Supreme Court Recruitment 2024 : ಭಾರತೀಯ ಸುಪ್ರೀಂ ಕೋರ್ಟ್ ನಲ್ಲಿ ಖಾಲಿ ಇರುವ ಕೋರ್ಟ್ ಮಾಸ್ಟರ್, ಸೀನಿಯರ್ ಪರ್ಸನಲ್ ಅಸಿಸ್ಟಂಟ್ ಹಾಗೂ ಪರ್ಸನಲ್ ಅಸಿಸ್ಟಂಟ್ ಹುದ್ದೆಗಳ ಭರ್ತಿಗೆ ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಕರೆಯಲಾಗಿದೆ. ಹುದ್ದೆಗಳ ಭರ್ತಿಗೆ ಸಂಬಂಧಿಸಿದಂತೆ ಹುದ್ದೆಗಳ ಸಂಖ್ಯೆ, ಕರ್ತವ್ಯ ಸ್ಥಳ, ಶೈಕ್ಷಣಿಕ ಅರ್ಹತೆ, ವೇತನ, ಅರ್ಜಿ ಶುಲ್ಕ ಹಾಗೂ ಇತರೆ ಮಾಹಿತಿಯನ್ನು ಈ ಕೆಳಗಡೆ ವಿವರವಾಗಿ ನೀಡಲಾಗಿದೆ ಪೂರ್ತಿ ಓದಿ.
Supreme Court Recruitment 2024 : Details of Vacancies
ಹುದ್ದೆ : ಕೋರ್ಟ್ ಮಾಸ್ಟರ್ (ಶಾರ್ಟ್ ಹ್ಯಾಂಡ್), ಸೀನಿಯರ್ ಪರ್ಸನಲ್ ಅಸಿಸ್ಟಂಟ್, ಪರ್ಸನಲ್ ಅಸಿಸ್ಟಂಟ್
ಕರ್ತವ್ಯ ಸ್ಥಳ : ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳು ಸುಪ್ರೀಂ ಕೋರ್ಟ್ ನಲ್ಲಿ ಕರ್ತವ್ಯ ನಿರ್ವಹಿಸಬೇಕು.
ಖಾಲಿಯಿರುವ ಹುದ್ದೆಗಳ ಸಂಖ್ಯೆ : ಒಟ್ಟು 107 ಹುದ್ದೆಗಳ ಭರ್ತಿಗೆ ಅರ್ಜಿಯನ್ನು ಕರೆಯಲಾಗಿದೆ.
ಹುದ್ದೆ | ಹುದ್ದೆಗಳ ಸಂಖ್ಯೆ |
ಕೋರ್ಟ್ ಮಾಸ್ಟರ್ (ಶಾರ್ಟ್ ಹ್ಯಾಂಡ್) | 31 |
ಸೀನಿಯರ್ ಪರ್ಸನಲ್ ಅಸಿಸ್ಟಂಟ್ | 33 |
ಪರ್ಸನಲ್ ಅಸಿಸ್ಟಂಟ್ | 43 |
ಶೈಕ್ಷಣಿಕ ಅರ್ಹತೆ :
• ಕೋರ್ಟ್ ಮಾಸ್ಟರ್ (ಶಾರ್ಟ್ ಹ್ಯಾಂಡ್) – ಕಾನೂನು ಪದವಿ ಪಡೆದಿರಬೇಕು. 120 w.p.m. ವೇಗದೊಂದಿಗೆ ಶಾರ್ಟ್ ಹ್ಯಾಂಡ್ (ಇಂಗ್ಲೀಷ್) ಪ್ರಾವಿಣ್ಯತೆ. 40 w.p.m. ಟೈಪಿಂಗ್ ವೇಗದ ಜೊತೆಗೆ ಕಂಪ್ಯೂಟರ್ ಆಪರೇಷನ್ ಜ್ಞಾನ ಹೊಂದಿರಬೇಕು.
• ಸೀನಿಯರ್ ಪರ್ಸನಲ್ ಅಸಿಸ್ಟಂಟ್ – ಪದವಿ ಹೊಂದಿರಬೇಕು. 110 w.p.m. ವೇಗದೊಂದಿಗೆ ಶಾರ್ಟ್ ಹ್ಯಾಂಡ್ (ಇಂಗ್ಲೀಷ್) ಪ್ರಾವಿಣ್ಯತೆ. 40 w.p.m. ಟೈಪಿಂಗ್ ವೇಗದ ಜೊತೆಗೆ ಕಂಪ್ಯೂಟರ್ ಆಪರೇಷನ್ ಜ್ಞಾನ ಹೊಂದಿರಬೇಕು.
• ಪರ್ಸನಲ್ ಅಸಿಸ್ಟಂಟ್ – ಪದವಿ ಹೊಂದಿರಬೇಕು. 100 w.p.m. ವೇಗದೊಂದಿಗೆ ಶಾರ್ಟ್ ಹ್ಯಾಂಡ್ (ಇಂಗ್ಲೀಷ್) ಪ್ರಾವಿಣ್ಯತೆ. 40 w.p.m. ಟೈಪಿಂಗ್ ವೇಗದ ಜೊತೆಗೆ ಕಂಪ್ಯೂಟರ್ ಆಪರೇಷನ್ ಜ್ಞಾನ ಹೊಂದಿರಬೇಕು.
ಉದ್ಯೋಗ ಮಾಹಿತಿ : ಕರ್ನಾಟಕ ಬ್ಯಾಂಕ್ ಪ್ರೊಬೇಷನರಿ ಆಫೀಸರ್ಸ್ ನೇಮಕಾತಿ 2024
ವಯೋಮಾನ :
• ಕೋರ್ಟ್ ಮಾಸ್ಟರ್ (ಶಾರ್ಟ್ ಹ್ಯಾಂಡ್) – ಕನಿಷ್ಠ 30 ವರ್ಷ, ಗರಿಷ್ಠ 45 ವರ್ಷ
• ಸೀನಿಯರ್ ಪರ್ಸನಲ್ ಅಸಿಸ್ಟಂಟ್, ಪರ್ಸನಲ್ ಅಸಿಸ್ಟಂಟ್ – ಕನಿಷ್ಠ 18 ವರ್ಷ, ಗರಿಷ್ಠ 30 ವರ್ಷ
ವೇತನ :
ಹುದ್ದೆ | ವೇತನ |
ಕೋರ್ಟ್ ಮಾಸ್ಟರ್ (ಶಾರ್ಟ್ ಹ್ಯಾಂಡ್) | 67700 |
ಸೀನಿಯರ್ ಪರ್ಸನಲ್ ಅಸಿಸ್ಟಂಟ್ | 47600 |
ಪರ್ಸನಲ್ ಅಸಿಸ್ಟಂಟ್ | 44900 |
ಆಯ್ಕೆ ವಿಧಾನ : ಅಭ್ಯರ್ಥಿಗಳಿಗೆ ಟೈಪಿಂಗ್ ಸ್ಪೀಡ್ ಟೆಸ್ಟ್, ಶಾರ್ಟ್ ಹ್ಯಾಂಡ್ (ಇಂಗ್ಲೀಷ್) ಟೆಸ್ಟ್, ಲಿಖಿತ ಪರೀಕ್ಷೆ, ಸಂದರ್ಶನ ನಡೆಸಿ ಆಯ್ಕೆ ಮಾಡಲಾಗುವುದು.
ಉದ್ಯೋಗ ಮಾಹಿತಿ : ರೈಲ್ವೆ ಇಲಾಖೆ ನೇಮಕಾತಿ 2024
ಅರ್ಜಿ ಸಲ್ಲಿಕೆಯ ವಿಧಾನ : ಅಭ್ಯರ್ಥಿಯು ಈ ಹುದ್ದೆಗೆ ಆನ್‌ಲೈನ್ ಮೂಲಕ ಅರ್ಜಿಗಳನ್ನು ಸಲ್ಲಿಸಬೇಕು.
ಹಂತ 1 : ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸುವ ಮೊದಲು ಕೋರ್ಟ್ ಹೊರಡಿಸಿರುವ ಅಧಿಸೂಚನೆಯನ್ನು ಗಮನವಿಟ್ಟು ಓದಿ ಅರ್ಜಿ ಸಲ್ಲಿಸಲು ಅಗತ್ಯವಿರುವ ದಾಖಲೆಗಳನ್ನು ಸಿದ್ಧಪಡಿಸಿಕೊಂಡು ನಂತರ ಅರ್ಜಿಯನ್ನು ಸಲ್ಲಿಸಬೇಕು.
ಹಂತ 2 : ಕೋರ್ಟಿನ ವೆಬ್‌ಸೈಟ್ ಗೆ ಭೇಟಿ ನೀಡಿ ಅಥವಾ ಈ ಕೆಳಗಡೆ ನೀಡಲಾದ ಅಪ್ಲೈ ಆನ್‌ಲೈನ್ ಲಿಂಕ್ ಮೇಲೆ ಕ್ಲಿಕ್ ಮಾಡಿ ಅಪ್ಲಿಕೇಷನ್ ತೆರೆದುಕೊಳ್ಳಿ.
ಹಂತ 3 : ಅಪ್ಲಿಕೇಷನ್ ನಲ್ಲಿ ತಿಳಿಸಿರುವಂತಹ ಎಲ್ಲಾ ಮಾಹಿತಿಯನ್ನು (ಉದಾಹರಣೆಗೆ ಅಭ್ಯರ್ಥಿಯ ಹೆಸರು, ವಿಳಾಸ, ವಿದ್ಯಾರ್ಹತೆ, ಮೊಬೈಲ್ ಸಂಖ್ಯೆ ಇತ್ಯಾದಿ) ಭರ್ತಿ ಮಾಡಿ, ಮುಂದಿನ ಹಂತಕ್ಕೆ ತೆರಳುವ ಮುನ್ನ ಪುನಃ ಒಮ್ಮೆ ಪರಿಶೀಲಿಸಿ.
ಹಂತ 4 : ಅಪ್ಲಿಕೇಷನ್ ನಲ್ಲಿ ಯಾವುದೇ ಪ್ರಮಾಣ ಪತ್ರ/ ದಾಖಲೆಗಳನ್ನು ಅಪ್ಲೋಡ್ ಮಾಡಲು ಸೂಚಿಸಿದ್ದರೆ, ಅವುಗಳನ್ನು ಸ್ಕ್ಯಾನ್ ಮಾಡಿ ಅಪ್ಲೋಡ್ ಮಾಡಿ (ಅಗತ್ಯವಿದ್ದರೆ ಮಾತ್ರ).
ಹಂತ 5 : ಕೊನೆಯದಾಗಿ, ಅಭ್ಯರ್ಥಿಗೆ ಅರ್ಜಿ ಶುಲ್ಕ ಪಾವತಿಸಲು ಸೂಚಿಸಿದ್ದರೆ, ಶುಲ್ಕ ಪಾವತಿಸಿ ಅರ್ಜಿ ಸಲ್ಲಿಕೆ ಪೂರ್ಣಗೊಳಿಸಿ.
ನಿಗದಿತ ಅರ್ಜಿ ಶುಲ್ಕದ ವಿವರ :
• ಸಾಮಾನ್ಯ, ಒಬಿಸಿ ಅಭ್ಯರ್ಥಿಗಳು – ರೂ. 1,000
• ಎಸ್ಸಿ, ಎಸ್ಟಿ, ಮಾಜಿ ಸೈನಿಕ, ಅಂಗವಿಕಲ, ಸ್ವಾತಂತ್ರ್ಯ ಹೋರಾಟಗಾರರ ಅವಲಂಬಿತ ಅಭ್ಯರ್ಥಿಗಳು – ರೂ. 250
ಶುಲ್ಕ ಪಾವತಿಸುವ ವಿಧಾನ : ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಶುಲ್ಕ ಪಾವತಿಸಬಹುದು.
ಅರ್ಜಿಯನ್ನು ಸಲ್ಲಿಸಲು ನಿಗದಿಪಡಿಸಿದ ದಿನಾಂಕದ ವಿವರ :
ಅರ್ಜಿ ಸಲ್ಲಿಸಲು ಪ್ರಾರಂಭದ ದಿನಾಂಕ : ಡಿಸೆಂಬರ್ 04, 2024
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : ಡಿಸೆಂಬರ್ 25, 2024
Supreme Court Recruitment 2024 : Important Links
NOTIFICATION | CLICK HERE |
APPLY ONLINE | CLICK HERE |
Telegram Join Link | Click Here |
WhatsApp Group Link | Click Here |
ಕೊನೆಯ ಪದಗಳು : ನಾವು ನೀಡಿದ ಉದ್ಯೋಗ ಮಾಹಿತಿಯನ್ನು ನೀವು ಇಷ್ಟಪಡುತ್ತೀರಿ ಎಂದು ಭಾವಿಸುತ್ತೇವೆ. ಈ ಉದ್ಯೋಗ ಮಾಹಿತಿ ನಿಮಗೆ ಇಷ್ಟವಾಗಿದ್ದರೆ ನಿಮ್ಮ ಸ್ನೇಹಿತರಿಗೆ ಶೇರ್ ಮಾಡಲು ಮರೆಯದಿರಿ.