
DHFWS Koppal Recruitment 2026 : ರಾಷ್ಟ್ರೀಯ ಆರೋಗ್ಯ ಅಭಿಯಾನ, ರಾಷ್ಟ್ರೀಯ ನಗರ ಆರೋಗ್ಯ ಅಭಿಯಾನ ಹಾಗೂ ಪಿ.ಎಂ-ಅಭಿಮ್ ಯೋಜನೆಯಡಿಯಲ್ಲಿ ಕೊಪ್ಪಳ ಜಿಲ್ಲೆಯಲ್ಲಿ ಖಾಲಿ ಇರುವ ಶುಶ್ರೂಷಣಾಧಿಕಾರಿಗಳು, ಪ್ರಾಥಮಿಕ ಆರೋಗ್ಯ ಸುರಕ್ಷಣಾಧಿಕಾರಿಗಳು, ಪ್ರಯೋಗ ಶಾಲಾ ತಂತ್ರಜ್ಞರು, ಫಾರ್ಮಾಸಿಸ್ಟ್, ನೇತ್ರ ಸಹಾಯಕರು ಸೇರಿದಂತೆ ವಿವಿಧ ಹುದ್ದೆಗಳ ಭರ್ತಿಗೆ ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಹುದ್ದೆಗಳ ಭರ್ತಿಗೆ ಸಂಬಂಧಿಸಿದಂತೆ ಹುದ್ದೆಗಳ ಸಂಖ್ಯೆ, ಶೈಕ್ಷಣಿಕ ಅರ್ಹತೆ, ವಯೋಮಾನ, ಅರ್ಜಿ ಸಲ್ಲಿಕೆ ದಿನಾಂಕ ಹಾಗೂ ಇತರೆ ಮಾಹಿತಿಯನ್ನು ಈ ಕೆಳಗಡೆ ವಿವರವಾಗಿ ನೀಡಲಾಗಿದೆ ಪೂರ್ತಿ ಓದಿ.
DHFWS Koppal Recruitment 2026 : Details of Vacancies
ಹುದ್ದೆ :
ಶುಶ್ರೂಷಣಾಧಿಕಾರಿಗಳು, ಪ್ರಾಥಮಿಕ ಆರೋಗ್ಯ ಸುರಕ್ಷಣಾಧಿಕಾರಿಗಳು, ಪ್ರಯೋಗ ಶಾಲಾ ತಂತ್ರಜ್ಞರು, ಫಾರ್ಮಾಸಿಸ್ಟ್, ನೇತ್ರ ಸಹಾಯಕರು, ಡಯಟ್ ಕೌನ್ಸಲರ್, ಆರ್.ಕೆ.ಎಸ್.ಕೆ. ಕೌನ್ಸಲರ್, ಜಿಲ್ಲಾ ಎಂ & ಇ ವ್ಯವಸ್ಥಾಪಕರು, ಡಿ.ಇ.ಐ.ಸಿ ವ್ಯವಸ್ಥಾಪಕರು, ಡಿ.ಹೆಚ್.ಕ್ಯೂ.ಎಂ, ಅಡ್ಮಿನಿಸ್ಟ್ರೇಟಿವ್ ಕಮ್ ಪ್ರೋಗ್ರಾಂ ಅಸಿಸ್ಟಂಟ್, ಕೀಟ ಸಂಗ್ರಾಹಕ.
ಕರ್ತವ್ಯ ಸ್ಥಳ :
ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳು ಕೊಪ್ಪಳ ಜಿಲ್ಲೆ, ಕರ್ನಾಟಕದಲ್ಲಿ ಕೆಲಸ ನಿರ್ವಹಿಸಬೇಕು.
ಖಾಲಿಯಿರುವ ಹುದ್ದೆಗಳ ಸಂಖ್ಯೆ :
ಒಟ್ಟು 63 ಹುದ್ದೆಗಳ ಭರ್ತಿಗೆ ಅರ್ಜಿಯನ್ನು ಕರೆಯಲಾಗಿದೆ.
| ಹುದ್ದೆ | ಹುದ್ದೆಗಳ ಸಂಖ್ಯೆ |
| ಶುಶ್ರೂಷಣಾಧಿಕಾರಿಗಳು (ಎಂ.ಹೆಚ್, ಆರ್.ಬಿ.ಎಸ್.ಕೆ) | 10 |
| ಶುಶ್ರೂಷಣಾಧಿಕಾರಿಗಳು (ಚೈಲ್ಡ್ ಹೆಲ್ತ್, ಎನ್.ಆರ್.ಸಿ) | 13 |
| ಶುಶ್ರೂಷಣಾಧಿಕಾರಿಗಳು (ಪಿ.ಎಂ. ಅಭೀಮ್) | 2 |
| ಪ್ರಾಥಮಿಕ ಆರೋಗ್ಯ ಸುರಕ್ಷಣಾಧಿಕಾರಿಗಳು | 18 |
| ಪ್ರಯೋಗಶಾಲಾ ತಂತ್ರಜ್ಞರು (ಎನ್.ಹೆಚ್.ಎಂ) | 2 |
| ಪ್ರಯೋಗಶಾಲಾ ತಂತ್ರಜ್ಞರು (ಪಿ.ಎಂ. ಅಭೀಮ್) | 3 |
| ಪ್ರಯೋಗಶಾಲಾ ತಂತ್ರಜ್ಞರು (ಎನ್.ವಿ.ಬಿ.ಡಿ.ಸಿ.ಪಿ) | 1 |
| ಫಾರ್ಮಸಿಸ್ಟ್ | 2 |
| ನೇತ್ರ ಸಹಾಯಕರು | 3 |
| ಡಯಟ್ ಕೌನ್ಸಲರ್ | 2 |
| ಆರ್.ಕೆ.ಎಸ್.ಕೆ ಕೌನ್ಸಲರ್ | 2 |
| ಜಿಲ್ಲಾ ಎಂ & ಇ ವ್ಯವಸ್ಥಾಪಕರು | 1 |
| ಡಿ.ಇ.ಐ.ಸಿ ವ್ಯವಸ್ಥಾಪಕರು | 1 |
| ಡಿ.ಹೆಚ್.ಕ್ಯೂ.ಎಂ | 1 |
| ಅಡ್ಮಿನಿಸ್ಟ್ರೇಟಿವ್ ಕಮ್ ಪ್ರೋಗ್ರಾಂ ಅಸಿಸ್ಟಂಟ್ | 1 |
| ಕೀಟ ಸಂಗ್ರಾಹಕ | 1 |
ಶೈಕ್ಷಣಿಕ ಅರ್ಹತೆ :
ಶುಶ್ರೂಷಣಾಧಿಕಾರಿಗಳು (ಎಂ.ಹೆಚ್, ಆರ್.ಬಿ.ಎಸ್.ಕೆ) –
ನರ್ಸಿಂಗ್ ವಿದ್ಯಾರ್ಹತೆಯನ್ನು ಕರ್ನಾಟಕ ಸರ್ಕಾರದಿಂದ ಮಾನ್ಯತೆ ಪಡೆದ ಶಾಲೆಗಳಲ್ಲಿ ಮಾತ್ರ ಪಡೆದಿರಬೇಕು ಹಾಗೂ ಕರ್ನಾಟಕ ನರ್ಸಿಂಗ್ ಕೌನ್ಸಲಿಂಗ್ ನಲ್ಲಿ ಕಡ್ಡಾಯವಾಗಿ ನೋಂದಣಿಯಾಗಿರಬೇಕು.
ಶುಶ್ರೂಷಣಾಧಿಕಾರಿಗಳು (ಚೈಲ್ಡ್ ಹೆಲ್ತ್ & ಎನ್.ಆರ್.ಸಿ) (ಪಿ.ಎಂ. ಅಭೀಮ್) –
ಬಿ.ಎಸ್.ಸಿ ನರ್ಸಿಂಗ್ ಅಥವಾ ಪೋಸ್ಟ್ ಸರ್ಟಿಫೈಡ್ ಬಿ.ಎಸ್.ಸಿ ನರ್ಸಿಂಗ್ ಅಥವಾ ಡಿಪ್ಲೋಮಾ ಇನ್ ನರ್ಸಿಂಗ್ ವಿದ್ಯಾರ್ಹತೆಯನ್ನು ಪೂರ್ಣಗೊಳಿಸಿರಬೇಕು ಹಾಗೂ ಕರ್ನಾಟಕ ನರ್ಸಿಂಗ್ ಕೌನ್ಸಲಿಂಗ್ ನಲ್ಲಿ ಕಡ್ಡಾಯವಾಗಿ ನೋಂದಣಿಯಾಗಿರಬೇಕು.
ಪ್ರಾಥಮಿಕ ಆರೋಗ್ಯ ಸುರಕ್ಷಣಾಧಿಕಾರಿಗಳು –
ಕಿರಿಯ ಮಹಿಳಾ ಆರೋಗ್ಯ ಸಹಾಯಕಿಯರ ತರಬೇತಿಯನ್ನು ಕರ್ನಾಟಕ ಸರ್ಕಾರದ ಮಾನ್ಯತೆ ಪಡೆದ ಶಾಲೆಗಳಲ್ಲಿ ಮಾತ್ರ ಪಡೆದಿರಬೇಕು ಮತ್ತು ಕರ್ನಾಟಕ ನರ್ಸಿಂಗ್ ಕೌನ್ಸಲಿಂಗನಲ್ಲಿ ನೊಂದಣಿಯಾಗಿರಬೇಕು.
ಪ್ರಯೋಗಶಾಲಾ ತಾಂತ್ರಿಕ ಅಧಿಕಾರಿಗಳು –
- ಎಸ್.ಎಸ್.ಎಲ್.ಸಿ ಅಥವಾ ತತ್ಸಮಾನ ಪರೀಕ್ಷೆಯಲ್ಲಿ ತೇರ್ಗಡೆಯಾಗಿರಬೇಕು ಮತ್ತು ಕರ್ನಾಟಕ ರಾಜ್ಯ ಅರೆವೈದ್ಯಕೀಯ ಮಂಡಳಿಯು ನಡೆಸುವ ಪ್ರಯೋಗಶಾಲಾ ತಂತ್ರಜ್ಞತೆಯಲ್ಲಿ 3 ವರ್ಷದ ಡಿಪ್ಲೋಮಾದಲ್ಲಿ ಉತ್ತೀರ್ಣ ಹೊಂದಿರಬೇಕು. ಅಥವಾ
- ದ್ವಿತೀಯ ಪಿಯುಸಿ ವಿಜ್ಞಾನ ವಿಷಯದಲ್ಲಿ ಉತ್ತೀರ್ಣ ಮತ್ತು ಕರ್ನಾಟಕ ರಾಜ್ಯ ಅರೆವೈದ್ಯಕೀಯ ಮಂಡಳಿಯು ನಡೆಸುವ ಪ್ರಯೋಗಶಾಲಾ ತಂತ್ರಜ್ಞತೆಯಲ್ಲಿ 2 ವರ್ಷಗಳ ಪ್ರಯೋಗಶಾಲಾ ತಂತ್ರಜ್ಞರ ತರಬೇತಿ ಪಡೆದಿರಬೇಕು.
- ಪ್ರಯೋಗಶಾಲಾ ತಂತ್ರಜ್ಞರು ಕಡ್ಡಾಯವಾಗಿ ಕರ್ನಾಟಕ ರಾಜ್ಯ ಅರೆವೈದ್ಯಕೀಯ ಮಂಡಳಿಯ ನೋಂದಣಿಯಾಗಿರಬೇಕು.
ಫಾರ್ಮಸಿಸ್ಟ್ –
ಬಿ.ಫಾರ್ಮಾ/ ಡಿ.ಫಾರ್ಮಾ ವಿದ್ಯಾರ್ಹತೆಯನ್ನು ಹೊಂದಿರಬೇಕು.
ನೇತ್ರ ಸಹಾಯಕರು –
ಎರಡು ವರ್ಷದ ಡಿಪ್ಲೊಮಾ ಇನ್ ಆಪ್ಟೋಮೆಟ್ರಿ ಅಥವಾ ನೇತ್ರ ಸಹಾಯಕರು ಆಗಿ ಮಾನ್ಯತೆ ಪಡೆದ ಸರ್ಕಾರಿ ಆಸ್ಪತ್ರೆಗಳಲ್ಲಿ ಎನ್.ಪಿ.ಸಿ.ಬಿ ನಿಯಮಾನುಸಾರ ತರಬೇತಿ ಪಡೆದಿರಬೇಕು.
ಎನ್.ಆರ್.ಸಿ. ಡಯಟ್ ಕೌನ್ಸಲರ್ –
ಬಿ.ಎಸ್.ಸಿ ನ್ಯೂಟ್ರಿಷನ್/ ಬಿ.ಎಸ್.ಸಿ ಹೋಮ್ ಸೈನ್ಸ್/ ಇತರೆ ಪೌಷ್ಟಿಕ ತಜ್ಞತೆ ಹೊಂದಿರುವ ಪದವಿ/ ಡಿಪ್ಲೋಮಾ ಇನ್ ನ್ಯೂಟ್ರಿಷನ್ & ಡೈಯಟೆಟಿಕ್ಸ್/ ಡಿಪ್ಲೋಮಾ ಇನ್ ಪಬ್ಲಿಕ್ ಹೆಲ್ತ್ ನ್ಯೂಟ್ರಿಷನ್ ವಿದ್ಯಾರ್ಹತೆ ಹೊಂದಿರಬೇಕು.
ಆರ್.ಕೆ.ಎಸ್.ಕೆ. ಕೌನ್ಸಲರ್ –
ಮಾಸ್ಟರ್ ಇನ್ ಸೋಷಿಯಲ್ ವರ್ಕ್ (ಎಂ.ಎಸ್.ಡಬ್ಲ್ಯೂ) ಅಥವಾ ಎಂ.ಎ ಇನ್ ಸೈಕಾಲಜಿ ವಿದ್ಯಾರ್ಹತೆ ಹೊಂದಿರಬೇಕು.
ಜಿಲ್ಲಾ ಎಂ & ಇ ವ್ಯವಸ್ಥಾಪಕರು –
ಮಾಸ್ಟರ್ ಡಿಗ್ರಿ ಇನ್ ಸ್ಟಾಟಿಸ್ಟಿಕ್ಸ್/ ಮೇಥೆಮೆಟಿಕ್ಸ್/ ಡೆಮೋಗ್ರಫಿ/ ಇಕಾನಾಮಿಕ್ಸ್/ ಬಿ.ಇ ಇನ್ಫಾರ್ಮೆಷನ್ ಸೈನ್ಸ್/ ಬಿ.ಇ. ಕಂಪ್ಯೂಟರ್ ಸೈನ್ಸ್.
ಡಿ.ಇ.ಐ.ಸಿ ವ್ಯವಸ್ಥಾಪಕರು –
ಮಾಸ್ಟರ್ ಇನ್ ಡಿಸೆಬಿಲಿಟಿ ರಿಹ್ಯಾಬಿಲಿಟೇಷನ್ ಅಡ್ಮಿನಿಸ್ಟ್ರೇಷನ್ ಅಥವಾ ಪೋಸ್ಟ್ ಗ್ರಾಜುಯೇಟ್ ಡಿಗ್ರಿ / ಡಿಪ್ಲೋಮಾ ಇನ್ ಹಾಸ್ಪಿಟಲ್/ ಹೆಲ್ತ್ ಮ್ಯಾನೇಜ್ಮೆಂಟ್ ಅಥವಾ ಎಂ.ಬಿ.ಎ ಹಾಸ್ಪಿಟಲ್ ಮ್ಯಾನೇಜ್ಮೆಂಟ್/ ಅಡ್ಮಿನಿಸ್ಟ್ರೇಷನ್ ಡಿಗ್ರಿ.
ಡಿ.ಹೆಚ್.ಕ್ಯೂ.ಎಂ –
- ಯುಜಿ: ಎಂ.ಬಿ.ಬಿ.ಎಸ್/ ಡೆಂಟಲ್/ ಆಯುಷ್/ ನರ್ಸಿಂಗ್/ ಲೈಫ್ ಸೈನ್ಸ್/ ಸೋಷಿಯಲ್ ಸೈನ್ಸ್/ ಬ್ಯಾಚುಲರ್ ಆಫ್ ಪಬ್ಲಿಕ್ ಹೆಲ್ತ್.
- ಪಿಜಿ: ಮಾಸ್ಟರ್ಸ್ ಇನ್ ಹಾಸ್ಪಿಟಲ್ ಅಡ್ಮಿನಿಸ್ಟ್ರೇಷನ್/ ಹೆಲ್ತ್ ಮ್ಯಾನೇಜ್ಮೆಂಟ್/ ಮಾಸ್ಟರ್ಸ್ ಇನ್ ಪಬ್ಲಿಕ್ ಹೆಲ್ತ್.
ಅಡ್ಮಿನಿಸ್ಟ್ರೇಟಿವ್ ಕಮ್ ಪ್ರೋಗ್ರಾಂ ಅಸಿಸ್ಟಂಟ್ –
ಗ್ರಾಜುಯೇಟ್ ಡಿಗ್ರಿ.
ಕೀಟ ಸಂಗ್ರಾಹಕ –
ದ್ವಿತೀಯ ಪಿಯುಸಿಯಲ್ಲಿ ವಿಜ್ಞಾನ ವಿಷಯದಲ್ಲಿ ಉತ್ತೀರ್ಣರಾಗಿರಬೇಕು.
ಉದ್ಯೋಗ ಮಾಹಿತಿ : ಕಲಬುರಗಿ ಜಿಲ್ಲಾ ನ್ಯಾಯಾಲಯದಲ್ಲಿ ಶೀಘ್ರಲಿಪಿಗಾರ, ಬೆರಳಚ್ಚುಗಾರ, ಬೆರಳಚ್ಚು ನಕಲುಗಾರ, ವಾಹನ ಚಾಲಕ, ಆದೇಶ ಜಾರಿಕಾರ, ಜವಾನ ಹುದ್ದೆಗಳ ನೇಮಕಾತಿ 2026
ವಯೋಮಾನ :
| ಹುದ್ದೆ | ವಯೋಮಾನ |
| ಶುಶ್ರೂಷಣಾಧಿಕಾರಿಗಳು (ಎಂ.ಹೆಚ್, ಆರ್.ಬಿ.ಎಸ್.ಕೆ) | ಗರಿಷ್ಠ 45 ವರ್ಷ |
| ಶುಶ್ರೂಷಣಾಧಿಕಾರಿಗಳು (ಚೈಲ್ಡ್ ಹೆಲ್ತ್, ಎನ್.ಆರ್.ಸಿ) | ಗರಿಷ್ಠ 45 ವರ್ಷ |
| ಶುಶ್ರೂಷಣಾಧಿಕಾರಿಗಳು (ಪಿ.ಎಂ. ಅಭೀಮ್) | ಗರಿಷ್ಠ 45 ವರ್ಷ |
| ಪ್ರಾಥಮಿಕ ಆರೋಗ್ಯ ಸುರಕ್ಷಣಾಧಿಕಾರಿಗಳು | |
| ಪ್ರಯೋಗಶಾಲಾ ತಂತ್ರಜ್ಞರು (ಎನ್.ಹೆಚ್.ಎಂ) | ಗರಿಷ್ಠ 45 ವರ್ಷ |
| ಪ್ರಯೋಗಶಾಲಾ ತಂತ್ರಜ್ಞರು (ಪಿ.ಎಂ. ಅಭೀಮ್) | ಗರಿಷ್ಠ 45 ವರ್ಷ |
| ಪ್ರಯೋಗಶಾಲಾ ತಂತ್ರಜ್ಞರು (ಎನ್.ವಿ.ಬಿ.ಡಿ.ಸಿ.ಪಿ) | – |
| ಫಾರ್ಮಸಿಸ್ಟ್ | ಗರಿಷ್ಠ 40 ವರ್ಷ |
| ನೇತ್ರ ಸಹಾಯಕರು | |
| ಡಯಟ್ ಕೌನ್ಸಲರ್ | ಗರಿಷ್ಠ 40 ವರ್ಷ |
| ಆರ್.ಕೆ.ಎಸ್.ಕೆ ಕೌನ್ಸಲರ್ | – |
| ಜಿಲ್ಲಾ ಎಂ & ಇ ವ್ಯವಸ್ಥಾಪಕರು | ಕನಿಷ್ಠ 18 ವರ್ಷ ಗರಿಷ್ಠ 45 ವರ್ಷ |
| ಡಿ.ಇ.ಐ.ಸಿ ವ್ಯವಸ್ಥಾಪಕರು | – |
| ಡಿ.ಹೆಚ್.ಕ್ಯೂ.ಎಂ | ಗರಿಷ್ಠ 45 ವರ್ಷ |
| ಅಡ್ಮಿನಿಸ್ಟ್ರೇಟಿವ್ ಕಮ್ ಪ್ರೋಗ್ರಾಂ ಅಸಿಸ್ಟಂಟ್ | ಗರಿಷ್ಠ 45 ವರ್ಷ |
| ಕೀಟ ಸಂಗ್ರಾಹಕ | ಗರಿಷ್ಠ 40 ವರ್ಷ |
ಅರ್ಜಿ ಸಲ್ಲಿಕೆಯ ವಿಧಾನ :
ಅಭ್ಯರ್ಥಿಯು ಈ ಹುದ್ದೆಗೆ ಆನ್‌ಲೈನ್ ಮೂಲಕ ಅರ್ಜಿಗಳನ್ನು ಸಲ್ಲಿಸಬೇಕು.
ಹಂತ 1 : ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸುವ ಮೊದಲು ಇಲಾಖೆ ಹೊರಡಿಸಿರುವ ಅಧಿಸೂಚನೆಯನ್ನು ಗಮನವಿಟ್ಟು ಓದಿ ಅರ್ಜಿ ಸಲ್ಲಿಸಲು ಅಗತ್ಯವಿರುವ ದಾಖಲೆಗಳನ್ನು ಸಿದ್ಧಪಡಿಸಿಕೊಂಡು ನಂತರ ಅರ್ಜಿಯನ್ನು ಸಲ್ಲಿಸಬೇಕು.
ಹಂತ 2 : ಇಲಾಖೆಯ ವೆಬ್‌ಸೈಟ್ ಗೆ ಭೇಟಿ ನೀಡಿ ಅಥವಾ ಈ ಕೆಳಗಡೆ ನೀಡಲಾದ ಅಪ್ಲೈ ಆನ್‌ಲೈನ್ ಲಿಂಕ್ ಮೇಲೆ ಕ್ಲಿಕ್ ಮಾಡಿ ಅಪ್ಲಿಕೇಷನ್ ತೆರೆದುಕೊಳ್ಳಿ.
ಹಂತ 3 : ಅಪ್ಲಿಕೇಷನ್ ನಲ್ಲಿ ತಿಳಿಸಿರುವಂತಹ ಎಲ್ಲಾ ಮಾಹಿತಿಯನ್ನು (ಉದಾಹರಣೆಗೆ ಅಭ್ಯರ್ಥಿಯ ಹೆಸರು, ವಿಳಾಸ, ವಿದ್ಯಾರ್ಹತೆ, ಮೊಬೈಲ್ ಸಂಖ್ಯೆ ಇತ್ಯಾದಿ) ಭರ್ತಿ ಮಾಡಿ, ಮುಂದಿನ ಹಂತಕ್ಕೆ ತೆರಳುವ ಮುನ್ನ ಪುನಃ ಒಮ್ಮೆ ಪರಿಶೀಲಿಸಿ.
ಹಂತ 4 : ಕೊನೆಯದಾಗಿ, ಅಪ್ಲಿಕೇಷನ್ ನಲ್ಲಿ ಯಾವುದೇ ಪ್ರಮಾಣ ಪತ್ರ/ ದಾಖಲೆಗಳನ್ನು ಅಪ್ಲೋಡ್ ಮಾಡಲು ಸೂಚಿಸಿದ್ದರೆ, ಅವುಗಳನ್ನು ಸ್ಕ್ಯಾನ್ ಮಾಡಿ ಅಪ್ಲೋಡ್ ಮಾಡಿ (ಅಗತ್ಯವಿದ್ದರೆ ಮಾತ್ರ) ಅರ್ಜಿ ಸಲ್ಲಿಕೆ ಪೂರ್ಣಗೊಳಿಸಿ.
ಅರ್ಜಿ ಶುಲ್ಕ :
ಯಾವುದೇ ಅರ್ಜಿ ಶುಲ್ಕ ಇರುವುದಿಲ್ಲ.
ಅರ್ಜಿಯನ್ನು ಸಲ್ಲಿಸಲು ನಿಗದಿಪಡಿಸಿದ ದಿನಾಂಕದ ವಿವರ :
- ಅರ್ಜಿ ಸಲ್ಲಿಸಲು ಪ್ರಾರಂಭದ ದಿನಾಂಕ : ನವೆಂಬರ್ 18, 2026
- ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : ನವೆಂಬರ್ 24, 2026
DHFWS Koppal Recruitment 2026 : Important Links
| NOTIFICATION | CLICK HERE |
| APPLY ONLINE | CLICK HERE |
| Telegram Join Link | Click Here |
| WhatsApp Group Link | Click Here |
ಕೊನೆಯ ಪದಗಳು : ನಾವು ನೀಡಿದ ಉದ್ಯೋಗ ಮಾಹಿತಿಯನ್ನು ನೀವು ಇಷ್ಟಪಡುತ್ತೀರಿ ಎಂದು ಭಾವಿಸುತ್ತೇವೆ. ಈ ಉದ್ಯೋಗ ಮಾಹಿತಿ ನಿಮಗೆ ಇಷ್ಟವಾಗಿದ್ದರೆ ನಿಮ್ಮ ಸ್ನೇಹಿತರಿಗೆ ಶೇರ್ ಮಾಡಲು ಮರೆಯದಿರಿ.