
DHFWS Haveri Recruitment 2026 : ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾವೇರಿಯ ರಾಷ್ಟ್ರೀಯ ಆರೋಗ್ಯ ಅಭಿಯಾನದಡಿಯಲ್ಲಿ ವಿವಿಧ ರಾಷ್ಟ್ರೀಯ ಆರೋಗ್ಯ ಕಾರ್ಯಕ್ರಮಗಳು ಮತ್ತು ಪಿ.ಎಂ. ಅಭೀಮ್ ಅಡಿ ಜಿಲ್ಲೆಯಲ್ಲಿ ಖಾಲಿ ಇರುವ ವೈದ್ಯಾಧಿಕಾರಿಗಳು (ಎಂ.ಬಿ.ಬಿ.ಎಸ್), ಪ್ರಯೋಗ ಶಾಲಾ ತಂತ್ರಜ್ಞರು, ಶುಶ್ರೂಷಾಧಿಕಾರಿಗಳು ಹಾಗೂ ವಿವಿಧ ಹುದ್ದೆಗಳನ್ನು ಗುತ್ತಿಗೆ ಆಧಾರದ ಮೇಲೆ ಆಯ್ಕೆ ಮಾಡಿಕೊಳ್ಳಲು ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳಿಂದ ನೇರ ಸಂದರ್ಶನಕ್ಕೆ ಅರ್ಜಿ ಕರೆಯಲಾಗಿದೆ. ಹುದ್ದೆಗಳ ಭರ್ತಿಗೆ ಸಂಬಂಧಿಸಿದಂತೆ ಹುದ್ದೆಗಳ ಸಂಖ್ಯೆ, ಶೈಕ್ಷಣಿಕ ಅರ್ಹತೆ ಹಾಗೂ ಇತರೆ ಮಾಹಿತಿಯನ್ನು ಈ ಕೆಳಗಡೆ ವಿವರವಾಗಿ ನೀಡಲಾಗಿದೆ ಪೂರ್ತಿ ಓದಿ.
DHFWS Haveri Recruitment 2026 : Details of Vacancies
ಹುದ್ದೆ :
ವೈದ್ಯಾಧಿಕಾರಿಗಳು (ಎಂ.ಬಿ.ಬಿ.ಎಸ್), ಪ್ರಯೋಗ ಶಾಲಾ ತಂತ್ರಜ್ಞರು, ಶುಶ್ರೂಷಾಧಿಕಾರಿಗಳು, ಮಹಿಳಾ ಶುಶ್ರೂಷಾಧಿಕಾರಿಗಳು, ಸೈಕಿಯಾಟ್ರಿಕ್ ನರ್ಸ್, ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿಗಳು, ಸೈಕಾಲಾಜಿಸ್ಟ್, ಆಡಿಯೋಲೊಜಿಸ್ಟ್/ ಸ್ಫೀಚ್ ಥೆರಪಿಸ್ಟ್, ಆಪ್ಟೋಮೆಟ್ರಿಸ್ಟ್, ಕ್ಷ-ಕಿರಣ ತಂತ್ರಜ್ಞರು, ಫಿಜಿಯೋಥೆರಫಿಸ್ಟ್.
ಕರ್ತವ್ಯ ಸ್ಥಳ :
ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳು ಹಾವೇರಿ ಜಿಲ್ಲೆ, ಕರ್ನಾಟಕದಲ್ಲಿ ಕೆಲಸ ನಿರ್ವಹಿಸಬೇಕು.
ಖಾಲಿಯಿರುವ ಹುದ್ದೆಗಳ ಸಂಖ್ಯೆ :
ಒಟ್ಟು 59 ಹುದ್ದೆಗಳ ಭರ್ತಿಗೆ ಅರ್ಜಿಯನ್ನು ಕರೆಯಲಾಗಿದೆ.
| ಹುದ್ದೆ | ಹುದ್ದೆಗಳ ಸಂಖ್ಯೆ |
| ವೈದ್ಯಾಧಿಕಾರಿಗಳು (ಎಂ.ಬಿ.ಬಿ.ಎಸ್) | 13 |
| ಪ್ರಯೋಗ ಶಾಲಾ ತಂತ್ರಜ್ಞರು | 8 |
| ಶುಶ್ರೂಷಾಧಿಕಾರಿಗಳು (ಸಂಚಾರಿ ಆರೋಗ್ಯ ಘಟಕ) | 1 |
| ಮಹಿಳಾ ಶುಶ್ರೂಷಾಧಿಕಾರಿಗಳು/ ಶುಶ್ರೂಷಾಧಿಕಾರಿಗಳು | 18 |
| ಸೈಕಿಯಾಟ್ರಿಕ್ ನರ್ಸ್ | 1 |
| ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿಗಳು | 10 |
| ಸೈಕಾಲಾಜಿಸ್ಟ್ | 1 |
| ಆಡಿಯೋಲೊಜಿಸ್ಟ್/ ಸ್ಫೀಚ್ ಥೆರಪಿಸ್ಟ್ | 1 |
| ಆಪ್ಟೋಮೆಟ್ರಿಸ್ಟ್ | 1 |
| ಕ್ಷ-ಕಿರಣ ತಂತ್ರಜ್ಞರು | 4 |
| ಫಿಜಿಯೋಥೆರಫಿಸ್ಟ್ | 1 |
ಶೈಕ್ಷಣಿಕ ಅರ್ಹತೆ :
- ವೈದ್ಯಾಧಿಕಾರಿಗಳು (ಎಂ.ಬಿ.ಬಿ.ಎಸ್) – ಎಂ.ಬಿ.ಬಿ.ಎಸ್ ಉತ್ತೀರ್ಣರಾಗಿರಬೇಕು ಮತ್ತು ಕಡ್ಡಾಯವಾಗಿ ಇಂಟರ್ನಶಿಪ್ ಪೂರೈಸಿರಬೇಕು ಹಾಗೂ ಕೆ.ಎಂ.ಸಿಯ ನೊಂದಣಿಯನ್ನು ಹೊಂದಿರತಕ್ಕದ್ದು.
- ಪ್ರಯೋಗ ಶಾಲಾ ತಂತ್ರಜ್ಞರು – ಎಸ್.ಎಸ್.ಎಲ್.ಸಿ ಅಥವಾ ತತ್ಸಮಾನ ಪರೀಕ್ಷೆಯಲ್ಲಿ ತೇರ್ಗಡೆಯನ್ನು ಹೊಂದಿರಬೇಕು ಮತ್ತು ಕರ್ನಾಟಕ ರಾಜ್ಯ ಅರೆ ವೈದ್ಯಕೀಯ ಮಂಡಳಿಯು ನಡೆಸುವ ಪ್ರಯೋಗಶಾಲಾ ತಂತ್ರಜ್ಞತೆಯಲ್ಲಿ ಮೂರು ವರ್ಷದ ಡಿಪ್ಲೋಮಾ ಹೊಂದಿರಬೇಕು. ಅಥವಾ ದ್ವಿತೀಯ ಪಿ.ಯು.ಸಿಯಲ್ಲಿ ವಿಜ್ಞಾನ ವಿಷಯದಲ್ಲಿ ಉತ್ತೀರ್ಣ ಮತ್ತು ರಾಜ್ಯ ಅರೆ ವೈದ್ಯಕೀಯ ಮಂಡಳಿಯು ನಡೆಸುವ ಪ್ರಯೋಗ ಶಾಲಾ ತಂತ್ರಜ್ಞತೆಯಲ್ಲಿ ಎರಡು ವರ್ಷದ ಡಿಪ್ಲೋಮಾ ಹೊಂದಿರಬೇಕು. ಪ್ರಯೋಗ ಶಾಲಾ ತಂತ್ರಜ್ಞರು ಕಡ್ಡಾಯವಾಗಿ ಕರ್ನಾಟಕ ರಾಜ್ಯ ಅರೆ ವೈದ್ಯಕೀಯ ಮಂಡಳಿಯ ನೋಂದಣಿ ಹೊಂದಿರಬೇಕು.
- ಶುಶ್ರೂಷಾಧಿಕಾರಿಗಳು – ಜಿ.ಎನ್.ಎಂ. ನರ್ಸಿಂಗ್/ ಬಿ.ಎಸ್.ಸಿ. ನರ್ಸಿಂಗ್ ಕರ್ನಾಟಕ ನರ್ಸಿಂಗ್ ಕೌನ್ಸಿಲ್ ನಲ್ಲಿ ನೊಂದಣಿಯಾಗಿರಬೇಕು.
- ಮಹಿಳಾ ಶುಶ್ರೂಷಾಧಿಕಾರಿಗಳು – ಜನರಲ್ ನರ್ಸಿಂಗ್ ಡಿಪ್ಲೊಮಾ, ವಿದ್ಯಾರ್ಹತೆಯನ್ನು ಕರ್ನಾಟಕ ಸರ್ಕಾರದಿಂದ ಮಾನ್ಯತೆ ಪಡೆದ ಸಂಸ್ಥೆಯಿಂದ ಮಾತ್ರ ಪಡೆದಿರಬೇಕು ಹಾಗೂ ಕರ್ನಾಟಕ ನರ್ಸಿಂಗ್ ಕೌನ್ಸಿಲ್ ನಲ್ಲಿ ಕಡ್ಡಾಯವಾಗಿ ನೊಂದಣಿಯಾಗಿರಬೇಕು.
- ಸೈಕಿಯಾಟ್ರಿಕ್ ನರ್ಸ್ – ಬಿ.ಎಸ್ಸಿ ನರ್ಸಿಂಗ್ ಅಥವಾ ತತ್ಸಮಾನ ವಿದ್ಯಾರ್ಹತೆ.
- ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿಗಳು – ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿಗಳ ತರಬೇತಿಯನ್ನು ಕರ್ನಾಟಕ ಸರ್ಕಾರದ ಮಾನ್ಯತೆ ಪಡೆದ ಎ.ಎನ್.ಎಂ. ಸಂಸ್ಥೆಗಳ ಶಾಲೆಗಳಲ್ಲಿ ಮಾತ್ರ ಪಡೆದಿರಬೇಕು ಮತ್ತು ಕರ್ನಾಟಕ ನರ್ಸಿಂಗ್ ಕೌನ್ಸಿಲ್ ನಲ್ಲಿ ನೊಂದಣಿಯಾಗಿರಬೇಕು.
- ಸೈಕಲಾಜಿಸ್ಟ್ – ಮಾಸ್ಟರ್ಸ್ ಡಿಗ್ರಿ ಇನ್ ಚೈಲ್ಡ್ ಸೈಕಾಲಜಿ ಅರ್ಹತೆ ಹೊಂದಿರಬೇಕು.
- ಆಡಿಯೋಲೊಜಿಸ್ಟ್/ ಸ್ಫೀಚ್ ಥೆರಪಿಸ್ಟ್ – ಸ್ಫೀಚ್ & ಲ್ಯಾಂಗ್ವೇಜ್ ಪ್ಯಾಥೋಲಾಜಿ ಪದವಿ ಅರ್ಹತೆ ಹೊಂದಿರಬೇಕು.
- ಆಪ್ಟೋಮೆಟ್ರಿಸ್ಟ್ – ಆಪ್ಟೋಮೆಟ್ರಿಯಲ್ಲಿ ಪದವಿ ಅಥವಾ ಸ್ನಾತಕೋತ್ತರ ಪದವಿ ಅರ್ಹತೆ ಹೊಂದಿರಬೇಕು.
- ಕ್ಷ-ಕಿರಣ ತಂತ್ರಜ್ಞರು – 10ನೇ ತರಗತಿ ಮತ್ತು ಎಕ್ಸ್-ರೇ / ಮೆಡಿಕಲ್ ಇಮೇಜಿಂಗ್ ಟೆಕ್ನಾಲಜಿಯಲ್ಲಿ ಡಿಪ್ಲೊಮಾ ಹೊಂದಿರಬೇಕು.
- ಫಿಜಿಯೋಥೆರಫಿಸ್ಟ್ – ಫಿಜಿಯೋಥೆರಪಿಯಲ್ಲಿ ಪದವಿ ಹಾಗೂ ಆಸ್ಪತ್ರೆಯಲ್ಲಿ 2 ವರ್ಷಗಳ ಅನುಭವ.
ಉದ್ಯೋಗ ಮಾಹಿತಿ : ಅಂಗನವಾಡಿ ಕಾರ್ಯಕರ್ತೆ ಹಾಗೂ ಸಹಾಯಕಿಯರ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ
ಆಯ್ಕೆ ವಿಧಾನ :
ನೇರ ಸಂದರ್ಶನ ನಡೆಸಿ ಅಭ್ಯರ್ಥಿಗಳನ್ನು ಹುದ್ದೆಗಳಿಗೆ ಆಯ್ಕೆ ಮಾಡಲಾಗುವುದು.
ಅರ್ಜಿ ಸಲ್ಲಿಕೆಯ ವಿಧಾನ :
ಅಭ್ಯರ್ಥಿಯು ಈ ಹುದ್ದೆಗೆ ಆಫ್‌ಲೈನ್ ಮೂಲಕ ಅರ್ಜಿಗಳನ್ನು ಸಲ್ಲಿಸಬೇಕು.
ಹಂತ 1 : ಆಫ್‌ಲೈನ್ ಮೂಲಕ ಅರ್ಜಿ ಸಲ್ಲಿಸುವ ಮೊದಲು ಇಲಾಖೆ ಹೊರಡಿಸಿರುವ ಅಧಿಸೂಚನೆಯನ್ನು ಗಮನವಿಟ್ಟು ಓದಿ ಅರ್ಜಿ ಸಲ್ಲಿಸಲು ಅಗತ್ಯವಿರುವ ದಾಖಲೆಗಳನ್ನು ಸಿದ್ಧಪಡಿಸಿಕೊಂಡು ನಂತರ ಅರ್ಜಿಯನ್ನು ಸಲ್ಲಿಸಬೇಕು.
ಹಂತ 2 : ಅಭ್ಯರ್ಥಿಗಳು ನೇರ ಸಂದರ್ಶನ ದಿನದಂದು ಕಛೇರಿಯ ವಿಳಾಸಕ್ಕೆ ಭೇಟಿ ನೀಡಿ ಅಪ್ಲಿಕೇಷನ್ ಫಾರ್ಮ್ ಪಡೆದುಕೊಳ್ಳಬೇಕು.
ಹಂತ 3 : ಅಪ್ಲಿಕೇಷನ್ ನಲ್ಲಿ ತಿಳಿಸಿರುವಂತಹ ಎಲ್ಲಾ ಮಾಹಿತಿಯನ್ನು (ಉದಾಹರಣೆಗೆ ಅಭ್ಯರ್ಥಿಯ ಹೆಸರು, ವಿಳಾಸ, ವಿದ್ಯಾರ್ಹತೆ, ಮೊಬೈಲ್ ಸಂಖ್ಯೆ ಇತ್ಯಾದಿ) ಭರ್ತಿ ಮಾಡಿ, ಪುನಃ ಒಮ್ಮೆ ಪರಿಶೀಲಿಸಿ.
ಹಂತ 4 : ಅಪ್ಲಿಕೇಷನ್ ನಲ್ಲಿ ಯಾವುದೇ ಪ್ರಮಾಣ ಪತ್ರ/ ದಾಖಲೆಗಳನ್ನು ಲಗತ್ತಿಸಲು ಸೂಚಿಸಿದ್ದರೆ, ಅವುಗಳನ್ನು ಲಗತ್ತಿಸಿ (ಅಗತ್ಯವಿದ್ದರೆ ಮಾತ್ರ).
ಹಂತ 5 : ಕೊನೆಯದಾಗಿ, ಭರ್ತಿ ಮಾಡಿದ ಅರ್ಜಿಯನ್ನು ಅದೇ ದಿನ ಕಛೇರಿಗೆ ಸಲ್ಲಿಸಿ ಸಂದರ್ಶನದಲ್ಲಿ ಪಾಲ್ಗೊಳ್ಳಬೇಕು.
ಅರ್ಜಿ ವಿತರಿಸುವ ಸ್ಥಳ :
- ವೈದ್ಯಾಧಿಕಾರಿಗಳು (ಐ.ಸಿ.ಯು/ಹೆಚ್.ಡಿ.ಯು, ಪಿ.ಎಂ. ಅಭೀಮ್-ನಮ್ಮ ಕ್ಲಿನಿಕ್), ಪ್ರಯೋಗಶಾಲಾ ತಂತ್ರಜ್ಞರು, ಮಹಿಳಾ ಶುಶ್ರೂಷಾಧಿಕಾರಿಗಳು (MH ವಿಭಾಗ, CH ವಿಭಾಗ, ICU/HDU ವಿಭಾಗ), ಶುಶ್ರೂಷಾಧಿಕಾರಿಗಳು (ಪಿ.ಎಂ. ಅಭೀಮ್), ಪ್ರಾಥಮಿಕ ಆರೋಗ್ಯ ಸುರಕ್ಷತಾ ಅಧಿಕಾರಿಗಳು, ಸೈಕಾಲಜಿಸ್ಟ್, ಆಡಿಯೋಲೊಜಿಸ್ಟ್/ ಸ್ಪೀಚ್ ಥೆರಪಿಸ್ಟ್, ಆಪ್ಟೋಮೆಟ್ರಿಸ್ಟ್ – ಜಿಲ್ಲಾ ಯೋಜನಾ ನಿರ್ವಹಣಾ ಘಟಕ, ಬಿ.ಬ್ಲಾಕ್ ಜಿಲ್ಲಾ ಆ.ಕು.ಕ ಅಧಿಕಾರಿಗಳ ಕಛೇರಿ ಆವರಣ, ಜಿಲ್ಲಾ ಆಡಳಿತ ಭವನ ದೇವಗಿರಿ, ಹಾವೇರಿ.
- ವೈದ್ಯಾಧಿಕಾರಿಗಳು (ಎನ್.ಪಿ-ಎನ್.ಸಿ.ಡಿ ವಿಭಾಗ), ಶುಶ್ರೂಷಾಧಿಕಾರಿಗಳು (NP-NCD ವಿಭಾಗ, ಫಿಜಿಯೋಥೆರಪಿಸ್ಟ್ – ಜಿಲ್ಲಾ ಸರ್ವೆಕ್ಷಣಾ ಘಟಕ, ಎ.ಬ್ಲಾಕ್, 3ನೇ ಮಹಡಿ ಕೋಠಡಿ ಸಂಖ್ಯೆ 15, ಜಿಲ್ಲಾ ಆಡಳಿತ ಭವನ, ದೇವಗಿರಿ, ಹಾವೇರಿ.
- ಶುಶ್ರೂಷಕರು (MHU ವಿಭಾಗ), ಕ್ಷ-ಕಿರಣ ತಂತ್ರಜ್ಞರು – ಜಿಲ್ಲಾ ಕ್ಷಯರೋಗ ನಿರ್ಮೂಲನಾ ಅಧಿಕಾರಿಗಳ ಕಛೇರಿ, ಜಿಲ್ಲಾ ಆಸ್ಪತ್ರೆ ಆವರಣ, ಹಾವೇರಿ.
- ಸೈಕಿಯಾಟ್ರಿಕ್ ನರ್ಸ್ – ಜಿಲ್ಲಾ ಕುಷ್ಟ ರೋಗ ನಿಯಂತ್ರಣಾ ಅಧಿಕಾರಿಗಳ ಕಛೇರಿ ಬಿ.ಬ್ಲಾಕ್, ಜಿಲ್ಲಾ ಆಡಳಿತ ಭವನ ದೇವಗಿರಿ ಹಾವೇರಿ.
ಅರ್ಜಿ ವಿತರಿಸುವ ದಿನಾಂಕ :
- ಅರ್ಜಿ ವಿತರಿಸುವ ಪ್ರಾರಂಭದ ದಿನಾಂಕ : ನವೆಂಬರ್ 05, 2026
- ಅರ್ಜಿ ವಿತರಿಸುವ ಕೊನೆಯ ದಿನಾಂಕ : ನವೆಂಬರ್ 16, 2026
DHFWS Haveri Recruitment 2026 : Important Links
| NOTIFICATION | CLICK HERE |
| Telegram Join Link | Click Here |
| WhatsApp Group Link | Click Here |
ಕೊನೆಯ ಪದಗಳು : ನಾವು ನೀಡಿದ ಉದ್ಯೋಗ ಮಾಹಿತಿಯನ್ನು ನೀವು ಇಷ್ಟಪಡುತ್ತೀರಿ ಎಂದು ಭಾವಿಸುತ್ತೇವೆ. ಈ ಉದ್ಯೋಗ ಮಾಹಿತಿ ನಿಮಗೆ ಇಷ್ಟವಾಗಿದ್ದರೆ ನಿಮ್ಮ ಸ್ನೇಹಿತರಿಗೆ ಶೇರ್ ಮಾಡಲು ಮರೆಯದಿರಿ.