
RRB Paramedical Recruitment 2026 : ಭಾರತೀಯ ರೈಲ್ವೆಯಲ್ಲಿ ಅಗತ್ಯವಿರುವ ನರ್ಸಿಂಗ್ ಸುಪರಿಂಟೆಂಡೆಂಟ್, ಡಯಾಲಿಸಿಸ್ ಟೆಕ್ನಿಷಿಯನ್, ಹೆಲ್ತ್ & ಮಲೇರಿಯಾ ಇನ್‌ಸ್ಪೆಕ್ಟರ್ ಸೇರಿದಂತೆ ವಿವಿಧ ಹುದ್ದೆಗಳ ಭರ್ತಿಗೆ ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಯನ್ನು ಆಹ್ವಾನಿಸಲಾಗಿದೆ. ಹುದ್ದೆಗಳ ಭರ್ತಿಗೆ ಸಂಬಂಧಿಸಿದಂತೆ ಹುದ್ದೆಗಳ ಸಂಖ್ಯೆ, ಕರ್ತವ್ಯ ಸ್ಥಳ, ಶೈಕ್ಷಣಿಕ ಅರ್ಹತೆ, ವೇತನ, ಆಯ್ಕೆ ವಿಧಾನ ಹಾಗೂ ಇತರೆ ಮಾಹಿತಿಯನ್ನು ಈ ಕೆಳಗಡೆ ವಿವರವಾಗಿ ನೀಡಲಾಗಿದೆ ಪೂರ್ತಿ ಓದಿ.
RRB Paramedical Recruitment 2026 : Details of Vacancies
ಹುದ್ದೆ :
ನರ್ಸಿಂಗ್ ಸುಪರಿಂಟೆಂಡೆಂಟ್, ಡಯಾಲಿಸಿಸ್ ಟೆಕ್ನಿಷಿಯನ್, ಹೆಲ್ತ್ & ಮಲೇರಿಯಾ ಇನ್‌ಸ್ಪೆಕ್ಟರ್ ಗ್ರೇಡ್ 2, ಆಡಿಯಾಲಾಜಿಸ್ಟ್ & ಸ್ಫೀಚ್ ಥೆರಪಿಸ್ಟ್, ಫಾರ್ಮಸಿಸ್ಟ್, ರೇಡಿಯೋಗ್ರಾಫರ್ ಎಕ್ಸ್-ರೇ ಟೆಕ್ನಿಷಿಯನ್, ಇಸಿಜಿ ಟೆಕ್ನಿಷಿಯನ್, ಆಪ್ಟೋಮೆಟ್ರಿಸ್ಟ್, ಲ್ಯಾಬ್ ಅಸಿಸ್ಟಂಟ್ ಗ್ರೇಡ್ 2.
ಕರ್ತವ್ಯ ಸ್ಥಳ :
ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳು ಭಾರತದೆಲ್ಲೆಡೆ ಕರ್ತವ್ಯ ನಿರ್ವಹಿಸಬೇಕು.
ಖಾಲಿಯಿರುವ ಹುದ್ದೆಗಳ ಸಂಖ್ಯೆ :
ಒಟ್ಟು 590 ಹುದ್ದೆಗಳ ಭರ್ತಿಗೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
| ಹುದ್ದೆ | ಹುದ್ದೆಗಳ ಸಂಖ್ಯೆ |
| ನರ್ಸಿಂಗ್ ಸುಪರಿಂಟೆಂಡೆಂಟ್ | 365 |
| ಡಯಾಲಿಸಿಸ್ ಟೆಕ್ನಿಷಿಯನ್ | 01 |
| ಹೆಲ್ತ್ & ಮಲೇರಿಯಾ ಇನ್‌ಸ್ಪೆಕ್ಟರ್ ಗ್ರೇಡ್ 2 | 43 |
| ಆಡಿಯಾಲಾಜಿಸ್ಟ್ & ಸ್ಫೀಚ್ ಥೆರಪಿಸ್ಟ್ | 01 |
| ಫಾರ್ಮಸಿಸ್ಟ್ | 118 |
| ರೇಡಿಯೋಗ್ರಾಫರ್ ಎಕ್ಸ್-ರೇ ಟೆಕ್ನಿಷಿಯನ್ | 25 |
| ಇಸಿಜಿ ಟೆಕ್ನಿಷಿಯನ್ | 04 |
| ಆಪ್ಟೋಮೆಟ್ರಿಸ್ಟ್ | 02 |
| ಲ್ಯಾಬ್ ಅಸಿಸ್ಟಂಟ್ ಗ್ರೇಡ್ 2 | 31 |
ನಿಗದಿಪಡಿಸಿರುವ ಶೈಕ್ಷಣಿಕ ಅರ್ಹತೆ :
ನರ್ಸಿಂಗ್ ಸುಪರಿಂಟೆಂಡೆಂಟ್ –
ಮಾನ್ಯತೆ ಪಡೆದ ಸಂಸ್ಥೆಯಿಂದ ಜನರಲ್ ನರ್ಸಿಂಗ್ ಮತ್ತು ಮಿಡ್‌ವೈಫರಿ (GNM) ಯಲ್ಲಿ 3 ವರ್ಷಗಳ ಕೋರ್ಸ್‌ನಲ್ಲಿ ಉತ್ತೀರ್ಣರಾಗಿ ನೊಂದಾಯಿತ ನರ್ಸ್ ಮತ್ತು ಮಿಡ್‌ವೈಫ್ ಪ್ರಮಾಣಪತ್ರ ಹೊಂದಿರಬೇಕು ಅಥವಾ ಬಿ.ಎಸ್ಸಿ ನರ್ಸಿಂಗ್ ಹೊಂದಿರಬೇಕು.
ಡಯಾಲಿಸಿಸ್ ಟೆಕ್ನಿಷಿಯನ್ –
ಬಿ.ಎಸ್ಸಿ ಪದವಿ ಜೊತೆಗೆ (ಎ) ಹಿಮೊಡಯಾಲಿಸಿಸ್‌ನಲ್ಲಿ ಡಿಪ್ಲೊಮಾ (Diploma in Haemodialysis) ಅಥವಾ (ಬಿ) ಪ್ರತಿಷ್ಠಿತ ಸಂಸ್ಥೆಯಲ್ಲಿ ಹಿಮೊಡಯಾಲಿಸಿಸ್ ಕಾರ್ಯದಲ್ಲಿ ಎರಡು ವರ್ಷಗಳ ತೃಪ್ತಿಕರ ಇನ್-ಹೌಸ್ ತರಬೇತಿ/ ಅನುಭವ ಹೊಂದಿರಬೇಕು.
ಹೆಲ್ತ್ & ಮಲೇರಿಯಾ ಇನ್‌ಸ್ಪೆಕ್ಟರ್ ಗ್ರೇಡ್ 2 –
ಬಿ.ಎಸ್ಸಿ ಪದವಿ ವ್ಯಾಸಂಗದಲ್ಲಿ ರಸಾಯನಶಾಸ್ತ್ರದ ಯಾವುದೇ ವಿಭಾಗವನ್ನು ಮುಖ್ಯ ಅಥವಾ ಐಚ್ಛಿಕ ವಿಷಯವನ್ನಾಗಿ ಓದಿ ಉತ್ತೀರ್ಣರಾಗಿರಬೇಕು. ಜೊತೆಗೆ (ಎ) ಹೆಲ್ತ್ & ಸ್ಯಾನಿಟರಿ ಇನ್‌ಸ್ಪೆಕ್ಟರ್ ಕೋರ್ಸ್‌ನಲ್ಲಿ ಒಂದು ವರ್ಷದ ಡಿಪ್ಲೊಮಾ ಅಥವಾ (ಬಿ) ಹೆಲ್ತ್ ಸ್ಯಾನಿಟರಿ ಇನ್‌ಸ್ಪೆಕ್ಟರ್ ಟ್ರೇಡ್‌ನಲ್ಲಿ ಒಂದು ವರ್ಷದ ನ್ಯಾಷನಲ್ ಟ್ರೇಡ್ ಸರ್ಟಿಫಿಕೇಟ್ (NTC) ಹೊಂದಿರಬೇಕು.
ಆಡಿಯೊಲಾಜಿಸ್ಟ್ & ಸ್ಫೀಚ್ ಥೆರಪಿಸ್ಟ್ –
ಆಡಿಯಾಲಜಿ, ಸ್ಪೀಚ್ ಲ್ಯಾಂಗ್ವೇಜ್ ಪ್ಯಾಥಾಲಜಿಯಲ್ಲಿ ಪದವಿ (BASLP) ಪಡೆದಿರಬೇಕು ಮತ್ತು ರಿಹಾಬಿಲಿಟೇಷನ್ ಕೌನ್ಸಿಲ್ ಆಫಿ ಇಂಡಿಯಾದಲ್ಲಿ ಕಡ್ಡಾಯವಾಗಿ ನೋಂದಾಯಿತರಾಗಿರಬೇಕು.
ಫಾರ್ಮಸಿಸ್ಟ್ –
ಬ್ಯಾಚುಲರ್ ಡಿಗ್ರಿ ಇನ್ ಫಾರ್ಮಸಿ ಮತ್ತು ಫಾರ್ಮಾಸಿಸ್ಟ್ ಆಗಿ ನೋಂದಾಯಿತರಾಗಿರಬೇಕು ಅಥವಾ ಡಾಕ್ಟರ್ ಆಫ್ ಫಾರ್ಮಸಿ ಮತ್ತು ಫಾರ್ಮಾಸಿಸ್ಟ್ ಆಗಿ ನೋಂದಾಯಿತರಾಗಿರಬೇಕು.
ರೇಡಿಯೋಗ್ರಾಫರ್ ಎಕ್ಸ್-ರೇ ಟೆಕ್ನಿಷಿಯನ್ –
ಭೌತಶಾಸ್ತ್ರ ಮತ್ತು ರಸಾಯನಶಾಸ್ತ್ರ ವಿಷಯಗಳೊಂದಿಗೆ ಪಿಯುಸಿ ಉತ್ತೀರ್ಣರಾಗಿರಬೇಕು ಹಾಗೂ ಮಾನ್ಯತೆ ಪಡೆದ ಸಂಸ್ಥೆಯಿಂದ ರೇಡಿಯೋಗ್ರಫಿ/ ಎಕ್ಸ್-ರೇ ಟೆಕ್ನಿಷಿಯನ್/ ರೇಡಿಯೋಡಯಾಗ್ನೋಸಿಸ್ ಟೆಕ್ನಾಲಜಿಯಲ್ಲಿ ಡಿಪ್ಲೊಮಾ (2 ವರ್ಷಗಳ ಕೋರ್ಸ್) ಹೊಂದಿರಬೇಕು. ರೇಡಿಯೋಗ್ರಫಿ/ ಎಕ್ಸ್-ರೇ ಟೆಕ್ನಿಷಿಯನ್/ ರೇಡಿಯೋಡಯಾಗ್ನೋಸಿಸ್ ಟೆಕ್ನಾಲಜಿ ಡಿಪ್ಲೊಮಾ (2 ವರ್ಷಗಳ ಕೋರ್ಸ್) ಹೊಂದಿರುವ ವಿಜ್ಞಾನ ಪದವೀಧರರಿಗೆ ಆದ್ಯತೆ ನೀಡಲಾಗುವುದು.
ಇಸಿಜಿ ಟೆಕ್ನಿಷಿಯನ್ –
ವಿಜ್ಞಾನ ವಿಭಾಗದಲ್ಲಿ 10+2 ಅಥವಾ ಪದವಿ ಉತ್ತೀರ್ಣರಾಗಿರಬೇಕು ಹಾಗೂ ಪ್ರತಿಷ್ಠಿತ ಸಂಸ್ಥೆಯಿಂದ ಇಸಿಜಿ ಲ್ಯಾಬೊರೇಟರಿ ಟೆಕ್ನಾಲಜಿ/ ಕಾರ್ಡಿಯಾಲಜಿ/ ಕಾರ್ಡಿಯಾಲಜಿ ಟೆಕ್ನಿಷಿಯನ್/ ಕಾರ್ಡಿಯಾಲಜಿ ಟೆಕ್ನಿಕ್ಸ್ ವಿಷಯದಲ್ಲಿ ಪ್ರಮಾಣಪತ್ರ/ ಡಿಪ್ಲೊಮಾ/ ಪದವಿ ಹೊಂದಿರಬೇಕು.
ಆಪ್ಟೋಮೆಟ್ರಿಸ್ಟ್ –
ಬಿ.ಎಸ್ಸಿ ಇನ್ ಆಪ್ಟೋಮೆಟ್ರಿ ಅಥವಾ ಡಿಪ್ಲೊಮಾ ಇನ್ ಆಪ್ಟೋಮೆಟ್ರಿಕ್ ಟೆಕ್ನಿಷಿಯನ್. ಅಭ್ಯರ್ಥಿಯು ಸಂಬಂಧಪಟ್ಟ ಕೌನ್ಸಿಲ್ ನಲ್ಲಿ ಕಡ್ಡಾಯವಾಗಿ ನೊಂದಾಯಿತರಾಗಿರಬೇಕು.
ಲ್ಯಾಬ್ ಅಸಿಸ್ಟಂಟ್ ಗ್ರೇಡ್ 2 –
ವಿಜ್ಞಾನ ವಿಭಾಗದಲ್ಲಿ 12ನೇ ತರಗತಿ ಉತ್ತೀರ್ಣರಾಗಿರಬೇಕು ಜೊತೆಗೆ (ಎ) ಡಿಪ್ಲೊಮಾ ಇನ್ ಮೆಡಿಕಲ್ ಲ್ಯಾಬೋರೇಟರಿ ಟೆಕ್ನಾಲಜಿ (ಡಿ.ಎಂ.ಎಲ್.ಟಿ) ಅಥವಾ (ಬಿ) ಸರ್ಟಿಫಿಕೇಟ್ ಕೋರ್ಸ್ ಇನ್ ಮೆಡಿಕಲ್ ಲ್ಯಾಬ್ ಅರ್ಹತೆ ಹೊಂದಿರಬೇಕು.
ಉದ್ಯೋಗ ಮಾಹಿತಿ : ಕರ್ನಾಟಕ ರಾಜ್ಯ ಕಾರಾಗೃಹ ಇಲಾಖೆಯಲ್ಲಿ ಜೈಲರ್, ವಾರ್ಡರ್ ಹುದ್ದೆಗಳ ನೇಮಕಾತಿ 2026
ವಯೋಮಾನ (ದಿನಾಂಕ 01/01/2027ಕ್ಕೆ) :
- ನರ್ಸಿಂಗ್ ಸುಪರಿಂಟೆಂಡೆಂಟ್ – ಕನಿಷ್ಠ 20 ವರ್ಷ, ಗರಿಷ್ಠ 40 ವರ್ಷ
- ಡಯಾಲಿಸಿಸ್ ಟೆಕ್ನಿಷಿಯನ್ – ಕನಿಷ್ಠ 20 ವರ್ಷ, ಗರಿಷ್ಠ 33 ವರ್ಷ
- ಹೆಲ್ತ್ & ಮಲೇರಿಯಾ ಇನ್‌ಸ್ಪೆಕ್ಟರ್ ಗ್ರೇಡ್ 2 – ಕನಿಷ್ಠ 18 ವರ್ಷ, ಗರಿಷ್ಠ 33 ವರ್ಷ
- ಆಡಿಯಾಲಾಜಿಸ್ಟ್ & ಸ್ಫೀಚ್ ಥೆರಪಿಸ್ಟ್ – ಕನಿಷ್ಠ 21 ವರ್ಷ, ಗರಿಷ್ಠ 30 ವರ್ಷ
- ಫಾರ್ಮಸಿಸ್ಟ್ – ಕನಿಷ್ಠ 20 ವರ್ಷ, ಗರಿಷ್ಠ 35 ವರ್ಷ
- ರೇಡಿಯೋಗ್ರಾಫರ್ ಎಕ್ಸ್-ರೇ ಟೆಕ್ನಿಷಿಯನ್ – ಕನಿಷ್ಠ 19 ವರ್ಷ, ಗರಿಷ್ಠ 33 ವರ್ಷ
- ಇಸಿಜಿ ಟೆಕ್ನಿಷಿಯನ್ – ಕನಿಷ್ಠ 18 ವರ್ಷ, ಗರಿಷ್ಠ 33 ವರ್ಷ
- ಆಪ್ಟೋಮೆಟ್ರಿಸ್ಟ್ – ಕನಿಷ್ಠ 18 ವರ್ಷ, ಗರಿಷ್ಠ 33 ವರ್ಷ
- ಲ್ಯಾಬ್ ಅಸಿಸ್ಟಂಟ್ ಗ್ರೇಡ್ 2 – ಕನಿಷ್ಠ 18 ವರ್ಷ, ಗರಿಷ್ಠ 33 ವರ್ಷ
ವಯೋಮಿತಿ ಸಡಿಲಿಕೆ :
- ಎಸ್ಸಿ, ಎಸ್ಟಿ ಅಭ್ಯರ್ಥಿಗಳಿಗೆ – 05 ವರ್ಷ
- ಒಬಿಸಿ (ಎನ್.ಸಿ.ಎಲ್) ಅಭ್ಯರ್ಥಿಗಳಿಗೆ – 03 ವರ್ಷ
- ಪಿಡಬ್ಲ್ಯೂಬಿಡಿ (ಯುಆರ್ & ಇಡಬ್ಲ್ಯೂಎಸ್) ಅಭ್ಯರ್ಥಿಗಳಿಗೆ – 10 ವರ್ಷ
- ಪಿಡಬ್ಲ್ಯೂಬಿಡಿ (ಒಬಿಸಿ-ಎನ್.ಸಿ.ಎಲ್) ಅಭ್ಯರ್ಥಿಗಳಿಗೆ – 13 ವರ್ಷ
- ಪಿಡಬ್ಲ್ಯೂಬಿಡಿ (ಎಸ್ಸಿ/ಎಸ್ಟಿ) ಅಭ್ಯರ್ಥಿಗಳಿಗೆ – 15 ವರ್ಷ
ವೇತನ :
| ಹುದ್ದೆ | ವೇತನ |
| ನರ್ಸಿಂಗ್ ಸುಪರಿಂಟೆಂಡೆಂಟ್ | ರೂ. 44,900/- |
| ಡಯಾಲಿಸಿಸ್ ಟೆಕ್ನಿಷಿಯನ್ | ರೂ. 35,400/- |
| ಹೆಲ್ತ್ & ಮಲೇರಿಯಾ ಇನ್‌ಸ್ಪೆಕ್ಟರ್ ಗ್ರೇಡ್ 2 | ರೂ. 35,400/- |
| ಆಡಿಯಾಲಾಜಿಸ್ಟ್ & ಸ್ಫೀಚ್ ಥೆರಪಿಸ್ಟ್ | ರೂ. 35,400/- |
| ಫಾರ್ಮಸಿಸ್ಟ್ | ರೂ. 29,200/- |
| ರೇಡಿಯೋಗ್ರಾಫರ್ ಎಕ್ಸ್-ರೇ ಟೆಕ್ನಿಷಿಯನ್ | ರೂ. 29,200/- |
| ಇಸಿಜಿ ಟೆಕ್ನಿಷಿಯನ್ | ರೂ. 25,500/- |
| ಆಪ್ಟೋಮೆಟ್ರಿಸ್ಟ್ | ರೂ. 25,500/ |
| ಲ್ಯಾಬ್ ಅಸಿಸ್ಟಂಟ್ ಗ್ರೇಡ್ 2 | ರೂ. 21,700/- |
ಆಯ್ಕೆ ವಿಧಾನ :
- ಕಂಪ್ಯೂಟರ್ ಬೇಸ್ಡ್ ಟೆಸ್ಟ್ (ಸಿಬಿಟಿ)
- ದಾಖಲೆಗಳ ಪರಿಶೀಲನೆ
- ವೈದ್ಯಕೀಯ ಪರೀಕ್ಷೆ
ಕಂಪ್ಯೂಟರ್ ಬೇಸ್ಡ್ ಟೆಸ್ಟ್ (ಸಿಬಿಟಿ) –
| Subjects | No. Of Questions | Marks for each Section |
| Professional ability | 70 | 70 |
| General Awareness | 10 | 10 |
| General Arithmetic, General Intelligence and Reasoning | 10 | 10 |
| General Science | 10 | 10 |
ಉದ್ಯೋಗ ಮಾಹಿತಿ : ಆಫೀಸ್ ಅಸಿಸ್ಟಂಟ್, ಕ್ಲಸ್ಟರ್ ಸೂಪರ್ವೈಸರ್ ಸೇರಿದಂತೆ ವಿವಿಧ ಹುದ್ದೆಗಳ ನೇಮಕಾತಿ 2026
ಅರ್ಜಿ ಸಲ್ಲಿಕೆಯ ವಿಧಾನ :
ಅಭ್ಯರ್ಥಿಯು ಈ ಹುದ್ದೆಗೆ ಆನ್‌ಲೈನ್ ಮೂಲಕ ಅರ್ಜಿಗಳನ್ನು ಸಲ್ಲಿಸಬೇಕು.
ಹಂತ 1 : ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸುವ ಮೊದಲು ಇಲಾಖೆ ಹೊರಡಿಸಿರುವ ಅಧಿಸೂಚನೆಯನ್ನು ಗಮನವಿಟ್ಟು ಓದಿ ಅರ್ಜಿ ಸಲ್ಲಿಸಲು ಅಗತ್ಯವಿರುವ ದಾಖಲೆಗಳನ್ನು ಸಿದ್ಧಪಡಿಸಿಕೊಂಡು ನಂತರ ಅರ್ಜಿಯನ್ನು ಸಲ್ಲಿಸಬೇಕು.
ಹಂತ 2 : ಇಲಾಖೆಯ ವೆಬ್‌ಸೈಟ್ ಗೆ ಭೇಟಿ ನೀಡಿ ಅಥವಾ ಈ ಕೆಳಗಡೆ ನೀಡಲಾದ ಅಪ್ಲೈ ಆನ್‌ಲೈನ್ ಲಿಂಕ್ ಮೇಲೆ ಕ್ಲಿಕ್ ಮಾಡಿ ಅಪ್ಲಿಕೇಷನ್ ತೆರೆದುಕೊಳ್ಳಿ.
ಹಂತ 3 : ಅಪ್ಲಿಕೇಷನ್ ನಲ್ಲಿ ತಿಳಿಸಿರುವಂತಹ ಎಲ್ಲಾ ಮಾಹಿತಿಯನ್ನು (ಉದಾಹರಣೆಗೆ ಅಭ್ಯರ್ಥಿಯ ಹೆಸರು, ವಿಳಾಸ, ವಿದ್ಯಾರ್ಹತೆ, ಮೊಬೈಲ್ ಸಂಖ್ಯೆ ಇತ್ಯಾದಿ) ಭರ್ತಿ ಮಾಡಿ, ಮುಂದಿನ ಹಂತಕ್ಕೆ ತೆರಳುವ ಮುನ್ನ ಪುನಃ ಒಮ್ಮೆ ಪರಿಶೀಲಿಸಿ.
ಹಂತ 4 : ಅಪ್ಲಿಕೇಷನ್ ನಲ್ಲಿ ಯಾವುದೇ ಪ್ರಮಾಣ ಪತ್ರ/ ದಾಖಲೆಗಳನ್ನು ಅಪ್ಲೋಡ್ ಮಾಡಲು ಸೂಚಿಸಿದ್ದರೆ, ಅವುಗಳನ್ನು ಸ್ಕ್ಯಾನ್ ಮಾಡಿ ಅಪ್ಲೋಡ್ ಮಾಡಿ (ಅಗತ್ಯವಿದ್ದರೆ ಮಾತ್ರ).
ಹಂತ 5 : ಕೊನೆಯದಾಗಿ, ಅಭ್ಯರ್ಥಿಗೆ ಅರ್ಜಿ ಶುಲ್ಕ ಪಾವತಿಸಲು ಸೂಚಿಸಿದ್ದರೆ, ಶುಲ್ಕ ಪಾವತಿಸಿ ಅರ್ಜಿ ಸಲ್ಲಿಕೆ ಪೂರ್ಣಗೊಳಿಸಿ.
ನಿಗದಿತ ಅರ್ಜಿ ಶುಲ್ಕದ ವಿವರ :
ಎಸ್ಸಿ, ಎಸ್ಟಿ, ಮಾಜಿ ಸೈನಿಕ, ಪಿಡಬ್ಲ್ಯೂಬಿಡಿ, ಮಹಿಳಾ, ಮಂಗಳಮುಖಿ, ಅಲ್ಪಸಂಖ್ಯಾತ, ಇಬಿಸಿ ಅಭ್ಯರ್ಥಿಗಳಿಗೆ – ರೂ. 250
ಉಳಿದ ಅಭ್ಯರ್ಥಿಗಳಿಗೆ – ರೂ. 500
ಶುಲ್ಕ ಪಾವತಿಸುವ ವಿಧಾನ :
ಅಭ್ಯರ್ಥಿಗಳು ಆನ್‌ಲೈನ್‌ನಲ್ಲಿ ಡೆಬಿಟ್ ಕಾರ್ಡ್, ಕ್ರೆಡಿಟ್ ಕಾರ್ಡ್, ನೆಟ್ ಬ್ಯಾಂಕಿಂಗ್, ಯುಪಿಐ ಮೂಲಕ ಶುಲ್ಕ ಪಾವತಿಸಬಹುದು.
ಅರ್ಜಿಯನ್ನು ಸಲ್ಲಿಸಲು ನಿಗದಿಪಡಿಸಿರುವ ದಿನಾಂಕದ ವಿವರ :
- ಅರ್ಜಿ ಸಲ್ಲಿಕೆಗೆ ಪ್ರಾರಂಭದ ದಿನಾಂಕ : ಸೆಪ್ಟೆಂಬರ್ 15, 2026
- ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ : ಅಕ್ಟೋಬರ್ 14, 2026
- ಶುಲ್ಕ ಪಾವತಿಸಲು ಕೊನೆಯ ದಿನಾಂಕ : ಅಕ್ಟೋಬರ್ 16, 2026
Railway Paramedical Recruitment 2026 : Important Links
| NOTIFICATION | CLICK HERE |
| APPLY ONLINE | CLICK HERE |
| Telegram Join Link | Click Here |
| WhatsApp Group Link | Click Here |
ಕೊನೆಯ ಪದಗಳು : ನಾವು ನೀಡಿದ ಉದ್ಯೋಗ ಮಾಹಿತಿಯನ್ನು ನೀವು ಇಷ್ಟಪಡುತ್ತೀರಿ ಎಂದು ಭಾವಿಸುತ್ತೇವೆ. ಈ ಉದ್ಯೋಗ ಮಾಹಿತಿ ನಿಮಗೆ ಇಷ್ಟವಾಗಿದ್ದರೆ ನಿಮ್ಮ ಸ್ನೇಹಿತರಿಗೆ ಶೇರ್ ಮಾಡಲು ಮರೆಯದಿರಿ.