಿಸಬೇಕು.

ಶುಲ್ಕ ಪಾವತಿಸುವ ವಿಧಾನ : ಅಭ್ಯರ್ಥಿಗಳು ಆನ್‌ಲೈನ್‌ನಲ್ಲಿ ಡೆಬಿಟ್ ಕಾರ್ಡ್, ಕ್ರೆಡಿಟ್ ಕಾರ್ಡ್, ನೆಟ್ ಬ್ಯಾಂಕಿಂಗ್ ಮೂಲಕ ಶುಲ್ಕ ಪಾವತಿಸಬಹುದು.

ಅರ್ಜಿಯನ್ನು ಸಲ್ಲಿಸಲು ನಿಗದಿಪಡಿಸಿದ ದಿನಾಂಕದ ವಿವರ :
ಅರ್ಜಿ ಸಲ್ಲಿಸಲು ಪ್ರಾರಂಭದ ದಿನಾಂಕ : ಆಗಸ್ಟ್ 26, 2022
ಅರ್ಜಿ ಸಲ್ಲಿಸಲು, ಶುಲ್ಕ ಪಾವತಿಸಲು ಕೊನೆಯ ದಿನಾಂಕ : ಸೆಪ್ಟೆಂಬರ್ 18, 2022 ಸೆಪ್ಟೆಂಬರ್ 30, 2022

KKRTC Recruitment 2022 : Important Links

Notification (Residual)Click Here
Notification (Local)Click Here
Apply Online Click Here

ಕೊನೆಯ ಪದಗಳು : ನಾವು ನೀಡಿದ ಉದ್ಯೋಗ ಮಾಹಿತಿಯನ್ನು ನೀವು ಇಷ್ಟಪಡುತ್ತೀರಿ ಎಂದು ಭಾವಿಸುತ್ತೇವೆ. ಈ ಉದ್ಯೋಗ ಮಾಹಿತಿ ನಿಮಗೆ ಇಷ್ಟವಾಗಿದ್ದರೆ ನಿಮ್ಮ ಸ್ನೇಹಿತರಿಗೆ ಶೇರ್ ಮಾಡಲು ಮರೆಯದಿರಿ.

WhatsApp
Telegram
Facebook

2 thoughts on “KKRTC Recruitment 2022 – Apply Online for 36 Assistant Traffic Inspector, Technical Assistant, Assistant Accountant Posts”

Leave a Comment