RDWSD Karnataka Recruitment 2024 : ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯಲ್ಲಿ ಅಗತ್ಯವಿರುವ ಸಲಹೆಗಾರರ ಹುದ್ದೆಗಳ ಭರ್ತಿಗೆ ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಹುದ್ದೆಗಳ ಭರ್ತಿಗೆ ಸಂಬಂಧಿಸಿದಂತೆ ಹುದ್ದೆಗಳ ಸಂಖ್ಯೆ, ಕರ್ತವ್ಯ ಸ್ಥಳ, ಶೈಕ್ಷಣಿಕ ಅರ್ಹತೆ, ವೇತನ, ಅರ್ಜಿ ಸಲ್ಲಿಕೆ ದಿನಾಂಕ ಹಾಗೂ ಇತರೆ ಮಾಹಿತಿಯನ್ನು ಈ ಕೆಳಗಡೆ ವಿವರವಾಗಿ ನೀಡಲಾಗಿದೆ ಪೂರ್ತಿ ಓದಿ.
RDWSD Karnataka Recruitment 2024 : Details of Vacancies
ಹುದ್ದೆ : ಟ್ಯಾಂಕ್ ರೆಜುವೆನೇಷನ್ ಸ್ಪೆಷಲಿಸ್ಟ್, ಎನರ್ಜಿ ಆಡಿಟ್ ಅಂಡ್ ರೆನೆವೇಬಲ್ ಸ್ಪೆಷಲಿಸ್ಟ್, ವಾಟರ್ ಸಪ್ಲೈ ಸ್ಪೆಷಲಿಸ್ಟ್, ಎನ್ವಿರಾನ್ಮೆಂಟಲ್ ಸ್ಪೆಷಲಿಸ್ಟ್, ಸೋಷಿಯಲ್ ಸ್ಪೆಷಲಿಸ್ಟ್, ಮಾನಿಟರಿಂಗ್ & ಎವಾಲ್ಯೂಯೇಷನ್ ಸ್ಪೆಷಲಿಸ್ಟ್, ಫೈನಾನ್ಸಿಯಲ್ ಸ್ಪೆಷಲಿಸ್ಟ್.
ಕರ್ತವ್ಯ ಸ್ಥಳ : ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳು ಕರ್ನಾಟಕದೆಲ್ಲೆಡೆ ಕರ್ತವ್ಯ ನಿರ್ವಹಿಸಬೇಕು.
ಖಾಲಿಯಿರುವ ಹುದ್ದೆಗಳ ಸಂಖ್ಯೆ : ಒಟ್ಟು 07 ಹುದ್ದೆಗಳ ಭರ್ತಿಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ.
ಹುದ್ದೆ | ಹುದ್ದೆಗಳ ಸಂಖ್ಯೆ |
ಟ್ಯಾಂಕ್ ರೆಜುವೆನೇಷನ್ ಸ್ಪೆಷಲಿಸ್ಟ್ | 1 |
ಎನರ್ಜಿ ಆಡಿಟ್ ಅಂಡ್ ರೆನೆವೇಬಲ್ ಸ್ಪೆಷಲಿಸ್ಟ್ | 1 |
ವಾಟರ್ ಸಪ್ಲೈ ಸ್ಪೆಷಲಿಸ್ಟ್ | 1 |
ಎನ್ವಿರಾನ್ಮೆಂಟಲ್ ಸ್ಪೆಷಲಿಸ್ಟ್ | 1 |
ಸೋಷಿಯಲ್ ಸ್ಪೆಷಲಿಸ್ಟ್ | 1 |
ಮಾನಿಟರಿಂಗ್ & ಎವಾಲ್ಯೂಯೇಷನ್ ಸ್ಪೆಷಲಿಸ್ಟ್ | 1 |
ಫೈನಾನ್ಸಿಯಲ್ ಸ್ಪೆಷಲಿಸ್ಟ್ | 1 |
ಶೈಕ್ಷಣಿಕ ಅರ್ಹತೆ :
ಟ್ಯಾಂಕ್ ರೆಜುವೆನೇಷನ್ ಸ್ಪೆಷಲಿಸ್ಟ್ – ಸಿವಿಲ್ ಇಂಜಿನಿಯರಿಂಗ್ ಸ್ನಾತಕೋತ್ತರ ಪದವಿ ಅರ್ಹತೆ ಹೊಂದಿರಬೇಕು.
ಎನರ್ಜಿ ಆಡಿಟ್ ಅಂಡ್ ರೆನೆವೇಬಲ್ ಸ್ಪೆಷಲಿಸ್ಟ್ – ಇಲೆಕ್ಟ್ರಿಕಲ್/ ಇಲೆಕ್ಟ್ರಾನಿಕ್ ಅಂಡ್ ಕಮ್ಯೂನಿಕೇಷನ್ ಇಂಜಿನಿಯರಿಂಗ್ ಸ್ನಾತಕೋತ್ತರ ಪದವಿ ಅರ್ಹತೆ ಹೊಂದಿರಬೇಕು.
ವಾಟರ್ ಸಪ್ಲೈ ಸ್ಪೆಷಲಿಸ್ಟ್ – ಹೈಡ್ರಾಲಿಕ್ ಇಂಜಿನಿಯರಿಂಗ್ ಸ್ನಾತಕೋತ್ತರ ಪದವಿ ಅರ್ಹತೆ ಹೊಂದಿರಬೇಕು.
ಎನ್ವಿರಾನ್ಮೆಂಟಲ್ ಸ್ಪೆಷಲಿಸ್ಟ್ – ಎನ್ವಿರಾನ್ಮೆಂಟಲ್ ಇಂಜಿನಿಯರಿಂಗ್ ಸ್ನಾತಕೋತ್ತರ ಪದವಿ ಅರ್ಹತೆ ಹೊಂದಿರಬೇಕು.
ಸೋಷಿಯಲ್ ಸ್ಪೆಷಲಿಸ್ಟ್ – ಎಂ.ಎಸ್.ಡಬ್ಲ್ಯೂ/ ಎಂ.ಎ ಇನ್ ಸೋಷಿಯಾಲಾಜಿ/ ರೂರಲ್ ಡೆವೆಲಪ್ಮೆಂಟ್ ಸ್ನಾತಕೋತ್ತರ ಪದವಿ/ ಎಂ.ಬಿ.ಎ – ಹೆಚ್.ಆರ್.ಎಂ/ ಅಗ್ರಿಕಲ್ಚರ್ ಸ್ನಾತಕೋತ್ತರ ಪದವಿ ಅರ್ಹತೆ ಹೊಂದಿರಬೇಕು.
ಮಾನಿಟರಿಂಗ್ & ಎವಾಲ್ಯೂಯೇಷನ್ ಸ್ಪೆಷಲಿಸ್ಟ್ – ಎಂ.ಇ/ ಎಂ.ಟೆಕ್ ಇನ್ ಕಂಪ್ಯೂಟರ್ ಸೈನ್ಸ್ ಇಂಜಿನಿಯರಿಂಗ್ ಅರ್ಹತೆ ಹೊಂದಿರಬೇಕು.
ಫೈನಾನ್ಸಿಯಲ್ ಸ್ಪೆಷಲಿಸ್ಟ್ – ಎಂ.ಬಿ.ಎ (ಫೈನಾನ್ಸ್)/ ಎಂ.ಕಾಂ/ ಪ್ರಾಕ್ಟಿಸಿಂಗ್ ಸಿಎ
ಉದ್ಯೋಗ ಮಾಹಿತಿ : ಕೆಇಎ ಯಿಂದ ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರದಲ್ಲಿ ನೇಮಕಾತಿ 2024
ವೇತನ : ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ ರೂ. 1,00,000 ರಿಂದ 1,50,000 ವರೆಗೂ ವೇತನ ನೀಡಲಾಗುತ್ತದೆ.
ವಯೋಮಾನ : ಅಧಿಸೂಚನೆ ಹೊರಡಿಸಿದ ದಿನಾಂಕಕ್ಕೆ ಅಭ್ಯರ್ಥಿಗಳಿಗೆ 50 ವರ್ಷ ಮೀರಿರಬಾರದು.
ಅನುಭವ : ಅಭ್ಯರ್ಥಿಗಳು ಹುದ್ದೆಗೆ ಸಂಬಂಧಿಸಿದ ಕ್ಷೇತ್ರದಲ್ಲಿ ಕನಿಷ್ಠ 5 ರಿಂದ 10 ವರ್ಷಗಳ ಅನುಭವ ಹೊಂದಿರಬೇಕು.
ಆಯ್ಕೆ ವಿಧಾನ : ಅರ್ಹತೆ ಹೊಂದಿರುವ ಅಭ್ಯರ್ಥಿಗಳ ದಾಖಲೆಗಳ ಪರಿಶೀಲನೆ ಹಾಗೂ ಸಂದರ್ಶನ ನಡೆಸಿ ಹುದ್ದೆಗಳಿಗೆ ನೇಮಕ ಮಾಡಲಾಗುವುದು.
ಅರ್ಜಿ ಸಲ್ಲಿಕೆಯ ವಿಧಾನ : ಅಭ್ಯರ್ಥಿಯು ಈ ಹುದ್ದೆಗೆ ಆನ್‌ಲೈನ್ ಮೂಲಕ ಅರ್ಜಿಗಳನ್ನು ಸಲ್ಲಿಸಬೇಕು.
ಹಂತ 1 : ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸುವ ಮೊದಲು ಇಲಾಖೆ ಹೊರಡಿಸಿರುವ ಅಧಿಸೂಚನೆಯನ್ನು ಗಮನವಿಟ್ಟು ಓದಿ ಅರ್ಜಿ ಸಲ್ಲಿಸಲು ಅಗತ್ಯವಿರುವ ದಾಖಲೆಗಳನ್ನು ಸಿದ್ಧಪಡಿಸಿಕೊಂಡು ನಂತರ ಅರ್ಜಿಯನ್ನು ಸಲ್ಲಿಸಬೇಕು.
ಹಂತ 2 : ಇಲಾಖೆಯ ವೆಬ್‌ಸೈಟ್ ಗೆ ಭೇಟಿ ನೀಡಿ ಅಥವಾ ಈ ಕೆಳಗಡೆ ನೀಡಲಾದ ಅಪ್ಲೈ ಆನ್‌ಲೈನ್ ಲಿಂಕ್ ಮೇಲೆ ಕ್ಲಿಕ್ ಮಾಡಿ ಅಪ್ಲಿಕೇಷನ್ ತೆರೆದುಕೊಳ್ಳಿ.
ಹಂತ 3 : ಅಪ್ಲಿಕೇಷನ್ ನಲ್ಲಿ ತಿಳಿಸಿರುವಂತಹ ಎಲ್ಲಾ ಮಾಹಿತಿಯನ್ನು (ಉದಾಹರಣೆಗೆ ಅಭ್ಯರ್ಥಿಯ ಹೆಸರು, ವಿಳಾಸ, ವಿದ್ಯಾರ್ಹತೆ, ಮೊಬೈಲ್ ಸಂಖ್ಯೆ ಇತ್ಯಾದಿ) ಭರ್ತಿ ಮಾಡಿ, ಮುಂದಿನ ಹಂತಕ್ಕೆ ತೆರಳುವ ಮುನ್ನ ಪುನಃ ಒಮ್ಮೆ ಪರಿಶೀಲಿಸಿ.
ಹಂತ 4 : ಕೊನೆಯದಾಗಿ, ಅಪ್ಲಿಕೇಷನ್ ನಲ್ಲಿ ಯಾವುದೇ ಪ್ರಮಾಣ ಪತ್ರ/ ದಾಖಲೆಗಳನ್ನು ಅಪ್ಲೋಡ್ ಮಾಡಲು ಸೂಚಿಸಿದ್ದರೆ, ಅವುಗಳನ್ನು ಸ್ಕ್ಯಾನ್ ಮಾಡಿ ಅಪ್ಲೋಡ್ ಮಾಡಿ (ಅಗತ್ಯವಿದ್ದರೆ ಮಾತ್ರ) ಅರ್ಜಿ ಸಲ್ಲಿಕೆ ಪೂರ್ಣಗೊಳಿಸಿ.
ಅರ್ಜಿ ಶುಲ್ಕ : ಯಾವುದೇ ಅರ್ಜಿ ಶುಲ್ಕ ಇರುವುದಿಲ್ಲ.
ಅರ್ಜಿಯನ್ನು ಸಲ್ಲಿಸಲು ನಿಗದಿಪಡಿಸಿದ ದಿನಾಂಕದ ವಿವರ :
ಅರ್ಜಿ ಸಲ್ಲಿಸಲು ಪ್ರಾರಂಭದ ದಿನಾಂಕ : ಮಾರ್ಚ್ 15, 2024
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : ಏಪ್ರಿಲ್ 15, 2024
RDWSD Karnataka Recruitment 2024 : Important Links
NOTIFICATION | CLICK HERE |
APPLY ONLINE | CLICK HERE |
Telegram Join Link | Click Here |
WhatsApp Group Link | Click Here |
ಕೊನೆಯ ಪದಗಳು : ನಾವು ನೀಡಿದ ಉದ್ಯೋಗ ಮಾಹಿತಿಯನ್ನು ನೀವು ಇಷ್ಟಪಡುತ್ತೀರಿ ಎಂದು ಭಾವಿಸುತ್ತೇವೆ. ಈ ಉದ್ಯೋಗ ಮಾಹಿತಿ ನಿಮಗೆ ಇಷ್ಟವಾಗಿದ್ದರೆ ನಿಮ್ಮ ಸ್ನೇಹಿತರಿಗೆ ಶೇರ್ ಮಾಡಲು ಮರೆಯದಿರಿ.