ದಾವಣಗೆರೆ ಜಿಲ್ಲಾ ಪಂಚಾಯತ್ ನೇಮಕಾತಿ 2023 – Davangere Zilla Panchayat Recruitment 2023 Apply Online at Davangere.nic.in

Davangere Zilla Panchayat Recruitment 2023 : ಮಹಾತ್ಮಾಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ದಾವಣಗೆರೆ ಜಿಲ್ಲೆಯಲ್ಲಿ ಖಾಲಿ ಇರುವ ಹುದ್ದೆಗಳಿಗೆ ಹೊರಗುತ್ತಿಗೆ ಆಧಾರದ ಮೇಲೆ ಭರ್ತಿ ಮಾಡಿಕೊಳ್ಳಲು ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಹುದ್ದೆಗಳ ಭರ್ತಿಗೆ ಸಂಬಂಧಿಸಿದಂತೆ ಕರ್ತವ್ಯ ಸ್ಥಳ, ಶೈಕ್ಷಣಿಕ ಅರ್ಹತೆ, ವಯೋಮಾನ, ವೇತನ ಹಾಗೂ ಇತರೆ ಮಾಹಿತಿಯನ್ನು ಈ ಕೆಳಗಡೆ ವಿವರವಾಗಿ ನೀಡಲಾಗಿದೆ ಪೂರ್ತಿ ಓದಿ.

Davangere Zilla Panchayat Recruitment 2023 : Details of Vacancies

ಹುದ್ದೆ : ತಾಂತ್ರಿಕ ಸಹಾಯಕರು (ಸಿವಿಲ್), ತಾಂತ್ರಿಕ ಸಹಾಯಕರು (ಕೃಷಿ), ತಾಂತ್ರಿಕ ಸಹಾಯಕರು (ತೋಟಗಾರಿಕೆ), ತಾಂತ್ರಿಕ ಸಹಾಯಕರು (ಅರಣ್ಯ), ತಾಂತ್ರಿಕ ಸಹಾಯಕರು (ರೇಷ್ಮೆ), ಆಡಳಿತ ಸಹಾಯಕರು

ಕರ್ತವ್ಯ ಸ್ಥಳ : ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳು ದಾವಣಗೆರೆ ಜಿಲ್ಲೆಯಲ್ಲಿ ಕರ್ತವ್ಯ ನಿರ್ವಹಿಸಬೇಕು.

ಖಾಲಿಯಿರುವ ಹುದ್ದೆಗಳ ಸಂಖ್ಯೆ : ಒಟ್ಟು 20 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ.

ಹುದ್ದೆಹುದ್ದೆಗಳ ಸಂಖ್ಯೆ ವೇತನ
ತಾಂತ್ರಿಕ ಸಹಾಯಕರು (ಸಿವಿಲ್)428,000 + ಪ್ರ. ಭತ್ಯೆ 2,000
ತಾಂತ್ರಿಕ ಸಹಾಯಕರು (ಕೃಷಿ)128,000 + ಪ್ರ. ಭತ್ಯೆ 2,000
ತಾಂತ್ರಿಕ ಸಹಾಯಕರು (ತೋಟಗಾರಿಕೆ)628,000 + ಪ್ರ. ಭತ್ಯೆ 2,000
ತಾಂತ್ರಿಕ ಸಹಾಯಕರು (ಅರಣ್ಯ)228,000 + ಪ್ರ. ಭತ್ಯೆ 2,000
ತಾಂತ್ರಿಕ ಸಹಾಯಕರು (ರೇಷ್ಮೆ)128,000 + ಪ್ರ. ಭತ್ಯೆ 2,000
ಆಡಳಿತ ಸಹಾಯಕರು622,000

ಶೈಕ್ಷಣಿಕ ಅರ್ಹತೆ :
ತಾಂತ್ರಿಕ ಸಹಾಯಕರು (ಸಿವಿಲ್) – ಬಿಇ ಸಿವಿಲ್/ ಎಂ.ಟೆಕ್ ಸಿವಿಲ್ ಅಥವಾ ಸ್ಟ್ರಕ್ಚರ್
ತಾಂತ್ರಿಕ ಸಹಾಯಕರು (ಕೃಷಿ) – ಬಿ.ಎಸ್ಸಿ/ಎಂ.ಎಸ್ಸಿ ಅಗ್ರಿಕಲ್ಚರ್
ತಾಂತ್ರಿಕ ಸಹಾಯಕರು (ತೋಟಗಾರಿಕೆ) – ಬಿ.ಎಸ್ಸಿ/ಎಂ.ಎಸ್ಸಿ ಹೊರ್ಟಿಕಲ್ಚರ್
ತಾಂತ್ರಿಕ ಸಹಾಯಕರು (ಅರಣ್ಯ) – ಬಿ.ಎಸ್ಸಿ/ಎಂ.ಎಸ್ಸಿ ಫಾರೆಸ್ಟ್ರಿ
ತಾಂತ್ರಿಕ ಸಹಾಯಕರು (ರೇಷ್ಮೆ) – ಬಿ.ಎಸ್ಸಿ/ಎಂ.ಎಸ್ಸಿ ಸೆರಿಕಲ್ಚರ್

ಆಡಳಿತ ಸಹಾಯಕರು – ಆಡಳಿತ ಸಹಾಯಕ ಹುದ್ದೆಗೆ ಬಿ.ಕಾಂ ಪದವಿ ಜೊತೆಗೆ ಕಂಪ್ಯೂಟರ್ ನಲ್ಲಿ ಕನ್ನಡ ಮತ್ತು ಇಂಗ್ಲಿಷ್ ಟೈಪಿಂಗ್ ಪರಿಣಿತಿ ಹೊಂದಿರಬೇಕು ಹಾಗೂ ಉತ್ತಮ ಕಂಪ್ಯೂಟರ್ ಜ್ಞಾನ ಹೊಂದಿರಬೇಕು.

ವಯೋಮಾನ : ದಿನಾಂಕ 01/08/2023ಕ್ಕೆ ಅನ್ವಯಿಸುವಂತೆ ಅಭ್ಯರ್ಥಿಗಳಿಗೆ ಕನಿಷ್ಠ 21 ವರ್ಷ, ಗರಿಷ್ಠ 40 ವರ್ಷ ವಯೋಮಾನ ನಿಗದಿಪಡಿಸಲಾಗಿದೆ.

ಉದ್ಯೋಗ ಮಾಹಿತಿ : ಕರ್ನಾಟಕ ಬ್ಯಾಂಕಿನಲ್ಲಿ ಆಫೀಸರ್ಸ್ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ

ಆಯ್ಕೆ ವಿಧಾನ : ತಾಂತ್ರಿಕ ಸಹಾಯಕರು ಹುದ್ದೆಗೆ ವಿದ್ಯಾರ್ಹತೆ ಹಾಗೂ ಅನುಭವದ ಆಧಾರದ ಮೇಲೆ ಮೆರಿಟ್ ಲಿಸ್ಟ್ ಸಿದ್ದಪಡಿಸಿ ಆಯ್ಕೆ ಮಾಡಲಾಗುವುದು. ಆಡಳಿತ ಸಹಾಯಕ ಹುದ್ದೆಗೆ ಅಭ್ಯರ್ಥಿಗಳಿಗೆ ಕಂಪ್ಯೂಟರ್ ಜ್ಞಾನ ಮತ್ತು ಕನ್ನಡ ಹಾಗೂ ಇಂಗ್ಲೀಷ್ ಟೈಪಿಂಗ್ ಬಗ್ಗೆ ಪ್ರಾಯೋಗಿಕ ಪರೀಕ್ಷೆ ನಡೆಸಿ ಆಯ್ಕೆ ಮಾಡಲಾಗುವುದು.

ಅನುಭವ : ತಾಂತ್ರಿಕ ಸಹಾಯಕರು ಹುದ್ದೆಗೆ ಅಭ್ಯರ್ಥಿಗಳು ಹುದ್ದೆಗೆ ಸಂಬಂಧಿಸಿದ ಕಾರ್ಯಕ್ಷೇತ್ರದಲ್ಲಿ ಕನಿಷ್ಠ 2 ರಿಂದ 3 ವರ್ಷಗಳ ಅನುಭವ ಹೊಂದಿರಬೇಕು.

ಅರ್ಜಿ ಸಲ್ಲಿಕೆಯ ವಿಧಾನ : ಅಭ್ಯರ್ಥಿಯು ಈ ಹುದ್ದೆಗೆ ಆನ್‌ಲೈನ್‌ ಮೂಲಕ ಅರ್ಜಿಗಳನ್ನು ಸಲ್ಲಿಸಬೇಕು.
ಹಂತ 1 : ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸುವ ಮೊದಲು ಇಲಾಖೆ ಹೊರಡಿಸಿರುವ ಅಧಿಸೂಚನೆಯನ್ನು ಗಮನವಿಟ್ಟು ಓದಿ ಅರ್ಜಿ ಸಲ್ಲಿಸಲು ಅಗತ್ಯವಿರುವ ದಾಖಲೆಗಳನ್ನು ಸಿದ್ಧಪಡಿಸಿಕೊಂಡು ನಂತರ ಅರ್ಜಿಯನ್ನು ಸಲ್ಲಿಸಬೇಕು.
ಹಂತ 2 : ಇಲಾಖೆಯ ವೆಬ್‌ಸೈಟ್ ಗೆ ಭೇಟಿ ನೀಡಿ ಅಥವಾ ಈ ಕೆಳಗಡೆ ನೀಡಲಾದ ಅಪ್ಲೈ ಆನ್‌ಲೈನ್‌ ಲಿಂಕ್ ಮೇಲೆ ಕ್ಲಿಕ್ ಮಾಡಿ ಅಪ್ಲಿಕೇಷನ್ ತೆರೆದುಕೊಳ್ಳಿ.
ಹಂತ 3 : ಅಪ್ಲಿಕೇಷನ್ ನಲ್ಲಿ ತಿಳಿಸಿರುವಂತಹ ಎಲ್ಲಾ ಮಾಹಿತಿಯನ್ನು (ಉದಾಹರಣೆಗೆ ಅಭ್ಯರ್ಥಿಯ ಹೆಸರು, ವಿಳಾಸ, ವಿದ್ಯಾರ್ಹತೆ, ಮೊಬೈಲ್ ಸಂಖ್ಯೆ ಇತ್ಯಾದಿ) ಭರ್ತಿ ಮಾಡಿ, ಮುಂದಿನ ಹಂತಕ್ಕೆ ತೆರಳುವ ಮುನ್ನ ಪುನಃ ಒಮ್ಮೆ ಪರಿಶೀಲಿಸಿ.
ಹಂತ 4 : ಕೊನೆಯದಾಗಿ, ಅಪ್ಲಿಕೇಷನ್ ನಲ್ಲಿ ಯಾವುದೇ ಪ್ರಮಾಣ ಪತ್ರ/ ದಾಖಲೆಗಳನ್ನು ಅಪ್ಲೋಡ್ ಮಾಡಲು ಸೂಚಿಸಿದ್ದರೆ, ಅವುಗಳನ್ನು ಸ್ಕ್ಯಾನ್ ಮಾಡಿ ಅಪ್ಲೋಡ್ ಮಾಡಿ (ಅಗತ್ಯವಿದ್ದರೆ ಮಾತ್ರ) ಅರ್ಜಿ ಸಲ್ಲಿಕೆ ಪೂರ್ಣಗೊಳಿಸಿ.

ನಿಗದಿತ ಅರ್ಜಿ ಶುಲ್ಕದ ವಿವರ : ಯಾವುದೇ ಅರ್ಜಿ ಶುಲ್ಕ ಇರುವುದಿಲ್ಲ

ಅರ್ಜಿಯನ್ನು ಸಲ್ಲಿಸಲು ನಿಗದಿಪಡಿಸಿರುವ ದಿನಾಂಕದ ವಿವರ :
ಅರ್ಜಿ ಸಲ್ಲಿಕೆಗೆ ಪ್ರಾರಂಭದ ದಿನಾಂಕ : ಆಗಸ್ಟ್ 10, 2023
ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ : ಆಗಸ್ಟ್ 24, 2023

Davangere Zilla Panchayat Recruitment 2023 : Important Links

NOTIFICATIONCLICK HERE
APPLY ONLINE CLICK HERE
Telegram Join Link Click Here

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಬೇಕಾದ ಕಚೇರಿಯ ಉಚಿತ ಸಹಾಯವಾಣಿ ಸಂಖ್ಯೆ 1800 425 2203

ಕೊನೆಯ ಪದಗಳು : ನಾವು ನೀಡಿದ ಉದ್ಯೋಗ ಮಾಹಿತಿಯನ್ನು ನೀವು ಇಷ್ಟಪಡುತ್ತೀರಿ ಎಂದು ಭಾವಿಸುತ್ತೇವೆ. ಈ ಉದ್ಯೋಗ ಮಾಹಿತಿ ನಿಮಗೆ ಇಷ್ಟವಾಗಿದ್ದರೆ ನಿಮ್ಮ ಸ್ನೇಹಿತರಿಗೆ ಶೇರ್ ಮಾಡಲು ಮರೆಯದಿರಿ.

WhatsApp
Telegram
Facebook

Leave a Comment