ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ನಿಯಮಿತ ನೇಮಕಾತಿ 2026 – KSSFCL Recruitment 2026

KSSFCL Recruitment 2026

KSSFCL Recruitment 2026 : ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ಈ ಸಂಸ್ಥೆಗೆ ಅಗತ್ಯ ಇರುವ ವಿವಿಧ ಹುದ್ದೆಗಳಿಗೆ ಸಲಹೆಗಾರರು ಹಾಗೂ ಸಿಬ್ಬಂದಿಗಳನ್ನು ಗುತ್ತಿಗೆ ಆಧಾರದಲ್ಲಿ ತಾತ್ಕಾಲಿಕ ನೇಮಕ ಮಾಡಿಕೊಳ್ಳಲು ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಹುದ್ದೆಗಳ ಭರ್ತಿಗೆ ಸಂಬಂಧಿಸಿದಂತೆ ಕರ್ತವ್ಯ ಸ್ಥಳ, ಶೈಕ್ಷಣಿಕ ಅರ್ಹತೆ, ವೇತನ, ಅರ್ಜಿ ಸಲ್ಲಿಕೆ ದಿನಾಂಕ ಹಾಗೂ ಇತರೆ ಮಾಹಿತಿಯನ್ನು ಈ ಕೆಳಗಡೆ ವಿವರವಾಗಿ ನೀಡಲಾಗಿದೆ ಪೂರ್ತಿ ಓದಿ.

KSSFCL Recruitment 2026 : Details of Vacancies

ಹುದ್ದೆ :

ಲೀಗಲ್ ಕನ್ಸಲ್ಟೆಂಟ್, ಸೌಹಾರ್ದ ಅಭಿವೃದ್ಧಿ ಅಧಿಕಾರಿ, ಉಪ ಸಿಬ್ಬಂದಿ ಕಮ್ ವಾಹನ ಚಾಲಕ.

ಕರ್ತವ್ಯ ಸ್ಥಳ :

ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳು ಬೆಂಗಳೂರು, ಕರ್ನಾಟಕದಲ್ಲಿ ಕೆಲಸ ನಿರ್ವಹಿಸಬೇಕು.

ಖಾಲಿಯಿರುವ ಹುದ್ದೆಗಳ ಸಂಖ್ಯೆ :

ಒಟ್ಟು 10 ಹುದ್ದೆಗಳ ಭರ್ತಿಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ.

ಹುದ್ದೆಹುದ್ದೆಗಳ ಸಂಖ್ಯೆ
ಲೀಗಲ್ ಕನ್ಸಲ್ಟೆಂಟ್2
ಸೌಹಾರ್ದ ಅಭಿವೃದ್ಧಿ ಅಧಿಕಾರಿ4
ಉಪ ಸಿಬ್ಬಂದಿ ಕಮ್ ವಾಹನ ಚಾಲಕ4

ಶೈಕ್ಷಣಿಕ ಅರ್ಹತೆ :

ಲೀಗಲ್ ಕನ್ಸಲ್ಟೆಂಟ್ –

ಕಾನೂನು ಪದವಿ ಮತ್ತು ಕಂಪ್ಯೂಟರ್ ಪರಿಣಿತಿ ಕಡ್ಡಾಯ. ಬ್ಯಾಂಕಿಂಗ್ ಅಥವಾ ಸಹಕಾರ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುತ್ತಿರುವ/ ಅನುಭವ ಹೊಂದಿದವರಿಗೆ ಆದ್ಯತೆ.

ಸೌಹಾರ್ದ ಅಭಿವೃದ್ಧಿ ಅಧಿಕಾರಿ –

ಯಾವುದೇ ವಿಷಯದಲ್ಲಿ ಪದವಿ ಪಡೆದಿರಬೇಕು. ಕಂಪ್ಯೂಟರ್ ಪರಿಣಿತಿ ಕಡ್ಡಾಯ. ಬ್ಯಾಂಕಿಂಗ್ ಅಥವಾ ಸಹಕಾರ ಕ್ಷೇತ್ರದಲ್ಲಿ ಕೆಲಸ ನಿರ್ವಹಿಸಿದ ಅನುಭವ ಹೊಂದಿದವರಿಗೆ ಆದ್ಯತೆ.

ಉಪ ಸಿಬ್ಬಂದಿ ಕಮ್ ವಾಹನ ಚಾಲಕ –

ಎಸ್.ಎಸ್.ಎಲ್.ಸಿ ಅಥವಾ ತತ್ಸಮಾನ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು. ಲಘು ಮೋಟಾರ್ ವಾಹನ ಚಾಲನಾ ಪರವಾನಿಗೆ ಪಡೆದು ಮೂರು ವರ್ಷಗಳಾಗಿರತಕ್ಕದ್ದು.

ಉದ್ಯೋಗ ಮಾಹಿತಿ : ಭಾರತೀಯ ರೈಲ್ವೆಯಲ್ಲಿ ಪ್ಯಾರಾ ಮೆಡಿಕಲ್ ಹುದ್ದೆಗಳ ನೇಮಕಾತಿ 2026

ವಯೋಮಾನ :

  • ಲೀಗಲ್ ಕನ್ಸಲ್ಟೆಂಟ್ – ಗರಿಷ್ಠ 40 ವರ್ಷ
  • ಸೌಹಾರ್ದ ಅಭಿವೃದ್ಧಿ ಅಧಿಕಾರಿ – ಗರಿಷ್ಠ 30 ವರ್ಷ
  • ಉಪ ಸಿಬ್ಬಂದಿ ಕಮ್ ವಾಹನ ಚಾಲಕ – ಗರಿಷ್ಠ 30 ವರ್ಷ

ವೇತನ :

ಹುದ್ದೆವೇತನ
ಲೀಗಲ್ ಕನ್ಸಲ್ಟೆಂಟ್ರೂ. 40,000/-
ಸೌಹಾರ್ದ ಅಭಿವೃದ್ಧಿ ಅಧಿಕಾರಿರೂ. 30,000/-
ಉಪ ಸಿಬ್ಬಂದಿ ಕಮ್ ವಾಹನ ಚಾಲಕರೂ. 18,000/-

ಆಯ್ಕೆ ವಿಧಾನ :

  • ಎಲ್ಲಾ ಹುದ್ದೆಗಳಿಗೂ ಸಂದರ್ಶನ ಮೂಲಕ ಆಯ್ಕೆ ಮಾಡಲಾಗುತ್ತದೆ.
  • ಉಪಸಿಬ್ಬಂದಿ ಕಂ ವಾಹನ ಚಾಲಕ ಸಿಬ್ಬಂದಿಗಳಿಗೆ ವಾಹನ ಚಾಲನಾ ಪ್ರಾಯೋಗಿಕ ಪರೀಕ್ಷೆ ಇರುತ್ತದೆ.

ಅರ್ಜಿ ಸಲ್ಲಿಕೆಯ ವಿಧಾನ :

ಅಭ್ಯರ್ಥಿಯು ಈ ಹುದ್ದೆಗೆ ಆಫ್‌ಲೈನ್‌ ಮೂಲಕ ಅರ್ಜಿಗಳನ್ನು ಸಲ್ಲಿಸಬೇಕು.
ಹಂತ 1 : ಆಫ್‌ಲೈನ್‌ ಮೂಲಕ ಅರ್ಜಿ ಸಲ್ಲಿಸುವ ಮೊದಲು ಇಲಾಖೆ ಹೊರಡಿಸಿರುವ ಅಧಿಸೂಚನೆಯನ್ನು ಗಮನವಿಟ್ಟು ಓದಿ ಅರ್ಜಿ ಸಲ್ಲಿಸಲು ಅಗತ್ಯವಿರುವ ದಾಖಲೆಗಳನ್ನು ಸಿದ್ಧಪಡಿಸಿಕೊಂಡು ನಂತರ ಅರ್ಜಿಯನ್ನು ಸಲ್ಲಿಸಬೇಕು.
ಹಂತ 2 : ಇಲಾಖೆಯ ವೆಬ್‌ಸೈಟ್ ಗೆ ಭೇಟಿ ನೀಡಿ ಅಥವಾ ಈ ಕೆಳಗಡೆ ನೀಡಲಾದ ಅಪ್ಲಿಕೇಷನ್ ಫಾರ್ಮ್ ಲಿಂಕ್ ಮೇಲೆ ಕ್ಲಿಕ್ ಮಾಡಿ ಅಪ್ಲಿಕೇಷನ್ ಡೌನ್ಲೋಡ್ ಮಾಡಿಕೊಳ್ಳಿ.
ಹಂತ 3 : ಅಪ್ಲಿಕೇಷನ್ ನಲ್ಲಿ ತಿಳಿಸಿರುವಂತಹ ಎಲ್ಲಾ ಮಾಹಿತಿಯನ್ನು (ಉದಾಹರಣೆಗೆ ಅಭ್ಯರ್ಥಿಯ ಹೆಸರು, ವಿಳಾಸ, ವಿದ್ಯಾರ್ಹತೆ, ಮೊಬೈಲ್ ಸಂಖ್ಯೆ ಇತ್ಯಾದಿ) ಭರ್ತಿ ಮಾಡಿ, ಪುನಃ ಒಮ್ಮೆ ಪರಿಶೀಲಿಸಿ.
ಹಂತ 4 : ಅಪ್ಲಿಕೇಷನ್ ನಲ್ಲಿ ಯಾವುದೇ ಪ್ರಮಾಣ ಪತ್ರ/ ದಾಖಲೆಗಳನ್ನು ಲಗತ್ತಿಸಲು ಸೂಚಿಸಿದ್ದರೆ, ಅವುಗಳನ್ನು ಲಗತ್ತಿಸಿ (ಅಗತ್ಯವಿದ್ದರೆ ಮಾತ್ರ).
ಹಂತ 5 : ಕೊನೆಯದಾಗಿ, ಅಭ್ಯರ್ಥಿಗೆ ಅರ್ಜಿ ಶುಲ್ಕ ಪಾವತಿಸಲು ಸೂಚಿಸಿದ್ದರೆ ಶುಲ್ಕ ಪಾವತಿಸಿ, ಭರ್ತಿ ಮಾಡಿದ ಅರ್ಜಿಯನ್ನು ಈ ಕೆಳಗಡೆ ನೀಡಲಾದ ಕಚೇರಿಯ ವಿಳಾಸಕ್ಕೆ ಕಳುಹಿಸತಕ್ಕದ್ದು.

ಅರ್ಜಿ ಸಲ್ಲಿಸುವ ವಿಳಾಸ :

ಸೌಹಾರ್ದ ಸಹಕಾರಿ ಸೌದ, ನಂ. 68, ಒಂದನೇ ಮಹಡಿ, 18ನೇ ಅಡ್ಡರಸ್ತೆ, ಮಾರ್ಗೋಸ್ ರಸ್ತೆ, ಮಲ್ಲೇಶ್ವರಂ, ಬೆಂಗಳೂರು – 560055

ಅರ್ಜಿ ಶುಲ್ಕ :

ಲೀಗಲ್ ಕನ್ಸಲ್ಟೆಂಟ್, ಸೌಹಾರ್ದ ಅಭಿವೃದ್ಧಿ ಅಧಿಕಾರಿ ಹುದ್ದೆಗೆ ರೂ. 500 ಹಾಗೂ ಉಪ ಸಿಬ್ಬಂದಿ ಕಮ್ ವಾಹನ ಚಾಲಕ ಹುದ್ದೆಗೆ ರೂ. 300 ಪಾವತಿಸಬೇಕು.

ಅರ್ಜಿ ಸಲ್ಲಿಸುವ ವಿಧಾನ :

ಅರ್ಜಿ ಶುಲ್ಕವನ್ನು ‘ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ನಿ.’ ಈ ಹೆಸರಿನಲ್ಲಿ ಬೆಂಗಳೂರಿನಲ್ಲಿ ಸಂದಾಯವಾಗುವಂತೆ ಡಿ.ಡಿ. (ಡಿಮ್ಯಾಂಡ್ ಡ್ರಾಪ್ಟ್) ತೆಗೆದು, ಅರ್ಜಿಯ ಜೊತೆ ಲಗತ್ತಿಸಿ ಕಳುಹಿಸುವುದು.

ಅರ್ಜಿಯನ್ನು ಸಲ್ಲಿಸಲು ನಿಗದಿಪಡಿಸಿದ ದಿನಾಂಕದ ವಿವರ :

  • ಅರ್ಜಿ ಸಲ್ಲಿಸಲು ಪ್ರಾರಂಭದ ದಿನಾಂಕ : ಸೆಪ್ಟೆಂಬರ್ 23, 2026
  • ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : ಅಕ್ಟೋಬರ್ 15, 2026

KSSFCL Recruitment 2026 : Important Links

NOTIFICATIONCLICK HERE
APPLICATION FORM CLICK HERE
WhatsApp Group Link Click Here
Telegram Join Link Click Here

ಕೊನೆಯ ಪದಗಳು : ನಾವು ನೀಡಿದ ಉದ್ಯೋಗ ಮಾಹಿತಿಯನ್ನು ನೀವು ಇಷ್ಟಪಡುತ್ತೀರಿ ಎಂದು ಭಾವಿಸುತ್ತೇವೆ. ಈ ಉದ್ಯೋಗ ಮಾಹಿತಿ ನಿಮಗೆ ಇಷ್ಟವಾಗಿದ್ದರೆ ನಿಮ್ಮ ಸ್ನೇಹಿತರಿಗೆ ಶೇರ್ ಮಾಡಲು ಮರೆಯದಿರಿ.

WhatsApp
Telegram
Facebook

Leave a Comment